Author: editor.udayarashmi@gmail.com

ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ವಿಜಯಪುರ ಜಿಲ್ಲಾಧಿಕಾರಿ ಡಾ.ಆನಂದ್ ಕೆ ಅವರಿಗೆ ಮನವಿ ಉದಯರಶ್ಮಿ ದಿನಪತ್ರಿಕೆ ವಿಜಯಪುರ: ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ವಿಜಯಪುರ ಜಂಟಿಯಾಗಿ ವಿಜಯಪುರ ತಾಲೂಕ ಅಂಕಲಗಿ ಗ್ರಾಮದ ದೇವರ ಹಿಪ್ಪರಗಿ ಸರಕಾರಿ ಸಾರ್ವಜನಿಕ ರಸ್ತೆ ಒತ್ತುವರಿ ತೆರವುಗೊಳಿಸುವಂತೆ ಒತ್ತಾಯಿಸಿ ಜಿಲ್ಲಾಧಿಕಾರಿ ಆನಂದ ಕೆ. ಅವರಿಗೆ ಹಾಗೂ ವಿಜಯಪುರ ತಾಲೂಕಾ ದಂಡಾಧಿಕಾರಿಗಳಿಗೆ ಮನವಿ ಸಲ್ಲಿಸಿದರು.ಈ ಸಂದರ್ಭದಲ್ಲಿ ಕರ್ನಾಟಕ ರಾಜ್ಯ ರೈತ ಸಂಘದ ತಾಲೂಕಾಧ್ಯಕ್ಷರಾದ ಮಹಾದೇವಪ್ಪ ಎಸ್. ತೇಲಿ ಮಾತನಾಡಿ, ಅಂಕಲಗಿಯಿಂದ ದೇವರ ಹಿಪ್ಪರಗಿ ಸರಕಾರಿ ಸಾರ್ವಜನಿಕ ರಸ್ತೆ, ಈ ರಸ್ತೆಯು ಗ್ರಾಮ ನಕಾಶೆಯಲ್ಲಿ ನೊಂದಣಿ ಇರುತ್ತದೆ. ಈ ರಸ್ತೆ ಮೇಲೆ ಶಾಲೆ ವಾಹನ ಮತ್ತು ಶಾಲೆ ಮಕ್ಕಳು ಪ್ರತಿನಿತ್ಯ ಶಾಲೆಗೆ ಹೋಗುತ್ತಿದ್ದು ಮತ್ತು ರೈತರು ಕೃಷಿ ಚಟುವಟಿಕೆಗಳಿಗೆ ಹೋಗಿ ಬರುತ್ತಿದ್ದು ಪ್ರತಿ ಸೋಮವಾರ ದೇವರ ಹಿಪ್ಪರಗಿ ಜಾನುವಾರು ಸಂತೆಗೆ ಸುತ್ತಮುತ್ತಲಿನ ಗ್ರಾಮಸ್ಥರು ಹಾದು ಹೋಗುತ್ತಿದ್ದು ಈಗ ಈ ರಸ್ತೆ ಸಂಪೂರ್ಣ…

