Author: editor.udayarashmi@gmail.com

ದೇವರಹಿಪ್ಪರಗಿ: ದೇಶದ ಸಮಸ್ತ ಜನತೆಗೆ ನೀಡಿದ ಎಲ್ಲಾ ಭರವಸೆಗಳು ಸೇರಿದಂತೆ ಜನಪರ ಯೋಜನೆಗಳನ್ನು ಅನುಷ್ಠಾನಗೊಳಿಸುವ ಮೂಲಕ ಮೂರನೆಯ ಬಾರಿಗೆ ಪ್ರಧಾನಿ ಮೋದಿಜಿ ಗದ್ದುಗೆಯೇರುವುದು ನಿಶ್ಚಿತ ಎಂದು ವಿಜಯಪುರ ಮತಕ್ಷೇತ್ರದ ಶಾಸಕ ಬಸನಗೌಡ ಪಾಟೀಲ (ಯತ್ನಾಳ) ಹೇಳಿದರು.ಪಟ್ಟಣದಲ್ಲಿ ಶನಿವಾರ ಬಿಜೆಪಿ ಅಭ್ಯರ್ಥಿ ರಮೇಶ ಜಿಗಜಿಣಗಿ ಪ್ರಚಾರದ ಅಂಗವಾಗಿ ಜರುಗಿದ ರೋಡ್ ಶೋದಲ್ಲಿ ಪಾಲ್ಗೊಂಡು ಮಾತನಾಡಿದರು. ಪ್ರಧಾನಿ ಮೋದಿಯವರ ಸಮರ್ಥ ನಾಯಕತ್ವದಲ್ಲಿ ಇಂದು ಭಾರತ ಪ್ರಬಲ ಆರ್ಥಿಕಶಕ್ತಿಯಾಗಿ ಬೆಳೆದು ನಿಂತಿದೆ. ನೆರೆಯ ಬದ್ಧವೈರಿ ಪಾಕಿಸ್ತಾನ ಜನತೆ ಕೂಡಾ ಮೋದಿಯವರನ್ನು ಕೊಂಡಾಡುತ್ತಿದೆ. ಇಂದು ಭಾರತದಲ್ಲಿ ದೇಶವಿರೋಧಿ ಚಟುವಟಿಕೆಗಳಿಗೆ ಕಾಂಗ್ರೆಸ್ ಅವಕಾಶ ನೀಡುತ್ತಿದೆ. ಇದಕ್ಕೆ ವಿಧಾನಸೌಧದಲ್ಲಿ ವಿರೋಧಿ ರಾಷ್ಟçಪರ ಜಿಂದಾಬಾದ್ ಹಾಗೂ ಹುಬ್ಬಳ್ಳಿಯಲ್ಲಿ ನಡೆದ ವಿದ್ಯಾರ್ಥಿನೀಯ ಹತ್ಯೆ ಪ್ರಕರಣಗಳೇ ಸಾಕ್ಷಿ. ಇಂಥ ಘಟನೆಗಳನ್ನು ಕಾಂಗ್ರೆಸ್ ನಾಯಕರು ಪದೇಪದೇ ಸಮರ್ಥನೆ ಮಾಡಿಕೊಳ್ಳುತ್ತಿರುವುದು ಕಾಂಗ್ರೆಸ್ ಪಕ್ಷದ ದೇಶ ವಿರೋಧಿನೀತಿಗೆ ನಿದರ್ಶನವಾಗಿದೆ ಎಂದು ಹೇಳುತ್ತಾ ಡಿ.ಕೆ.ಶಿವಕುಮಾರ, ಶಿವಾನಂದ ಪಾಟೀಲರ ಹೇಳಿಕೆಗಳ ಕುರಿತು ಅಸಮಾಧಾನ ವ್ಯಕ್ತಪಡಿಸಿದರು. ಜೊತೆಗೆ ನೋಟ್‌ಬ್ಯಾನ್ ನಂತರ ಪಾಕಿಸ್ತಾನದ ದಿವಾಳಿತನ,…

