Author: editor.udayarashmi@gmail.com

ಉದಯರಶ್ಮಿ ದಿನಪತ್ರಿಕೆ ದೇವರಹಿಪ್ಪರಗಿ: ಸರ್ಕಾರದ ಆಧೀನದಲ್ಲಿರುವ ವಿದ್ಯುತ್ ವಿತರಣಾ ಕೇಂದ್ರಗಳನ್ನು ಯಾವುದೇ ಕಾರಣಕ್ಕೂ ಖಾಸಗಿ ಕಂಪನಿಗಳಿಗೆ ಹಸ್ತಾಂತರ ಮಾಡದಂತೆ ಆಗ್ರಹಿಸಿ ರಾಷ್ಟ್ರೀಯ ರೈತ ಸಂಘದ ಪದಾಧಿಕಾರಿಗಳು ಹೆಸ್ಕಾಂ ಎಇಇ ಸತೀಶ ಸುಲಾಖೆ ಅವರಿಗೆ ಮನವಿ ಸಲ್ಲಿಸಿದರು.ಪಟ್ಟಣದ ಹೆಸ್ಕಾಂ ಕಚೇರಿಗೆ ಆಗಮಿಸಿದ ರೈತ ಸಂಘದ ಪದಾಧಿಕಾರಿಗಳು ವಿದ್ಯುತ್ ವಿತರಣಾ ಕೇಂದ್ರಗಳ ಮಾರಾಟಕ್ಕೆ ಆಕ್ಷೇಪಿಸಿದರು. ಈ ಸಂದರ್ಭದಲ್ಲಿ ರಾಷ್ಟ್ರೀಯ ರೈತ ಸಂಘದ ರಾಜ್ಯ ಮಹಿಳಾ ಕಾರ್ಯದರ್ಶಿ ರೇಣುಕಾ ಪಾಟೀಲ ಮಾತನಾಡಿ, ಸರ್ಕಾರದ ಆಧೀನದಲ್ಲಿನ ವಿದ್ಯುತ್ ಕೇಂದ್ರಗಳನ್ನು ರೈತರ ಹಾಗೂ ಜನಸಾಮಾನ್ಯರ ಹಿತ ಕಡೆಗಣಿಸಿ ಟಾಟಾ ಪವರ್ ಕಂಪನಿಗೆ ಮಾರಾಟ ಮಾಡುವ ಕ್ರಮ ಖಂಡನೀಯ. ವಿದ್ಯುತ್ ಖಾಸಗೀಕರಣ ರೈತ ವಿರೋಧಿ ನೀತಿಯಾಗಿದೆ. ಖಾಸಗೀಕರಣದಿಂದ ಕೃಷಿ ಹಾಗೂ ರೈತ ಸಮುದಾಯಕ್ಕೆ ತುಂಬಲಾರದ ನಷ್ಟ. ಈಗಾಗಲೇ ಕೃಷಿ ಉತ್ಪನ್ನಗಳ ಉತ್ಪಾದನೆ ಕುಂಠಿತಗೊಂಡಿದೆ. ಈ ಸಮಯದಲ್ಲಿ ವಿದ್ಯುತ್ ವಿತರಣೆ ಖಾಸಗಿಯವರ ಪಾಲಾದರೆ ಕೃಷಿ ಚಟುವಟಿಕೆಗಳ ಮೇಲೆ ವ್ಯತಿರಿಕ್ತ ಪರಿಣಾಮ ಉಂಟಾಗಿ ರೈತರ ಬಾಳು ಹಾಳಾಗುವುದರಲ್ಲಿ ಯಾವುದೇ ಸಂದೇಹವಿಲ್ಲ. ಆದ್ದರಿಂದ ಸರ್ಕಾರ…

