Subscribe to Updates
Get the latest creative news from FooBar about art, design and business.
Author: editor.udayarashmi@gmail.com
Udayarashmi kannada daily newspaper
ಣಿಮೆಯ ಮರುದಿನ ಬೂದಿಚೆಲ್ಲುವ (ದೂಳವಾಡ) ದಿನದಂದು ಉತ್ತರ ಕರ್ನಾಟಕದ ಬಹುತೇಕ ಹಳ್ಳಿಗಳ, ಪಟ್ಟಣಗಳ ಜನರು ಕಂಬಿ ದೇವರನ್ನು ಹೊತ್ತುಕೊಂಡು ಪ್ರತಿ ವರ್ಷ ೧೨ ಜ್ಯೋತಿರ್ಲಿಂಗಗಳಲ್ಲಿ ಒಂದಾದ ಶ್ರೀಶೈಲ ಜ್ಯೋತಿರ್ಲಿಂಗದ ದರ್ಶನ ಪಡೆಯಲು ಪಾದಯಾತ್ರೆಯ ಮೂಲಕ ಹೊರಡುವದು ವಾಡಿಕೆಯಾಗಿದೆ.ಇಲ್ಲೊಂದು ಸೋಜಿಗದ ವಿಷಯವೆಂದರೆ ಕೊಲ್ಹಾರ ಪಟ್ಟಣದಿಂದ ಪಾದಯಾತ್ರೆಯ ಕೈಗೊಳ್ಳುವ ಭಕ್ತರ ಸಂಪ್ರದಾಯಕ್ಕೆ ಶತಮಾನಗಳ ಇತಿಹಾಸವಿದೆ.ಪಾದಯಾತ್ರೆ ಮಾಡುವ ಭಕ್ತರ ಜೊತೆಯಲ್ಲಿ ನಿರಂತರವಾಗಿ ೧೫ ದಿನಗಳ ಕಾಲ ಕಂಟ್ಲಿ ಎತ್ತು ಎನ್ನುವ ಎತ್ತೊಂದು ಬಸವ ಭಕ್ತರ ಜೊತೆಜೊತೆಯಲ್ಲಿ ಹೆಜ್ಜೆ ಹಾಕುತ್ತಾ, ಭಕ್ತರಿಗೆ ದಾರಿಯನ್ನು ದೇವನ ಸ್ವರೂಪದಂತೆ ತೋರಿಸುವ ಶಿವನ ನಂದಿ ಅವತಾರದಂತಿತ್ತು ಈ ಕಂಟ್ಲಿ ಎತ್ತು.ಕಾಕತಾಳೀಯ ಎಂಬAತೆ ಈ ವರ್ಷ ಶ್ರೀಶೈಲಕ್ಕೆ ತೆರಳಿದ್ದ ಕಂಟ್ಲಿ ಎತ್ತು ಮರಳಿ ಕೊಲ್ಹಾರ ಪಟ್ಟಣಕ್ಕೆ ಆಗಮಿಸಿದ ಬುಧವಾರ ದಿನದಂದೆ ತನ್ನ ದೇಹ ತ್ಯಾಗವನ್ನು ಮಲ್ಲಯ್ಯನ ಸನ್ನಿಧಿಗೆ ಸಮರ್ಪಿಸಿದೆ. ಪುಣ್ಯದ ಬಸವ ತನ್ನ ನಡಿಗೆಯನ್ನು ನಿಲ್ಲಿಸಿದ್ದು ಸಾವಿರಾರು ಭಕ್ತರನ್ನು ದುಃಖಸಾಗರದಲ್ಲಿ ತೇಲುವಂತೆ ಮಾಡಿದೆ.೧೮ ವರ್ಷ ವಯಸ್ಸಿನ ಹೆಮ್ಮೆಯ ಬಸವ ಸತತವಾಗಿ ೧೧ ವರ್ಷಗಳ…
