ತಿಕೋಟಾ: ತಾಲೂಕಿನ ಬಾಬಾನಗರ ಗ್ರಾಮದ ಬಿಜೆಪಿ ಪಕ್ಷದ ಸಾಮಾನ್ಯ ಕಾರ್ಯಕರ್ತ ಯುವಕ ಬಸವರಾಜ ಮಸಳಿ ಇತ್ತೀಚೆಗೆ ಬೆಳಗಾವಿ ನಗರಕ್ಕೆ ಬಿಜೆಪಿ ಪ್ರಚಾರ ರ್ಯಾಲಿಗೆ ಆಗಮಿಸಿದ ಪ್ರಧಾನಿ ನರೇಂದ್ರ ಮೋದಿ ಅವರನ್ನು ಭೇಟಿಯಾಗಿದ್ದಾನೆ.
ಕಳೆದ ಆರು ವರ್ಷಗಳಿಂದ ಬಿಜೆಪಿ ಸಾಮಾನ್ಯ ಪಕ್ಷದ ಕಾರ್ಯಕರ್ತನಾಗಿ, ಬಬಲೇಶ್ವರ ಮತಕ್ಷೇತ್ರದ ಬಿಜೆಪಿ ಸಾಮಾಜಿಕ ಜಾಲತಾಣ ಸಂಚಾಲಕನಾಗಿ, ನಂತರ ಚಿಕ್ಕೋಡಿ ಲೋಕಸಭಾ ಚುನಾವಣೆಯ ಕುಡಚಿ ಮತಕ್ಷೇತ್ರದ ವಿಸ್ತಾರಕನಾಗಿ ಕಾರ್ಯನಿರ್ವಹಿಸುವಾಗ ಬೆಳಗಾವಿಗೆ ಆಗಮಿಸಿದ ಪ್ರಧಾನಿ ಮೋದಿ ನೂರಾರು ಬಿಜೆಪಿ ಕಾರ್ಯಕರ್ತರನ್ನು ಭೇಟಿಯಾಗುತ್ತಾ ಬರುವ ವೇಳೆ ಬಾಬಾನಗರದ ಹತ್ತೊಂಬತ್ತು (19) ವಯಸ್ಸಿನ ಯುವಕ ಬಸವರಾಜ ಮಸಳಿಯನ್ನು ಕಂಡು ಮುಗುಳ್ನಕ್ಕು ಹೆಸರನ್ನು ಕೇಳಿ ಚಿಕ್ಕ ವಯಸ್ಸಿನ ಈ ಕಾರ್ಯಕರ್ತನನ್ನು ಕಂಡು ಹರ್ಷವ್ಯಕ್ತಪಡಿಸಿದ್ದಾರೆ.
ಮೂರ್ತಿ ಚಿಕ್ಕದಾದರೂ ಕೀರ್ತಿ ದೊಡ್ಡದು ಎಂಬ ವಾಕ್ಯದಂತೆ ಈ ಬಾಬಾನಗರದ ಯುವಕ ಮನೆಯವರ ಸಹಾಯದಿಂದ, ಊರಿನ ಹಿರಿಯರ ಆಶೀರ್ವಾದದಿಂದ ಬಿಜೆಪಿ ಪಕ್ಷದಲ್ಲಿ ಕಾರ್ಯಕರ್ತನಾಗಿ , ರೈತರ ಮಗನಾಗಿ, ಯುವಕರಿಗೆ ಸ್ಪೂರ್ತಿದಾಯಕನಾಗಿ, ಹಿರಿಯರಿಗೆ ಕಣ್ಣಾಗಿ, ಬಡವರಿಗೆ ಆದಷ್ಟು ತನ್ನ ಕೈಯಿಂದ ಸಹಾಯ ಮಾಡುತ್ತಾ ಶಾಲೆಯ ಬಡ ಮಕ್ಕಳಿಗೆ ಸಹಾಯಕನಾಗಿ ಸೇವೆ ಸಲ್ಲಿಸುತ್ತಿರುವ ಈ ಯುವಕನ ಕುರಿತು ಗ್ರಾಮಸ್ಥರಲ್ಲಿ ಖುಷಿ ತರಿಸಿದೆ.
Subscribe to Updates
Get the latest creative news from FooBar about art, design and business.
Related Posts
Add A Comment