Read More

ಉದಯರಶ್ಮಿ ದಿನಪತ್ರಿಕೆ ಸಿಂದಗಿ: ಅಂತರಾಷ್ಟ್ರೀಯ ಹಿಂದೂ ಮಹಾಸಭಾ ಕರ್ನಾಟಕ ವತಿಯಿಂದ ಜೂನ್ 24 ರಂದು ಬಾಗಲಕೋಟೆಯ ಲಯನ್ಸ್ ಕ್ಲಬ್ ಸಭಾಭವನದಲ್ಲಿ ಆಯೋಜಿಸಲಾಗಿರುವ ಸಮಾರಂಭದಲ್ಲಿ ವಿಜಯಪುರ ಜಿಲ್ಲೆಯ ಸಿಂದಗಿಯ ಶ್ರೀ ಪದ್ಮರಾಜ ಶಿಕ್ಷಣ ಮಹಾವಿದ್ಯಾಲಯದ ಉಪನ್ಯಾಸಕರಾದ ಶ್ರೀ ಪ್ರಶಾಂತ್ ಕುಲಕರ್ಣಿ ಅವರು 2026ನೇ ಸಾಲಿನ ರಾಷ್ಟ್ರಮಟ್ಟದ ಅತ್ಯುತ್ತಮ ಶಿಕ್ಷಕ ಪ್ರಶಸ್ತಿಗೆ ಆಯ್ಕೆಯಾಗಿದ್ದಾರೆ ಎಂದು ಅಂತರಾಷ್ಟ್ರೀಯ ಹಿಂದೂ ಮಹಾಸಭಾ ಕರ್ನಾಟಕದ ವಿದ್ಯಾರ್ಥಿ ಘಟಕದ ರಾಜ್ಯಾಧ್ಯಕ್ಷರಾದ ಸಾಗರ್ ಕಲಾದಗಿ ತಿಳಿಸಿದ್ದಾರೆ.ಶಿಕ್ಷಣ ಕ್ಷೇತ್ರದಲ್ಲಿ ಸಲ್ಲಿಸಿರುವ ವಿಶಿಷ್ಟ ಸೇವೆ, ವಿದ್ಯಾರ್ಥಿಗಳ ಶೈಕ್ಷಣಿಕ ಬೆಳವಣಿಗೆಗೆ ನೀಡಿರುವ ಕೊಡುಗೆ, ಸ್ಪರ್ಧಾತ್ಮಕ ಪರೀಕ್ಷೆಗಳ ತರಬೇತಿ, ಸಾಮಾಜಿಕ ಹಾಗೂ ಶೈಕ್ಷಣಿಕ ಚಟುವಟಿಕೆಗಳಲ್ಲಿ ಸಕ್ರಿಯ ಪಾಲ್ಗೊಳ್ಳುವಿಕೆ ಮತ್ತು ಶಿಕ್ಷಣದ ಗುಣಮಟ್ಟ ಹೆಚ್ಚಿಸಲು ಕೈಗೊಂಡಿರುವ ಪ್ರಯತ್ನಗಳನ್ನು ಪರಿಗಣಿಸಿ ಈ ಪ್ರಶಸ್ತಿಗೆ ಆಯ್ಕೆ ಮಾಡಲಾಗಿದೆ ಎಂದು ಅವರು ತಿಳಿಸಿದ್ದಾರೆ.ಈ ಕುರಿತು ಪ್ರತಿಕ್ರಿಯಿಸಿದ ಪ್ರಶಾಂತ್ ಕುಲಕರ್ಣಿ ಅವರು, “ಈ ಗೌರವವು ಕೇವಲ ನನ್ನ ವೈಯಕ್ತಿಕ ಸಾಧನೆಯಲ್ಲ. ನನ್ನ ಕುಟುಂಬದವರು, ಸ್ನೇಹಿತರು, ಸಮಾಜದ ಬಂಧುಗಳು, ಗುರುಹಿರಿಯರು, ಸಹೋದ್ಯೋಗಿಗಳು ಹಾಗೂ ವಿದ್ಯಾರ್ಥಿಗಳ ಪ್ರೀತಿ,…

