ಮುದ್ದೇಬಿಹಾಳ: ಮೊಹರಂ ಹಬ್ಬದಲ್ಲಿ ಶೆರೆ ಕುಡಿದು ದಾಂಧಲೆ ಮಾಡುವದು ಕಂಡು ಬಂದರೆ ಅಂಥವರ ಮೇಲೆ ಸೂಕ್ತ ಶಿಸ್ತು ಕ್ರಮ ಕೈಗೊಳ್ಳುವುದಾಗಿ ