Subscribe to Updates
Get the latest creative news from FooBar about art, design and business.
Author: editor.udayarashmi@gmail.com
ಬಿ.ಎಲ್.ಡಿ.ಇ ಸಂಸ್ಥೆಯ ನೂತನ ಕಲಾ ಮಹಾವಿದ್ಯಾಲಯ ತಿಕೋಟಾ ಕಾಲೇಜಿನಲ್ಲಿ ವಿಶೇಷ ಉಪನ್ಯಾಸ & ಕ್ರೀಡಾ ದಿನಾಚರಣೆ | ಡಾ.ಸುನಿತಾ ಬಿ. ಜಾಧವ ಸಲಹೆ ಉದಯರಶ್ಮಿ ದಿನಪತ್ರಿಕೆ ತಿಕೋಟಾ: ಭಾರತದ ಪುರಾತನ ಸಾಮುದಾಯಿಕ ಸಂಸ್ಕೃತಿಯನ್ನು ಇಂದಿನ ಡಿಜಿಟಲ್ ಯುಗವು ಬದಲು ಮಾಡುತ್ತಿರುವುದರ ಇತಿಮಿತಿಗಳನ್ನು ಅಳತೆ ಮಾಡುವುದು ಕಷ್ಟಸಾಧ್ಯ ಎಂದು ಮುದ್ದೇಬಿಹಾಳ ಎಮ್.ಜಿ.ವಿ.ಸಿ ಕಾಲೇಜಿನ ಸಮಾಜಶಾಸ್ತ್ರ ವಿಭಾಗದ ಮುಖ್ಯಸ್ಥೆ ಡಾ.ಸುನಿತಾ ಬಿ. ಜಾಧವ ಹೇಳಿದರು.ಬಿ. ಎಲ್. ಡಿ. ಇ ಸಂಸ್ಥೆಯ ತಿಕೋಟಾ ಪಟ್ಟಣದ ನೂತನ ಕಲಾ ಮಹಾವಿದ್ಯಾಲಯದಲ್ಲಿ ಶನಿವಾರ ಐಕ್ಯೂಎಸಿ ಹಾಗೂ ಸಮಾಜಶಾಸ್ತ್ರ ವಿಭಾಗದ ವತಿಯಿಂದ ಆಯೋಜಿಸಿದ್ದ ವಿಶೇಷ ಉಪನ್ಯಾಸ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.ಇವತ್ತಿನ ತಂತ್ರಜ್ಞಾನ ತಕ್ಷಣದ ಸಂಪರ್ಕ ಒದಗಿಸಿ ಜಗತ್ತಿನ ಯಾವುದೇ ಮೂಲೆಯಲ್ಲಿರುವವರನ್ನು ಕ್ಷಣಾರ್ಧದಲ್ಲಿ ಸಂಪರ್ಕಿಸಲು ಅನುವು ಮಾಡಿದೆ. ಭೌಗೋಳಿಕ ದೂರವು ಈಗ ಸಂಬಂಧಗಳಿಗೆ ಅಡ್ಡಿಯಾಗಿ ಉಳಿದಿಲ್ಲ. ನಿರಂತರ ವಾಟ್ಸಾಪ್, ಇನ್‌ಸ್ಟಾಗ್ರಾಮ್ ಮೂಲಕ ಸಂಪರ್ಕದಲ್ಲಿರಲು ಸಾಧ್ಯವಾಗಿದೆ. ಸಂಬಂಧಗಳ ಸ್ವರೂಪದಲ್ಲಿ ಮುಖಾಮುಖಿ ಭೇಟಿಯಾಗದಿದ್ದರೂ ಆನ್‌ಲೈನ್‌ನಲ್ಲಿ ಆಪ್ತ ಗೆಳೆಯರಾಗುತ್ತಿದ್ದಾರುವುದು ಒಳ್ಳೆಯ ಬೆಳವಣಿಗೆ. ಸೈಬರ್ ಸಂಸ್ಕೃತಿಯು ಮಾನವ…