ಸಿಂದಗಿ: ಪವಿತ್ರ ರಂಜಾನ್ ಹಬ್ಬದ ಸಂದರ್ಭದಲ್ಲಿ ಒಂದು ಹನಿ ನೀರು ಸಹ ಕುಡಿಯದೇ ಮುಸ್ಲಿಂ ಸಮಾಜ ಬಾಂಧವರು ಕಟ್ಟುನಿಟ್ಟಾದ ಉಪವಾಸ ಪಾಲನೆ ಮಾಡುತ್ತಾರೆ. ಇಂತಹ ಊರಿ ಬಿಸಿಲಿನಲ್ಲಿ ಕಠಿಣ ಉಪವಾಸ ಮಾಡೋದು ದೊಡ್ಡವರಿಗೇ ಕಷ್ಟವಾಗುತ್ತಿದೆ. ಇಂತಹ ಸಮಯದಲ್ಲಿ ಸಿಂದಗಿ ಪಟ್ಟಣದ ರಜಪೂತ ಲೇಔಟ್ ನಿವಾಸಿ ಆರಕ್ಷಕ ನಬಿಲಾಲ ಶೇಖ ಅವರ ಮಗಳು ಪುಟ್ಟ ಬಾಲಕಿ ಆಶಿಯಾ ಶೇಖ(೬) ರಂಜಾನ್ ಉಪವಾಸವನ್ನು ಆಚರಿಸುವ ಮೂಲಕ ಎಲ್ಲರ ಗಮನ ಸೆಳೆದಿದ್ದಾಳೆ.
ಬಿಜ್ಜರಗಿ ವೀರಭದ್ರೇಶ್ವರ ಜಾತ್ರಾ ಮಹೋತ್ಸವ | ಧರ್ಮಸಭೆ | ನುಡಿನಮನ ತಿಕೋಟಾ: ಶತಮಾನದ ಶ್ರೇಷ್ಠ ಸಂತ ಲಿಂ.ಸಿದ್ದೇಶ್ವರ ಸ್ವಾಮೀಜಿಯವರಿಗೆ ನಮ್ಮ ಸತ್ವಹೀನ ಶಬ್ದಗಳಿಂದ ನುಡಿ ನಮನ ಮಾಡಲು ಸಾಧ್ಯವಿಲ್ಲ. ನುಡಿಯಿಂದ ನಮನ ಸಲ್ಲಿಸುವುದು ಸಾಕು. ನಾವು ನಡೆಯಿಂದ ಅವರಿಗೆ ನಮನ ಸಲ್ಲಿಸಿ ಗೌರವಿಸೋಣ ಎಂದು ಕೊಪ್ಪಳದ ಅಭಿನವ ಗವಿಸಿದ್ದೇಶ್ವರ ಸ್ವಾಮೀಜಿ ಹೇಳಿದರು. ತಾಲ್ಲೂಕಿನ ಬಿಜ್ಜರಗಿ ಗ್ರಾಮದಲ್ಲಿ ಬುಧವಾರ ಸಂಜೆ ನಡೆದ ವೀರಭದ್ರೇಶ್ವರ ಜಾತ್ರಾ ಮಹೋತ್ಸವದ ಧರ್ಮಸಭೆ ಕಾರ್ಯಕ್ರಮದ ದಿವ್ಯ ಸಾನಿಧ್ಯ ವಹಿಸಿ ಲಿಂಗೈಕ್ಯ ಸಿದ್ದೇಶ್ವರ ಶ್ರೀಗಳಿಗೆ ನುಡಿನಮನ ಸಲ್ಲಿಸಿ ಅವರು ಮಾತನಾಡಿದರು. ಶ್ರೀಗಳ ಜೀವನವೇ ಒಂದು ಪೂಜೆ, ನಾವು ಹಚ್ಚಿದ ದೀಪ ಆರಿವೆ. ಶ್ರೀಗಳ ಜ್ಞಾನದ ದೀಪ ಆರಿಲ್ಲ, ಅವರು ಆರದ ಜ್ಞಾನದ ದೀಪ ಹಚ್ಚಿದ್ದಾರೆ. ಸ್ವಂತಕ್ಕೆ ಏನೂ ಇರಲಿಲ್ಲ ಸಂತೋಷಕ್ಕೆ ಏನೂ ಕಮ್ಮಿ ಇರಲಿಲ್ಲ. ಸದಾ ಸಂತೋಷದಿಂದ, ಶಾಂತತೆಯಿಂದ, ದೊಡ್ಡ ಮನಸ್ಸು ಉಳ್ಳ, ಲೋಕ ಕಲ್ಯಾಣ ಕೆಲಸ ಮಾಡುವವರೇ ನಿಜವಾದ ಸಂತರು. ಶ್ರೀಗಳ ಹೊರಗೆ ಏನೂ ಇರಲಿಲ್ಲ. ಅವರ ಒಳಗಡೆ…
ಸಿಂದಗಿ: ಚೈತ್ರ ಮಾಸದ ದವನದ ಹುಣ್ಣಿಮೆ ದಿನವಾದ ಗುರುವಾರ ಸಿಂದಗಿ ನಗರದೆಲ್ಲೆಡೆ ರಾಮನ ಪರಮಭಕ್ತ ಹನುಮನ ಜಯಂತಿಯನ್ನು ಶ್ರದ್ಧಾ ಭಕ್ತಿಯಿಂದ ಆಚರಣೆ ಮಾಡಲಾಯಿತು.ಪಟ್ಟಣದ ಮಲ್ಲಿಕಾರ್ಜುನ ನಗರದ ದೇವಸ್ಥಾನದಲ್ಲಿ ಮಹಿಳೆಯರು ಹನುಮ ಜಯಂತಿಯನ್ನು ಸಂಭ್ರಮದಿAದ ಆಚರಿಸಿದರು. ಬಾಲ ಮಾರುತಿಯನ್ನು ತೆuಟಿಜeಜಿiಟಿeಜಟ್ಟಿಲಿಗೆ ಹಾಕಿ, ಜೋಗುಳ ಗೀತೆಗಳನ್ನು ಹಾಡಿದರು. ಸುಮಂಗಲೆಯರು ಹನುಮನನ್ನು ತೆuಟಿಜeಜಿiಟಿeಜಟ್ಟಿಲಿಗೆ ಹಾಕಿ ತೂಗಿ ನಾಮಕರಣ ಮಾಡಿ ಸಂಭ್ರಮಿಸಿದರು.ನಗರದ ಬಂದಾಳ ರಸ್ತೆಯ ವರದಹಸ್ತ ಆಂಜನೇಯನ ದೇಗುಲದಲ್ಲಿ ಮೂರ್ತಿಗೆ ವಿಶೇಷ ಅಲಂಕಾರ ಮಾಡಲಾಗಿತ್ತು. ಈ ದೇಗುಲದಲ್ಲಿ ಹನುಮ ಜಯಂತಿ ಪ್ರಯುಕ್ತ ಶ್ರೀರಾಮ ಯುವಕ ಮಂಡಳಿ ಗಧಾ ಪೂಜಾ ಕಾರ್ಯಕ್ರಮ ಆಯೋಜಿಸಿದರು. ಸುತ್ತಮುತ್ತಲಿನ ಬಡಾವಣೆಯಲ್ಲಿನ ಭಕ್ತರು ಆಂಜನೇಯ ಸ್ವಾಮಿಗೆ ಪೂಜೆ ಸಲ್ಲಿಸಿದರು.