Read More

ದೇವರಹಿಪ್ಪರಗಿ: ಮತದಾನ ಜಾಗೃತಿ ಅಭಿಯಾನದ ಅಂಗವಾಗಿ ಜರುಗಿದ ರಂಗೋಲಿ ಸ್ಪರ್ಧೆಯಲ್ಲಿ ವಿವಿಧ ಗ್ರಾಮಗಳ ಸ್ವಸಹಾಯ ಸಂಘದ ಮಹಿಳೆಯರಿಂದ ವಿವಿಧ ರಂಗೋಲಿಗಳು ಕಂಗೊಳಿಸಿದವು.ಪಟ್ಟಣದ ಬಸ್ ನಿಲ್ದಾಣದ ಆವರಣದಲ್ಲಿ ಶನಿವಾರ ಲೋಕಸಭಾ ಸಾರ್ವತ್ರಿಕ ಚುನಾವಣೆಯ ಅಂಗವಾಗಿ ತಾಲ್ಲೂಕು ಸ್ವೀಪ್ ಸಮಿತಿ ಹಾಗೂ ಪಟ್ಟಣ ಪಂಚಾಯಿತಿ ಅಡಿಯಲ್ಲಿ ಮತದಾನ ಜಾಗೃತಿ ಅಭಿಯಾನದ ರಂಗೋಲಿ ಸ್ಪರ್ಧೆ ಏರ್ಪಡಿಸಲಾಗಿತ್ತು. ರಂಗೋಲಿ ಸ್ಪರ್ಧೆಯಲ್ಲಿ ತಾಲ್ಲೂಕಿನ ವಿವಿಧ ಗ್ರಾಮಗಳಿಂದ ಆಗಮಿಸಿದ ಸ್ವಸಹಾಯ ಸಂಘದ ಮಹಿಳೆಯರು ಮತದಾನ ಜಾಗೃತಿ ರಂಗೋಲಿ ಬಿಡಿಸಿದರು.ಚುನಾವಣಾ ಪರ್ವ ದೇಶದ ಗರ್ವ, ಮೇ ೭ ರಂದು ತಪ್ಪದೆ ಮತದಾನ ಮಾಡಿ, ನಾನು ತಪ್ಪದೇ ಮತದಾನ ಮಾಡುತ್ತೇನೆ, ಭಾರತ ನಕ್ಷೆ ಹೀಗೆ ಹಲವು ಬಗೆಯ ರಂಗೋಲಿಗಳು ಆಕರ್ಷಣೀಯವಾಗಿ ಪ್ರಯಾಣಿಕರ ಗಮನ ಸೆಳೆದವು.ಸಹಾಯಕ ಚುನಾವಣಾಧಿಕಾರಿ ಪ್ರವೀಣ ಜೈನ್ ರಂಗೋಲಿ ವೀಕ್ಷಿಸಿ ಸಂತಸ ವ್ಯಕ್ತಪಡಿಸಿದರು. ನಂತರ ರಂಗೋಲಿ ಸ್ಪರ್ಧೆಯಲ್ಲಿ ಪ್ರಥಮ, ದ್ವಿತೀಯ, ತೃತಿಯ ವಿಜೇತರಿಗೆ ತಾಲ್ಲೂಕು ಪಂಚಾಯಿತಿ ಇಓ ಸಂಜೀವ ಜಿನ್ನೂರ ನಗದು ಬಹುಮಾನ ಹಾಗೂ ಪ್ರಮಾಣಪತ್ರ ವಿತರಿಸಿ ಮಾತನಾಡಿದರು.ಪಟ್ಟಣ ಪಂಚಾಯಿತಿ ಮುಖ್ಯಾಧಿಕಾರಿ…

Read More

ತಿಕೋಟಾ: ತಾಲೂಕಿನ ಬಾಬಾನಗರ ಗ್ರಾಮದ ಬಿಜೆಪಿ ಪಕ್ಷದ ಸಾಮಾನ್ಯ ಕಾರ್ಯಕರ್ತ ಯುವಕ ಬಸವರಾಜ ಮಸಳಿ ಇತ್ತೀಚೆಗೆ ಬೆಳಗಾವಿ ನಗರಕ್ಕೆ ಬಿಜೆಪಿ ಪ್ರಚಾರ ರ್ಯಾಲಿಗೆ ಆಗಮಿಸಿದ ಪ್ರಧಾನಿ ನರೇಂದ್ರ ಮೋದಿ ಅವರನ್ನು ಭೇಟಿಯಾಗಿದ್ದಾನೆ.ಕಳೆದ ಆರು ವರ್ಷಗಳಿಂದ ಬಿಜೆಪಿ ಸಾಮಾನ್ಯ ಪಕ್ಷದ ಕಾರ್ಯಕರ್ತನಾಗಿ, ಬಬಲೇಶ್ವರ ಮತಕ್ಷೇತ್ರದ ಬಿಜೆಪಿ ಸಾಮಾಜಿಕ ಜಾಲತಾಣ ಸಂಚಾಲಕನಾಗಿ, ನಂತರ ಚಿಕ್ಕೋಡಿ ಲೋಕಸಭಾ ಚುನಾವಣೆಯ ಕುಡಚಿ ಮತಕ್ಷೇತ್ರದ ವಿಸ್ತಾರಕನಾಗಿ ಕಾರ್ಯನಿರ್ವಹಿಸುವಾಗ ಬೆಳಗಾವಿಗೆ ಆಗಮಿಸಿದ ಪ್ರಧಾನಿ ಮೋದಿ ನೂರಾರು ಬಿಜೆಪಿ ಕಾರ್ಯಕರ್ತರನ್ನು ಭೇಟಿಯಾಗುತ್ತಾ ಬರುವ ವೇಳೆ ಬಾಬಾನಗರದ ಹತ್ತೊಂಬತ್ತು (19) ವಯಸ್ಸಿನ ಯುವಕ ಬಸವರಾಜ ಮಸಳಿಯನ್ನು ಕಂಡು ಮುಗುಳ್ನಕ್ಕು ಹೆಸರನ್ನು ಕೇಳಿ ಚಿಕ್ಕ ವಯಸ್ಸಿನ ಈ ಕಾರ್ಯಕರ್ತನನ್ನು ಕಂಡು ಹರ್ಷವ್ಯಕ್ತಪಡಿಸಿದ್ದಾರೆ.ಮೂರ್ತಿ ಚಿಕ್ಕದಾದರೂ ಕೀರ್ತಿ ದೊಡ್ಡದು ಎಂಬ ವಾಕ್ಯದಂತೆ ಈ ಬಾಬಾನಗರದ ಯುವಕ ಮನೆಯವರ ಸಹಾಯದಿಂದ, ಊರಿನ ಹಿರಿಯರ ಆಶೀರ್ವಾದದಿಂದ ಬಿಜೆಪಿ ಪಕ್ಷದಲ್ಲಿ ಕಾರ್ಯಕರ್ತನಾಗಿ , ರೈತರ ಮಗನಾಗಿ, ಯುವಕರಿಗೆ ಸ್ಪೂರ್ತಿದಾಯಕನಾಗಿ, ಹಿರಿಯರಿಗೆ ಕಣ್ಣಾಗಿ, ಬಡವರಿಗೆ ಆದಷ್ಟು ತನ್ನ ಕೈಯಿಂದ ಸಹಾಯ ಮಾಡುತ್ತಾ ಶಾಲೆಯ…

Read More

ಲೋಕಸಭಾ ಚುನಾವಣೆ: ಸ್ವೀಪ್ ಸಮಿತಿಯಿಂದ ವಿನೂತನ ಜಾಗೃತಿ ಕಾರ್ಯಕ್ರಮ ವಿಜಯಪುರ: ಜಿಲ್ಲಾ ಸ್ವೀಪ್ ಸಮಿತಿ ವತಿಯಿಂದ ಮತದಾರರಲ್ಲಿ ಜಾಗೃತಿ ಮೂಡಿಸುವ ನಿಟ್ಟಿನಲ್ಲಿ ಶನಿವಾರ ಸಂಜೆ ನಗರದ ಸೆಟ್ ಲೈಟ್ ಬಸ್ ನಿಲ್ಲಾಣ ( ಹೊಸ ಬಸ್ ನಿಲ್ದಾಣ)ದಿಂದ ಹಮ್ಮಿಕೊಂಡ ಐತಿಹಾಸಿಕ ಪಾರಂಪರಿಕ ಟಾಂಗಾ ಅಭಿಯಾನಕ್ಕೆ ಚಾಲನೆ ನೀಡಲಾಯಿತು.ಸಾರ್ವತ್ರಿಕ ಲೋಕಸಭಾ ಚುನಾವಣೆ ೨೦೨೪ ರ ಮತದಾನ ಮಹತ್ವ ಕುರಿತು ಜನರಲ್ಲಿ ಜಾಗೃತಿ ಮೂಡಿಸುವ ನಿಟ್ಟಿನಲ್ಲಿ ಜಿಲ್ಲಾ ಪಂಚಾಯತ್, ಜಿಲ್ಲಾ ಸ್ವೀಪ್ ಸಮಿತಿ ವತಿಯಿಂದ ಹಮ್ಮಿಕೊಂಡ ಜಾಗೃತಿಯ ಟಾಂಗಾ ಅಭಿಯಾನವನ್ನು ಜಿಲ್ಲಾ ಸ್ವೀಪ್ ಸಮಿತಿ ಅಧ್ಯಕ್ಷರಾದ ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ ರಿಷಿ ಆನಂದ ಅವರು ವಿಶೇಷವಾಗಿ ಅಲಂಕೃತಗೊಂಡ ಪಾರಂಪರಿಕ ಟಾಂಗಾದಲ್ಲಿ ಕುಳಿತು ಹಸಿರು ನಿಶಾನೆ ತೋರುವ ಮೂಲಕ ಚಾಲನೆ ನೀಡಿದರು.ಮತದಾನ ಜಾಗೃತಿ ವಿವಿಧ ಘೋಷಣೆಗಳನ್ನೊಂಡ ಅಲಂಕೃತವಾಗಿರುವ ಟಾಂಗಾದಲ್ಲಿ ಸ್ವತ: ರಿಷಿ ಆನಂದ ಸೇರಿದಂತೆ ವಿವಿಧ ಇಲಾಖೆಯು ಅಧಿಕಾರಿಗಳು, ರಾಯಭಾರಿಗಳಾದ ಸಹನಾ ಕೂಡಿಗನೂರ, ಸಾಕ್ಷಿ ಹಿರೇಮಠ ಸೇರಿದಂತೆ ಇತರ ಅಧಿಕಾರಿಗಳು, ಸ್ವೀಪ್ ಸಮಿತಿ ಸದಸ್ಯರು…