Read More

ಉದಯರಶ್ಮಿ ದಿನಪತ್ರಿಕೆ ಇಂಡಿ: ಕೃಷ್ಣಾ ಬಾಗ್ಯ ಜಲ ನಿಗಮ ನಿಯಮಿತ ಮುಖ್ಯ ಕಚೇರಿ ಬೆಂಗಳೂರಿನ ವ್ಯವಸ್ಥಾಪಕ ನಿರ್ದೇಶಕರ ಕಚೇರಿಯಲ್ಲಿ ಹೊರ್ತಿ ರೇವಣಸಿದ್ದೇಶ್ವರ ಏತ ನೀರಾವರಿ ಯೋಜನೆ ಹಾಗೂ ತಿಡಗುಂದಿ ವಿಸ್ತರಣ ಕಾಲುವೆ ಕಾಮಗಾರಿಗಳ ಪ್ರಗತಿ ಪರಿಶೀಲನಾ ಸಭೆ ನಡೆಯಿತು.ಸಭೆಯಲ್ಲಿ ಇಂಡಿ ಶಾಸಕ ಯಶವಂತರಾಯಗೌಡ ಪಾಟೀಲರು ಭಾಗವಹಿಸಿ ಯೋಜನೆಗಳ ಅನುಷ್ಠಾನದ ಪ್ರಗತಿ ಕುರಿತು ಅಧಿಕಾರಿಗಳೊಂದಿಗೆ ಸುದೀರ್ಘ ಚರ್ಚೆ ನಡೆಸಿದರು.ಸಭೆಯಲ್ಲಿ ಕಾಮಗಾರಿಗಳ ಗುಣಮಟ್ಟ ಕಾರ್ಯಗತಗೊಳಿಸುವ ವೇಗ ರೈತರಿಗೆ ದೊರೆಯಲಿರುವ ಪ್ರಯೋಜನಗಳು ಹಾಗೂ ಯೋಜನೆಗಳನ್ನು ಶೀಘ್ರ ಪೂರ್ಣಗೊಳಿಸಲು ಕೈಕೊಳ್ಳಬೇಕಾದ ಕ್ರಮಗಳ ಕುರಿತು ಸಮಗ್ರವಾಗಿ ಪರಿಶೀಲಿಸಲಾಯಿತು. ನೀರಾವರಿ ಸೌಲಭ್ಯಗಳನ್ನು ಪರಿಣಾಮಕಾರಿಯಾಗಿ ರೈತರ ಹೊಲಗಳಿಗೆ ತಲುಪಿಸುವ ನಿಟ್ಟಿನಲ್ಲಿ ಯಾವದೇ ನಿರ್ಲಕ್ಷ ವಹಿಸದೇ ಕಾಮಗಾರಿಗಳನ್ನು ನಿಗದಿತ ಅವಧಿಯಲ್ಲಿ ಪೂರ್ಣ ಗೊಳಿಸುವಂತೆ ಸಂಬಂಧಿಸಿದ ಅಧಿಕಾರಿಗಳಿಗೆ ಶಾಸಕ ಯಶವಂತರಾಯಗೌಡರು ಸೂಚನೆ ನೀಡಿದರು.ಹೋರ್ತಿ ರೇವನಸಿದ್ದೇಶ್ವರ ಯೋಜನೆ ಹಾಗೂ ತಿಡಗುಂದಿ ವಿಸ್ತರಣಾ ಕಾಲುವೆ ಕಾಮಗಾರಿಗಳು ಪೂರ್ಣಗೊಂಡಲ್ಲಿ ಇಂಡಿ ಸೇರಿದಂತೆ ಸುತ್ತಮುತ್ತಲಿನ ಪ್ರದೇಶಗಳ ರೈತರಿಗೆ ಮಹತ್ತರ ಅನುಕೂಲವಾಗಲಿದ್ದು ಕೃಷಿ ಉತ್ಪಾದನೆ ಹೆಚ್ಚಳದೊಂದಿಗೆ ರೈತರ ಅರ್ಥಿಕ ಸ್ಥಿತಿ ಸುಧಾರಣೆಗೆ…

