ಉದಯರಶ್ಮಿ ದಿನಪತ್ರಿಕೆ
ದೇವರಹಿಪ್ಪರಗಿ: ವಿದ್ಯುತ್ ಇಲಾಖೆಯನ್ನು ಟಾಟಾ ಪವರ್ ಕಂಪನಿ ಲಿಮಿಟೆಡ್ ಸೇರಿದಂತೆ ಇತರೆ ಖಾಸಗಿ ಸಂಸ್ಥೆಗಳಿಗೆ ವಿದ್ಯುತ್ ವಿತರಣಾ ಪರವಾನಗಿ ನೀಡ ಕೂಡದು ಎಂದು ಆಗ್ರಹಿಸಿ ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆಯ ಪದಾಧಿಕಾರಿಗಳು ಪ್ರತಿಭಟನೆ ಕೈಗೊಂಡು ತಹಶೀಲ್ದಾರ ನಿಂಗಣ್ಣ ಬಿರಾದಾರ ಅವರಿಗೆ ಮನವಿ ಸಲ್ಲಿಸಿದರು.
ಪಟ್ಟಣದ ಟಿಪ್ಪು ಸುಲ್ತಾನ ವೃತ್ತದಲ್ಲಿ ಸಭೆ ಸೇರಿದ ರೈತ ಸಮುದಾಯ ವಿದ್ಯುತ್ ವಿತರಣಾ ಕೇಂದ್ರಗಳನ್ನು ಖಾಸಗೀಕರಣ ಮಾಡುವುದರ ವಿರುದ್ಧ ಘೋಷಣೆ ಕೂಗುತ್ತಾ ಮೆರವಣಿಗೆ ಹೊರಟು ಮೊಹರೆ ಹಣಮಂತ್ರಾಯ ವೃತ್ತ, ಡಾ.ಅಂಬೇಡ್ಕರ್ ವೃತ್ತದ ಮೂಲಕ ಇಂಡಿ ರಸ್ತೆಯಲ್ಲಿನ ತಹಶೀಲ್ದಾರ ಕಚೇರಿ ತಲುಪಿ ಮನವಿ ಸಲ್ಲಿಸಿದರು.
ನಂತರ ಹೆಸ್ಕಾಂ ಸಹಾಯಕ ಕಾರ್ಯನಿರ್ವಾಹಕ ಇಂಜಿನಿಯರ್ ಸತೀಶ ಸುಲಾಖೆ ಅವರಿಗೂ ಸಹ ಮನವಿ ಸಲ್ಲಿಸಿದರು.
ಈ ಸಂದರ್ಭದಲ್ಲಿ ರೈತ ಪ್ರಮುಖರಾದ ಸಿದ್ಧನಗೌಡ ಪಾಟೀಲ, ಸೋಮಶೇಖರ ಹಿರೇಮಠ, ರಾಮು ದೇಸಾಯಿ ಮಾತನಾಡಿದರು.
ರೈತ ಪ್ರಮುಖರಾದ ಅಜೀಜ್ ಯಲಗಾರ, ಶಾಂತಪ್ಪ ದೇವೂರ, ಸಂಪತ ಜಮಾದಾರ, ರಾವುತ ಅಗಸರ, ಗುರು ಜಡಗೊಂಡ, ಕಾಶೀನಾಥ ಕೋರಿ, ಮುನೀರ್ ಅಹ್ಮದ್ ಮಳಖೇಡ, ಹಣಮಂತ್ರಾಯ ಪೋಲಿಸ್‌ಪಾಟೀಲ(ದೇವೂರ), ದಿನೇಶ ಪಾಟೀಲ, ರಮೇಶ ಈಳಗೇರ, ಸಿ.ಎಸ್.ಪ್ಯಾಟಿ, ಅಶೋಕ ನಾಯ್ಕೋಡಿ, ನ್ನಮ್ಮ ಮೇತ್ರಿ ಹಲವಾರು ರೈತರು ಭಾಗವಹಿಸಿದ್ದರು.

