Subscribe to Updates
Get the latest creative news from FooBar about art, design and business.
Author: editor.udayarashmi@gmail.com
ವಿಜಯಪುರ: ವಿಜಯಪುರ ಪರಿಶಿಷ್ಟ ಜಾತಿ ಮೀಸಲು ಲೋಕಸಭಾ ಮತಕ್ಷೇತ್ರಕ್ಕೆ ಸ್ಪರ್ಧಿಸಿರುವ ಅಭ್ಯರ್ಥಿಗಳ ಲೆಕ್ಕಪತ್ರವನ್ನು ಜನಪ್ರತಿನಿಧಿಗಳ ಕಾಯ್ದೆ ೧೯೫೧ ರ ಕಲಂ ೭೭ (೧)ರ ಪ್ರಕಾರ ವೆಚ್ಚ ವೀಕ್ಷಕರು ತಪಾಸಣೆ ನಡೆಸಲಿದ್ದಾರೆ.ಮೊದಲನೇ ತಪಾಸಣೆ ಏಪ್ರೀಲ್ ೨೬, ಎರಡನೇ ತಪಾಸಣೆ ಮೇ ೧ ಹಾಗೂ ಮೂರನೇ ತಪಾಸಣೆ ಮೇ ೫ ರಂದು ಬೆಳಿಗ್ಗೆ ೧೧ ಗಂಟೆಯಿಂದ ಮಾಡಲಾಗುತ್ತಿದೆ. ಈ ದಿನಗಳಂದು ಅಭ್ಯರ್ಥಿಗಳು ತಮ್ಮ ಚುನಾವಣಾ ಏಜೆಂಟರುಗಳ ಮೂಲಕ ಬಿಳಿ ಬಣ್ಣದ ದೈನಂದಿನ ಖರ್ಚು ವೆಚ್ಚಗಳ ಪುಸ್ತಕ ಭಾಗ-ಎ, ಗುಲಾಬಿ ಬಣ್ಣದ ನಗದು ಪುಸ್ತಕ ಭಾಗ-ಬಿ ಮತ್ತು ಹಳದಿ ಬಣ್ಣದ ಬ್ಯಾಂಕ್ ನಗದು ಪುಸ್ತಕ, ಭಾಗ-ಸಿ ಪುಸ್ತಕಗಳನ್ನು ಕಾಲೋಚಿತಗೊಳಿಸಿ ಜಿಲ್ಲಾಧಿಕಾರಿಗಳ ಕಚೇರಿಯಲ್ಲಿ ನಡೆಯುವ ಅಭ್ಯರ್ಥಿಗಳ ಲೆಕ್ಕ ಪತ್ರಗಳ ತಪಾಸಣೆಗೆ ಅಭ್ಯರ್ಥಿಗಳು/ ಚುನಾವಣಾ ಎಜೆಂಟರುಗಳು ಕಡ್ಡಾಯವಾಗಿ ಹಾಜರಾಗುವಂತೆ ಜಿಲ್ಲಾ ಚುನಾವಣಾಧಿಕಾರಿ ಹಾಗೂ ಜಿಲ್ಲಾಧಿಕಾರಿ ಟಿ.ಭೂಬಾಲನ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಮಂಗಳೂರು: ಮಂಗಳೂರಿನ ಕಥಾಬಿಂದು ಪ್ರಕಾಶನ ಮತ್ತು ಹೈದರಾಬಾದಿನ ಕರ್ನಾಟಕ ಸಾಹಿತ್ಯ ಮಂದಿರ ಮತ್ತು ಶ್ರೀ ಸಾಹಿತ್ಯ ಕಲಾ ವೇದಿಕೆ ಈ ಸಂಸ್ಥೆಗಳ ಜಂಟಿ ಆಶಯದಲ್ಲಿ ಮೇ 5 ರಂದು ಹೈದರಾಬಾದಿನಲ್ಲಿ ಕಥಾ ಬಿಂದು ಕನ್ನಡ ಕಂಪು ಸರಣಿ -6 ಕಾರ್ಯಕ್ರಮ ಆಯೋಜಿಸಲಾಗಿದೆ.