Read More

ಮುಸುಕಿನ ಜೋಳ ಬೆಳೆ ಪರಿಶೀಲನೆ, ದ್ವಿದಳ ಧಾನ್ಯ ಬೆಳೆ ಪರಿವರ್ತನೆಗೆ ಸಲಹೆ ಉದಯರಶ್ಮಿ ದಿನಪತ್ರಿಕೆ ಎಚ್.ಡಿ.ಕೋಟೆ: ತಾಲೂಕಿನಾದ್ಯಂತ ಮುಸುಕಿನ ಜೋಳಕ್ಕೆ ಬೂಜುರೋಗ ಅಥವಾ ಬಿಳಿ ಸುಳಿರೋಗ ಕಾಣಿಸಿಕೊಂಡಿದ್ದು ರೈತರು ಆತಂಕಕ್ಕಿಡಾಗಿದ್ದರೆ. ಈ ಹಿನ್ನೆಲೆ ಶುಕ್ರವಾರ ಜಂಟಿ ಕೃಷಿ ನಿರ್ದೇಶಕ ಡಾ. ಕೆ.ಹೆಚ್ ರವಿ, ಸಹಾಯಕ ಕೃಷಿ ನಿರ್ದೇಶಕ ಪ್ರಸಾದ್ ಅವರು ಹಂಪಾಪುರ ಹೋಬಳಿಯ ನಾಯಕನಹುಂಡಿ, ಕರಿಗಾಳ, ಕೋಳಗಾಲ, ಮಾದಾಪುರ, ಹ್ಯಾಂಡ್ ಪೋಸ್ಟ್ ಯರಹಳ್ಳಿ ಗ್ರಾಮದ ರೈತರ ಜಮೀನುಗಳಿಗೆ ಭೇಟಿ ನೀಡಿ ರೋಗದ ತಾಕುಗಳನ್ನು ಪರಿಶೀಲನೆ ನಡೆಸಿದರು. ರೋಗ ಬರಲು ಕಾರಣವೇನು? ರೋಗ ನಿಯಂತ್ರಣಕ್ಕೆ ರೈತರು ಏನೆಲ್ಲಾ ಮುಂಜಾಗ್ರತಾ ಕ್ರಮ ಕೈಗೊಳ್ಳಬೇಕು? ಮುಸುಕಿನ ಜೋಳ ಬಿತ್ತನೆಗೂ ಮುನ್ನ ಏನು ಮಾಡಬೇಕು, ತದನಂತರ ಯಾವ ಔಷಧಿ ಸಿಂಪಡಿಸಬೇಕು, ಮಣ್ಣಿನ ಫಲವತ್ತತೆಗೆ ಬೇರೆ ಯಾವ ಬೆಳೆಗಳನ್ನು ಬೆಳೆಯಬೇಕು ಎಂಬುದರ ಕುರಿತು ರೈತರಿಗೆ ಮಾಹಿತಿ ಮತ್ತು ಸಲಹೆ ನೀಡಿದರು.ಜಂಟಿ ಕೃಷಿ ನಿರ್ದೇಶಕರಾದ ಡಾ.ಕೆ ಹೆಚ್ ರವಿ ಮಾತನಾಡಿ, ವರ್ಷಕ್ಕೆ ಎರಡು-ಮೂರು ಬಾರಿ ಮುಸುಕಿನ ಜೋಳವನ್ನು ನಿರಂತರವಾಗಿ ಬೆಳೆಯುವುದರಿಂದ…