Read More

ಬಿಜೆಪಿ ರಾಜ್ಯ ಹಿಂದುಳಿದ ಮೋರ್ಚಾ ರಾಜ್ಯ ಉಪಾಧ್ಯಕ್ಷ ವಿವೇಕಾನಂದ ಡಬ್ಬಿ ವ್ಯಂಗ್ಯ ವಿಜಯಪುರ: ಕಾಂಗ್ರೆಸ್ ಸರ್ಕಾರದ ಸಾಧನೆ ಹಾಗೂ ಬಿಜೆಪಿ ಸರ್ಕಾರದ ಸಾಧನೆಗಳ ಬಗ್ಗೆ ಬಹಿರಂಗ ಚರ್ಚೆಗೆ ಶಾಮಿಯಾನ ಹಾಕಿ ಚರ್ಚೆ ನಡೆಸಲು ನಾವು ಅನೇಕ ಬಾರಿ ಆಹ್ವಾನಿಸಿದರೂ ಕಾಂಗ್ರೆಸ್ ಪಕ್ಷ ಆಹ್ವಾನ ಸ್ವೀಕರಿಸಲಿಲ್ಲ, ಏಕೆಂದರೆ ಕಾಂಗ್ರೆಸ್ ಪಕ್ಷಕ್ಕೆ ತಾನು ಏನು ಮಾಡಿಲ್ಲ ಎಂಬುದು ಗೊತ್ತಿದೆ ಎಂದು ಬಿಜೆಪಿ ರಾಜ್ಯ ಹಿಂದುಳಿದ ಮೋರ್ಚಾ ರಾಜ್ಯ ಉಪಾಧ್ಯಕ್ಷ ವಿವೇಕಾನಂದ ಡಬ್ಬಿ ವ್ಯಂಗ್ಯವಾಡಿದರು.ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕಾಂಗ್ರೆಸ್ ಆಳ್ವಿಕೆಯಲ್ಲಿ ಕೇವಲ ನಾಲ್ಕು ನಗರಗಳಲ್ಲಿ ಮೆಟ್ರೋ ಸಂಚಾರ ಇತ್ತು, ಆದರೆ ಕೇವಲ 10 ವರ್ಷದ ಆಡಳಿತ ಅವಧಿಯಲ್ಲಿ 20 ನಗರರಗಳಲ್ಲಿ ಮೆಟ್ರೋ ಸಂಚಾರ ಆರಂಭವಾಗಿದೆ, ಕಾಂಗ್ರೆಸ್ 70 ವರ್ಷಗಳ ಆಡಳಿತದಲ್ಲಿ 628 ವಿಶ್ವವಿದ್ಯಾಲಯಗಳು ಮಾತ್ರ ಆರಂಭಗೊಂಡವು, ಆದರೆ ಮೋದಿಜಿ ಅವರು ಕೇವಲ 10 ವರ್ಷಗಳಲ್ಲಿ 1168 ಹೊಸ ವಿಶ್ವವಿದ್ಯಾಲಯ ಸ್ಥಾಪಿಸಿ ಉನ್ನತ ಶಿಕ್ಷಣಕ್ಕೆ ದೊಡ್ಡ ಕೊಡುಗೆ ನೀಡಿದ್ದಾರೆ ಎಂದರು.ಕಳೆದ ಏಳು ದಶಕಗಳ ಕಾಂಗ್ರೆಸ್ ಆಳ್ವಿಕೆಯಲ್ಲಿ ಜನಸಂಖ್ಯೆಗೆ…

