Close Menu
  • ಮುಖಪುಟ
  • (ರಾಜ್ಯ ) ಜಿಲ್ಲೆ
  • ವಿಶೇಷ ಲೇಖನ
  • ಸಾಹಿತ್ಯ
  • ಆರೋಗ್ಯ
  • ಚಿಂತನ
  • ಪ್ರೇಮಲೋಕ
  • ದಿನಪತ್ರಿಕೆ
  • ಸಂಪರ್ಕಿಸಿ

Subscribe to Updates

Get the latest creative news from FooBar about art, design and business.

What's Hot

ಉದಯರಶ್ಮಿ ಇಂದಿನ ದಿನಪತ್ರಿಕೆ ಅಕ್ಟೋಬರ್ 18,2026

ಸಹಕಾರಿ ಕ್ಷೇತ್ರದ ಶ್ರೇಯೋಭಿವೃದ್ಧಿಗೆ ಕೈಜೋಡಿಸಿ :ದರ್ಶನಾಪುರ

ತಿಂಗಳಿಂದ ಬಬಲೇಶ್ವರ ನಾಕಾ ರಸ್ತೆ ಬಂದ್ :ಆಕ್ರೋಶ

Facebook X (Twitter) Instagram
  • ಮುಖಪುಟ
  • (ರಾಜ್ಯ ) ಜಿಲ್ಲೆ
  • ವಿಶೇಷ ಲೇಖನ
  • ಸಾಹಿತ್ಯ
  • ಆರೋಗ್ಯ
  • ಚಿಂತನ
  • ಪ್ರೇಮಲೋಕ
  • ದಿನಪತ್ರಿಕೆ
  • ಸಂಪರ್ಕಿಸಿ
Facebook X (Twitter) Instagram YouTube WhatsApp
udayarashminews.comudayarashminews.com
  • ಮುಖಪುಟ
  • (ರಾಜ್ಯ ) ಜಿಲ್ಲೆ
  • ವಿಶೇಷ ಲೇಖನ
  • ಸಾಹಿತ್ಯ
  • ಆರೋಗ್ಯ
  • ಚಿಂತನ
  • ಪ್ರೇಮಲೋಕ
  • ದಿನಪತ್ರಿಕೆ
  • ಸಂಪರ್ಕಿಸಿ
udayarashminews.comudayarashminews.com
Home»ವಿಶೇಷ ಲೇಖನ»ಇತರರ ಯಶಸ್ಸಿನ ಕಡೆಗೆ ನೋಡುವಾಗ ನಮ್ಮ ಮನಸ್ಸಿನ ಕಿಟಕಿಯ ಗಾಜುಗಳನ್ನು ಸ್ವಚ್ಛವಾಗಿ ಇಟ್ಟುಕೊಳ್ಳೋಣ
ವಿಶೇಷ ಲೇಖನ

ಇತರರ ಯಶಸ್ಸಿನ ಕಡೆಗೆ ನೋಡುವಾಗ ನಮ್ಮ ಮನಸ್ಸಿನ ಕಿಟಕಿಯ ಗಾಜುಗಳನ್ನು ಸ್ವಚ್ಛವಾಗಿ ಇಟ್ಟುಕೊಳ್ಳೋಣ

By No Comments2 Mins Read
Facebook Twitter Pinterest LinkedIn Telegram WhatsApp
Share
Facebook Twitter LinkedIn Email Telegram WhatsApp

ಸಂತೋಷ್ ರಾವ್ ಪೆರ್ಮುಡ,ಪೆರ್ಮುಡ ಮನೆ, ಪಟ್ರಮೆ ಗ್ರಾಮ ಮತ್ತು ಅಂಚೆ ಬೆಳ್ತಂಗಡಿ ತಾಲೂಕು, ದ.ಕ ಜಿಲ್ಲೆ