ಕಲಬುರಗಿಯನ್ನು ಅತೀ ಬರಗಾಲ ಪೀಡಿತ ಜಿಲ್ಲೆಯೆಂದು ಘೋಷಿಸಲು ಆಗ್ರಹಿಸಿ ಅಫ್ಜಲ್‌ಪುರದಲ್ಲಿ ರಸ್ತೆ ತಡೆ | ಸಿಎಂಗೆ ಮನವಿ ಉದಯರಶ್ಮಿ ದಿನಪತ್ರಿಕೆ ಅಫ್ಜಲ್‌ಪುರ: ತಾಲೂಕು ಕೇಂದ್ರದಲ್ಲಿ ಸ್ವಾಭಿಮಾನಿ ಕಬ್ಬು ಬೆಳೆಗಾರರ ಐಕ್ಯ ಹೋರಾಟ ಸಮಿತಿ ಹಾಗೂ ಕರ್ನಾಟಕ ಪ್ರಾಂತ ರೈತ ಸಂಘದ ವತಿಯಿಂದ ತೀವ್ರ ಪ್ರತಿಭಟನೆ ನಡೆಸಲಾಯಿತು. ಕಲಬುರಗಿ ಜಿಲ್ಲೆಯಲ್ಲಿ ಮಳೆ ಕೈಕೊಟ್ಟ ಹಿನ್ನೆಲೆಯಲ್ಲಿ ಇಡೀ ಜಿಲ್ಲೆಯನ್ನು ಸಂಪೂರ್ಣವಾಗಿ ‘ಅತೀ ಬರಗಾಲ ಪೀಡಿತ ಪ್ರದೇಶ’ವೆಂದು ಸರ್ಕಾರ ಅಧಿಕೃತವಾಗಿ ಘೋಷಿಸಬೇಕೆಂದು ರೈತರು ಆಗ್ರಹಿಸಿದರು. ಪ್ರತಿಭಟನಾಕಾರರು ಮುಖ್ಯ ರಸ್ತೆಯಲ್ಲಿ ಟೈಯರ್‌ಗೆ ಬೆಂಕಿ ಹಚ್ಚಿ, ರಸ್ತೆ ತಡೆದು ಸರ್ಕಾರದ ವಿರುದ್ಧ ಘೋಷಣೆಗಳನ್ನು ಕೂಗಿ ಆಕ್ರೋಶ ವ್ಯಕ್ತಪಡಿಸಿದರು.ಮಳೆ ಇಲ್ಲದೆ ಕಬ್ಬು ಸೇರಿದಂತೆ ಪ್ರಮುಖ ಬೆಳೆಗಳು ಒಣಗಿ ಹೋಗಿದ್ದು, ಅನ್ನದಾತರು ತೀವ್ರ ಆರ್ಥಿಕ ಸಂಕಷ್ಟಕ್ಕೆ ಸಿಲುಕಿದ್ದಾರೆ ಎಂದು ಮುಖಂಡರು ಅಳಲು ತೋಡಿಕೊಂಡರು.ಕೂಡಲೇ ಬೆಳೆ ನಷ್ಟ ಪರಿಹಾರ ಬಿಡುಗಡೆ ಮಾಡಬೇಕು ಮತ್ತು ರೈತರ ಸಾಲ ಮನ್ನಾ ಮಾಡಬೇಕೆಂದು ಪಟ್ಟು ಹಿಡಿದರು.ಬಳಿಕ ಸ್ಥಳೀಯ ತಹಸೀಲ್ದಾರ್ ಅವರ ಮೂಲಕ ಮುಖ್ಯಮಂತ್ರಿಗಳಿಗೆ ತಮ್ಮ ಬೇಡಿಕೆಗಳ ಲಿಖಿತ…
ಚಿಂಚೋಳಿ ಅಂಗನವಾಡಿಯಲ್ಲಿ ಅಧಿಕಾರಿಗಳ ‘ಕಮಿಷನ್’ ಲೀಲೆ! | ಗ್ರಾಮಸ್ಥರ ಆಕ್ರೋಶ ಉದಯರಶ್ಮಿ ದಿನಪತ್ರಿಕೆ ವಿಶೇಷ ವರದಿಅಫ್ಜಲಪುರ: “ಸೋರುತ್ತಿಹದು ಮನೆಯ ಮಾಳಿಗೆ ಅಜ್ಞಾನದಿಂದ..” ಶಿಶುನಾಳ ಶರೀಫರ ಈ ಮಾತು ಅಫ್ಜಲಪುರ ತಾಲೂಕಿನ ಚಿಂಚೋಳಿ ಗ್ರಾಮದ ಅಂಗನವಾಡಿ ಕೇಂದ್ರಗಳ ಪ್ರಸ್ತುತ ಸ್ಥಿತಿಗೆ ಕನ್ನಡಿ ಹಿಡಿದಂತಿದೆ. ತಲೆಯ ಮೇಲಿನ ಸೂರು ಕುಸಿದು ಬೀಳುವ ಅಪಾಯದಲ್ಲಿದ್ದರೂ, ಅದನ್ನು ದುರಸ್ತಿ ಮಾಡದ ಅಧಿಕಾರಿಗಳು ಮಾತ್ರ ಲಕ್ಷಾಂತರ ರೂಪಾಯಿ ಖರ್ಚು ಮಾಡಿ ಕಾಂಪೌಂಡ್ ಗೋಡೆ ನಿರ್ಮಿಸಲು ಹೊರಟಿರುವುದು ಗ್ರಾಮಸ್ಥರ ಆಕ್ರೋಶಕ್ಕೆ ಕಾರಣವಾಗಿದೆ.ಉದುರುತ್ತಿದೆ ಸಿಮೆಂಟ್ ಪ್ಲಾಸ್ಟರ್, ಜೀವಭಯದಲ್ಲಿ ಮಕ್ಕಳುಚಿಂಚೋಳಿ ಗ್ರಾಮದ ಒಂದು ಅಂಗನವಾಡಿ ಕಟ್ಟಡದ ಛಾವಣಿಯ ಪ್ಲಾಸ್ಟರ್ ಕಿತ್ತು ಸಿಮೆಂಟ್ ಚೂರುಗಳು ನೆಲಕ್ಕೆ ಉದುರುತ್ತಿವೆ. ಪಕ್ಕದಲ್ಲೇ ಇರುವ ಮತ್ತೊಂದು ಹಳೆಯ ಕಟ್ಟಡ ಸಂಪೂರ್ಣ ಶಿಥಿಲಾವಸ್ಥೆ ತಲುಪಿದ್ದು, ಬಳಕೆಗೆ ಯೋಗ್ಯವಾಗಿಲ್ಲ. ಶಿಥಿಲ ಕಟ್ಟಡ ಅಪಾಯಕಾರಿಯಾದ ಕಾರಣ ಅಂಗನವಾಡಿಯನ್ನು ಅನಿವಾರ್ಯವಾಗಿ ಬಾಡಿಗೆ ಕಟ್ಟಡದಲ್ಲಿ ನಡೆಸಲಾಗುತ್ತಿದೆ.ಅಧಿಕಾರಿಗಳ ವಿಚಿತ್ರ ಆದ್ಯತೆ: ಕಟ್ಟಡವಿಲ್ಲದ ಜಾಗಕ್ಕೆ ಕಾಂಪೌಂಡ್!ಮಕ್ಕಳು ಕೂರಲು ಯೋಗ್ಯವಾದ ಸೂರು ಇಲ್ಲದಿರುವಾಗ, ಶಿಥಿಲಗೊಂಡಿರುವ ಹಾಗೂ ಬಳಕೆಯಲ್ಲಿಲ್ಲದ ಕಟ್ಟಡಗಳ ಸುತ್ತ…
ಉದಯರಶ್ಮಿ ದಿನಪತ್ರಿಕೆ ಕೆಂಭಾವಿ: ಪರಸ್ಪರ ಸಹಕಾರ, ಸಹಬಾಳ್ವೆ, ಸೌಹಾರ್ದತೆ, ಸಹೋದರತ್ವದ ಪರಿಕಲ್ಪನೆಯ ರಕ್ಷಾ ಬಂಧನ ಹಬ್ಬ, ಸ್ನೇಹಯದ, ಸ್ವಾಭಿಮಾನದ, ಸಂರಕ್ಷಣೆಯ ಸಂಕೇತ ಎಂದು ಯುವ ನಾಯಕ ಆದಿತ್ಯಗೌಡ ಎಸ್ ಪೋಲಿಸ್ ಪಾಟೀಲ್ ಹೇಳಿದರು.