Read More

ಉದಯರಶ್ಮಿ ದಿನಪತ್ರಿಕೆ ದೇವರಹಿಪ್ಪರಗಿ: ಯೋಗವು ಭಾರತೀಯ ಪಾರಂಪರಿಕವಾದ ದೈಹಿಕ, ಮಾನಸಿಕ ಮತ್ತು ಆಧ್ಯಾತ್ಮೀಕ ಅಭ್ಯಾಸವಾಗಿದೆ ಎಂದು ಯೋಗಪಟು ಪಂಚಾಕ್ಷರಿ ಮಿಂಚನಾಳ ಹೇಳಿದರು.ಪಟ್ಟಣದ ಸಿದ್ಧೇಶ್ವರ ಪ್ರೌಢಶಾಲೆಯ ವಿದ್ಯಾರ್ಥಿಗಳು ಹಾಗೂ ಸಾರ್ವಜನಿಕರಿಗೆ ವಿಶ್ವ ಯೋಗಾ ದಿನಾಚರಣೆಯ ಅಂಗವಾಗಿ ಭಾನುವಾರ ಸಾಮೂಹಿಕ ಯೋಗಾಭ್ಯಾಸದ ಮಾಹಿತಿ ಹಾಗೂ ತರಬೇತಿ ನೀಡಿ ಮಾತನಾಡಿದರು. ಯೋಗವನ್ನು ವಿದ್ಯಾರ್ಥಿಗಳು ತಮ್ಮ ಶಾಲಾ ಜೀವನದಿಂದ ಅಳವಡಿಸಿಕೊಂಡು ಮುಂದುವರೆಸಿದ್ದೇಯಾದರೆ ಸದೃಡ ಶರೀರದೊಂದಿಗೆ ಸದೃಡ ಮನಸ್ಸನ್ನು ಹೊಂದಿ ಭವ್ಯ ಭವಿಷ್ಯದ ರೂವಾರಿಗಳಾಗಿವುದರಲ್ಲಿ ಸಂದೇಹವಿಲ್ಲ. ಯೋಗ ಆರೋಗ್ಯಕರ ಜೀವನಕ್ಕೆ ಬುನಾದಿ ಒದಗಿಸುತ್ತದೆ ಆದ್ದರಿಂದ ಯೋಗವನ್ನು ಒಂದೇ ದಿನಕ್ಕೆ ಸೀಮಿತಗೊಳಿಸದೇ ಜೀವಿತದ ಅವಧಿಯವರೆಗೂ ಪಾಲಿಸಬೇಕೆಂದು ಕರೆ ನೀಡಿದರು.ನಂತರ ತಾಡಾಸನ, ಬಸ್ತಿಕಾ ಪ್ರಾಣಾಯಾಮ, ಅನುಲೋಮ ವಿಲೋಮ, ಬ್ರಾಮರಿ, ವೃಕ್ಷಾಸನ, ಶಾಂತಿಮಂತ್ರ, ಧ್ಯಾನ ಸೇರಿದಂತೆ ಯೋಗದ ವಿವಿಧ ಆಸನಗಳ ತರಬೇತಿ ನೀಡಿದರು.ಸಂಸ್ಥೆಯ ಮುಖ್ಯಸ್ಥ ವ್ಹಿ.ಕೆ.ಪಾಟೀಲ, ಯೋಗ ಉತ್ಸವ ಸಮಿತಿಯ ತಾಲ್ಲೂಕು ಅಧ್ಯಕ್ಷ ಸಿ.ಕೆ.ಕುದರಿ, ಆಡಳಿತಾಧಿಕಾರಿ ಕೆ.ಪಿ.ಮಾಲಿಪಾಟೀಲ, ಎಂ.ಆರ್.ಮಠ, ಸಂಗಪ್ಪಣ್ಣ ತಡವಲ್, ನರೇಂದ್ರ ನಾಡಗೌಡ, ಶಾಂತಪ್ಪ ಪಡನೂರ, ಆನಂದ ಜಡಿಮಠ, ರವಿ ಕೋಟಿನ್,…

Read More

ಉದಯರಶ್ಮಿ ದಿನಪತ್ರಿಕೆ ತಿಕೋಟಾ: 12ನೇ ವಿಶ್ವ ಯೋಗ ದಿನಾಚರಣೆಯ ಅಂಗವಾಗಿ ಪತಂಜಲಿ ಯೋಗ ಸಮಿತಿ ವತಿಯಿಂದ ಪಟ್ಟಣದ ಕನಕದಾಸ ಮಂಗಲ ಕಾರ್ಯದಲ್ಲಿ ಏಳು ದಿನಗಳ ಉಚಿತ ಯೋಗ ಶಿಬಿರವನ್ನು ಸಾರ್ವಜನಿಕರಿಗಾಗಿ ಯಶಸ್ವಿಯಾಗಿ ಆಯೋಜಿಸಿದರು.ಶಿಬಿರದ ರವಿವಾರ ಮುಕ್ತಾಯ ಸಮಾರಂಭದಲ್ಲಿ ಆದರ್ಶ ಶಿಕ್ಷಕ ರಾಜ್ಯ ಪ್ರಶಸ್ತಿ ಪುರಸ್ಕೃತ ಡಾ. ಜಿ.ಎಸ್. ಬೂಸಗೊಂಡ ಮಾತನಾಡಿ, ವಯಸ್ಸು ಮತ್ತು ಲಿಂಗ ಭೇದವಿಲ್ಲದೆ ಪ್ರತಿಯೊಬ್ಬರೂ ಯೋಗ ಮಾಡಿದರೆ ರೋಗ ದೂರವಾಗುತ್ತದೆ. ಸದೃಢ ನಾಗರಿಕರಿಂದ ಮಾತ್ರ ಸದೃಢ ದೇಶ ನಿರ್ಮಾಣ ಸಾಧ್ಯ ಎಂದು ಹೇಳಿದರು.ಸಮಾರಂಭದ ಅಧ್ಯಕ್ಷತೆ ವಹಿಸಿದ ವಿರಕ್ತ ಮಠದ ಚನ್ನಮಲ್ಲಿಕಾರ್ಜುನ ಸ್ವಾಮೀಜಿ ಮಾತನಾಡಿ ಸದೃಢ ಶರೀರದಲ್ಲಿ ಮಾತ್ರ ಸದೃಢ ಮನಸ್ಸು ನೆಲೆಸಲು ಸಾಧ್ಯ. ನಮ್ಮ ಆರೋಗ್ಯದ ಜೊತೆಗೆ ಪರಿಸರ ಆರೋಗ್ಯದ ಬಗ್ಗೆಯೂ ಕಾಳಜಿ ವಹಿಸಬೇಕು ಎಂದು ಕರೆ ನೀಡಿದರು.ರಾಷ್ಟ್ರಮಟ್ಟದಲ್ಲಿ ಯೋಗ ಪ್ರದರ್ಶನ ನೀಡಿ ಹೆಸರು ಗಳಿಸಿದ ಪಟ್ಟಣದ ಕುಮಾರಿ ಅನುಷ್ಕಾ ಅಥಣಿ ವೇದಿಕೆಯ ಮೇಲೆ ಯೋಗ ಪ್ರದರ್ಶನ ನೀಡಿ ಆಯೋಜಕರಿಂದ ಗೌರವಿಸಲ್ಪಟ್ಟರು.ಊರಿನ ಮುಖಂಡರಾದ ಲೇಪು ಕಣ್ಣು, ಸದಾಶಿವ ಮಂಗಸೂಳಿ,…