ಹಳ್ಳಿಯಲ್ಲಿ ಸಣ್ಣ ಪುಟ್ಟ ಕೆಲಸಗಳನ್ನು ಮಾಡಿಕೊಂಡಿದ್ದ ಹರೀಶನು ತನ್ನ ಭವಿಷ್ಯವನ್ನು ರೂಪಿಸಿಕೊಳ್ಳುವ ಉದ್ದೇಶದಿಂದ ತನ್ನ ಹೆಂಡತಿ ಜೊತೆಗೆ ಪಟ್ಟಣಕ್ಕೆ ಉದ್ಯೋಗಕ್ಕೆಂದು ಬಂದನು. ಪಟ್ಟಣದಲ್ಲಿ ಈ ದಂಪತಿಗಳಿಬ್ಬರು ಬಾಡಿಗೆಯ ಮನೆಯೊಂದರಲ್ಲಿ ವಾಸವಾಗಿದ್ದರು. ಒಂದು ದಿನ ಹರೀಶನ ಹೆಂಡತಿ ಮಂಜುಳಾ ತನ್ನ ಪಕ್ಕದ ಮನೆಯಲ್ಲಿ ವಾಸವಾಗಿದ್ದ ಮಹಿಳೆಯೊಬ್ಬಳು ತನ್ನ ದೈನಂದಿನ ಬಟ್ಟೆಗಳನ್ನು ಒಗೆದು ಒಣಗಲು ಹಾಕಿರುವುದನ್ನು ಕಿಟಕಿಯ ಮೂಲಕ ನೋಡಿದಳು. ಕಿಟಕಿಯ ಮೂಲಕ ಹೊರಗೆ ನೋಡಿದಾಗ ಆಕೆಯು ಒಗೆದು ಒಣಗಲು ಹಾಕಿದ್ದ ಬಟ್ಟೆಗಳು ಸ್ವಚ್ಛವಾಗಿರದೇ, ತೀರಾ ಕೊಳೆಯಾಗಿ ಇರುವುದು ಕಂಡುಬಂತು.
ಬಹುಶಃ ಆಕೆಗೆ ಈಗಷ್ಟೇ ಮದುವೆ ಆಗಿರಬೇಕು, ಹಾಗಾಗಿ ಸ್ವಚ್ಛವಾಗಿ ಬಟ್ಟೆ ಒಗೆಯುವುದನ್ನು ಆಕೆಯಿನ್ನೂ ಕಲಿತಿರಲಿಕ್ಕಿಲ್ಲ, ಅಥವಾ ಬಟ್ಟೆ ಸ್ವಚ್ಛವಾಗಿ ಒಗೆಯಲು ಅಗತ್ಯವಿರುವ ಸಾಬೂನು ಮತ್ತು ಬಟ್ಟೆ ಒಗೆಯುವ ಪುಡಿ ಆಕೆಯಲ್ಲಿ ಇಲ್ಲದಿರಬಹುದು ಎಂದು ವ್ಯಂಗ್ಯವಾಗಿ ಮಂಜುಳಾ ತನ್ನ ಗಂಡನಿಗೆ ಹೇಳಿದಳು. ಪ್ರತಿದಿನವೂ ಆಕೆಯು ಒಗೆದು ಹಾಕುತ್ತಿದ್ದ ಬಟ್ಟೆಗಳು ಕೊಳೆಯಾಗಿ ಇರುವುದನ್ನು ನೋಡುತ್ತಿದ್ದ ಮಂಜುಳಾ ತನ್ನ ಗಂಡ ಹರೀಶನಿಗೆ ಹೇಳುತ್ತಾ ವ್ಯಂಗ್ಯವಾಗಿ ನಗುತ್ತಿದ್ದಳು. ಆದರೆ ಗಂಡನಾದ ಹರೀಶನು ಮಾತ್ರ ಮಂಜುಳಾ ಹೇಳುತ್ತಿದ್ದ ಯಾವ ಮಾತಿಗೂ ಸೊಪ್ಪನ್ನು ಹಾಕದೆ ಸುಮ್ಮನೇ ಇರುತ್ತಿದ್ದನು.