Read More

ಉದಯರಶ್ಮಿ ದಿನಪತ್ರಿಕೆ ವಿಜಯಪುರ: ತನ್ನ ಮೇಲೆ ಫೈರಿಂಗ್ ಮಾಡಲಾಗಿದೆ ಎಂದು ಕಟ್ಟುಕಥೆ ಸೃಷ್ಟಿಸಿ ಕೆಲವರ ಮೇಲೆ ಕಳೆದ ಜೂ.೦೩ ರಂದು ನಗರದ ಗ್ರಾಮೀಣ ಪೊಲೀಸ ಠಾಣೆಯಲ್ಲಿ ದೂರು ದಾಖಲಿಸಿದ್ದ ವ್ಯಕ್ತಿ ಸೇರಿದಂತೆ ಮೂವರನ್ನು ಗುರುವಾರ ಬಂಧಿಸಿದ ಪೋಲೀಸರು ಅವರಿಂದ ಕೃತ್ಯಕ್ಕೆ ಬಳಸಿದ ಕಂಟ್ರೀ ಪಿಸ್ತೂಲ್‌ವನ್ನು ವಶಪಡಿಸಿಕೊಂಡ ಘಟನೆ ನಡೆದಿದೆ.ಪಿರ್ಯಾಧಿದಾರ ದಯವಂತ ತಂ. ಸಾಯಪ್ಪ ಡೇರೆ (30) ಸಾ: ಇಟ್ಟಂಗಿಹಾಳ ದೊಡ್ಡಿ ಸೇರಿದಂತೆ ಆನಂದ @ ಅನೀಲ ತಂ. ಮಾಯಪ್ಪ ಡೇರಿ (26) ಸಾ: ಇಟ್ಟಂಗಿಹಾಳ ದೊಡ್ಡಿ ಮತ್ತು ಕೊಂಡಿಬಾ ತಂ. ಭೀರಪ್ಪ ಮಾನವರ (23) ಸಾ: ಇಟ್ಟಂಗಿಹಾಳ ದೊಡ್ಡಿ ಬಂಧಿತರು.ಕಳೆದ ಜೂ.೩ ರಂದು ದಯವಂತ ತಂ. ಸಾಯಪ್ಪ ಡೇರೆ ಈತನು ದೂರನ್ನು ನೀಡಿದ್ದು, ಅದರಲ್ಲಿ ದಿನಾಂಕ: 03-06-2026 ರಂದು ತೊರವಿ ಗ್ರಾಮದ ಹದ್ದಿಯಲ್ಲಿ ಬರುವ ತನ್ನ ಜಮೀನದಲ್ಲಿ ಇದ್ದಾಗ ಮದ್ಯಾಹ್ನ 3.00 ಗಂಟೆ ಸುಮಾರಿಗೆ ಯಾರೋ ಇಬ್ಬರೂ ಅಪರಿಚಿತ ವ್ಯಕ್ತಿಗಳು ತಮ್ಮ ಮುಖಕ್ಕೆ ಬಟ್ಟೆ ಕಟ್ಟಿಕೊಂಡು ಕಾಲ್ನಡಿಗೆಯಲ್ಲಿ ಬಂದು ತನ್ನ ಹಿಂದಿನಿಂದ…

Read More

ಲೇಖನ- ರಶ್ಮಿ ಕೆ. ವಿಶ್ವನಾಥ್,ಮೈಸೂರು ಉದಯರಶ್ಮಿ ದಿನಪತ್ರಿಕೆ ಇದು, ಮೈಸೂರಿಗೆ ʼವಿಶ್ವವಿಖ್ಯಾತ ಮೈಸೂರುʼ ಎಂಬ ಹೆಸರು ತಂದುಕೊಟ್ಟ ಸಾಂಸ್ಕೃತಿಕ ನಗರಿ ಮೈಸೂರಿನ ರಾಯಭಾರಿಗಳಾದಂತಹ ಅಂಬಾವಿಲಾಸ ಅರಮನೆಯ ಮೈಸೂರು ಒಡೆಯರ ಸ್ವಾರಸ್ಯಕರ ಕಥೆ ಮತ್ತು ಅವರಿಗೆ ಕೃತಜ್ಞತೆ ಸಲ್ಲಿಸುವ ಪರಿ.ʼಜಗತ್ಪ್ರಸಿದ್ಧ ಮೈಸೂರು’ಮೈಸೂರಿನ ವಿಷಯ ಬಂದಾಗ ಕೆಲವು ವಿಶೇ಼ಷಣಗಳೂ ಸಹ ಅದರೊಂದಿಗೆ ಸೇರಿಕೊಳ್ಳುತ್ತವೆ. ಅದು ಹೇಗೆ ಮೈಸೂರು ಜಗತ್ತಿನಾದ್ಯಾಂತ ಇಷ್ಟೊಂದು ಪ್ರಸಿದ್ಧಿ ಪಡೆಯಿತು. ಇದಕ್ಕೆ ಕಾರಣರಾದವರು ಯಾರು? ಕಾರಣವಾದ ಅಂಶಗಳಾವುವು? ಈ ಕುತೂಹಲ ಮೂಡಲೇಬೇಕಲ್ಲ? ಸಾಕ್ಷಿ ಕಣ್ಣ ಮುಂದೆಯೇ ಇದೆ. ಅದೇ 415 ವರ್ಷಗಳ ಹಿಂದಿನಿಂದಲೂ ನಡೆದುಕೊಂಡುಬಂದಿರುವ ಮೈಸೂರು ದಸರಾ. ಅದನ್ನು ಆಚರಿಸಿಕೊಂಡು ಬಂದವರು ಮೈಸೂರಿನ ಒಡೆಯರು ಅಥವಾ ಅರಸರು ಅಥವಾ ದೊರೆಗಳು.ರಾತ್ರಿಯ ಸೂರ್ಯ ಬಲ್ಬಿನಿಂದ ಬರುವ ಬೆಳಕು, ಮನುಷ್ಯನ ಜೀವಜಲ ನಲ್ಲಿನೀರು ಇವೆಲ್ಲವೂ ಅವರು ಕೊಟ್ಟ ಕೊಡುಗೆ. ಒಂದಲ್ಲಾ ಎರಡಲ್ಲಾ ಕೊಡುಗೆಗಳ ಸಾಲೇ ಇದೆ. ಮೈಸೂರಿನ ಅರಸರ ಇತಿಹಾಸ, ಸಮಾಜದ ಅಭಿವೃದ್ಧಿಗೆ ಅವರುಗಳ ಕೊಡುಗೆ ಎಲ್ಲವೂ ಒಂದು ದಂತಕತೆ.ಆದರೆ ಅದಕ್ಕೂ ಮುಂಚೆ ವಿಜ್ಞಾನ…