ಇದರಲ್ಲಿ ಪುಸ್ತಕ ಬಿಡುಗಡೆ, ಕವಿ ಗೋಷ್ಠಿ, ಸಾಧಕರಿಗೆ ಪ್ರಶಸ್ತಿ ಪ್ರದಾನ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ. ಸಾಧನ ಶ್ರೀ ರಾಷ್ಟ್ರೀಯ ಪ್ರಶಸ್ತಿಗೆ ತುಮಕೂರಿನ ಶ್ರೀಮತಿ ಲೀಲ ಗುರುರಾಜ್ ರವರು ಆಯ್ಕೆಯಾಗಿದ್ದಾರೆ. ಮೇ ಐದರಂದು ಹೈದರಾಬಾದಿನಲ್ಲಿ ರಾಷ್ಟ್ರೀಯ ಪ್ರಶಸ್ತಿ ಪ್ರದಾನ ನಡೆಯಲಿದೆ.ಶ್ರೀಮತಿ ಲೀಲಾ ಗುರುರಾಜ್ ವೃತ್ತಿಯಲ್ಲಿ ಹಣಕಾಸು ಸಂಸ್ಥೆಯ ವ್ಯವಸ್ಥಾಪಕರು. ಅವರು ಮೂಲತ: ತುಮಕೂರಿನವರು. ಪ್ರವೃತ್ತಿಯಲ್ಲಿ ಲೇಖಕಿ, ಗಾಯಕಿ ಮತ್ತು ಯೋಗ ಶಿಕ್ಷಕಿ. ಅವರ ಓದು ಅರ್ಥಶಾಸ್ತ್ರದಲ್ಲಿ ಎಂಎ ಮತ್ತು ಯೋಗ ವಿಷಯದಲ್ಲಿ ಪಿಜಿ ಕೋರ್ಸ್ ಮಾಡಿದ್ದಾರೆ. ಸನಾತನ ಹಿಂದೂ ಧರ್ಮದ ಪ್ರಚಾರಕರು. ಲೇಖನ ಮತ್ತು ಕವನಗಳನ್ನು ಬರೆಯುತ್ತಾ ಬಂದಿದ್ದಾರೆ. ಇವರಿಗೆ ಸೇವಾ ಸಾಹಿತ್ಯ ರತ್ನ, ಕರುನಾಡ ರತ್ನಪ್ರಶಸ್ತಿ, ಕರುನಾಡ ಕಾಯಕಯೋಗಿ ಪ್ರಶಸ್ತಿ ಪಡೆದಿದ್ದಾರೆ.
ಕೆಂಭಾವಿ: ಬದುಕಿನುದ್ದಕ್ಕೂ ಸಮಾಜದ ಶ್ರೇಯೋಭಿವೃದ್ಧಿಗೆ ಜೀವನ ಮುಡಿಪಾಗಿಟ್ಟ ಲೋಕ ಕಲ್ಯಾಣಕ್ಕೆ ಕಳಸ ಪ್ರಾಯರಾಗಿ ಪ್ರಥಮರಲ್ಲಿ ಪ್ರಥಮರು ಎನ್ನಿಸಿಕೊಂಡ ಮಹಾತ್ಮರನ್ನು ನೆನೆಯೋಣ ಎಂದು ಮೊರಾರ್ಜಿ ದೇಸಾಯಿ ವಸತಿ ಶಾಲೆಯ ಸಂಗೀತ ಶಿಕ್ಷಕ ಮಲ್ಲಯ್ಯ ಸ್ವಾಮಿ ವಡಿಗೇರಿ ಹೇಳಿದರು.ಪಟ್ಟಣದ ಹಿರೇಮಠ ಸಂಸ್ಥಾನದಲ್ಲಿ ಶ್ರೀ ಗುರು ಕಾಂತೇಶ್ವರ ಜನ ಕಲ್ಯಾಣ ಸೇವಾ ಪ್ರತಿಷ್ಠಾನದ ವತಿಯಿಂದ ಮಂಗಳವಾರ ಜರುಗಿದ ಮಾಸಿಕ ಹುಣ್ಣಿಮೆಯ ಶಿವಾನುಭವ ಗೋಷ್ಠಿಯನ್ನು ಉದ್ಘಾಟಿಸಿ ಉಪನ್ಯಾಸ ನೀಡಿದ ಅವರು ಮಾನವ ಹಕ್ಕಿಯಂತೆ ಹಾರಾಡುವುದು, ಮೀನಿನಂತೆ ಈಜುವುದು, ಪ್ರಾಣಿಗಳಂತೆ ಓಡಾಡುವುದು ಕಲಿತರು ಸುಖ ಶಾಂತಿಯಿಲ್ಲ. ಆ ನೆಮ್ಮದಿಯ ಸುಖ ಶಾಂತಿಯ ಬದುಕು ನಮ್ಮದಾಗಲು ಸಾಧು ಸಂತರು, ಮಹಾಂತರು ನಿತ್ಯವೂ ಸ್ಮರಣೀಯರು. ಇಂದು ಹನುಮ ಜಯಂತಿ, ಅಕ್ಕಮಹಾದೇವಿ ಜಯಂತಿ, ಹಾಗೂ ಗೊಲಗೇರಿ ಗೋಲ್ಲಾಳೇಶರ ರಥೋತ್ಸವ ಇಂತಹ ಪವಿತ್ರ ದಿನದಂದು ಸತ್ಸಂಗದಲ್ಲಿ ಭಾಗಿಯಾಗಿರುವ ನಾವು ನೀವುಗಳು ಪುಣ್ಯವಂತರು ಎಂದರು.ಪೀಠಾಧಿಪತಿ ಚನ್ನಬಸವ ಶಿವಾಚಾರ್ಯರು ಸಾನ್ನಿಧ್ಯ ವಹಿಸಿ ಆಶೀರ್ವಚನ ನೀಡಿದರು.ಯಮನೇಶ ಯಾಳಗಿ, ಶರಣಕುಮಾರ ಯಾಳಗಿ, ಸೋಮನಾಥ ಯಾಳಗಿ, ಇವರಿಂದ ಸಂಗೀತ ಕಾರ್ಯಕ್ರಮ ಮೂಡಿ…
ವಿಜಯಪುರ: ಸಮುದಾಯ ಆರೋಗ್ಯ ನರ್ಸಿಂಗ್ನಲ್ಲಿ ಕ್ರಾಂತಿ ಮತ್ತು ಹೊಸ ದೃಷ್ಟಿಕೋನ: ಶಿಕ್ಷಣ, ಕೌಶಲ್ಯ ಮತ್ತು ಸಂಶೋಧನೆ ಕುರಿತು ಎರಡು ದಿನಗಳ ಅಂತಾರಾಷ್ಟ್ರೀಯ ಸಮ್ಮೇಳನ ಏಪ್ರಿಲ್ 26 ಮತ್ತು 27 ರಂದು ನಗರದ ಬಿ. ಎಲ್. ಡಿ. ಇ ಸಂಸ್ಥೆಯ ಶ್ರೀ ಬಿ. ಎಂ. ಪಾಟೀಲ ನರ್ಸಿಂಗ್ ಕಾಲೇಜಿನಲ್ಲಿ ನಡೆಯಲಿದೆ.ಈ ಕುರಿತು ಮಾಧ್ಯಮ ಪ್ರಕಟಣೆ ನೀಡಿರುವ ಎಂದು ನರ್ಸಿಂಗ್ ಕಾಲೇಜಿನ ಪ್ರಾಚಾರ್ಯ ಡಾ. ಶಾಲ್ಮನ್ ಚೋಪಡೆ, ಸಮ್ಮೇಳನ ಸಂಘಟನೆ ಅಧ್ಯಕ್ಷೆ ಡಾ. ಸುಚಿತ್ರಾ ರಾತಿ, ಏ. 26 ರಂದು ಬಿ.ಎಲ್.ಡಿ.