ಉದಯರಶ್ಮಿ ದಿನಪತ್ರಿಕೆ
ಗದಗ: ಪಂ.ಪುಟ್ಟರಾಜ ಪೂಜ್ಯರ ಅಭಿಮಾನಿ ಭಕ್ತರ ಮಹಾ ಬಳಗವಾದ, ಗದುಗಿನ ಡಾ ಪಂ.ಪುಟ್ಟರಾಜ ಸೇವಾ ಸಮಿತಿ ರಾಜ್ಯಾಧ್ಯಕ್ಷರಾಗಿ ವಿನಾಯಕ ಪಿ.ಬಿ. ನೇಮಕವಾಗಿದ್ದಾರೆ.
ಸಂಸ್ಕೃತಿ ಚಿಂತಕ, ಪೂಜ್ಯಗುರು ಪುಟ್ಟರಾಜರ ಅಭಿಮಾನಿ ಭಕ್ತ, ಧರ್ಮ ಪ್ರಕಾಶ ಪಾಳೇಗಾರ ಹನುಮಂತಪ್ಪನವರ ಚಿರಂಜೀವಿ, ದಾವಣಗೆರೆಯ ಪ್ರತಿಷ್ಠಿತ, ಶ್ರೀಗಂಧ ರೆಸಿಡೆನ್ಸಿಯ ಮಾಲೀಕರಾದ, ಮಂತ್ರಾಲಯದಿಂದ “ಮಂತ್ರಾಲಯ ಪರಿಮಳ” ಪ್ರಶಸ್ತಿ ಪುರಸ್ಕೃತ, ಖ್ಯಾತ ಉದ್ಯಮಿದಾರ ವಿನಾಯಕ ಪಿ. ಬಿ. ಇವರನ್ನು ನೇಮಕ ಮಾಡಲಾಗಿದೆ ಎಂದು ಡಾ ಪಂ ಪುಟ್ಟರಾಜ ಸೇವಾ ಸಮಿತಿಯ ಪ್ರವರ್ತಕರಾದ ವೇ. ಚನ್ನವೀರಸ್ವಾಮಿ ಹಿರೇಮಠ ,(ಕಡಣಿ) ಶ್ರೀವೀರೇಶ್ವರ ಪುಣ್ಯಾಶ್ರಮ ಗದಗ, ಇವರು ತಿಳಿಸಿದ್ದಾರೆ.
ಸುಮಾರು ೫ ವರ್ಷಗಳಿಂದ ಸೇವಾ ಸಮಿತಿಯ ಪೋಷಕರಾಗಿ, ಜಿಲ್ಲಾ ಅಧ್ಯಕ್ಷರಾಗಿ ಸಲ್ಲಿಸಿದ ಸೇವೆ ಮತ್ತು ಪುಟ್ಟರಾಜರ ಮಾಸದ ನೆನಪು ಸಂಗೀತ ಶ್ರೀಗಂಧ ಮಾಸಿಕ ಕಾರ್ಯಕ್ರಮವನ್ನು ಆಯೋಜಿಸುತ್ತಾ ಬಂದಿರುವುದನ್ನು ಗಮನಿಸಿ, ಇವರನ್ನು ರಾಜ್ಯ ಘಟಕದ ಅಧ್ಯಕ್ಷರನ್ನಾಗಿ ನೇಮಕ ಮಾಡಲಾಗಿದೆ ಎಂದು ಹೇಳಿದ್ದಾರೆ.

