ಆಲಮಟ್ಟಿ: ಇಲ್ಲಿಯ ಕೃಷ್ಣಾ ನದಿಯ ಹಿನ್ನೀರಿನ ಬಾವಾಸಾಬ್ ಗುಡ್ಡದ ಬಳಿ ಸ್ಥಳೀಯ ಮೀನುಗಾರರೊಬ್ಬರಿಗೆ 35 ಕೆಜಿ ತೂಕದ ಬೃಹತ್ ಒಂದೇ ಮೀನು ಬಲೆಗೆ ಬಿದ್ದಿದೆ.
ಆಲಮಟ್ಟಿ ಗ್ರಾಮ ಪಂಚಾಯ್ರಿ ಸದಸ್ಯ ಮೀನುಗಾರ ಮಾಸೂಬಾ ಕಟ್ಟೀಮನಿ ಅವರ ಬಲೆಗೆ ಶನಿವಾರ ಈ ಬೃಹತ್ ಗಾತ್ರದ ಮೀನು ಬಿದ್ದಿದೆ.
ಶುಕ್ರವಾರ ಸಂಜೆ ಬಲೆ ಹಾಕಿ ಶನಿವಾರ ಬೆಳಿಗ್ಗೆ ಬಲೆ ತೆಗೆಯಲು ಹೋಗಿದ್ದ ಮಾಸೂಬಾ ಅವರಿಗೆ ಅಚ್ಚರಿ ಕಾದಿತ್ತು.
ನಂತರ ಬೃಹತ್ ಗಾತ್ರದ ಮೀನು ಬಲೆಗೆ ಬಿದ್ದಿದೆ ಎಂಬ ಊಹೆಯೊಂದಿಗೆ ಬಲೆಯನ್ನು ಸಾವಕಾಶವಾಗಿ ತೆಪ್ಪದಲ್ಲಿ ಮೀನಿನೊಂದಿಗೆ ಹಾಕಿ, ನದಿ ದಂಡೆಗೆ ತಂದು ಬಲೆಯಿಂದ ಮೀನನ್ನು ಬೇರ್ಪಡಿಸಲಾಯಿತು.
ಬೃಹತ್ ಗಾತ್ರದ ಮೀನು ನೋಡಲು ಜನ ತಂಡೋಪತಂಡವಾಗಿ ಆಗಮಿಸಿದರು.
ಇದು ಕಟ್ಲಾ ಜಾತಿಗೆ ಸೇರಿದ ಮೀನಾಗಿದ್ದು, 35 ಕೆಜಿ ತೂಕ ಹೊಂದಿದೆ, ನನಗೆ ತುಂಬಾ ಖುಷಿಯಾಗಿದೆ ಎಂದು ಮೀನುಗಾರ ಮಾಸೂಬಾ ಕಟ್ಟಿಮನಿ ಹೇಳಿದರು. ಈಗ ಕಟ್ಲಾ ಮೀನು ಹೆಚ್ಚಾಗಿ ಸಿಗುತ್ತವೆ, ತಿನ್ನಲು ರುಚಿಕರವಾಗಿರುವ ಕಟ್ಲಾ ಮೀನಿಗೆ ಸ್ಥಳೀಯ ಮಾರುಕಟ್ಟೆಯಲ್ಲಿ ಬೇಡಿಕೆಯಿದೆ ಎಂದು ಮಾಸೂಬಾ ತಿಳಿಸಿದರು. ಇವರ ಸಂಬಂಧಿ ಕುಮಾರ ಸಾಳೆ ಮೀನು ಹಿಡಿಯಲು ಸಹಕರಿಸಿದರು.
6000 ರೂ ಗೆ ಮಾರಾಟ;
170 ರೂ ಗೆ ಕೆಜಿ ದರದಂತೆ ಅಂದಾಜು 6000 ರೂ ಗೆ
ಅರಳದಿನ್ನಿಯ ಸಗಟು ಮೀನು ವ್ಯಾಪಾರಿ ಮಹಾಂತೇಶ ಧನವೆ ಮೀನನ್ನು ಖರೀದಿಸಿದರು.
Subscribe to Updates
Get the latest creative news from FooBar about art, design and business.
Related Posts
Add A Comment