Read More

ಕೊಲ್ಹಾರ: ಮೋದಿ ಮತ್ತವರ ಬಳಗ ಮತ್ತು ಬಿಜೆಪಿಯವರ ಸುಳ್ಳುಗಳನ್ನು ಜನ ಅರಿತಿದ್ದು, ಈ ಸಲ ಸರಿಯಾಗಿ ಪಾಠ ಕಲಿಸಲಿದ್ದಾರೆ ಎಂದು ಮಾಜಿ ಮುಖ್ಯಮಂತ್ರಿ ಲಕ್ಷ್ಮಣ ಸವದಿ ಹೇಳಿದರು.ಪಟ್ಟಣದಲ್ಲಿ ಶನಿವಾರ ಕಾಂಗ್ರೆಸ್ ಅಭ್ಯರ್ಥಿ ಪರವಾಗಿ ನಡೆದ ಬಸವನ ಬಾಗೇವಾಡಿ ವಿಧಾನಸಭೆ ಕ್ಷೇತ್ರ ವ್ಯಾಪ್ತಿಯ ಪ್ರಚಾರ ಸಭೆಯಲ್ಲಿ ಮಾತನಾಡಿ, ಬಿಜೆಪಿಯವರು ಸುಳ್ಳಿನ ಮೇಲೆ ಸಾಮ್ರಾಜ್ಯ ಕಟ್ಟುತ್ತಾರೆ. ಇಲ್ಲದ್ದನ್ನು ಅಚ್ಚುಕಟ್ಟಾಗಿ ಸೃಷ್ಟಿಸುತ್ತಾರೆ. ಭ್ರಮೆಗಳನ್ನು ಬಿತ್ತಿ ಮುಗ್ಧ ಜನರ ಮತ ಕೇಳುತ್ತಾರೆ. ಇದೆಲ್ಲದರಿಂದ ಬೇಸತ್ತು ತಾವು ಬಿಜೆಪಿ ತೊರೆಯಬೇಕಾಯಿತು ಎಂದು ಹೇಳಿದರು.ಕಾಂಗ್ರೆಸ್ ಪಕ್ಷ ಮೊದಲಿಂದ ದೇಶ ಪ್ರೇಮ ಮೆರೆಯುತ್ತ ಬಂದಿದೆ. ಈ ದೇಶವನ್ನು ಕಟ್ಟಿದೆ. ರಾಜ್ಯದ ಸಿದ್ದರಾಮಯ್ಯರ ಸರಕಾರ ಗ್ಯಾರಂಟಿಗಳ ಮೂಲಕ ಜನಮನವನ್ನು ಗೆದ್ದಿದೆ. ಬಡವರ ನಿತ್ಯ ಜೀವನಕ್ಕೆ ಸಹಾಯವಾಗಲಿ ಎಂದು ಭಾಗ್ಯಗಳನ್ನು ಕೊಟ್ಟಿದೆ. ಕೆಂದ್ರ ಸರಕಾರದ ಕೆಟ್ಟ ಆಡಳಿತದಿಂದ ಬೆಲೆ ಏರಿಕೆ, ಹಣದುಬ್ಬರ, ಜಿಎಸ್‌ಟಿ, ನೋಟ್ ಬಂದಿಯಿಂದ ಆರ್ಥಿಕ ಸ್ಥಿತಿ ಹದಗೆಟ್ಟು ಹೋಗಿತ್ತು. ಇದರಿಂದ ಸಾಮಾನ್ಯ ಜನ ತತ್ತರಿಸಿದ್ದರು. ಅವರಿಗೆಲ್ಲ ಗ್ಯಾರಂಟಿಗಳಿಂದ ಉಸಿರಾಡುವಂತಾಗಿದೆ ಎಂದರು.ಜಿಲ್ಲೆಯ ಅಭಿವೃದ್ಧಿಗಾಗಿ…