ಬಂದಾಳ ರಸ್ತೆಯ ವರದ ಹಸ್ತ ಆಂಜನೇಯ ದೇವಸ್ಥಾನ, ಮಲ್ಲಿಕಾರ್ಜುನ ನಗರದ ವಜ್ರ ಹನುಮಾನ ದೇವಾಲಯ, ಹಳೆ ಬಜಾರದ ಆಂಜನೇಯ ದೇಗುಲದಲ್ಲಿ ಹನುಮ ಜಯಂತಿ ನಡೆಯಿತು. ನಗರದ ದೇವಸ್ಥಾನಗಳಲ್ಲಿ ಮಹಿಳೆಯರಿಗೆ ಉಡಿ ತುಂಬುವ ಕಾರ್ಯಕ್ರಮ. ನಗರದ ಅನೇಕ ಹನುಮ ಮಂದಿರಗಳಲ್ಲಿ ಭಕ್ತರಿಗೆ ಮಧ್ಯಾಹ್ನ ಅನ್ನಸಂತರ್ಪಣೆ ನಡೆಯಿತು.ಇದೇ ಸಂದರ್ಭದಲ್ಲಿ…
ವಿಜಯಪುರ: ಇತ್ತೀಚೆಗೆ ನಡೆದ ಐದನೇ ಮತ್ತು ಎಂಟನೇ ತರಗತಿಯ ಮೌಲ್ಯಾಂಕನ ಪರೀಕ್ಷೆ ಹಾಗೂ ಮೌಲ್ಯಮಾಪನ ಕಾರ್ಯವು ಸೂಸುತ್ರವಾಗಿ ನಡೆದಿದ್ದು ವಿಜಯಪುರ ಗ್ರಾಮೀಣವಲಯದ ಐದನೇ ತರಗತಿ ಮೌಲ್ಯಮಾಪನ ಕಾರ್ಯವು ನಗರದ ಮದಿನಾ ನಗರದ ಮಾಣಿಕೇಶ್ವರಿ ಶಿಕ್ಷಣ ಸಂಸ್ಥೆಯಲ್ಲಿ ನಡೆಯಿತು. ಮೌಲ್ಯಮಾಪನ ಕಾರ್ಯದಲ್ಲಿ ತೊಡಗಿದ ಎಲ್ಲ ಶಿಕ್ಷಕರಿಗೂ ಮಾಣಿಕೇಶ್ವರಿ ಶಿಕ್ಷಣ ಸಂಸ್ಥೆಯ ಮುಖ್ಯಸ್ಥ ಚಿದಾನಂದ ಅವಟಿಯವರು ಮೌಲ್ಯಮಾಪನ ಕಾರ್ಯಕ್ಕೆ ಯಾವುದೇ ತೊಂದರೆಯಾಗದಂತೆ ಅಚ್ಚುಕಟ್ಟಾಗಿ ವ್ಯವಸ್ಥೆ ಮಾಡಿದ್ದರು. ಎಲ್ಲ ಸಿಬ್ಬಂದಿಗಳಿಗೆ ಮಧ್ಯಾಹ್ನ ರುಚಿಕಟ್ಟಾದ ಭೋಜನ ವ್ಯವಸ್ಥೆ ಮಾಡಲಾಗಿತ್ತು. ಬಗೆಬಗೆಯ ಪಲ್ಯೆ, ರೊಟ್ಟಿ, ಚಟ್ನಿ , ಹೋಳಿಗೆ, ಪಾಯಸ, ಚಹಾ, ತಂಪು ಪಾನೀಯ ಮಜ್ಜಿಗೆ, ಕಲ್ಲಂಗಡಿ ಸಹಿತ ಊಟವನ್ನು ಸಿಬ್ಬಂದಿಗಳು ಸವಿದರು. ಮೌಲ್ಯಮಾಪನ ಕೇಂದ್ರಕ್ಕೆ ಆಗಮಿಸಿದ ಗ್ರಾಮೀಣವಲಯದ ಕ್ಷೇತ್ರ ಶಿಕ್ಷಣಾಧಿಕಾರಿ ಆಂಜನೇಯ ಆರ್.