ಪಟ್ಟಣದ ಹಿರೇಮಠ ಸಂಸ್ಥಾನದಲ್ಲಿ ಶ್ರೀಗುರು ಕಾಂತೇಶ್ವರ ಜನಕಲ್ಯಾಣ ಸೇವಾ ಪ್ರತಿಷ್ಠಾನ ಹಾಗೂ ವಿವೇಕ ಜಾಗೃತ ಬಳಗ, ಸಹಜ ಸ್ಥಿತಿಯೋಗ ಬಂಧುಗಳು ಶ್ರೀ ರವಿಶಂಕರ ಗುರೂಜಿ ಸತ್ಸಂಗಿಗಳು ಸಂಯುಕ್ತಾಶ್ರಯದಲ್ಲಿ ಶುಕ್ರವಾರ ಸಂಜೆ ಹಮ್ಮಿಕೊಂಡಿದ್ದ ಮಾಸಿಕ ಹುಣ್ಣಿಮೆಯ ಶಿವಾನುಭವ ಗೋಷ್ಠಿ ಮತ್ತು ರಕ್ಷಾ ಬಂಧನ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಅವರು ರಕ್ಷಾ ಬಂಧನ ಹಬ್ಬ ಸಾಂಸ್ಕೃತಿಕ ಹಾಗೂ ಸಾಂಪ್ರದಾಯಿಕ ಪರಂಪರೆಯ ಪ್ರತೀಕ ಎಂದವರು, ಭ್ರಾತೃತ್ವದ ಬೆಸುಗೆ, ಆದರ್ಶಗಳ ಅಪ್ಪುಗೆ, ಮಾನವೀಯ ಮೌಲ್ಯಗಳಿಗೆ ಮೇಲ್ಪಂಕ್ತಿ ಹಾಕಿಕೊಟ್ಟು ಪ್ರಾಗೈತಿಹಾಸಿಕ ಹಬ್ಬವೇ ರಕ್ಷಾಬಂಧನ ಎಂದರು.ಸಾಹಿತಿಗಳಾದ ನಿಂಗನಗೌಡ ದೇಸಾಯಿ ಹಾಗೂ ಶರಣಯ್ಯ ಸ್ವಾಮಿ ಹಿರೇಮಠ, ಜಿಲ್ಲಾ ಕಾಂಗ್ರೆಸ್ ಉಪಾಧ್ಯಕ್ಷ ಮಹಿಪಾಲರಡ್ಡಿ ಡಿಗ್ಗಾವಿ, ಮಾಜಿ ಪುರಸಭೆ ಸದಸ್ಯೆ ಉಮಾದೇವಿ ಎಚ್ ಪಾಟೀಲ್ ಕಾರ್ಯಕ್ರಮ ಉದ್ದೇಶಿಸಿ ಮಾತನಾಡಿ ರಕ್ಷಾ ಬಂಧನ…
ಸಿದ್ದೇಶ್ವರ ಶ್ರೀಗಳ ಇಂಗ್ಲೀಷ ಪ್ರವಚನಗಳ ಸಂಗ್ರಹದ ಕೃತಿ ‘ರಿಯಲೈಸೇಷನ್ ಆಫ್ ದ ಸೆಲ್ಫ್’ ಕೃತಿಯ ಲೇಖಕ ಡಾ. ಎಂ.ಎಸ್.ಚಾಂದಕವಟೆ ಉದಯರಶ್ಮಿ ದಿನಪತ್ರಿಕೆ ವಿಜಯಪುರ: ಜ್ಞಾನಯೋಗಿ ಸಿದ್ದೇಶ್ವರ ಶ್ರೀಗಳು ಇಂಗ್ಲಿಷ್‌ನಲ್ಲಿ ಮಾಡಿರುವ ಪ್ರವಚನಗಳ ಸಂಗ್ರಹವಾದ ‘ರಿಯಲೈಸೇಷನ್ ಆಫ್ ದ ಸೆಲ್ಫ್’ ಪುಸ್ತಕವನ್ನು ಕೃತಿಯ ಲೇಖಕರಾದ ಎಂ.ಎಸ್.ಚಾಂದಕವಟೆ ಅವರು ಕೈಗಾರಿಕೆ, ಮೂಲ ಸೌಲಭ್ಯ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಎಂ.ಬಿ.ಪಾಟೀಲ ಸಚಿವರಿಗೆ ಶನಿವಾರ ನಗರದಲ್ಲಿರುವ ಗೃಹ ಕಚೇರಿಯಲ್ಲಿ ನೀಡಿದರು.