Read More

ವಿಜಯಪುರ: ಸಂಸದ ರಮೇಶ ಜಿಗಜಿಣಗಿ ಅವರಿಗೆ ಅಭಿವೃದ್ಧಿ ಎಂದರೆ ಅಸಡ್ಡೆಯಿದೆ ಎಂದು ಕೈಗಾರಿಕೆ ಮೂಲಸೌಲಭ್ಯ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಎಂ. ಬಿ. ಪಾಟೀಲ ಹೇಳಿದ್ದಾರೆ.ಬಬಲೇಶ್ವರ ತಾಲೂಕಿನ ದೇವರ ಗೆಣ್ಣೂರ ಮತ್ತು ಗುಣದಾಳದಲ್ಲಿ ಕಾಂಗ್ರೆಸ್ ಅಭ್ಯರ್ಥಿ ಪ್ರೊ. ರಾಜು ಆಲಗೂರ ಪರ ಮತಯಾಚಿಸಿ ಅವರು ಮಾತನಾಡಿದರು.ಅಭಿವೃದ್ಧಿ ನಮ್ಮ ಮೂಲಮಂತ್ರ. ಅದು ನಿತ್ಯ ನಿರಂತರವಾಗಿದೆ. ಕೋಮು ಭಾವನೆ ಕೆರಳಿಸುವವರಿಗೆ ತಕ್ಕ ಪಾಠ ಕಲಿಸಲು ಸರ್ವ ಜನಾಂಗದ ಶಾಂತಿಯ ತೋಟದ ಪಣತೊಟ್ಟಿರುವ ಕಾಂಗ್ರೆಸ್ಸನ್ನು ಬೆಂಬಲಿಸಿ ಸರ್ವಾಂಗೀಣ ಅಭಿವೃದ್ಧಿಗೆ ಕೈ ಜೋಡಿಸಬೇಕು ಎಂದು ಅವರು ಹೇಳಿದರು.ಸಂಸದ ರಮೇಶ ಜಿಗಜಿಣಗಿ ಅವರಿಗೆ ಅಭಿವೃದ್ಧಿ ಎಂದರೆ ಅಸಡ್ಡೆ ಎಂಬಂತಾಗಿದೆ. ಶಾಸಕ ಸಂಸದರಾದವರು ತಮ್ಮ ಅಧಿಕಾರವಧಿಯಲ್ಲಿ ಕನಿಷ್ಠ ಶೇ. 80 ರಷ್ಟಾದರೂ ಕೆಲಸ ಮಾಡಬೇಕು. ಆದರೆ, ಶೂನ್ಯ ಅಭಿವೃದ್ಧಿ ಮಾಡಿರುವವರಿಗೆ ತಕ್ಕ ಪಾಠ ಕಲಿಸಬೇಕು. ಕಾಂಗ್ರೆಸ್ ಅಭ್ಯರ್ಥಿ ಪ್ರೊ. ರಾಜು ಆಲಗೂರ ಕ್ರೀಯಾಶೀಲರಾಗಿದ್ದು, ಬಹುಭಾಷೆ ಬಲ್ಲವರಾಗಿದ್ದಾರೆ. ಇಂಥ ವಿದ್ಯಾವಂತ ಅಭ್ಯರ್ಥಿಯನ್ನು ಆಯ್ಕೆ ಮಾಡಿ ವಿಜಯಪುರ ಜಿಲ್ಲೆಯಲ್ಲಿ ಬಹುದಿನಗಳಿಂದ ನನೆಗುದಿಗೆ ಬಿದ್ದಿರುವ…

