ಉದಯರಶ್ಮಿ ದಿನಪತ್ರಿಕೆ
ಇಂಡಿ: ಜಾನಪದ ಸಾಹಿತ್ಯ ಗ್ರಾಮೀಣ ಸಂಸ್ಕೃತಿ ಬದುಕು ಮತ್ತು ಮೌಖಿಕ ಪರಂಪರೆಯನ್ನು ಪ್ರತಿಬಿಂಬಿಸುವ ಅತ್ಯಂತ ಶ್ರೀಮಂತ ಸಾಹಿತ್ಯ ಪ್ರಕಾರವಾಗಿದೆ. ಇದು ಹಳೆ ತಲೆ ಮಾರಿನಿಂದ ವಂಶಸ್ಥವಾಗಿ ಬಾಯಿಯಿಂದ ಬಾಯಿಗೆ ಹರಿದು ಬಂದಿರುವ ಜ್ಞಾನ ಮತ್ತು ಕಲೆಯಾಗಿದೆ ಎಂದು ಶಿರಶ್ಯಾಡದ ಅಭಿನವ ಮುರುಘೇಂದ್ರ ಶಿವಾಚಾರ್ಯರು ಹೇಳಿದರು.
ನಗರದ ಸಿಂದಗಿ ರಸ್ತೆಯ ಸದಾಶಿವ ನಗರದ ಶಿರಶ್ಯಾಡದ ಶಾಖಾ ಮಠದಲ್ಲಿ ಶುಕ್ರವಾರ ನಡೆದ ಜನಪದ ಸಾಹಿತ್ಯದ ಸಂಸ್ಥಾಪನಾ ದಿನದ ಕಾರ್ಯಕ್ರಮದಲ್ಲಿ ಮಾತನಾಡಿದರು.
ಅಂತಹ ಪ್ರಾಚೀನ ಕಲೆಯನ್ನು ಉಳಿಸಿ ಬೆಳೆಸುವುದು ನಮ್ಮೆಲ್ಲರ ಕರ್ತವ್ಯವಾಗಿದೆ. ಜಾನಪದ ಪರಿಷತ್ ವತಿಯಿಂದ ಹತ್ತು-ಹಲವು ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುವ ಮೂಲಕ ಜಾನಪದವನ್ನು ಎಲ್ಲೆಡೆ ಪಸರಿಸುವ ಕಾರ್ಯ ಜಾನಪದ ಪರಿಷತ್ ಮಾಡುತ್ತಿರುವುವುದು ಹೆಮ್ಮೆಯ ಸಂಗತಿ ಎಂದರು.
ಪ್ರೊ ಎಸ್.ಜೆ.ಮಾಡ್ಯಾಳ ಮಾತನಾಡಿ ಜಾನಪದ ಸಂಸ್ಕೃತಿಯನ್ನು ಸಾಹಿತ್ಯ ನೃತ್ಯ ಕರಡಿ ಮಜಲು ನಂದಿಕೋಲು ಕುಣಿತ ಶ್ರೀ ಕೃಷ್ಣ ಪಾರಿಜಾತ ಬಯಲಾಟ ದೊಡ್ಡಾಟ ಯಕ್ಷಗಾನ ಹೀಗೆ ನಾನಾ ಕಲೆಗಳು ಶ್ರೀಮಂತಗೊಳಿಸಿವೆ ಜನಪದ ಗೀತೆಗಳು ಅತ್ಯಂತ ವೈವಿದ್ಯಮಯವಾಗಿವೆ ಕನ್ನಡ ನಾಡಿನ ವಿವಿಧ ಪ್ರದೇಶಗಳಪ್ರಾಧೇಶಿಕ ಸೊಗಡನ್ನು ಮುಂದಿನ ಪೀಳಿಗೆಗೆ ಮುಂದು ವರೆಸುವದು ಅವಶ್ಯ ಎಂದರು.
ಇಂಡಿ ತಾಲೂಕಾ ಜನಪದ ಸಾಹಿತ್ಯದ ಪರಿಷತ್ತ ಅಧ್ಯಕ್ಷ ಪಂಡಿತ ಅವಜಿ, ನಿವೃತ್ತ ಪ್ರಾಚಾರ್ಯ ಉಮೇಶ ಕೋಳೆಕರ, ಶ್ರೀಮತಿ ಕೆ.ಎಂ.ಪಾಟೀಲ, ಶ್ರೀಮತಿ ಬಿ.ಸಿ.ಭಗವಂತಗೌಡರ ಮಾತನಾಡಿದರು.
ವೇದಿಕೆಯ ಮೇಲೆ ಶಾಂತೇಶ್ವರ ದೇವಸ್ಥಾನ ಸಮಿತಿ ಅಧ್ಯಕ್ಷ ಕಾಸುಗೌಡ ಬಿರಾದಾರ, ನಿವೃತ್ತ ಪ್ರಾಧ್ಯಾಪಕ ಎಸ್.ಎಸ್.ಮಜ್ಜಗಿ, ಸಂಕೇತ ಬಗಲಿ, ಅನೀಲ ಪ್ರಸಾದ ಏಳಗಿ, ಮುಖ್ಯ ಗುರು ರಾಘವೇಂದ್ರ ಕುಲಕರ್ಣಿ, ಶಿಕ್ಷಕ ವೈ.ಜಿ.ಬಿರಾದಾರ, ನಿವೃತ್ತ ಪ್ರಾಚಾರ್ಯ ಶೈಲಜಾ ಬಿರಾದಾರ ಮತ್ತಿತರರಿದ್ದರು.
ಸಾಲೋಟಗಿಯ ಕುಶಾಲಬಾಯಿ ಗುಡಿಮನಿ ಮತ್ತು ಗಂಗವ್ವ ಹಿಳ್ಳಿ ಜಾನಪದ ಗೀತೆ ಹಾಡಿ ಮನರಂಜಿಸಿದರು.