ಬೆಂಗಳೂರಿನ ಭಾರತೀಯ ವಿದ್ಯಾಭವನದ ಗಾಂಧಿ ಸೆಂಟರ್ ಆಫ್ ಸಾಯಿನ್ಸ್ ಆ್ಯಂಡ್ ಹ್ಯೂಮನ್ ವ್ಯಾಲ್ಯುಸ್ ಸಂಸ್ಥೆ ಈ ಪುಸ್ತಕವನ್ನು ಪ್ರಕಟಿಸಿದ್ದು, ಆಗಷ್ಟ17ರಂದು ಧಾರವಾಡದ ಕರ್ನಾಟಕ ವಿದ್ಯಾವರ್ಧಕ ಸಂಘದಲ್ಲಿ ಬಿಡುಗಡೆಯಾಗಿತ್ತು. ಶ್ರೀ ಸಿದ್ದೇಶ್ವರ ಶ್ರೀಗಳ ಪ್ರವಚನಗಳ ಕನ್ನಡ ಪುಸ್ತಕಗಳು ಮತ್ತು ಭಾಷಾಂತರ ಕೃತಿಗಳು ಸಾಕಷ್ಟಿವೆ. ಆದರೆ ಶ್ರಿಗಳು ಇಂಗ್ಲಿಷ್‌ನಲ್ಲಿ ಮಾಡಿರುವ ಪ್ರವಚನಗಳ ಸಂಗ್ರಹ ಬಂದಿರುವುದು ಇದೇ ಮೊದಲು ಎಂದು ಹಿರಿಯ ಲೇಖಕ ಚಾಂದಕವಟೆ ಅವರು ಸಚಿವರಿಗೆ ಇದೇ ವೇಳೆ ವಿವರಿಸಿದರು.ಶ್ರೀ ಸಿದ್ದೇಶ್ವರ ಶ್ರೀಗಳು ವಿಜಯಪುರ ಜ್ಞಾನಯೋಗಾಶ್ರಮದಲ್ಲಿ ಇದ್ದಾಗ ರವಿವಾರಕ್ಕೊಮ್ಮೆ…
ಉದಯರಶ್ಮಿ ದಿನಪತ್ರಿಕೆ ವಿಜಯಪುರ: ಪವಿತ್ರ ರಕ್ಷಾ ಬಂಧನ ಹಬ್ಬದ ಅಂಗವಾಗಿ ನಗರದ ಬ್ರಹ್ಮಕುಮಾರಿ ಈಶ್ವರಿಯ ವಿಶ್ವ ವಿದ್ಯಾಲಯದ ಸರೋಜಾ ಅಕ್ಕ ಮತ್ತು ರುಕ್ಮಿಣಿ ಅಕ್ಕ ಅವರುಗಳು ಶನಿವಾರ ಕೈಗಾರಿಕೆ, ಮೂಲಸೌಲಭ್ಯ ಅಭಿವೃದ್ಧಿ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಎಂ. ಬಿ. ಪಾಟೀಲ ಅವರಿಗೆ ಪ್ರೀತಿಯಿಂದ ರಾಖಿ ಕಟ್ಟಿ ಶುಭ ಕೋರಿದರು.ನಗರದಲ್ಲಿರುವ ಸಚಿವ ಗೃಹ ಕಚೇರಿಗೆ ಆಗಮಿಸಿದ ಅವರು, ರಾಖಿ ಕಟ್ಟಿದರು. ಈ ಸಂದರ್ಭದಲ್ಲಿ ಮಾತನಾಡಿದ ಸಚಿವರು, ಈ ಪವಿತ್ರ ಬಂಧನದ ತೋರಿದ ಆತ್ಮೀಯತೆ, ಆಶೀರ್ವಾದ ಮತ್ತು ಸಹೋದರತ್ವದ ಭಾವನೆ ಮನಸ್ಸಿಗೆ ಸಂತಸ ತರಿಸಿತು. ಎಲ್ಲರಿಗೂ ಶುಭವಾಗಲಿ. ನಾಡಿನಾದ್ಯಂತ ಉತ್ತಮ ಮಳೆ, ಬೆಳೆ ಸಮೃದ್ಧಿಯಿಂದ ಕೂಡಿರಲಿ ಎಂದು ಶುಭ ಹಾರೈಸಿದರು.