Read More

ಉದಯರಶ್ಮಿ ದಿನಪತ್ರಿಕೆ ವಿಜಯಪುರ: ಯೋಗವು ಕೇವಲ ಒಂದು ದೈಹಿಕ ವ್ಯಾಯಾಮವಲ್ಲ. ಅದು ಮನಸ್ಸು, ದೇಹ ಮತ್ತು ಉಸಿರಾಟಗಳ ನಡುವಿನ ಸಂಪರ್ಕದ ಸಾಧನವಾಗಿದೆ. ವ್ಯಕ್ತಿಯಲ್ಲಿರುವ ಚಿತ್ತದ ವೃತ್ತಿಗಳನ್ನು ನಿಯಂತ್ರಿಸುವುದಾಗಿದೆ. ಇದರಿಂದ ಜೀವನದಲ್ಲಿ ಶಿಸ್ತು, ಚೈತನ್ಯ, ಸಮತೋಲಿತ ಮತ್ತು ಸುಸ್ಥಿರ ಆರೋಗ್ಯಕ್ಕೆ ಸಹಕಾರಿ ಎಂದು ಪ್ರೊ. ಎಂ.ಎಸ್.ಖೊದ್ನಾಪೂರ ಅಭಿಪ್ರಾಯಪಟ್ಟರು.ಅವರು ನಗರದ ಅಥಣಿ ರಸ್ತೆಯಲ್ಲಿರುವ ಅಲ್-ಅಮೀನ್ ಆಸ್ಪತ್ರೆಯ ಎದುರಿಗೆ ಇರುವ ಎನ್.ಜಿ.ಓ. ಕಾಲನಿಯ ಆಂಜನೇಯ ದೇವಸ್ಥಾನದಲ್ಲಿ ದಿನಾಂಕ: ೨೧-೦೬-೨೦೨೬ ರಂದು ಅಂತರಾಷ್ಟ್ರೀಯ ಯೋಗ ದಿನಾಚರಣೆ ಮತ್ತು ೭ ದಿನಗಳ ಯೋಗ ಶಿಬಿರದ ಉದ್ಘಾಟನೆಯಲ್ಲಿ ಅವರು ಮಾತನಾಡುತ್ತಿದ್ದರು.ಭಾರತವು ಭವ್ಯ ಪರಂಪರೆ-ಸಂಸ್ಕೃತಿಯ ತವರೂರು. ಸಾಧು-ಸಂತ, ಋಷಿಮುನಿಗಳ ಭವ್ಯತೆ ನಾಡು. ಅಧ್ಯಾತ್ಮಕತೆಯ ಪುಣ್ಯಭೂಮಿ. ಪ್ರಾಚೀನ ಕಾಲದಲ್ಲಿ ನಮ್ಮ ದೇಶದ ಋಷಿ-ಮುನಿಗಳು, ಸಾಧು-ಸಂತರು ತಮ್ಮ ತಪಸ್ಸು, ಮನಃಶಾಂತಿ, ಭಕ್ತಿ ಮತ್ತು ಧ್ಯಾನದಲ್ಲಿ ಏಕಾಗ್ರತೆಯನ್ನು ತರಲು ಯೋಗ ಅವಶ್ಯಕ. ಯೋಗದ ಮೂಲಕ ಜಾಗತಿಕ ಐಕ್ಯತೆ ಮತ್ತು ಸಂಸ್ಕೃತಿಯ ಪರಿಚಯಿಸಿದ ಮತ್ತು ಇಡೀ ಜಗತ್ತಿಗೆ ಯೋಗದ ಮೂಲಕ ಅಧ್ಯಾತ್ಮಕತೆಯನ್ನು ಸಾರಿದ ನಾಡು ನಮ್ಮದು.. ಯೋಗ-ವ್ಯಾಯಾಮಗಳಂತಹ…

