ಉದಯರಶ್ಮಿ ದಿನಪತ್ರಿಕೆ
ವಿಜಯಪುರ: ಜಿಲ್ಲೆಯ ಜನತೆಯನ್ನು ಬೆಚ್ಚಿಬೀಳಿಸಿದ ಚಡಚಣ ತಾಲೂಕು ಗೋವಿಂದಪೂರ ಗ್ರಾಮದಲ್ಲಿ ನಡೆದ ಸಾಮೂಹಿಕ ಹತ್ಯೆ ಪ್ರಕರಣದಲ್ಲಿ ಗುರುವಾರ ಮತ್ತೆ ಆರು ಜನ ಆರೋಪಿತರನ್ನು ಬಂಧಿಸಿ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ.
ಆರೋಪಿ ನಂ. 1 :
ಅಪ್ಪುಗೌಡ ತಂ. ಲಗಮನಗೌಡ @ ಲಕ್ಕನಗೌಡ ಪಾಟೀಲ (49 ವರ್ಷ), ಆರೋಪಿ ನಂ. 11 ಶಂಕ್ರೆಪ್ಪ ತಂ. ಮಾದೇವ ಅರಕೇರಿ ( 33 ವರ್ಷ), ಆರೋಪಿ ನಂ. 12 ಅಪ್ಪಾಸಾಬ @ ಕಿಶನ್ ತಂ. ಶಂಕರ ಭೋವಿ )56 ವರ್ಷ), ಆರೋಪಿ ನಂ. 22
ಸತ್ಯೆಪ್ಪ ತಂ. ಜಕ್ಕಪ್ಪ ಬಿರಾದಾರ (46 ವರ್ಷ), ಆರೋಪಿ ನಂ. 23 ಸುಲ್ತಾನ ತಂ. ಮಾದೇವ ಬಿರಾದಾರ (24 ವರ್ಷ), ಆರೋಪಿ ನಂ. 24 ಮಹೇಶ ತಂ. ಬೆಳ್ಳೆಣ್ಣಿ ಬಿರಾದಾರ (25 ವರ್ಷ) ಆರೋಪಿಗಳನ್ನು ಬಂಧಿಸಲಾಗಿದ್ದು, ಈಗಾಗಲೇ ದಿನಾಂಕ: 01-06-2026 ರಂದು 12 ಜನ ಆರೋಪಿತರನ್ನು ಬಂಧಿಸಿ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದ್ದು, ಹೀಗೆ ಈ ಪ್ರಕರಣದಲ್ಲಿ ಇದುವರೆಗೆ ಒಟ್ಟು 18 ಜನ ಆರೋಪಿತರ ಬಂಧನ ಪ್ರಕ್ರಿಯೆ ಪೂರ್ಣಗೊಳಿಸಲಾಗಿರುತ್ತದೆ ಎಂದು ಪೋಲೀಸ್ ಪ್ರಕಟಣೆಯಲ್ಲಿ ತಿಳಿಸಲಾಗಿದೆ.