Read More

ಲೇಖನ- ವೀಣಾ ಹೇಮಂತ್ ಗೌಡ ಪಾಟೀಲ್,ಮುಂಡರಗಿಗದಗ ಜಿಲ್ಲೆ ಉದಯರಶ್ಮಿ ದಿನಪತ್ರಿಕೆ ಶಾಲೆಯಲ್ಲಿ ಮಕ್ಕಳಿಗೆ ಎ ಎಂದರೆ ಆಪಲ್ ಬಿ ಎಂದರೆ ಬಾಲ್ ಸಿ ಎಂದರೆ ಕ್ಯಾಟ್ ಎಂದು ಮಾತ್ರ ಹೇಳಿಕೊಡುತ್ತಾರೆ. ಆದರೆ ಮನೆಯಲ್ಲಿ ಹೇಗೆ ಎಂದರೆ ಆಪಲ್ ಬಾಲ್ ಎಂಬುದರ ಬದಲಾಗಿ ಪರ್ಯಾಯ ಪದಗಳನ್ನು ನಾವು ಮಕ್ಕಳಿಗೆ ಕಲಿಸಬಹುದು.ಶಾಲೆಯಲ್ಲಿ ಮಕ್ಕಳಿಗೆ ಎ ಎಂದರೆ ಆಪಲ್ ಬಿ ಎಂದರೆ ಬಾಲ್ ಎಂದು ಹೇಳುವುದರ ಬದಲು ಮನೆಯಲ್ಲಿ ಕಾಣಿಸಿರುವ ಎ ಬಿ ಸಿ ಡಿ ಹೀಗೆ ಹತ್ತು ಹಲವು ಅಕ್ಷರಗಳಿಗೆ ಪರ್ಯಾಯವಾಗಿ ಬೇರೆ ಪದಗಳನ್ನು, ವಿಷಯಗಳನ್ನು ಕಲಿಸುತ್ತಾ ಹೋದಾಗ ಮಕ್ಕಳಲ್ಲಿ ಹೆಚ್ಚಿನ ವಿಷಯ ಸಂಗ್ರಹಣೆಯಾಗುತ್ತದೆ.ಇನ್ನು ಇದಕ್ಕೆ ಹೊರತಾಗಿ ಮಕ್ಕಳು ಶಾಲೆಯಲ್ಲಿ ಕಲಿಯುವ ವೈಜ್ಞಾನಿಕ ವಿಷಯಗಳನ್ನು ಬದುಕಿನ ವಿವಿಧ ಕ್ಷೇತ್ರಗಳಲ್ಲಿ ಅನುಭವಿಸುವ ಮೂಲಕ ಕಲಿಯಲು ಅವಕಾಶ ಮಾಡಿಕೊಡಬೇಕು.ರೈತ ಹೊಲವನ್ನು ಉತ್ತಿ ಹದ ಮಾಡುತ್ತಾನೆ. ಬೀಜವನ್ನು ಬಿತ್ತುತ್ತಾನೆ ಹಾಗೆ ಬಿತ್ತಿದ ಬೀಜ ಮೊಳಕೆ ಒಡೆದು ಪುಟ್ಟ ಸಸಿಯಾಗಿ ಕ್ರಮೇಣ ನೀರು ಬಿಸಿಲಿನ ಸಹವಾಸದಲ್ಲಿ ಎತ್ತರವಾಗಿ ಬೆಳೆದು ತೆನೆ…