ಇ ಡೀಮ್ಡ್ ವಿಶ್ವವಿದ್ಯಾಲಯದ ಶ್ರೀ ಬಿ. ಎಂ. ಪಾಟೀಲ ವೈದ್ಯಕೀಯ ಕಾಲೇಜು, ಆಸ್ಪತ್ರೆ ಮತ್ತು ಸಂಶೋಧನೇ ಕೇಂದ್ರದ ಗ್ರಂಥಾಲಯ ಸಭಾಂಗಣದಲ್ಲಿ ಬೆಳಿಗ್ಗೆ 10 ಗಂಟೆಗೆ ಪ್ರಾರಂಭವಾಗಲಿದೆ. ಈ ಸಮ್ಮೇಳನವನ್ನು ಕೈಗಾರಿಕೆ, ಮೂಲಸೌಲಭ್ಯ ಅಭಿವೃದ್ಧಿ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಎಂ. ಬಿ. ಪಾಟೀಲ ಉದ್ಘಾಟಿಸಲಿದ್ದಾರೆ ಎಂದು ತಿಳಿಸಿದ್ದಾರೆಈ ಸಂದರ್ಭದಲ್ಲಿ ರಾಜ್ಯ ಡಿಪ್ಲೊಮಾ ಇನ್ ನರ್ಸಿಂಗ್ ಪರೀಕ್ಷಾ ಮಂಡಳಿ ಕಾರ್ಯದರ್ಶಿ ಮಡಿವಾಳಪ್ಪ ನಾಗರಹಳ್ಳಿ, ಆರ್ಜಿಯುಎಚ್ಎಸ್…
ವಿಜಯಪುರ: ವೈದ್ಯರು ಹಾಗೂ ಸಿಬ್ಬಂದಿಗಳು ರೋಗಿಗಳೊಂದಿಗೆ ಸೌಜನ್ಯದಿಂದ ವರ್ತಿಸಿ, ಉತ್ತಮ ವೈದ್ಯಕೀಯ ಚಿಕಿತ್ಸೆ ನೀಡುವ ಮೂಲಕ ಜನಸ್ನೇಹಿಯಾಗಿ ಕಾರ್ಯನಿವರ್ಹಿಸಬೇಕು ಎಂದು ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ರಿಶಿ ಆನಂದ ಹೇಳಿದರು.ಮಂಗಳವಾರ ಕೊಲ್ಹಾರ ತಾಲೂಕಿನ ಕೂಡಗಿ ಸರಕಾರಿ ಪ್ರಾಥಮಿಕ ಆರೋಗ್ಯ ಕೇಂದ್ರ ಹಾಗೂ ಗ್ರಾಮ ಪಂಚಾಯತಿಗೆ ಭೇಟಿ ನೀಡಿ ಪರಿಶೀಲನೆ ನಡೆಸಿ ಮಾತನಾಡಿದರು. ನಂತರ ಆರೋಗ್ಯ ತಪಾಸಣೆಗಾಗಿ ಬಂದ ಸಾರ್ವಜನಿರೊಂದಿಗೆ ಮಾತನಾಡಿ ಇಲ್ಲಿನ ವೈದ್ಯಕೀಯ ಗುಣಮಟ್ಟ, ಚಿಕಿತ್ಸಾ ವಿಧಾನ ಹಾಗೂ ಸೌಲಭ್ಯಗಳ ಕುರಿತು ಚರ್ಚಿಸಿದರು. ಸರಕಾರಿ ಆಸ್ಪತ್ರೆಯಲ್ಲಿ ಲಭ್ಯವಿರುವ ಎಲ್ಲ ಸೌಲಭ್ಯಗಳನ್ನು ಪಡೆದುಕೊಳ್ಳಬೇಕು ಮತ್ತು ಹೆಚ್ಚಿನ ಚಿಕಿತ್ಸೆ ಅವಶ್ಯಕತೆ ಇದ್ದಲ್ಲಿ ಜಿಲ್ಲಾ ಆಸ್ಪತ್ರೆಗೂ ಸಹ ಬಂದು ಆರೋಗ್ಯ ತಪಾಸಣೆ ಮಾಡಿಕೊಂಡು ಹೆಚ್ಚಿನ ಚಿಕಿತ್ಸೆ ಪಡೆದುಕೊಳ್ಳಲು ತಿಳಿಸಿದರು.