ಕೆ. ಮಾತನಾಡಿ ಮೌಲ್ಯಾಂಕನ ಪರೀಕ್ಷೆಯ ಮೌಲ್ಯಮಾಪನ ಕಾರ್ಯ ಅತ್ಯಂತ ಅಚ್ಚುಕಟ್ಟಾಗಿ ನಿರ್ವಹಣೆಯಾಗಿದೆ. ಮೌಲ್ಯಮಾಪನ ನಂತರ ಎಲ್ಲ ಉತ್ತರ ಪತ್ರಿಕೆಗಳನ್ನು ಆಯಾ ಶಾಲೆಗಳಿಗೆ ಸರಬರಾಜು ಮಾಡಲು ತಿಳಿಸಿದರು. ಎಲ್ಲ ಸಿಬ್ಬಂದಿಗಳಿಗೆ ಯಾವುದೇ ತೊಂದರೆಯಾಗದಂತೆ ವ್ಯವಸ್ಥೆ ಹಾಗೂ…
ಆಲಮಟ್ಟಿ: ಸಮೀಪದ ಸುಕ್ಷೇತ್ರ ಯಲಗೂರು ಗ್ರಾಮದ ಯಲಗೂರೇಶನ ದೇವಸ್ಥಾನದಲ್ಲಿ ಗುರುವಾರ ಹನುಮ ಜಯಂತಿಯನ್ನು ಸಡಗರ ಸಂಭ್ರಮದಿAದ ಆಚರಿಸಲಾಯಿತು.ಬೆಳಗ್ಗೆ ೪ಕ್ಕೆ ಉತ್ಸವ ಮೂರ್ತಿಯನ್ನು ಕೃಷ್ಣಾ ನದಿಗೆ ಒಯ್ದು ಅಲ್ಲಿ ಅಭಿವೃತ್ತ ಸ್ನಾನ ಮಾಡಿಸಲಾಯಿತು. ನದಿ ತೀರದಿಂದ ದೇವಸ್ಥಾನದವರೆಗೆ ಮೆರವಣಿಗೆ ನಡೆಸಲಾಯಿತು. ದೇವಸ್ಥಾನದಲ್ಲಿ ಸೂರ್ಯೋದಯ ಸಮಯದಲ್ಲಿ ಹನುಮನ ತೊಟ್ಟಿಲು ಹಾಕುವ ಕಾರ್ಯಕ್ರಮ ಜರುಗಿತು. ನಂತರ ಪಾನಕ ಕೋಸಂಬರಿ ವಿತರಿಸಲಾಯಿತು.ನಂತರ ವೇದ ಮಂತ್ರಗಳೊAದಿಗೆ ಪೂಜೆ ನೆರವೇರಿದ ಮೇಲೆ ಅನೇಕ ಮಹಿಳೆಯರು ಹನುಮನ ಭಕ್ತಿಗೀತೆಗಳನ್ನು ಹಾಡಿದರು. ಯಲಗೂರೇಶನಿಗೆ ಸಾಮೂಹಿಕ ಪಂಚಾಮೃತ ಅಭಿಷೇಕ, ಮಹಾಪೂಜೆ, ಅಲಂಕಾರ, ಮಹಾನೈವೇದ್ಯ, ಅನ್ನ ಸಂತರ್ಪಣೆ ಜರುಗಿತು.ಚೈತ್ರ ಮಾಸದ ಪ್ರತಿಪದೆಯಿಂದ ಪೂರ್ಣಿಮೆವರೆಗೆ ೧೫ ದಿನಗಳ ಕಾಲ ರಾಮನವಮಿ ಉತ್ಸವ ನಿಮಿತ್ತ ನಡೆದ ರಾಮನವಮಿ ಉತ್ಸವ ಗುರುವಾರ ಸಮಾರೋಪಗೊಂಡಿತು.