Read More

ಉದಯರಶ್ಮಿ ದಿನಪತ್ರಿಕೆ ವಿಜಯಪುರ: ನಗರದ ಬಿ.ಎಲ್.ಡಿ.ಇ ಸಂಸ್ಥೆಯ ಶ್ರೀ ಸಂಗನಬಸವ ಮಹಾಸ್ವಾಮೀಜಿ ಪಾಲಿಟೆಕ್ನಿಕ್ ನಲ್ಲಿ ಜೂನ್ 16 ಮಂಗಳವಾರ ಮತ್ತು ಜೂನ್ 17 ಬುಧವಾರ ಎರಡು ದಿನ ನಡೆದ ಕ್ಯಾಂಪಸ್ ಸಂದರ್ಶನದಲ್ಲಿ 46 ಡಿಪ್ಲೋಮಾ ಮತ್ತು 48 ಐಟಿಐ ವಿದ್ಯಾರ್ಥಿಗಳು ಆಯ್ಕೆಯಾಗಿದ್ದಾರೆ.ಧಾರವಾಡದ ನಿಡೆಕ್(NIDEK) ಸಂಸ್ಥೆ ಮತ್ತು ಬಿ.ಎಲ್.ಡಿ.ಇ ಪಾಲಿಟೆಕ್ನಿಕ್ ಹಾಗೂ ಐಟಿಐ ವತಿಯಿಂದ ಆಯೋಜಿಸಲಾದ ಈ ಕ್ಯಾಂಪಸ್ ಸಂದರ್ಶನದಲ್ಲಿ ನಿಡೆಕ್ ಮುಖ್ಯ ವ್ಯವಸ್ಥಾಪಕ ಸೋಮಶೇಖರ, ವ್ಯವಸ್ಥಾಪಕ ಮಂಜುನಾಥ, ಮಾನವ ಸಂಪನ್ಮೂಲ ವಿಭಾಗದ ಚಂದನಾ ಹಾಗೂ ನಿಶ್ಮಿತಾ ಸಂದರ್ಶನ ನಡೆಸಿದರು.ಈ ಸಂದರ್ಶನದಲ್ಲಿ ವಿಜಯಪುರ ಮತ್ತು ಸುತ್ತಮುತ್ತಲಿನ ಜಿಲ್ಲೆಗಳ ಡಿಪ್ಲೊಮಾ ಮೆಕ್ಯಾನಿಕಲ್, ಎಲೆಕ್ಟ್ರಿಕಲ್, ಎಲೆಕ್ಟ್ರಾನಿಕ್ಸ್ ಎಂಜಿನಿಯರಿಂಗ್ ವಿಭಾಗಗಳ ಒಟ್ಟು 60 ಕ್ಕೂ ಹೆಚ್ಚು ವಿದ್ಯಾರ್ಥಿಗಳು ಮತ್ತು ನಾನಾ ಐಟಿಐ ವಿಭಾಗಗಳ 110ಕ್ಕೂ ಹೆಚ್ಚು ವಿದ್ಯಾರ್ಥಿಗಳು ಭಾಗವಹಿಸಿದ್ದರು.ಲಿಖಿತ ಪರೀಕ್ಷೆಯಲ್ಲಿ 52 ವಿದ್ಯಾರ್ಥಿಗಳನ್ನು ಆಯ್ಕೆಮಾಡಿ ಮೌಖಿಕ ಸಂದರ್ಶನ ನಡೆಸಲಾಯಿತು.ಈ ಸಂದರ್ಭದಲ್ಲಿ ಬಿ.ಎಲ್.ಡಿ.ಇ ಡಿಪ್ಲೊಮಾ ಕಾಲೇಜಿನ ಪ್ರಾಚಾರ್ಯ ಪ್ರಭುದೇವ ಬಿ ಕಳಸಗೊಂಡ, ಉದ್ಯೋಗಾಧಿಕಾರಿ ಸುಧನ್ವ ವಿ. ಕುಲಕರ್ಣಿ, ಸಂತೋಷ…

