ವಿಜಯಪುರ: “ಕರ್ನಾಟಕ ರಾಜ್ಯದ ರಾಜಕೀಯ ಇತಿಹಾಸದಲ್ಲಿ ಅತ್ಯಂತ ಯಶಸ್ವಿ ಹಣಕಾಸು ಸಚಿವರಾಗಿ ಅತಿ ಹೆಚ್ಚು ಬಾರಿ ಜನಪರ ಬಜೆಟ್ ಮಂಡಿಸಿದ ಕೀರ್ತಿಗೆ ಪಾತ್ರರಾಗಿರುವ ಮುಖ್ಯಮಂತ್ರಿ ಸಿದ್ದರಾಮಯ್ಯನವರು ಜನಪರವಾದ ಬಜೆಟ್ ಮಂಡಿಸುವುದರ ಮೂಲಕ ಎಲ್ಲ ವರ್ಗದ ಜನರಿಗೂ ನ್ಯಾಯ ಕಲ್ಪಿಸುವ ಪ್ರಯತ್ನ ಮಾಡಿದ್ದಾರೆ. ರಾಜ್ಯದ ಜನರಿಗೆ ವಿವಿಧ ಭಾಗ್ಯಗಳನ್ನು ಕರುಣಿಸಿರುವ ಈ ಭಾಗ್ಯವಿಧಾತ ಅದು ಹೇಗೆ ಈ ರಾಜ್ಯವನ್ನು ಮುನ್ನಡೆಸಬಲ್ಲರು? ಎನ್ನುವ ಕುತೂಹಲಗಳೆಲ್ಲಕ್ಕೂ ತಮ್ಮ ಅಪಾರವಾದ ಆರ್ಥಿಕ ಕ್ಷೇತ್ರದ ಅನುಭವವನ್ನು ದಾರೆಯೆರೆದು ಜನಮುಖಿ ಬಜೆಟ್ ನ್ನು ಮಂಡಿಸಿದ್ದಾರೆ. ವಿಶೇಷವಾಗಿ ಬಸವ ನಾಡು ವಿಜಯಪುರ ಜಿಲ್ಲೆಗೆ ಜಿಲ್ಲಾ ಉಸ್ತುವಾರಿ ಸಚಿವ ಎಂ.ಬಿ ಪಾಟೀಲರ ವಿನಂತಿಯ ಮೇರೆಗೆ ಹಲವಾರು ಕೊಡುಗೆಗಳನ್ನು ನೀಡಿದ್ದಾರೆ. ಮಾನ್ಯ ಮುಖ್ಯಮಂತ್ರಿಗಳ ಈ ಜನಪರ ಬಜೆಟ್ ಗೆ ನಾನು ತುಂಬು ಹೃದಯದ ಕೃತಜ್ಞತೆಗಳನ್ನು ಸಲ್ಲಿಸುತ್ತೇನೆ.”
– ಸಂಗಮೇಶ ಬಬಲೇಶ್ವರ
ಮುಖ್ಯ ವಕ್ತಾರರು, ಕೆಪಿಸಿಸಿ ಪ್ರಚಾರ ಸಮಿತಿ, ಬೆಂಗಳೂರು