ಈ ವೇಳೆ ಆಸ್ಪತ್ರೆಯ ಚುಚ್ಚುಮದ್ದು ನೀಡುವ ಕೊಠಡಿ, ಔಷಧಿ ಸಂಗ್ರಹಣೆ ಕೊಠಡಿ, ಒಳರೋಗಿಗಳ ಕೊಠಡಿಗಳಿಗೆ ಭೇಟಿ ನೀಡಿ ಪರಿಶೀಲಿಸಿದರು. ಇದೇ ವೇಳೆ ಆಸ್ಪತ್ರೆಯ ಎಲ್ಲಾ ವಿಭಾಗಗಳಲ್ಲಿ ಸ್ವಚ್ಛತೆ ಹಾಗೂ ನೈರ್ಮಲ್ಯೀಕರಣ ಕಾಪಾಡಿಕೊಳ್ಳಬೇಕು. ಕಡ್ಡಾಯವಾಗಿ ಪ್ರತಿದಿನ ಆಸ್ಪತ್ರೆಯ…
ವಿಜಯಪುರ: ೨೦೨೩-೨೪ನೇ ಸಾಲಿಗೆ ಪರಿಶಿಷ್ಟ ವರ್ಗಗಳ ಕಲ್ಯಾಣ ಇಲಾಖೆಯ ವತಿಯಿಂದ ವಿಜಯಪುರ ಜಿಲ್ಲೆಯಲ್ಲಿಯ ಖಾಸಗಿ ಶಾಲೆಗಳಿಗೆ ೬ನೇ ತರಗತಿಗೆ ಪ್ರವೇಶ ಕಲ್ಪಿಸಲು ಅರ್ಹ ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡದ ಪ್ರತಿಭಾವಂತ ವಿದ್ಯಾರ್ಥಿಗಳನ್ನು ಅರ್ಹತಾ ಪರೀಕ್ಷೆ ಮೂಲಕ ಆಯ್ಕೆ ಮಾಡಿಕೊಳ್ಳಲು ಮೇ.೯ ರಿಂದ ಅರ್ಜಿಗಳನ್ನು ಸ್ವೀಕರಿಸಲಾಗುವುದು. ಅರ್ಜಿಗಳನ್ನು ಸಲ್ಲಿಸಲು ಮೇ.೨೧ ಕೊನೆಯ ದಿನ ವಾಗಿದೆ. ಹೆಚ್ಚಿನ ಮಾಹಿತಿಗಾಗಿ ಸಮಾಜ ಕಲ್ಯಾಣ ಇಲಾಖೆ ಕಚೇರಿಯನ್ನು ಸಂಪರ್ಕಿಸಬಹುದು ಎಂದು ಸಮಾಜ ಕಲ್ಯಾಣ ಇಲಾಖೆಯ ಉಪನಿರ್ದೇಶಕರಾದ ಪುಂಡಲೀಕ್ ಮಾನವರ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ವಿಜಯಪುರ: ಲೋಕಸಭಾ ಸಾರ್ವತ್ರಿಕ ಚುನಾವಣೆ ೨೦೨೪ರ ವಿಜಯಪುರ ಮೀಸಲು ಕ್ಷೇತ್ರದ ಮತದಾರರಾಗಿದ್ದು, ಲೋಕಸಭಾ ಕ್ಷೇತ್ರದಲ್ಲಿ ಮತ್ತು ಬೇರೆ ಲೋಕಸಭಾ ಕ್ಷೇತ್ರದಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಮತದಾರರು ಮೇ.