Read More

ಉದಯರಶ್ಮಿ ದಿನಪತ್ರಿಕೆ ಬಬಲೇಶ್ವರ: ಹಿಂದುಳಿದ ಹಳ್ಳಿಯ ಸಾಮಾನ್ಯ ಕುಟುಂಬದ ಚೆನ್ನಬಸಪ್ಪ ಅಂಬಲಿ, ಸ್ವಾತಂತ್ರ್ಯ ಹೋರಾಟದಲ್ಲಿ ಧುಮುಕಿ, ನಿರಂತರ ತೀವ್ರಗಾಮಿ ಚಟುವಟಿಕೆಗಳನ್ನು ನಡೆಸಿ, ಹಲವಾರು ಬಾರಿ ಜೈಲುವಾಸ ಅನುಭವಿಸಿ, ಸ್ವಾತಂತ್ರ್ಯಾನಂತರವೂ ಕಾಂಗ್ರೆಸ್ ನಲ್ಲಿ ಸಕ್ರಿಯರಾಗಿ ಕೆಪಿಸಿಸಿ ಅಧ್ಯಕ್ಷ ಚುನಾವಣೆಯಲ್ಲಿ ಧಿಮಂತ ನಾಯಕ ಎಸ್.ನಿಜಲಿಂಗಪ್ಪನವರನ್ನು ಸೋಲಿಸಿದ ಹೆಗ್ಗಳಿಕೆ ಹೊಂದಿದ್ದಾರೆ ಎಂದು ಕೈಗಾರಿಕೆ ಹಾಗೂ ಮೂಲಸೌಕರ್ಯ ಅಭಿವೃದ್ಧಿ ಸಚಿವರ ಸಾರ್ವಜನಿಕ ಸಂಪರ್ಕಾಧಿಕಾರಿ ಡಾ.ಮಹಾಂತೇಶ ಬಿರಾದಾರ ಹೇಳಿದರು.ಬಬಲೇಶ್ವರ ತಾಲ್ಲೂಕಿನ ಅರ್ಜುಣಗಿಯ ಕರ್ನಾಟಕ ಪಬ್ಲಿಕ್ ಶಾಲೆಯಲ್ಲಿ ಬುಧವಾರ ಅಂಬಲಿ ಕುಟುಂಬದವರು ₹ 1 ಲಕ್ಷ ರೂಪಾಯಿ ವೆಚ್ಚದಲ್ಲಿ ಶಾಲಾ ಮಕ್ಕಳಿಗೆ ನೋಟ್ ಬುಕ್ ವಿತರಣೆ ಉದ್ಘಾಟಿಸಿ ಮಾತನಾಡಿದ ಅವರು, ಈ ಭಾಗದಲ್ಲಿ ಅತೀ ಬರಗಾಲ ಬಿದ್ದು ಜನರಿಗೆ ಆಹಾರ ಕೊರತೆಯಾದಾಗ ತಮ್ಮ ಮನೆಯ ದವಸ-ಧಾನ್ಯಗಳಿಂದ ಜನರಿಗೆ ಅಂಬಲಿ ತಯಾರಿಸಿ ನೀಡಿದ್ದರಿಂದ ’ಬಣಜಿಗೇರ’ ಎಂಬ ಇವರ ಮನೆತನದ ಹೆಸರು ’ಅಂಬಲಿ’ಯಾಗಿ ಬದಲಾವಣೆಯಾಯಿತು. ಅದೇ ಕುಟುಂಬದ ಚೆನ್ನಬಸಪ್ಪ ಬಾಲಕನಾಗಿದ್ದಾಗಲೇ ಕಂದಾಯ ವಸೂಲಿಗೆ ಬಂದಿದ್ದ ಮಾಮಲೆದಾರರನ್ನು ತರಾಟೆಗೆ ತೆಗೆದುಕೊಂಡು “ಬರಗಾಲದಿಂದ ಜನ ಸಾಯುತ್ತಿದ್ದಾರೆ.…