Read More

ಉದಯರಶ್ಮಿ ದಿನಪತ್ರಿಕೆ ವಿಜಯಪುರ: ಭಾರತೀಯ ಪುರಾತತ್ವ ಸರ್ವೇಕ್ಷಣ ಇಲಾಖೆ ಧಾರವಾಡ ವಲಯದ ವತಿಯಿಂದ ಅಂತಾರಾಷ್ಟ್ರೀಯ ಯೋಗ ದಿನದ ಅಂಗವಾಗಿ ಆರೋಗ್ಯಕರ ವೃದ್ಧಾಪ್ಯಕ್ಕಾಗಿ ಯೋಗ ಶೀರ್ಷಿಕೆಯಡಿ ಐತಿಹಾಸಿಕ ಗೋಳಗುಮ್ಮಟ ಆವರಣದಲ್ಲಿ ಯೋಗ ದಿನ ಆಚರಿಸಲಾಯಿತು.ಸಂಸ್ಕೃತಿ ಮಂತ್ರಾಲಯವು ಭಾರತೀಯ ಪುರಾತತ್ವ ಸರ್ವೇಕ್ಷಣ ಅಧೀನದಲ್ಲಿರುವ ದೇಶದ ೧೦೦ ಐತಿಹಾಸಿಕ ತಾಣಗಳಲ್ಲಿ ವಿಶೇಷ ಯೋಗ ಕಾರ್ಯಕ್ರಮಗಳು ಹಾಗೂ ಸಾಂಸ್ಕೃತಿಕ ಪರಂಪರೆ ಸಂಯೋಜಿತ ಚಟುವಟಿಕೆಗಳನ್ನು ಆಯೋಜಿಸಲಾಗಿತ್ತು. ಬಾದಾಮಿ ಗುಹೆಗಳು, ಐಹೊಳೆ ದುರ್ಗಾ ದೇವಾಲಯ ಮತ್ತು ಪಟ್ಟದಕಲ್ಲಿನ ದೇವಾಲಯಗಳ ಸಮೂಹಗಳಲ್ಲಿ ಯೋಗ ಕಾರ್ಯಕ್ರಮಗಳು ಏಕಕಾಲಕ್ಕೆ ನಡೆದವು.ಈ ವರ್ಷದ ಆಚರಣೆಯ ಮುಖ್ಯ ಉದ್ದೇಶವು ಯೋಗದ ಮೂಲಕ ದೀರ್ಘಾಯುಷ್ಯ, ಸಕ್ರಿಯ ಜೀವನಶೈಲಿ ಹಾಗೂ ಎಲ್ಲಾ ತಲೆಮಾರುಗಳ ದೈಹಿಕ ಮತ್ತು ಮಾನಸಿಕ ಆರೋಗ್ಯವನ್ನು ಉತ್ತೇಜಿಸುವುದಾಗಿದೆ.ನಗರದ ಗೋಳಗುಮ್ಮಟದಲ್ಲಿ ಬೆಳಗ್ಗೆ ೬:೨೦ ರಿಂದ ೭ರವರೆಗೆ ಪ್ರಧಾನಿ ನರೇಂದ್ರ ಮೋದಿ ಅವರು ಯೋಗ ದಿನಾಚರಣೆಯ ಕುರಿತು ಮಾತನಾಡುವ ನೇರಪ್ರಸಾರದ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು.ವಿಜಯಪುರ ಉಪವಿಭಾಗದ ಸಹಾಯಕ ಆಯುಕ್ತರು ಗುರುನಾಥ ದಡ್ಡೆ ಮುಖ್ಯ ಅತಿಥಿಯಾಗಿ ಭಾಗವಹಿಸಿದರು. ಯೋಗ ಗುರು ಸುರೇಶ್ ಆನಂದಿ,…