ಹೀಗೆ ಸುಮಾರು ಒಂದು ತಿಂಗಳ ನಂತರ ಪಕ್ಕದ ಮನೆಯಾಕೆಯು ಒಗೆದು ಒಣಗಲು ಹಾಕಿದ್ದ ಬಟ್ಟೆಗಳನ್ನು ಕಿಟಕಿಯ ಮೂಲಕ ಮಂಜುಳಾ ನೋಡಿದಾಗ ಶುಭ್ರವಾಗಿ ಬಟ್ಟೆಯನ್ನು ಒಗೆದು ಒಣಗಲು ಹಾಕಿದ್ದನ್ನು ಆಶ್ಚರ್ಯದಿಂದ ನೋಡಿದಳು. ನಂತರ ನೋಡಿ ಸ್ವಾಮಿ, ಪಕ್ಕದ ಮನೆಯಾಕೆ ಇಂದು ಬಟ್ಟೆಯನ್ನು ಅತ್ಯಂತ ಸ್ವಚ್ಛವಾಗಿ ಒಗೆಯುವುದನ್ನು ಕಲಿತಿದ್ದಾಳೆ. ನನಗೆ ನಿಜವಾಗಿಯೂ ಇದನ್ನು ನೋಡಿ ಆಶ್ಚರ್ಯವಾಗುತ್ತಿದೆ, ಅಥವಾ ನಿನ್ನೆ ಯಾರಾದರೂ ಆಕೆಗೆ ಸ್ವಚ್ಛವಾಗಿ ಬಟ್ಟೆ ಒಗೆಯುವುದನ್ನು ಹೇಳಿ ಕೊಟ್ಟಿರಬೇಕು ಎಂದು ಪುನಃ ಅಪಹಾಸ್ಯ ಮಾಡುತ್ತಾ ಗಂಡನಾದ ಹರೀಶನಿಗೆ ಹೇಳಿದಳು. ಆಗ ಹರೀಶನು, ‘ಇವತ್ತು ನೀನು ಬೆಳಗ್ಗೆ ಏಳುವುದಕ್ಕಿಂತ ಮುಂಚೆಯೇ ನಾನು ಎದ್ದು ನಮ್ಮ ಮನೆಯ ಕಿಟಕಿಗಳ ಗಾಜುಗಳನ್ನು ಸ್ವಚ್ಛವಾಗಿ ತೊಳೆದಿದ್ದೇನೆ’ ಎಂದು ಹೇಳಿದ. ಇದನ್ನು ಕೇಳಿದ ಮಂಜುಳಾಳಿಗೆ ತನ್ನ ತಪ್ಪಿನ ಅರಿವಾಯಿತು. ಗಂಡನ ಮಾತಿಗೆ ಪ್ರತ್ಯುತ್ತರವನ್ನು ನೀಡಲು ಮಂಜುಳಾಳ ಬಳಿ ಮಾತೇ ಇರಲಿಲ್ಲ. ಪಕ್ಕದ ಮನೆಯಾಕೆಯ ತಪ್ಪುಗಳನ್ನು ನೋಡಲು ಧೂಳಿನಿಂದ ಕೂಡಿದ ತನ್ನ ಮನೆಯ ಗಾಜಿನ ಕಿಟಕಿಗಳೇ ಪ್ರಮುಖ ಕಾರಣವಾಗಿತ್ತು. ಇತರರ ಯಶಸ್ಸಿನ ಕಡೆಗೆ ನಾವು ನೋಡುವ ಸಂದರ್ಭಗಳಲ್ಲಿ ನಮ್ಮ ಮನಸ್ಸಿನ ಕಿಟಕಿಗಳು ಅತ್ಯಂತ ಶುಭ್ರವಾಗಿರಬೇಕು. ಒಂದು ವೇಳೆ ಅವುಗಳು ಕೊಳೆಯಾಗಿದ್ದಲ್ಲಿ ಅವುಗಳನ್ನು ಶುಭ್ರಗೊಳಿಸುವ ಅಗತ್ಯವೂ ಇದೆ. ನಮ್ಮ ಮನಸ್ಸಿನ ಕಿಟಕಿಯ ಗಾಜುಗಳು ಧೂಳಿನಿಂದ ಕೂಡಿದ್ದರೆ ನಮ್ಮ ಎದುರಿಗೆ ಇರುವವರು ಎಷ್ಟು ಒಳ್ಳೆಯವರು ಆಗಿದ್ದರೂ ಅವರು ನಮಗೆ ಅತ್ಯಂತ ಕೆಟ್ಟವರಾಗಿಯೇ ಕಾಣಿಸುತ್ತಾರೆ.
 


