ದೇವರಹಿಪ್ಪರಗಿ: ಮತದಾನ ಜಾಗೃತಿ ಅಭಿಯಾನದ ಅಂಗವಾಗಿ ಜರುಗಿದ ರಂಗೋಲಿ ಸ್ಪರ್ಧೆಯಲ್ಲಿ ವಿವಿಧ ಗ್ರಾಮಗಳ ಸ್ವಸಹಾಯ ಸಂಘದ ಮಹಿಳೆಯರಿಂದ ವಿವಿಧ ರಂಗೋಲಿಗಳು ಕಂಗೊಳಿಸಿದವು.
ಪಟ್ಟಣದ ಬಸ್ ನಿಲ್ದಾಣದ ಆವರಣದಲ್ಲಿ ಶನಿವಾರ ಲೋಕಸಭಾ ಸಾರ್ವತ್ರಿಕ ಚುನಾವಣೆಯ ಅಂಗವಾಗಿ ತಾಲ್ಲೂಕು ಸ್ವೀಪ್ ಸಮಿತಿ ಹಾಗೂ ಪಟ್ಟಣ ಪಂಚಾಯಿತಿ ಅಡಿಯಲ್ಲಿ ಮತದಾನ ಜಾಗೃತಿ ಅಭಿಯಾನದ ರಂಗೋಲಿ ಸ್ಪರ್ಧೆ ಏರ್ಪಡಿಸಲಾಗಿತ್ತು. ರಂಗೋಲಿ ಸ್ಪರ್ಧೆಯಲ್ಲಿ ತಾಲ್ಲೂಕಿನ ವಿವಿಧ ಗ್ರಾಮಗಳಿಂದ ಆಗಮಿಸಿದ ಸ್ವಸಹಾಯ ಸಂಘದ ಮಹಿಳೆಯರು ಮತದಾನ ಜಾಗೃತಿ ರಂಗೋಲಿ ಬಿಡಿಸಿದರು.
ಚುನಾವಣಾ ಪರ್ವ ದೇಶದ ಗರ್ವ, ಮೇ ೭ ರಂದು ತಪ್ಪದೆ ಮತದಾನ ಮಾಡಿ, ನಾನು ತಪ್ಪದೇ ಮತದಾನ ಮಾಡುತ್ತೇನೆ, ಭಾರತ ನಕ್ಷೆ ಹೀಗೆ ಹಲವು ಬಗೆಯ ರಂಗೋಲಿಗಳು ಆಕರ್ಷಣೀಯವಾಗಿ ಪ್ರಯಾಣಿಕರ ಗಮನ ಸೆಳೆದವು.
ಸಹಾಯಕ ಚುನಾವಣಾಧಿಕಾರಿ ಪ್ರವೀಣ ಜೈನ್ ರಂಗೋಲಿ ವೀಕ್ಷಿಸಿ ಸಂತಸ ವ್ಯಕ್ತಪಡಿಸಿದರು. ನಂತರ ರಂಗೋಲಿ ಸ್ಪರ್ಧೆಯಲ್ಲಿ ಪ್ರಥಮ, ದ್ವಿತೀಯ, ತೃತಿಯ ವಿಜೇತರಿಗೆ ತಾಲ್ಲೂಕು ಪಂಚಾಯಿತಿ ಇಓ ಸಂಜೀವ ಜಿನ್ನೂರ ನಗದು ಬಹುಮಾನ ಹಾಗೂ ಪ್ರಮಾಣಪತ್ರ ವಿತರಿಸಿ ಮಾತನಾಡಿದರು.
ಪಟ್ಟಣ ಪಂಚಾಯಿತಿ ಮುಖ್ಯಾಧಿಕಾರಿ ಎಲ್.ಡಿ.ಮುಲ್ಲಾ, ಕಿರಿಯ ಆರೋಗ್ಯ ನಿರೀಕ್ಷಕ ಫಿರೋಜ್ ಮುಲ್ಲಾ, ತಾಲ್ಲೂಕು ಪಂಚಾಯಿತಿ ಸಹಾಯಕ ನಿರ್ದೇಶಕರಾದ ಶಿವಾನಂದ ಮೂಲಿಮನಿ( ಪಂಚಾಯತ್ ರಾಜ್) ಶಾಂತಗೌಡ ನ್ಯಾಮಣ್ಣವರ(ನರೇಗಾ), ಮುತ್ತುರಾಜ ಹಿರೇಮಠ, ಸೋಮು ಭೋವಿ, ಜಿ.ಎಸ್.ರೋಡಗಿ, ಸಿದ್ದು ಕಾಂಬ್ಳೆ, ಆನಂದ ಮುದೋಡಗಿ, ಮಹೇಶ ಬಗಲಿ, ಬಸವರಾಜ್ ಆರ್. ಶ್ರೀಶೈಲ ಕಬ್ಬಿಣ, ಭೀಮರಾಯ ಭಾವಿಕಟ್ಟಿ, ಆದಣ್ಣ ಹೊಸಮನಿ ಸೇರಿದಂತೆ ಮಹಿಳೆಯರು, ಸಿಬ್ಬಂದಿ ಇದ್ದರು.
Subscribe to Updates
Get the latest creative news from FooBar about art, design and business.
Related Posts
Add A Comment