Read More

ವಿಜಯಪುರ: ಅಧಿಕಾರದಲ್ಲಿದ್ದಾಗ ನಾವು ಮಾಡುವ ಕೆಲಸಗಳನ್ನು ಜನ ಸ್ಮರಿಸುವಂತಿರಬೇಕು. ಆದರೆ, ಸಂಸದ ರಮೇಶ ಜಿಗಜಿಣಗಿ ಜಿಲ್ಲೆಯ ಜನ ನೆನಪಿಡುವ ಯಾವ ಕೆಲಸಗಳನ್ನೂ ಮಾಡಿಲ್ಲ ಎಂದು ಎಂದು ಕೈಗಾರಿಕೆ, ಮೂಲಸೌಲಭ್ಯ ಅಭಿವೃದ್ಧಿ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಎಂ. ಬಿ. ಪಾಟೀಲ ಹೇಳಿದ್ದಾರೆ.ಶನಿವಾರ ಬಬಲೇಶ್ವರ ತಾಲೂಕಿನ ಚಿಕ್ಕಗಲಗಲಿ ಮತ್ತು ಕಂಬಾಗಿಯಲ್ಲಿ ಪ್ರೊ. ರಾಜು ಆಲಗೂರ ಪರ ಮತಯಾಚಿಸಿ ಅವರು ಮಾತನಾಡಿದರು.ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರು ಕಲಬುರಗಿ ಸಂಸದರಾಗಿ ಹೈದರಾಬಾದ ಕರ್ನಾಟಕಕ್ಕೆ ವಿಶೇಷ ಸ್ಥಾನಮಾನ ಕೊಡಿಸಿದರು. ಇಎಸ್ಐ ಆಸ್ಪತ್ರೆ ನಿರ್ಮಿಸಿದರು. ಪ್ರಕಾಶ ಹುಕ್ಕೇರಿ ಸಂಸದರಾಗಿ ಚಿಕ್ಕೋಡಿ ಮತಕ್ಷೇತ್ರದಲ್ಲಿ ಸವಳು- ಜವಳು ಬಗೆ ಹರಿಸುವುದು ಸೇರಿದಂತೆ ಅನೇಕ ಸಮಸ್ಯೆಗಳನ್ನು ಬಗೆಹರಿಸಿದರು. ಇದರಿಂದಾಗಿ ಜನ ಈಗಲೂ ಅವರನ್ನು ಸ್ಮರಿಸುತ್ತಾರೆ. ಇವರ ಅಭಿವೃದ್ಧಿ ಕಾರ್ಯಗಳನ್ನು ನೋಡಿಯಾದರೂ ಸಂಸದ ರಮೇಶ ಜಿಗಜಿಣಗಿ ವಿಜಯಪುರದಲ್ಲಿ ಅಭಿವೃದ್ಧಿ ಕಾರ್ಯಗಳನ್ನು ಮಾಡಿಸಬೇಕಿತ್ತು. ಯಾವುದೇ ಸಮಸ್ಯೆಗಳಿಗೆ ಸ್ಪಂದಿಸದಿದ್ದರೆ ಸಂಸತ್ತಿಗೆ ಹೋಗಿ ಪ್ರಯೋಜನವಾದರೂ ಏನೂ? ಎಂದು ಅವರು ಪ್ರಶ್ನಿಸಿದರು.ಕೆಲವು ರಾಜ್ಯಗಳ ಆರ್ಥಿಕತೆ ಪ್ರವಾಸೋದ್ಯಮ ಮೇಲೆ ಹೆಚ್ಚು…

Read More

ಆಲಮಟ್ಟಿ: ಇಲ್ಲಿಯ ಕೃಷ್ಣಾ ನದಿಯ ಹಿನ್ನೀರಿನ ಬಾವಾಸಾಬ್ ಗುಡ್ಡದ ಬಳಿ ಸ್ಥಳೀಯ ಮೀನುಗಾರರೊಬ್ಬರಿಗೆ 35 ಕೆಜಿ ತೂಕದ ಬೃಹತ್ ಒಂದೇ ಮೀನು ಬಲೆಗೆ ಬಿದ್ದಿದೆ‌.ಆಲಮಟ್ಟಿ ಗ್ರಾಮ ಪಂಚಾಯ್ರಿ ಸದಸ್ಯ ಮೀನುಗಾರ ಮಾಸೂಬಾ ಕಟ್ಟೀಮನಿ ಅವರ ಬಲೆಗೆ ಶನಿವಾರ ಈ ಬೃಹತ್ ಗಾತ್ರದ ಮೀನು ಬಿದ್ದಿದೆ.ಶುಕ್ರವಾರ ಸಂಜೆ ಬಲೆ ಹಾಕಿ ಶನಿವಾರ ಬೆಳಿಗ್ಗೆ ಬಲೆ ತೆಗೆಯಲು ಹೋಗಿದ್ದ ಮಾಸೂಬಾ ಅವರಿಗೆ ಅಚ್ಚರಿ ಕಾದಿತ್ತು.ನಂತರ ಬೃಹತ್ ಗಾತ್ರದ ಮೀನು ಬಲೆಗೆ ಬಿದ್ದಿದೆ ಎಂಬ ಊಹೆಯೊಂದಿಗೆ ಬಲೆಯನ್ನು ಸಾವಕಾಶವಾಗಿ ತೆಪ್ಪದಲ್ಲಿ ಮೀನಿನೊಂದಿಗೆ ಹಾಕಿ, ನದಿ ದಂಡೆಗೆ ತಂದು ಬಲೆಯಿಂದ ಮೀನನ್ನು ಬೇರ್ಪಡಿಸಲಾಯಿತು.ಬೃಹತ್ ಗಾತ್ರದ ಮೀನು‌ ನೋಡಲು ಜನ ತಂಡೋಪತಂಡವಾಗಿ ಆಗಮಿಸಿದರು.ಇದು ಕಟ್ಲಾ ಜಾತಿಗೆ ಸೇರಿದ ಮೀನಾಗಿದ್ದು, 35 ಕೆಜಿ ತೂಕ ಹೊಂದಿದೆ, ನನಗೆ ತುಂಬಾ ಖುಷಿಯಾಗಿದೆ ಎಂದು ಮೀನುಗಾರ ಮಾಸೂಬಾ ಕಟ್ಟಿಮನಿ ಹೇಳಿದರು. ಈಗ ಕಟ್ಲಾ ಮೀನು ಹೆಚ್ಚಾಗಿ ಸಿಗುತ್ತವೆ, ತಿನ್ನಲು ರುಚಿಕರವಾಗಿರುವ ಕಟ್ಲಾ ಮೀನಿಗೆ ಸ್ಥಳೀಯ ಮಾರುಕಟ್ಟೆಯಲ್ಲಿ ಬೇಡಿಕೆಯಿದೆ ಎಂದು ಮಾಸೂಬಾ ತಿಳಿಸಿದರು‌. ಇವರ…