– ಸಂತೋಷ್ ರಾವ್ ಪೆರ್ಮುಡ,
ಪೆರ್ಮುಡ ಮನೆ, ಪಟ್ರಮೆ ಗ್ರಾಮ ಮತ್ತು ಅಂಚೆ ಬೆಳ್ತಂಗಡಿ ತಾಲೂಕು, ದ.ಕ ಜಿಲ್ಲೆ

BIJAPUR NEWS public public news udaya rashmi Udayarashmi today newspaper udayarashminews.com
Share. Facebook Twitter Pinterest Email Telegram WhatsApp
  • Website

Related Posts

ಉದಯರಶ್ಮಿ ಇಂದಿನ ದಿನಪತ್ರಿಕೆ ಅಕ್ಟೋಬರ್ 18,2026

ಸಹಕಾರಿ ಕ್ಷೇತ್ರದ ಶ್ರೇಯೋಭಿವೃದ್ಧಿಗೆ ಕೈಜೋಡಿಸಿ :ದರ್ಶನಾಪುರ

ತಿಂಗಳಿಂದ ಬಬಲೇಶ್ವರ ನಾಕಾ ರಸ್ತೆ ಬಂದ್ :ಆಕ್ರೋಶ

ಮಾಧ್ಯಮದವರ ಕುಂದುಕೊರತೆ ತ್ವರಿತ ನಿವಾರಣೆಗೆ ಕ್ರಮ

Add A Comment
Leave A Reply Cancel Reply

Categories
  • (ರಾಜ್ಯ ) ಜಿಲ್ಲೆ
  • Helldivers
  • Typora
  • Uncategorized
  • Wemod
  • ಆರೋಗ್ಯ
  • ಇತರೆ
  • ಕಾವ್ಯರಶ್ಮಿ
  • ಚಿಂತನ
  • ದಿನಪತ್ರಿಕೆ
  • ಪುಸ್ತಕ ಪರಿಚಯ
  • ಪ್ರೇಮಲೋಕ
  • ಭಾವರಶ್ಮಿ
  • ರಾಷ್ಚ್ರ
  • ವಿಜಯಪುರ
  • ವಿದ್ಯಾರ್ಥಿ ನಿಧಿ
  • ವಿಶೇಷ ಲೇಖನ
  • ಸಾಹಿತ್ಯ
  • ಸಿನಿಮಾ
  • ಹೊತ್ತಿಗೆ ಹೊರಣ
Recent Posts
  • ಉದಯರಶ್ಮಿ ಇಂದಿನ ದಿನಪತ್ರಿಕೆ ಅಕ್ಟೋಬರ್ 18,2026
    In ದಿನಪತ್ರಿಕೆ
  • ಸಹಕಾರಿ ಕ್ಷೇತ್ರದ ಶ್ರೇಯೋಭಿವೃದ್ಧಿಗೆ ಕೈಜೋಡಿಸಿ :ದರ್ಶನಾಪುರ
    In (ರಾಜ್ಯ ) ಜಿಲ್ಲೆ
  • ತಿಂಗಳಿಂದ ಬಬಲೇಶ್ವರ ನಾಕಾ ರಸ್ತೆ ಬಂದ್ :ಆಕ್ರೋಶ
    In (ರಾಜ್ಯ ) ಜಿಲ್ಲೆ
  • ಮಾಧ್ಯಮದವರ ಕುಂದುಕೊರತೆ ತ್ವರಿತ ನಿವಾರಣೆಗೆ ಕ್ರಮ
    In (ರಾಜ್ಯ ) ಜಿಲ್ಲೆ
  • ವಿಕಲಚೇತನರಿಗೋಸ್ಕರ ಪಾದಯಾತ್ರೆ ಬೆಂಬಲಾರ್ಥ ಸಭೆ ಇಂದು
    In (ರಾಜ್ಯ ) ಜಿಲ್ಲೆ
  • ಆರೋಗ್ಯ ಕ್ಷೇತ್ರಕ್ಕೆ ಎಕ್ಸಲೆಂಟ್ ನರ್ಸಿಂಗ್ ಕಾಲೇಜ್ ಕೊಡುಗೆ ಅನನ್ಯ
    In (ರಾಜ್ಯ ) ಜಿಲ್ಲೆ
  • ಪ್ರಜಾಸೇವಾ ಅಭಿಯಾನಕ್ಕೆ ಶಾಸಕ ವಿಠ್ಠಲ ಕಟಕಧೋಂಡಚಾಲನೆ
    In (ರಾಜ್ಯ ) ಜಿಲ್ಲೆ
  • ಕಬ್ಬು ಬೆಳೆಗಾರರ ಸಮಸ್ಯೆ ಪರಿಹಾರಕ್ಕೆ ಪ್ರಧಾನಿ ಮಧ್ಯಸ್ಥಿಕೆ ಅಗತ್ಯ
    In (ರಾಜ್ಯ ) ಜಿಲ್ಲೆ
  • ಜಿ.ಪಂ-ತಾ.ಪಂ ಚುನಾವಣೆ: ಅಲ್ಪಸಂಖ್ಯಾತರಿಗೆ‌ ಪ್ರಾತಿನಿಧ್ಯ ಕಲ್ಪಿಸಿ
    In (ರಾಜ್ಯ ) ಜಿಲ್ಲೆ
  • ಬೆಳೆಹಾನಿ ರೈತರಿಗೆ ಎಕರೆಗೆ ₹25,000 ಪರಿಹಾರ ನೀಡಲು ಆಗ್ರಹ
    In (ರಾಜ್ಯ ) ಜಿಲ್ಲೆ
Editors Picks
Top Reviews
udayarashminews.com
Facebook X (Twitter) Instagram Pinterest Vimeo YouTube
  • ಮುಖಪುಟ
  • (ರಾಜ್ಯ ) ಜಿಲ್ಲೆ
  • ವಿಶೇಷ ಲೇಖನ
  • ಸಾಹಿತ್ಯ
  • ಆರೋಗ್ಯ
  • ಚಿಂತನ
  • ಪ್ರೇಮಲೋಕ
  • ದಿನಪತ್ರಿಕೆ
  • ಸಂಪರ್ಕಿಸಿ
© 2026 udayarashminews.com. Designed by udayarashmi news .

Type above and press Enter to search. Press Esc to cancel.