ಕೈಗಾರಿಕೆ, ಮೂಲಸೌಲಭ್ಯ ಅಭಿವೃದ್ದಿ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಎಂ. ಬಿ. ಪಾಟೀಲ ಹೇಳಿಕೆ ಉದಯರಶ್ಮಿ ದಿನಪತ್ರಿಕೆ ವಿಜಯಪುರ: ನಗರದ ಗಾಂಧಿ ವೃತ್ತ ನವೀಕರಣಕ್ಕೆ ಕ್ರಮ ಕೈಗೊಳ್ಳಲಾಗಿದ್ದು, ಅಕ್ಟೋಬರ್ 2 ರಂದು ಗಾಂಧಿ ಜಯಂತಿ ದಿನ ಶಂಕುಸ್ಥಾಪನೆ ನೆರವೇರಿಸಲಾಗುವುದು ಎಂದು ಕೈಗಾರಿಕೆ, ಮೂಲಸೌಲಭ್ಯ ಅಭಿವೃದ್ದಿ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಎಂ. ಬಿ. ಪಾಟೀಲ ತಿಳಿಸಿದ್ದಾರೆ.ಶನಿವಾರ ನಗರದಲ್ಲಿರುವ ತಮ್ಮ ಗೃಹಕಚೇರಿಯಲ್ಲಿ ಸಭೆ ನಡೆಸಿದ ಸಚಿವರು ಕಾಮಗಾರಿಯ ವಿನ್ಯಾಸ, ರೂಪುರೇಷೆ ಮತ್ತು ಕೈಗೊಳ್ಳಬೇಕಾದ ಮುಂದಿನ ಕ್ರಮಗಳ ಕುರಿತು ಚರ್ಚೆ ನಡೆಸಿದರು.ಈ ಸಂದರ್ಭದಲ್ಲಿ ಮಾತನಾಡಿದ ಸಚಿವರು, ನಗರದ ಹೃದಯ ಭಾಗದಲ್ಲಿರುವ ಐತಿಹಾಸಿಕ ಗಾಂಧಿ ವೃತ್ತವು ಹಲವು ವರ್ಷಗಳಿಂದ ಹಳೆಯ ರೂಪದಲ್ಲಿಯೇ ಇದೆ. ಇಲ್ಲಿರುವ ಮಹಾತ್ಮ ಗಾಂಧೀಜಿಯವರ ಪ್ರತಿಮೆಯೂ ಚಿಕ್ಕದಾಗಿದ್ದು, ಬೆಳೆಯುತ್ತಿರುವ ವಿಜಯಪುರದ ಸೌಂದರ್ಯಕ್ಕೆ ತಕ್ಕಂತೆ ಈ ವೃತ್ತವನ್ನು ನವೀಕರಿಸುವ ಅಗತ್ಯವಿದೆ. ಸತ್ಯ, ಅಹಿಂಸೆ, ಶಾಂತಿ ಹಾಗೂ ಸಮಾನತೆಯ ಸಂದೇಶವನ್ನು ಜಗತ್ತಿಗೆ ಸಾರಿದ ಬಾಪೂಜಿ ಅವರ ಆದರ್ಶಗಳು ಎಂದೆಂದಿಗೂ ಪ್ರಸ್ತುತ. ಅವರ ಸ್ಮರಣೆಯನ್ನು ಮತ್ತಷ್ಟು ಅರ್ಥಪೂರ್ಣಗೊಳಿಸುವ…