Read More

ಸಂತೋಷ್ ರಾವ್ ಪೆರ್ಮುಡ,ಪೆರ್ಮುಡ ಮನೆ, ಪಟ್ರಮೆ ಗ್ರಾಮ ಮತ್ತು ಅಂಚೆ ಬೆಳ್ತಂಗಡಿ ತಾಲೂಕು, ದ.ಕ ಜಿಲ್ಲೆ ಹಳ್ಳಿಯಲ್ಲಿ ಸಣ್ಣ ಪುಟ್ಟ ಕೆಲಸಗಳನ್ನು ಮಾಡಿಕೊಂಡಿದ್ದ ಹರೀಶನು ತನ್ನ ಭವಿಷ್ಯವನ್ನು ರೂಪಿಸಿಕೊಳ್ಳುವ ಉದ್ದೇಶದಿಂದ ತನ್ನ ಹೆಂಡತಿ ಜೊತೆಗೆ ಪಟ್ಟಣಕ್ಕೆ ಉದ್ಯೋಗಕ್ಕೆಂದು ಬಂದನು. ಪಟ್ಟಣದಲ್ಲಿ ಈ ದಂಪತಿಗಳಿಬ್ಬರು ಬಾಡಿಗೆಯ ಮನೆಯೊಂದರಲ್ಲಿ ವಾಸವಾಗಿದ್ದರು. ಒಂದು ದಿನ ಹರೀಶನ ಹೆಂಡತಿ ಮಂಜುಳಾ ತನ್ನ ಪಕ್ಕದ ಮನೆಯಲ್ಲಿ ವಾಸವಾಗಿದ್ದ ಮಹಿಳೆಯೊಬ್ಬಳು ತನ್ನ ದೈನಂದಿನ ಬಟ್ಟೆಗಳನ್ನು ಒಗೆದು ಒಣಗಲು ಹಾಕಿರುವುದನ್ನು ಕಿಟಕಿಯ ಮೂಲಕ ನೋಡಿದಳು. ಕಿಟಕಿಯ ಮೂಲಕ ಹೊರಗೆ ನೋಡಿದಾಗ ಆಕೆಯು ಒಗೆದು ಒಣಗಲು ಹಾಕಿದ್ದ ಬಟ್ಟೆಗಳು ಸ್ವಚ್ಛವಾಗಿರದೇ, ತೀರಾ ಕೊಳೆಯಾಗಿ ಇರುವುದು ಕಂಡುಬಂತು.ಬಹುಶಃ ಆಕೆಗೆ ಈಗಷ್ಟೇ ಮದುವೆ ಆಗಿರಬೇಕು, ಹಾಗಾಗಿ ಸ್ವಚ್ಛವಾಗಿ ಬಟ್ಟೆ ಒಗೆಯುವುದನ್ನು ಆಕೆಯಿನ್ನೂ ಕಲಿತಿರಲಿಕ್ಕಿಲ್ಲ, ಅಥವಾ ಬಟ್ಟೆ ಸ್ವಚ್ಛವಾಗಿ ಒಗೆಯಲು ಅಗತ್ಯವಿರುವ ಸಾಬೂನು ಮತ್ತು ಬಟ್ಟೆ ಒಗೆಯುವ ಪುಡಿ ಆಕೆಯಲ್ಲಿ ಇಲ್ಲದಿರಬಹುದು ಎಂದು ವ್ಯಂಗ್ಯವಾಗಿ ಮಂಜುಳಾ ತನ್ನ ಗಂಡನಿಗೆ ಹೇಳಿದಳು. ಪ್ರತಿದಿನವೂ ಆಕೆಯು ಒಗೆದು ಹಾಕುತ್ತಿದ್ದ ಬಟ್ಟೆಗಳು…

Read More