ದೇವಸ್ಥಾನ ಟ್ರಸ್ಟ್ ಸಮಿತಿ ಅಧ್ಯಕ್ಷ ಅನಂತ ಓಂಕಾರ, ಪಂ.ರಘುಮೋತ್ತಾಚಾರ್ಯ, ವಿಠ್ಠಲಾಚಾರ್ಯ ಗದ್ದನಕೇರಿ, ಬದರಿನಾರಾಯಣ ಚಿಮ್ಮಲಗಿ, ಸಂತೋಷ ಪೂಜಾರಿ, ಗೋಪಾಲಾಚಾರ್ಯ ಹಿಪ್ಪರಗಿ, ಗೋಪಾಲ ಗದ್ದನಕೇರಿ, ಗುರುರಾಜ ಪರ್ವತಿಕರ, ನಾರಾಯಣ ಒಡೆಯರ,ಪಾಂಡುರಂಗಾಚಾರ್ಯ ಹೊಸೂರ,ಮುರಳಿ ಚಿಮ್ಮಲಗಿ, ಮನೋಹರ ಚಿಮ್ಮಲಗಿ, ಯಲಗೂರದಪ್ಪ ಪೂಜಾರ,…
ಚಡಚಣ: ನಾನು ಶಾಸಕನಿದ್ದಾಗ ಮತಕ್ಷೇತ್ರದಲ್ಲಿ ಮಾಡಿರುವ ಅಭಿವೃದ್ಧಿ ಕಾರ್ಯ ಪರಿಗಣಿಸಿ ಹಾಗೂ ಕಾಂಗ್ರೆಸ್ ಪಕ್ಷದ ಜನಪರ ಆಡಳಿತಕ್ಕೆ ಬೆಂಬಲಿಸಿ ಎಂದು ಮಾಜಿ ಶಾಸಕ ಹಾಗೂ ಕಾಂಗ್ರೆಸ್ ಅಭ್ಯರ್ಥಿ ವಿಠ್ಠಲ ಕಟಕದೊಂಡ ಮನವಿ ಮಾಡಿದರು.ತಾಲೂಕಿನ ಶಿಗಣಾಪುರ ಗ್ರಾಮದಲ್ಲಿ ಮತಯಾಚಿಸಿ ಅವರು ಮಾತನಾಡಿದರು.ಮುಖಂಡ ಎಂ ಆರ್ ಪಾಟೀಲ ಮಾತನಾಡಿ, ಪ್ರಾಮಾಣಿಕ ಹಾಗೂ ಸೌಮ್ಯ ಸ್ವಭಾವದ ಕಟಕದೊಂಡ ಅವರು ಮಾಡಿರುವ ಅಭಿವೃದ್ಧಿ ಕಾರ್ಯಗಳು ಹಾಗೂ ತಮ್ಮ ಸೌಮ್ಯ ಸ್ವಭಾವದಿಂದ ಮತಕ್ಷೇತ್ರದ ಪ್ರತಿಯೊಬ್ಬ ಮತದಾರರ ಮನದಲ್ಲಿದ್ದಾರೆ. ಒಬ್ಬರು ಅಭಿವೃದ್ಧಿ ಮಾಡುವವರಲ್ಲ, ಇನ್ನೊಬ್ಬರು ಅಭಿವೃದ್ಧಿ ಮಾಡೋದಕ್ಕೆ ಬಿಡುವವರಲ್ಲ. ಹೀಗಾಗಿ ಮತಕ್ಷೇತ್ರ ಅಭಿವೃದ್ಧಿ ಕಾಣದೆ ಕಂಗಾಲಾಗಿದೆ. ಮತಕ್ಷೇತ್ರದ ಸಮಗ್ರ ಅಭಿವೃದ್ಧಿಗಾಗಿ ಈ ಬಾರಿ ಯಾವುದೇ ಕಾರಣಕ್ಕೂ ಬೇರೆಯವರನ್ನು ಬೆಂಬಲಿಸದೇ ಕಾಂಗ್ರೆಸ್ ಅಭ್ಯರ್ಥಿ ಕಟಕದೊಂಡ ಅವರನ್ನು ಬೆಂಬಲಿಸಿ ಎಂದರು.ಈ ಸಂದರ್ಭದಲ್ಲಿ ಪ್ರಚಾರ ಸಮಿತಿ ಅಧ್ಯಕ್ಷ ಪ್ರಕಾಶ್ ಗೌಡ ಪಾಟೀಲ ಹಾಗೂ ಅನೇಕರಿದ್ದರು