Read More

ಉದಯರಶ್ಮಿ ದಿನಪತ್ರಿಕೆ ವಿಜಯಪುರ: ಉನ್ನತ ಶಿಕ್ಷಣ ಗುರಿಯು ಕೇವಲ ವಿದ್ಯಾರ್ಥಿಗಳು ವಿಷಯ ಜ್ಞಾನ, ಅಂಕ ಮತ್ತು ಪದವಿ ಪಡೆಯುವದಕ್ಕಾಗಿ ಸಿಮೀತಗೊಳ್ಳಬಾರದು. ಹೊಸ ರಾಷ್ಟ್ರೀಯ ಶಿಕ್ಷಣ ನೀತಿಯು ವಿದ್ಯಾರ್ಥಿಗಳಲ್ಲಿ ವಿಷಯ ಜ್ಞಾನದೊಂದಿಗೆ ಕಲಿತ ವಿಷಯಗಳ ಪ್ರಾಯೋಗಿಕ ಅಳವಡಿಕೆ, ಸೃಜನಾತ್ಮಕತೆ ಮತ್ತು ಕ್ರಿಯಾಶೀಲತೆಯೊಂದಿಗೆ ಆಯ್ಕೆ ಮಾಡಿಕೊಂಡ ಯಾವುದೇ ವಿಷಯದ ಮೇಲೆ ಸಂಶೋಧನೆ ಕೈಗೊಳ್ಳಬೇಕು. ವಿದ್ಯಾರ್ಥಿದೆಸೆಯಲ್ಲಿಯೇ ಸಂಶೋಧನೆಯಲ್ಲಿ ಆಸಕ್ತಿ, ಅಭಿರುಚಿ ಮತ್ತು ಹೊಸ ವಿಷಯಗಳತ್ತ ಬೆಳಕು ಚೆಲ್ಲುವಂತೆ ಪ್ರೇರೇಪಿಸಬೆಕಾಗಿರುವುದು ಇಂದಿನ ಅಗತ್ಯತೆಯಾಗಿದೆ ಎಂದು ವಿಜಯಪುರ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ವಾಣಿಜ್ಯಶಾಸ್ತ್ರ ವಿಭಾಗದ ಮುಖ್ಯಸ್ಥರಾದ ಪ್ರೊ. ಎಂ.ಎಸ್.ಖೊದ್ನಾಪೂರ ಅವರು ಅಭಿಪ್ರಾಯಪಟ್ಟರು.ಅವರು ನಗರದ ಬಿ.ಎಲ್.ಡಿ.ಇ. ಸಂಸ್ಥೆಯ ಎ.ಎಸ್.ಪಾಟೀಲ ಸ್ವಾಯತ್ತ ಕಾಲೇಜಿನಲ್ಲಿ ವಾಣಿಜ್ಯಶಾಸ್ತ್ರ ವಿಭಾಗದ ವತಿಯಿಂದ ಬಿ.ಕಾಂ ಅಂತಿಮ ವರ್ಷದ ವಿದ್ಯಾರ್ಥಿಗಳಿಗಾಗಿ ಆಯೋಜಿಸಿದ್ದ “ಪ್ರಾಜೆಕ್ಟ್ ರಿಪೋರ್ಟ ಮೌಖಿಕ ಸಂದರ್ಶನ” ವಿದ್ಯಾರ್ಥಿಗಳ ಸಂಶೋಧನಾ ಕೌಶಲ್ಯಗಳನ್ನು ಮೌಲ್ಯೀಕರಿಸಿ ಮಾತನಾಡುತ್ತಿದ್ದರು.ಇಂದಿನ ಜಗತ್ತು ಹೊಸತನ, ನಾವಿನ್ಯತೆ, ಸಂಶೋಧನೆ ಮತ್ತು ಅನ್ವೇಷಣೆಗೆ ಆಹ್ವಾನ ಮತ್ತು ಅವಕಾಶಗಳನ್ನು ನೀಡುತ್ತಿದೆ. ವಿದ್ಯಾರ್ಥಿಗಳು ತಮ್ಮಲ್ಲಿರುವ ಸುಪ್ತ ಪ್ರತಿಭೆ, ಜ್ಞಾನ, ಕ್ರೀಯಾಶೀಲತೆ…

Read More