ಉದಯರಶ್ಮಿ ದಿನಪತ್ರಿಕೆ ವಿಜಯಪುರ: ನಗರದ ಬಿ.ಎಲ್.ಡಿ.ಇ ಸಂಸ್ಥೆಯ ಜಲನಗರದಲ್ಲಿರುವ ಶ್ರೀ ಬಿ. ಎಂ. ಪಾಟೀಲ್ ಪಬ್ಲಿಕ್(ಐಸಿಎಸ್ಈ) ಶಾಲೆಯಲ್ಲಿರಾಷ್ಟ್ರೀಯ ಕ್ರೀಡಾ ದಿನ ಆಚರಿಸಲಾಯಿತು.ಈ ಸಂದರ್ಭದಲ್ಲಿ ಮಾತನಾಡಿದ ಶಾಲೆಯ ಪ್ರಾಚಾರ್ಯ ವಿಕ್ರಂ ನಾರ್ವೆಕರ, ಮೇಜರ್ ಧ್ಯಾನ ಚಂದ ಅವರು ಪ್ರಸಿದ್ಧ ಹಾಕಿ ಆಟಗಾರರಾಗಿದ್ದರು. ಅವರ ಗೌರವಾರ್ಥವಾಗಿ ಭಾರತದಲ್ಲಿ ಆಗಸ್ಟ್ 29 ರಾಷ್ಟ್ರೀಯ ಕ್ರೀಡಾ ದಿನವಾಗಿ ಆಚರಿಸಲಾಗುತ್ತದೆ. ಎಲ್ಲರೂ ಅವರಿಂದ ಸ್ಪೂರ್ತಿ ಪಡೆದು ಎಲ್ಲರೂ ಕ್ರೀಡೆಗಳಲ್ಲಿ ತಮ್ಮ ಛಾಪು ಮೂಡಿಸಬೇಕು ಎಂದು ಹೇಳಿದರು.ಈ ಸಂದರ್ಭದಲ್ಲಿ ಹಿರಿಯ ಸಂಯೋಜಕಿ ಜಯಾ ಗಲಗಲಿ, ದೈಹಿಕ ಶಿಕ್ಷಕ ಕಿರಣ ಮುಳ್ಳೂರ, ಬೋಧಕ ಮತ್ತು ಬೋಧಕರ ಹೊರತಾದ ಸಿಬ್ಬಂದಿ, ವಿದ್ಯಾರ್ಥಿಗಳು ಉಪಸ್ಥಿತರಿದ್ದರು.
ಲೇಖನ- ಜಯಶ್ರೀ.ಜೆ. ಅಬ್ಬಿಗೇರಿ.ಇಂಗ್ಲೀಷ್ ಉಪನ್ಯಾಸಕರುಬೆಳಗಾವಿಮೊ: ೯೪೪೯೨೩೪೧೪೨ ಉದಯರಶ್ಮಿ ದಿನಪತ್ರಿಕೆ ನನ್ನೊಲವಿನ ರಾಣಿ,ನನ್ನ ಅತಿಯಾದ ತುಂಟತನಕ್ಕೆ ನಿನ್ನ ಸೌಂದರ್ಯದ ಲಾವಣ್ಯ ಮತ್ತು ಮೃದು ಸ್ವಭಾವ ಒಂದು ಹೊಸ ಅರ್ಥವನ್ನು ತಂದುಕೊಟ್ಟಿತು. ನಿನ್ನ ಆ ಸುಂದರವಾದ, ಕಾಡಿಗೆ ಹಚ್ಚದಿದ್ದರೂ ಹೊಳೆಯುವ ದೊಡ್ಡ ಜಿಂಕೆಯ ಕಣ್ಣುಗಳು, ಚಂದ್ರನ ಬಿಂಬದಂತಿರುವ ವಿಶಾಲವಾದ ಹಣೆ, ನಿನ್ನ ಕೆನ್ನೆಯ ಮೇಲೆ ಬೀಳುವ ಆ ಮುದ್ದಾದ ಸುಳಿ ಮುಗುಳ್ನಗೆ ಮತ್ತು ನವಿಲಿನ ಗರಿಯಂತೆ ತೂಗಾಡುವ ನಿನ್ನ ಕಪ್ಪನೆಯ ಉದ್ದನೆಯ ರೇಷ್ಮೆಯಂತಹ ಕೂದಲು.. ಇವುಗಳನ್ನು ನೋಡುವಾಗಲೆಲ್ಲಾ ನನ್ನ ಎದೆಯ ಬಡಿತ ನಿಲ್ಲದಂತೆ ಹೆಚ್ಚಾಗುತ್ತದೆ. ನೀನು ಕೇವಲ ಸುಂದರಿಯಲ್ಲ, ನೀನು ನನ್ನ ಪ್ರತಿಯೊಂದು ಉಸಿರನ್ನು ಆಳುವ ದೇವತೆ. ನಿನ್ನ ಸಂಪಿಗೆ ಯಂತಹ ತೀಕ್ಷ್ಣ ಮೂಗು ಮತ್ತು ಕೆಂಪನೆಯ ಗಲ್ಲಗಳು ನನ್ನ ಹೃದಯವನ್ನು