ಉದಯರಶ್ಮಿ ದಿನಪತ್ರಿಕೆ
ಕೊಲ್ಹಾರ: ಮಾಜಿ ಸಚಿವ ಎಸ್.ಕೆ. ಬೆಳ್ಳುಬ್ಬಿ ಅವರ ಜನ್ಮದಿನ, ವಿಶ್ವ ಪರಿಸರ ದಿನ ಹಾಗೂ ಪ್ರಧಾನಿ ನರೇಂದ್ರ ಮೋದಿ ಅವರ ‘ಏಕ್ ಪೆಡ್ ಮಾ ಕೆ ನಾಮ್’ ಅಭಿಯಾನದ ಅಂಗವಾಗಿ ಶುಕ್ರವಾರ (ಜೂನ್ 5) ಬೆಳಿಗ್ಗೆ 11 ಗಂಟೆಗೆ ಪಟ್ಟಣದ ವಿಶ್ವ ಭಾರತಿ ವಿದ್ಯಾ ವರ್ಧಕ ಸಂಘದ ಯಲ್ಲಮ್ಮ ದೇವಿ ಸಿಬಿಎಸ್ಇ ಶಾಲಾ ಆವರಣದಲ್ಲಿ ಸಸಿ ನೆಡುವ ಕಾರ್ಯಕ್ರಮವನ್ನು ಆಯೋಜಿಸಲಾಗಿದೆ.
ಮಾಜಿ ಸಚಿವ ಎಸ್.ಕೆ. ಬೆಳ್ಳುಬ್ಬಿ ಅವರ ಸೂಚನೆಯಂತೆ, ಅಭಿಮಾನಿಗಳು ಯಾವುದೇ ಆಡಂಬರಗಳನ್ನು ತೊರೆದು ಶಾಲು, ಹೂವುಗಳ ಬದಲು ಸಸಿಗಳನ್ನು ನೆಡುವ ಮೂಲಕ ಶುಭಾಶಯ ಕೋರಬೇಕು ಎಂದು ಎಸ್.ಕೆ. ಬೆಳ್ಳುಬ್ಬಿ ಅಭಿಮಾನಿ ಬಳಗ ಪ್ರಕಟಣೆಯಲ್ಲಿ ತಿಳಿಸಿದೆ.