ಕಟಕದೊಂಡಗೆ ಟಿಕೆಟ್ :101 ತೆಂಗಿನಕಾಯಿ ಒಡೆದ ಅಭಿಮಾನಿ. ಚಡಚಣ: ನಾಗಠಾಣ ಮೀಸಲು ಮತಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ವಿಠ್ಠಲ ಕಟಕದೊಂಡ ಅವರಿಗೆ ಟಿಕೆಟ್ ಘೋಷಣೆ ಹಿನ್ನೆಲೆ ಅಭಿಮಾನಿ ಜಿನ್ನೇಸಾಬದೇವರ ನಿಂಬರಗಿ ಬಲಭೀಮ ದೇವರಿಗೆ 101 ಟೆಂಗು ಒಡೆಯುವ ಮೂಲಕ ಗುರುವಾರ ಹರಕೆ ತೀರಿಸಿದನು.ಚಡಚಣ ತಾಲ್ಲೂಕಿನ ದೇವರ ನಿಂಬರಗಿ ಗ್ರಾಮದ ಗ್ರಾಮ ಪಂಚಾಯತ್ ಸದಸ್ಯ ಜಿನ್ನೇಸಾಬ ಬಂಡರಕವಟೆ ಏ.1 ರಂದು ಶ್ರೀ ಬಲಭೀಮ ದೇವರ ಜಾತ್ರೆಯಲ್ಲಿ ಮೊಸರು ಗಡಿಗೆ ಒಡೆಯುವ ದಿವಸ ಶ್ರೀ ಬಲಭೀಮ ದೇವರಲ್ಲಿ ವಿಠ್ಠಲ ಕಟಕದೊಂಡ ಅವರ ಪಕ್ಕಾ ಅಭಿಮಾನಿಯಾಗಿ ಹರಕೆ ತೊಟ್ಟಿದರು. ಆದರೆ ಇಂದು ಕಾಂಗ್ರೆಸ್ ಪಕ್ಷದ ಎರಡನೇ ಪಟ್ಟಿ ಬಿಡುಗಡೆಯಲ್ಲಿ ನಾಗಠಾಣ ಮೀಸಲು ಮತಕ್ಷೇತ್ರಕ್ಕೆ ವಿಠ್ಠಲ ಕಟಕದೊಂಡ ಹೆಸರು ಘೋಷಣೆ ಯಾದ ಹಿನ್ನೆಲೆ ದೇವಸ್ಥಾನಕ್ಕೆ ತೆರಳಿ ನೂರಾ ಒಂದು ತೆಂಗಿನಕಾಯಿ ಒಡೆದು ಹರಕೆ ತೀರಿಸಿದ್ದಾನೆ.ಗ್ರಾಮ ಪಂಚಾಯತ ಅಧ್ಯಕ್ಷ ಬಸವರಾಜ ಬಿರಾದಾರ ಮಾತನಾಡಿದರು.ಈ ಸಂದರ್ಭದಲ್ಲಿ ಇಸಾಕ್ ಡಾಂಗೆ, ಅಲ್ಲು, ಚಾಂದಸಾಬ ಗುಳೇಕಾರ, ಶಕೀಲ್ ಬಂಡರಕವಟೆ , ತಾನಾಜಿ ಸಿಂಗೆ ,…