Read More

ಉದಯರಶ್ಮಿ ದಿನಪತ್ರಿಕೆ ಸಿಂದಗಿ: ಪ್ರಸಕ್ತ ಮುಂಗಾರು ಹಂಗಾಮಿನಲ್ಲಿ ವಿವಿಧ ಬೆಳೆಗಳ ವಿಮೆಗಾಗಿ ಅರ್ಜಿ ಸಲ್ಲಿಸಲು ಕೃಷಿ ಸಹಾಯಕ ನಿರ್ದೇಶಕ ಪ್ರಶಾಂತ ಸಾಣಿ ತಿಳಸಿದ್ದಾರೆ.ಈ ಯೋಜನೆಯ ಸೌಲಭ್ಯ ಪಡೆಯಲು ರೈತರು ಉದ್ದ ಮತ್ತು ಹೆಸರಿನ ಬೆಳೆಗಳಿಗೆ ಜುಲೈ ೧೫, ಸೂರ್ಯಕಾಂತಿ, ಮುಸುಕಿನ ಜೋಳ, ಸಜ್ಜೆ, ತೊಗರಿ, ಶೇಂಗಾ ಬೆಳೆಗಳಿಗೆ ಜುಲೈ ೩೧ ಮತ್ತು ನೀರಾವರಿ ಸೂರ್ಯಕಾಂತಿ ಬೆಳೆಗೆ ಆಗಸ್ಟ್ ೧೪ ಕೊನೆಯ ದಿನವಾಗಿರುತ್ತದೆ. ಆಸಕ್ತ ರೈತರು ನಿಗದಿತ ಅವಧಿಯೊಳಗೆ ಅರ್ಜಿಗಳನ್ನು ಸಲ್ಲಿಸಬೇಕು ಎಂದು ಕೃಷಿ ಇಲಾಖೆ ಸಹಾಯಕ ನಿರ್ದೇಶಕ ಪ್ರಶಾಂತ ಸಾಣಿ ಮನವಿ ಮಾಡಿದ್ದಾರೆ.

Read More

ಉದಯರಶ್ಮಿ ದಿನಪತ್ರಿಕೆ ಸಿಂದಗಿ: ಯೋಗವು ಭಾರತೀಯ ಸಂಸ್ಕೃತಿಯ ಅಮೂಲ್ಯ ಕೊಡುಗೆಯಾಗಿದ್ದು ಯೋಗಾಭ್ಯಾಸವನ್ನು ಪ್ರತಿದಿನ ರೂಡಿಸಿಕೊಳ್ಳುವುದರಿಂದ ದೈಹಿಕ ಮತ್ತು ಮಾನಸಿಕ ಆರೋಗ್ಯದ ಸಮತೋಲನಗೊಳ್ಳುತ್ತದೆ. ಆರೋಗ್ಯಕರ ಜೀವನ ಶೈಲಿಗೆ ದಾರಿದೀಪವಾಗಿದೆ ಎಂದು ಸಂಸ್ಥೆಯ ಅಧ್ಯಕ್ಷ ಚಂದ್ರಶೇಖರ ನಾಗರಬೇಟ್ಟ ಹೇಳಿದರು.ನಗರದ ಕಾವ್ಯ ಸಮೂಹ ಶಿಕ್ಷಣ ಸಂಸ್ಥೆಯ ಪ್ರಾಥಮಿಕ ಹಾಗೂ ಪ್ರೌಡಶಾಲೆಯ ಆವರಣದಲ್ಲಿ ರವಿವಾರ ಅಂತರಾಷ್ಟ್ರೀಯ ಯೋಗ ದಿನದ ನಿಮಿತ್ಯ ಹಮ್ಮಿಕೊಂಡ ಯೋಗ ತರಬೇತಿ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದ ಅವರು, ಇಂದಿನ ಕುಲಶಿತ ಆಹಾರ ಸೇವನೆಯಿಂದ ಅನಾರೋಗ ಪಿಡಿತರಾಗುತ್ತಿದ್ದೇವೆ.ಆದರೆ ಯೋಗದಿಂದ ನಮ್ಮ ದೇಹ ಮತ್ತು ಮನಸ್ಸು ಲವಲವಿಕೆಯಿಂದ ವಿಜೃಂಬಿಸುತ್ತದೆ. ನಿತ್ಯ ಯೋಗ ಮಾಡುವುದರಿಂದ ಮನುಷ್ಯನ ಆಯುಷ್ಯ ವೃದ್ಧಿಯಾಗುತ್ತದೆ ಎಂದರು.ಈ ಸಂಧರ್ಭದಲ್ಲಿ ಶಿಕ್ಷಕರಾದ ಕಾವ್ಯ ರಾವುರ, ಅಂಬಿಕಾ ಕುಲಕರ್ಣಿ, ವಿನಾಯಕ ಬಜಂತ್ರಿ, ಅಶೋಕ ನಾವಿ ಅವರು ವಿದ್ಯಾರ್ಥಿಗಳಿಗೆ ಯೋಗದ ವಿವಿಧ ಪ್ರಾತ್ಯಕ್ಷಿಕೆಗಳನ್ನು ಮಾಡಿ ತೊರಿಸಿ ಅದರ ಉಪಯೋಗ ವಿವರಿಸಿದರು. ಕಾರ್ಯಕ್ರಮದಲ್ಲಿ ಸಂಗಮೇಶ್ಡರ ಪಾರ್ಮಾ ಮಹಾವಿದ್ಯಾಲಯದ ಪ್ರಾಚಾರ್ಯ ಸಂದೀಪ ಚಾಂದಕವಟೆ, ಸುಮಾ ವಸ್ತ್ರದ, ರೇಣುಕಾ ಬಡಾನೂರ, ಮುಬಿನಾ, ಉಮಾ ಸೇರಿದಂತೆ…