ಸಂಪೂರ್ಣವಾಗಿ ಕರಗಿಸಿಬಿಡುತ್ತವೆ. ಬಾಲ್ಯದಲ್ಲಿ ಕೆಸರಲ್ಲಿ ಆಡುತ್ತಾ, ಕಳ್ಳ-ಪೋಲೀಸ್ ಆಟವಾಡುತ್ತಾ, ಹಳ್ಳದ ದಡದಲ್ಲಿ ಚಿನ್ನಿ ದಾಂಡು ಆಡುತ್ತಾ, ಮರ ಹತ್ತಿ ಹಣ್ಣು ಕದಿಯುತ್ತಾ ಜೊತೆಯಾಗಿ ಬೆಳೆದ ನಾವು, ಹದಿಹರೆಯದ ಹರಿವಿನ ಹೊಸ್ತಿಲಿಗೆ ಬಂದಾಗ…
ಲೇಖನ- ಡಾ. ಶಶಿಕಾಂತ ಪಟ್ಟಣ.ರಾಮದುರ್ಗ – ಪುಣೆ ಉದಯರಶ್ಮಿ ದಿನಪತ್ರಿಕೆ ಕೊಂಡೆ ಮಂಚಣ್ಣ ಬಿಜ್ಜಳನ ಆಸ್ಥಾನದ ಮಂತ್ರಿಯಾಗಿದ್ದು, ಬಸವಣ್ಣನವರಿಗೆ ಅತ್ಯಂತ ಆಪ್ತಚರನಾದ ಮಂಚಣ್ಣನವರನ್ನು ಕೆಲ ವೈದಿಕ ಮನಸ್ಸು ಇತಿಹಾಸದಲ್ಲಿ ಅವನಿಂದಲೇ ಕಲ್ಯಾಣ ಕ್ರಾಂತಿಗೆ ಕಾರಣವಾಯಿತು ಎನ್ನುವ ಹುಸಿ ಕಥೆಯನ್ನು ಸೃಷ್ಟಿ ಮಾಡಿದರು.ಈತ ಗುಪ್ತ ಭಕ್ತಿಯನ್ನು ಮಾಡುತ್ತಿದ್ದ ವೈಷ್ಣವ ಬ್ರಾಹ್ಮಣ ಇದನ್ನು ಸಹಿಸದ ಶೈವ ಬ್ರಾಹ್ಮಣರು ಈತನ ಮೇಲೆ ಖೊಟ್ಟಿ ಆರೋಪವನ್ನು ಹೊರಿಸಿ ಬಸವ ದ್ರೋಹಿ ಎನ್ನುವಂತೆ ಬಿಂಬಿಸಿದರು .ಕೊಂಡೆ ಮಂಚಣ್ಣ 12ನೇ ಶತಮಾನದ ಕಲ್ಯಾಣದ ಶರಣರಲ್ಲಿ ಒಬ್ಬರು. ಇವರು ಬಸವಣ್ಣನವರ ಕಾಲದವರು. ಕೊಂಡೆ ಮಂಚಣ್ಣರ ಇವರು ಶರಣರ ಆಂದೋಲನದಲ್ಲಿ ಮತ್ತು ಕಲ್ಯಾಣದ ಕ್ರಾಂತಿಯ ಸಮಯದಲ್ಲಿ ಉಲ್ಲೇಖಗೊಳ್ಳುವ ವ್ಯಕ್ತಿ.ಇವರ ಧರ್ಮಪತ್ನಿ ಲಕ್ಷ್ಮಮ್ಮ. ಲಕ್ಷ್ಮಮ್ಮ ಅವರು ಮೊದಲು ಹರಿಭಕ್ತಿಯಲ್ಲಿದ್ದು, ನಂತರ ಶಿವಭಕ್ತಿಯನ್ನು ಸ್ವೀಕರಿಸಿದ ಶರಣೆ. ಇವರ ವಚನಗಳ ಅಂಕಿತನಾಮ ‘ಅಗಜೇಶ್ವರಲಿಂಗ’.ಐತಿಹಾಸಿಕ ಹಾಗೂ ಸಾಹಿತ್ಯಿಕ ಉಲ್ಲೇಖ: ಬಸವ ಯುಗದ ಕೆಲ ಪರಂಪರೆ ಹಾಗೂ ಕಥೆಗಳಲ್ಲಿ ಕೊಂಡೆ ಮಂಚಣ್ಣನವರ ಹೆಸರು ಬರುತ್ತದೆ. ಇವರನ್ನು ಕೆಲವೊಮ್ಮೆ ಗುಪ್ತ ಮಂಚಣ್ಣ…