೭ ರಂದು ಮತಗಟ್ಟೆಗೆ ಆಗಮಿಸಿ ಮತದಾನ ಮಾಡಲು ಸಾಧ್ಯವಾಗದೇ ಇರುವ ಅರ್ಹ ಅಗತ್ಯ ಸೇವೆಯಡಿ ಬರುವ ಗೈರು ಹಾಜರಿ ಮತದಾರರಿಗೆ ಮೇ. ೧ ರಿಂದ ೩ರವರೆಗೆ ಬೆಳಗ್ಗೆ ೯ ರಿಂದ ಸಂಜೆ ೫ರ ವರೆಗೆ ಪೋಸ್ಟ್ಲ್ ವೊಟಿಂಗ್ ಸೆಂಟರ್ ವ್ಯವಸ್ಥೆ ಕಲ್ಪಿಸಲಾಗಿದೆ.ಜಿಲ್ಲಾಧಿಕಾರಿಗಳ ಕಚೇರಿ ಆವರಣದ ಸಹಾಯಕ ನಿರ್ದೇಶಕರ ಕಚೇರಿ, ಅನೌಪಚಾರಿಕ ಪಡಿತರ ವಿಭಾಗ, ಆಹಾರ ನಾಗರೀಕ ಸರಬರಾಜು ಹಾಗೂ ಗ್ರಾಹಕರ ವ್ಯವಹಾರಗಳ ಇಲಾಖೆ ವಿಜಯಪುರ ಇಲ್ಲಿ ಪೋಸ್ಟ್ಲ್ ವೋಟಿಂಗ್ ಸೆಂಟರ್ ಸ್ಥಾಪಿಸಲಾಗಿದೆ. ಅದರಂತೆ ಅಗತ್ಯ ಸೇವೆಯಡಿ ಬರುವ ಗೈರು ಹಾಜರಿ ಮತದಾರರು ಮತದಾನ ಕೇಂದ್ರದಲ್ಲಿ ಚುನಾವಣೆ ಆಯೋಗ ಸೂಚಿಸಿರುವ ದಾಖಲಾತಿಗಳನ್ನು ಅಥವಾ ಗುರುತಿನ ಚೀಟಿಯೊಂದಿಗೆ ಹಾಜರಾಗಿ ಮತ ಚಲಾಯಿಸಬೇಕು ಎಂದು ಜಿಲ್ಲಾ ಚುನಾವಣಾಧಿಕಾರಿ ಹಾಗೂ ಜಿಲ್ಲಾಧಿಕಾರಿ ಟಿ.ಭೂಬಾಲನ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಏ.೨೭ ರಿಂದ ೨೯ರವರೆಗೆ ಅಂಚೆಮತಪತ್ರದ ಮೂಲಕ ಮತದಾನ ವಿಜಯಪುರ: ಲೋಕಸಭಾ ಸಾರ್ವತ್ರಿಕ ಚುನಾವಣೆ ೨೦೨೪ರ ಸಂಬಂಧ ವಿಜಯಪುರ ಮೀಸಲು ಕ್ಷೇತ್ರ ವ್ಯಾಪ್ತಿಯಲ್ಲಿ ೮೫ ವರ್ಷ ಮೇಲ್ಪಟ್ಟ ಹಿರಿಯ ಮತದಾರರು, ವಿಶೇಷ ಚೇತನ ಮತದಾರರು ಹಾಗೂ ಅಂಚೆ ಮತಪತ್ರ ಸಲ್ಲಿಸಲು ನಮೂನೆ ೧೮ ಡಿ ಅರ್ಜಿ ಸಲ್ಲಿಸಿ ಅರ್ಹರಾದ ಮತದಾರರಿಗೆ ಏ.೨೭ ರಿಂದ ಏ.೨೯ ರವರೆಗೆ ಮೂರು ದಿನಗಳ ಕಾಲ ಅವಕಾಶ ಕಲ್ಪಿಸಲಾಗಿದೆ. ಈ ವೇಳೆ ಮತದಾನ ತಂಡಗಳು ಮನೆಯ ಬಾಗಿಲಿಗೆ ಬರಲಿವೆ. ಅಂಚೆ ಮತ ಪತ್ರ ಚುನಾವಣೆ ಕಾರ್ಯಕ್ಕೆ ಜಿಲ್ಲೆಯಲ್ಲಿ ಒಟ್ಟು ೬೯ ತಂಡಗಳನ್ನು ರಚನೆ ಮಾಡಲಾಗಿದೆ ಎಂದು ಜಿಲ್ಲಾ ಚುನಾವಣಾಧಿಕಾರಿಗಳು ಹಾಗೂ ಜಿಲ್ಲಾಧಿಕಾರಿಗಳಾದ ಟಿ. ಭೂಬಾಲನ್ ತಿಳಿಸಿದ್ದಾರೆ.