Read More

ಉದಯರಶ್ಮಿ ದಿನಪತ್ರಿಕೆ ಸಿಂದಗಿ: ಪ್ರತಿನಿತ್ಯ ಎಲ್ಲರೂ ಯೋಗಾಭ್ಯಾಸ ಮಾಡುವ ಮೂಲಕ ಆರೋಗ್ಯವಂತ ಸಮಾಜ ನಿರ್ಮಾಣಕ್ಕೆ ಕೈಜೋಡಿಸಬೇಕು ಎಂದು ಶಿಕ್ಷಕ ಸಿದ್ದು ಚಿಂಚೋಳಿ ಹೇಳಿದರು.ಸಿಂದಗಿ ತಾಲೂಕಿನ ಬ್ಯಾಲಿಹಾಳ–ಬಂಕಲಗಿ ಸರಕಾರಿ ಶಾಲಾ ಆವರಣದಲ್ಲಿ ಹಮ್ಮಿಕೊಂಡ ವಿಶ್ವ ಯೋಗ ದಿನಾಚರಣೆ ಕಾರ್ಯಕ್ರಮವನ್ನು ಸಸಿಗೆ ನೀರುಣಿಸುವ ಮೂಲಕ ಚಾಲನೆ ನೀಡಿ ಮಾತನಾಡಿದ ಅವರು, ಯೋಗವು ಕೇವಲ ವ್ಯಾಯಾಮವಲ್ಲ. ಅದು ಆರೋಗ್ಯಕರ, ಸಂತೋಷಕರ ಮತ್ತು ಸಮತೋಲಿತ ಜೀವನದ ಮಾರ್ಗವಾಗಿದೆ. ಯೋಗವು ದೈಹಿಕ ಆರೋಗ್ಯವನ್ನು ವೃದ್ಧಿಸುವುದರ ಜೊತೆಗೆ ಮಾನಸಿಕ ಒತ್ತಡವನ್ನು ಕಡಿಮೆ ಮಾಡಿ ಏಕಾಗ್ರತೆ, ಆತ್ಮವಿಶ್ವಾಸ ಹಾಗೂ ಸಕಾರಾತ್ಮಕ ಚಿಂತನೆಯನ್ನು ಬೆಳೆಸುತ್ತದೆ ಎಂದು ತಿಳಿಸಿದರು.ಇದೇ ಸಂದರ್ಭದಲ್ಲಿ ಅತಿಥಿಗಳಾಗಿ ಆಗಮಿಸಿ ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಮಹಾಂತೇಶ ನೂಲಾನವರ, ವರದಿಗಾರ ಶಿವಾನಂದ ಆಲಮೇಲ ಮಾತನಾಡಿ, ಯೋಗವು ದೇಹ, ಮನಸ್ಸು ಮತ್ತು ಆತ್ಮದ ಸಮತೋಲನವನ್ನು ಕಾಪಾಡುವುದಲ್ಲದೆ ದೇಹಕ್ಕೆ ಚೈತನ್ಯ ಮತ್ತು ಶಕ್ತಿಯನ್ನು ನೀಡುತ್ತದೆ. ಇಂದಿನ ಒತ್ತಡದ ಜೀವನ ಶೈಲಿಯಲ್ಲಿ ಯೋಗದ ಮಹತ್ವ ಇನ್ನಷ್ಟು ಹೆಚ್ಚಾಗಿದೆ. ವಿದ್ಯಾರ್ಥಿಗಳು ಬಾಲ್ಯದಿಂದಲೇ ಯೋಗಾಭ್ಯಾಸವನ್ನು ರೂಢಿಸಿಕೊಂಡರೆ ದೈಹಿಕ…

