ಕೆಂಭಾವಿ: ಕೆಲಸಕ್ಕೆ ಸೇರಿದ ದಿನವೇ ನಮ್ಮ ವಿಶ್ರಾಂತಿ ದಿನ ನಿಗದಿಯಾಗಿರುತ್ತದೆ. ಸುರಕ್ಷಾಧಿಕಾರಿ ಕಾಶಿಬಾಯಿ ರಾಠೋಡ್ ಅವರ ವಿಶ್ರಾಂತಿ ಜೀವನ ಸುಖಕರವಾಗಿರಲಿ ಎಂದು ವೈದ್ಯಾಧಿಕಾರಿ ಡಾ. ಸಂಜಯ ಚಂದಾನವರ ಹೇಳಿದರು.
ಪಟ್ಟಣದ ಸಮೀಪದ ನಗನೂರ ಗ್ರಾಮದ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಪ್ರಾಥಮಿಕ ಆರೋಗ್ಯ ಸುರಕ್ಷಾಧಿಕಾರಿ ಆಗಿ ಸೇವೆ ಸಲ್ಲಿಸಿ ನಿವೃತ್ತಿ ಹೊಂದಿದ ಕಾಶಿಬಾಯಿ ರಾಠೋಡ್ ಅವರ ಬೀಳ್ಕೊಡುಗೆ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಗ್ರಾಮಕ್ಕೆ ಬಸ್ ಸೌಕರ್ಯ ಇಲ್ಲದಂತಹ ಸಂದರ್ಭದಲ್ಲಿ ಕಾಲ್ನಡಿಗೆಯಲ್ಲಿ ಹಳ್ಳಿಗಳಿಗೆ ಹೋಗಿ ಸೇವೆ ಸಲ್ಲಿಸಿದ್ದಾರೆ. ಅವರ ಸೇವೆ ಇತರರಿಗೆ ಮಾದರಿಯಾಗಿದೆ ಎಂದರು.
ಜಿಲ್ಲಾ ಪಂಚಾಯಿತಿ ಮಾಜಿ ಉಪಾಧ್ಯಕ್ಷ ಶಂಕ್ರಣ್ಣ ವಣಿಕ್ಯಾಳ ಮಾತನಾಡಿ, ಸೇವೆಯಲ್ಲಿ ಇದ್ದಷ್ಟು ದಿನ ವೃತ್ತಿಗೆ ಧಕ್ಕೆಯುಂಟು ಬಾರದಂತೆ ಕೆಲಸ ಮಾಡಿದಾಗ ಸಮಾಜದಲ್ಲಿ ಗೌರವ ಹೆಚ್ಚುತ್ತದೆ. ಕಾಶಿಬಾಯಿ ರಾಠೋಡ್ ಅವರು ತಮ್ಮ ಸೇವಾ ಅವಧಿಯ 38 ವರ್ಷಗಳ ಕಾಲ ಉತ್ತಮ ಸೇವೆ ಸಲ್ಲಿಸಿ ಎಲ್ಲರ ಮೆಚ್ಚುಗೆಗೆ ಪಾತ್ರರಾಗಿದ್ದಾರೆ ಎಂದು ಹೇಳಿದರು.
ಗ್ರಾಮ ಪಂಚಾಯಿತಿ ಮಾಜಿ ಅಧ್ಯಕ್ಷ ಹಳ್ಳೆಪ್ಪ ಹವಲ್ದಾರ
ರೈತ ಕೃಷಿ ಕಾರ್ಮಿಕ ಸಂಘಟನೆಯ ಜಿಲ್ಲಾಧ್ಯಕ್ಷ ಶರಣಗೌಡ ಗೂಗಲ್
ಡಾ. ಸುನೀಲ್ ಕುಮಾರ ಗಿಂಡಿ, ಕೆಂಭಾವಿ ವೈದ್ಯಾಧಿಕಾರಿ ಡಾ. ಗೀರೀಶ ಕುಲಕರ್ಣಿ, ಕರೇಪ್ಪ ದರ್ಶನಾಪುರ, ಮಾತನಾಡಿ ಶುಭಹಾರೈಸಿದರು.
ಪೂಜ್ಯ ಖಂಡಪ್ಪ ತಾತಾ, ವೀರಯ್ಯಸ್ವಾಮಿ ಸ್ಥಾವರಮಠ, ಸಾನಿಧ್ಯ ವಹಿಸಿದ್ದರು. ಗ್ರಾಮ ಪಂಚಾಯಿತಿ ಅಧ್ಯಕ್ಷ ಶಿವಶರಣರೆಡ್ಡಿ ಕೆಂಚಾಗೋಳ, ಮುಖಂಡರಾದ ಅಶೋಕ ಸಾಹು ಗೂಗಲ್, ಶರಣಪ್ಪ ದೇಶಪಾಂಡೆ, ಚನ್ನಾರೆಡ್ಡಿ ದೇಸಾಯಿ, ಡಾ. ಇಮ್ತಿಯಾಜ್ ಅಹ್ಮದ್, ಎಲ್‌ಎಚ್‌ವಿ ಉಮಾದೇವಿ, ಸಿಬ್ಬಂದಿಗಳಾದ ಸಮೀರ ಅಹ್ಮದ ಗುಂದಗಿ, ಬಸವರಾಜ ಚಬನೂರ, ರತ್ನಮ್ಮ ಕಂದಳ್ಳಿ, ಕುಸುಮಾವತಿ ಬಿರಾದಾರ, ಉಮಾ ರಾಠೋಡ್, ಅಬ್ದುಲ್ ಲತೀಫ್, ಸಂತೋಷ್ ರಾಠೋಡ್, ಪ್ರಕಾಶ ಬಿರಾದಾರ ಸೇರಿದಂತೆ ಇತರರಿದ್ದರು. ಡಾ. ಯಂಕನಗೌಡ ಪೊಲೀಸ್ ಪಾಟೀಲ ನಿರೂಪಿಸಿದರು. ಮಹ್ಮದ್ ಇಲಿಯಾಸ್ ವಡಕೇರಿ ಸ್ವಾಗತಿಸಿದರು. ಶಂಕರಗೌಡ ಬಿರಾದಾರ, ವಂದಿಸಿದರು.
Subscribe to Updates
Get the latest creative news from FooBar about art, design and business.
Related Posts
Add A Comment