ಮುದ್ದೇಬೀಹಾಳ ವಿಧಾನಸಭಾ ವ್ಯಾಪ್ತಿಯಲ್ಲಿ ೨೫೧ ಹಿರಿಯ ಮತದಾರರು, ೧೪೨ ವಿಶೇಷ ಚೇತನ ಮತದಾರರು ಸೇರಿದಂತೆ ಒಟ್ಟು ೩೯೩ ಮತದಾರರಿಗೆ ೮ ಮತದಾನ ತಂಡಗಳನು ನೇಮಕ ಮಾಡಲಾಗಿದೆ. ದೇವರಹಿಪ್ಪರಗಿ ವಿಧಾನಸಭಾ ವ್ಯಾಪ್ತಿಯಲ್ಲಿ ೧೮೭ ಹಿರಿಯ ಮತದಾರರು, ೫೮ ವಿಶೇಷ ಚೇತನ ಮತದಾರರು ಸೇರಿದಂತೆ ಒಟ್ಟು…
ವಿಜಯಪುರ: ಸತ್ಸಂಗದಿಂದ ಮಾತ್ರ ಮನಸ್ಸು ಶುದ್ಧೀಕರಣಗೊಳ್ಳಲು ಸಾಧ್ಯ ಎಂದು ಹಿರಿಯ ಸಾಹಿತಿ ಜಂಬುನಾಥ ಕಂಚಾಣಿ ಹೇಳಿದರು. ಮಂಗಳವಾರ ನಗರದ ಸಾಯಿ ರೆಸಿಡೆನ್ಸಿ ಬಡವಾಣೆಯ ವೀರಾಂಜನೇಯ ದೇವಸ್ಥಾನದ ಕ್ಷೇಮಾಭಿವೃದ್ಧಿ ಸಮಿತಿಯು ಹಮ್ಮಿಕೊಂಡ ಹನುಮಾನ ಜಯಂತಿ ಉತ್ಸವದಲ್ಲಿ ಮುಖ್ಯ ಅತಿಥಿಗಳಾಗಿ ಅವರು ಮಾತನಾಡಿ, ಜಾತ್ರೆ ಮತ್ತು ಮಹಾತ್ಮರ ಜಯಂತ್ಯೋತ್ಸವಗಳ ನೆಪದಲ್ಲಿ ಮನಸ್ಸು ವಿಕಸನಗೊಳ್ಳುವ ಕಾರ್ಯಕ್ರಮಗಳನ್ನು ಆಯೋಜಿಸುವ ಮೂಲಕ ಸಾಮಾಜಿಕ ಸ್ವಾಸ್ಥ್ಯ ಕಾಪಾಡುವ ಜವಾಬ್ದಾರಿ ಎಲ್ಲರ ಮೇಲಿದೆ ಎಂದರು.ರಾಮನ ಬಂಟನಾದ ಹನುಮಂತ ಬಹು ಜನಪ್ರಿಯನಾದ ನಾಡದೇವತೆ, ಊರ ಹೊರಗಿದ್ದ ಹನುಮಾನ ದೇವಾಲಗಳು ಇಂದು ಊರಿನ ಮಧ್ಯ ಹಾಗೂ ಜನರ ಹೃದಯದಲ್ಲಿ ಸ್ಥಾಪಿತವಾಗಿವೆ. ನಾವು ಮಾಡುವ ಭಕ್ತಿ ಮನಸ್ಸುಗಳನ್ನು ಬೆಸೆಯುವ ಹಾಗಿರಬೇಕು. ರಾಮ ಮತ್ತು ಸೀತೆಯರನ್ನು ಒಂದುಗೂಡಿಸಿದ ಹುನುಮಂತ ಭಕ್ತಿಗೆ, ಶಕ್ತಿಗೆ, ಯುಕ್ತಿಗೆ, ಜ್ಞಾನಕ್ಕೆ ಮೂಲನಾಗಿರುವನು ಎಂದರು.