Read More

ಉದಯರಶ್ಮಿ ದಿನಪತ್ರಿಕೆ ಜಮಖಂಡಿ: ಭಾರತ ಜಗತ್ತಿಗೆ ನೀಡಿದ ಮಹೋನ್ನತ ಕೊಡುಗೆಗಳಲ್ಲಿ ಯೋಗವು ಒಂದಾಗಿದ್ದು ಪ್ರತಿ ದಿನ ಯೋಗ ಮಾಡಿದರೆ ರೋಗವು ದೂರವಾಗುತ್ತದೆ ಎಂದು ಮುಖ್ಯ ಶಿಕ್ಷಕ ನಾರಾಯಣ ಶಾಸ್ತ್ರಿ ಹೇಳಿದರು.ಅವರು ಪಿ.ಎಂ.ಶ್ರೀ. ಕರ್ನಾಟಕ ಪಬ್ಲಿಕ್ ಶಾಲೆ ಕುಂಬಾರಹಳ್ಳದಲ್ಲಿ ಸಂಪನ್ನಗೊಂಡ ಹನ್ನೆರಡನೆಯ ವಿಶ್ವ ಯೋಗ ದಿನದ ಅಧ್ಯಕ್ಷತೆ ವಹಿಸಿ ಮಾತನಾಡಿ ಇಂದು ಜಗತ್ತಿನಾದ್ಯಂತ ಜನರು ಯೋಗದತ್ತ ಮುಖ ಮಾಡಿದ್ದಾರೆ ಮಕ್ಕಳು ಸಹ ಯೋಗವನ್ನು ಅಳವಡಿಸಿಕೊಂಡು ಉನ್ನತ ಸಾಧನೆಯನ್ನು ಮಾಡಿರಿ. ಪತಂಜಲಿಯ ಯಮ, ನಿಯಮ, ಆಸನ, ಪ್ರಾಣಾಯಾಮ, ಪ್ರತ್ಯಾಹಾರ, ಧ್ಯಾನ, ಧಾರಣ, ಸಮಾಧಿ ಎಂಬೀ ಅಷ್ಠಾಂಗ ಮಾರ್ಗವು ಆರೋಗ್ಯದ ತಳಹದಿಯಾಗಿದೆ ಎಂದರು.ಶಿಕ್ಷಕ ಸಂಗನಬಸವ ಉಟಗಿ ಮಾತನಾಡಿ, ಇಂದಿನ ಒತ್ತಡದ ಜೀವನದಲ್ಲಿ ಯೋಗ ಬಹಳ ಮುಖ್ಯವಾಗಿದೆ. ಮಕ್ಕಳಲ್ಲಿ ನೆನಪಿನ ಶಕ್ತಿ ಹೆಚ್ಚಿಸುವಲ್ಲಿ ಯೋಗ ಮಹತ್ವದ ಪಾತ್ರ ವಹಿಸುತ್ತದೆ. ಪ್ರತಿ ದಿನವೂ ತಪ್ಪದೇ ಯೋಗವನ್ನು ಮಾಡಬೇಕು ಎಂದು ಹೇಳಿದರು.ದೈಹಿಕ ಶಿಕ್ಷಣ ಶಿಕ್ಷಕ ಬಾಹುಬಲಿ ಮುತ್ತೂರ ಮಕ್ಕಳಿಗೆ ಎಲ್ಲಾ ಆಸನಗಳನ್ನು ಹೇಳಿಕೊಟ್ಟು ಪೂರಕ ವಿವರಣೆ ನೀಡಿದರು. ಯೋಗದಿಂದ ದೇಹ…

Read More