ಉದಯರಶ್ಮಿ ದಿನಪತ್ರಿಕೆ
ಚಡಚಣ: ಡಾ.ಸಮೃದ್ಧಿ ಗಡ್ಡದ ಅವರು 2025 ನೇ ಸಾಲಿನ ಸೆಪ್ಟೆಂಬರ್ – ಅಕ್ಟೋಬರ್ ತಿಂಗಳಿನಲ್ಲಿ ನಡೆದ ವೈದ್ಯಕೀಯ ಸ್ನಾತಕೋತ್ತರ ಪರೀಕ್ಷೆಯ ಎಂ ಎಸ್. ಜನರಲ್ ಸರ್ಜರಿ ಯಲ್ಲಿ ಶೇ.81ರಷ್ಟು ಅಂಕ ಪಡೆದು ರಾಜ್ಯದ ರಾಜೀವ್‌ಗಾಂಧಿ ಆರೋಗ್ಯ ವಿಶ್ವವಿದ್ಯಾಲಯ ಬೆಂಗಳೂರು ರವರು ನಡೆಸಿದ ಪರೀಕ್ಷೆಯಲ್ಲಿ ಪ್ರಥಮ ಸ್ಥಾನ ಪಡೆದು, ಚಿನ್ನದ ಪದಕ ಪಡೆದಿದ್ದಾರೆ.
ಡಾ||ಸಮೃದ್ಧಿಯವರು ದಾವಣಗೆರೆಯ ಜಗದ್ಗುರು ಜಯದೇವ ವೈದ್ಯಕೀಯ ಮಹಾವಿದ್ಯಾಲಯದಲ್ಲಿ ವ್ಯಾಸಂಗ ಮಾಡುತ್ತಿದ್ದರು. ಇವರು ಪ್ರಾಥಮಿಕ ಶಿಕ್ಷಣದಿಂದ ಇಲ್ಲಿಯವರೆಗೂ ಪ್ರತಿಭಾವಂತ ವಿದ್ಯಾರ್ಥಿನಿಯಾಗಿದ್ದು, ಪ್ರತಿ ಹಂತದಲ್ಲಿಯೂ ಪ್ರಥಮ ಸ್ಥಾನವನ್ನು ಪಡೆಯುತ್ತಾ ಬಂದಿದ್ದಾರೆ. ಇವರು ವಿಜಯಪುರ ಜಿಲ್ಲೆಯ ಹೊರ್ತಿ ಗ್ರಾಮದವರಾಗಿದ್ದು, ರೇವಪ್ಪ ಹಾಗೂ ಮಹಾದೇವಿ ಗಡ್ಡದ ದಂಪತಿಯ ಏಕೈಕ ಸುಪುತ್ರಿಯಾಗಿದ್ದಾರೆ.
ಇವರು ದಾವಣಗೆರೆಯ ವೈದ್ಯಕೀಯ ಕಾಲೇಜಿನ ಬಾಪೂಜಿ ಆಸ್ಪತ್ರೆ ಹಾಗೂ ಸಂಶೋಧನಾ ಕೇಂದ್ರದಲ್ಲಿ ವೈದ್ಯಕೀಯ ಸೇವೆಯಲ್ಲಿ ಕಾರ್ಯ ಪ್ರವೃತ್ತರಾಗಿದ್ದಾರೆ. ಇನ್ನೂ ಹೆಚ್ಚಿನ ವ್ಯಾಸಂಗ ಮಾಡಿ ವೈದ್ಯಕೀಯ ಕ್ಷೇತ್ರದಲ್ಲಿ ಸಾಧನೆ ಮಾಡುವ ಹಂಬಲವನ್ನು ಹೊಂದಿದ್ದಾರೆ. ಇವರ ಈ ಸಾಧನೆಗೆ ಪಾಲಕರು, ಸಂಬಂಧಿಕರು ಬಂಧುಗಳು ಹಾಗೂ ಹಿತೈಷಿಗಳು ಸಂತಷ ವ್ಯಕ್ತಪಡಿಸಿ ಶುಭ ಹಾರೈಸಿ ಅಭಿನಂದಿಸಿದ್ದಾರೆ.