ಸಾನಿಧ್ಯ ವಹಿಸಿ ಮಾತನಾಡಿದ ಶಿವ ಬಸವ ಯೋಗಾಶ್ರಮದ ಮಾತೋಶ್ರೀ ದಾನಮ್ಮ ತಾಯಿಯವರು ಮಾತನಾಡಿ, ಮಹಾತ್ಮರನ್ನು ನೆನೆಯುವುದೇ ಘನ ಮುಕ್ತಿ ಪದಂ ಎನ್ನುವಂತೆ ಈ ನಾಡಿನಲ್ಲಿ ಜನಿಸಿ ಜನರ ಬದುಕನ್ನು ಹಸನುಗೊಳಿಸಲು…
“ಜಯ್ ನುಡಿ” (ವ್ಯಕ್ತಿತ್ವ ವಿಕಸನ ಮಾಲಿಕೆ)- ಜಯಶ್ರೀ ಜೆ. ಅಬ್ಬಿಗೇರಿಇಂಗ್ಲೀಷ ಉಪನ್ಯಾಸಕರು, ಬೆಳಗಾವಿ ಹಫೀಸ್ ಆಫ್ರಿಕಾದ ಒಬ್ಬ ಸಂತೃಪ್ತ ರೈತನಾಗಿದ್ದ. ಆತ ಸಂತೋಷವಾಗಿದ್ದುದು ಏಕೆಂದರೆ ಆತ ಸಂತುಷ್ಟನಾಗಿದ್ದ. ಆತ ಸಂತುಷ್ಟನಾಗಿದ್ದ ಏಕೆಂದರೆ ಆತ ಸಂತೋಷದಿಂದಿದ್ದ. ಒಂದು ದಿನ ವಿವೇಕಿಯೊಬ್ಬ ರೈತನಲ್ಲಿಗೆ ಬಂದು ವಜ್ರದ ದಿವ್ಯ ಪ್ರಭೆ ಜ್ಚಾಜಲ್ಯ ಹಾಗೂ ಮಹತ್ವವನ್ನು ಹೇಳಿ ಅದನ್ನು ಹೊಂದಿದ್ದರೆ ಸಿಗುವ ಅಧಿಕಾರ ಮತ್ತು ಘನತೆಯ ಬಗ್ಗೆ ವಿವರಿಸಿದ. ಅಷ್ಟಕ್ಕೆ ಸುಮ್ಮನಾಗದ ಆತ ಹೇಳಿದ. “ ನಿನ್ನ ಬಳಿ ಹೆಬ್ಬಟ್ಟಿನ ಗಾತ್ರದ ವಜ್ರವಿದ್ದಿದ್ದರೆ ನೀನು ನಿನ್ನದೇ ಆದ ಒಂದು ನಗರವನ್ನು ಹೊಂದಬಹುದು. ನಿನ್ನ ಬಳಿ ಮುಷ್ಟಿಯ ಗಾತ್ರದ ವಜ್ರವಿದ್ದರೆ ನೀನು ನಿನ್ನದೇ ಆದ ದೇಶವನ್ನು ಹೊಂದಬಹುದು.” ಅಷ್ಟು ಹೇಳಿ ಅಲ್ಲಿಂದ ನಿರ್ಗಮಿಸಿದ. ಆ ರಾತ್ರಿ ಆ ರೈತ ನಿದ್ರಿಸಲಿಲ್ಲ. ಆತ ಅಸಮಾಧಾನಿಯೂ ಅಸಂತುಷ್ಟನೂ ಆಗಿದ್ದ.ಮರುದಿನ ಹಫೀಸ್ ತನ್ನ ಹೊಲವನ್ನು ಮಾರಿ ವಜ್ರವನ್ನು ಅರಸುತ್ತ ಅಲೆಯತೊಡಗಿದ. ಆತ ಆಫ್ರಿಕದಲ್ಲೆಡೆ ಸಂಚರಿಸಿದರೂ ವಜ್ರ ದೊರೆಯಲಿಲ್ಲ. ವಜ್ರಕ್ಕಾಗಿ ಅರಸುತ್ತಾ ಸ್ಫೇನಿಗೆ ಅಲೆಯುತ್ತಾ…
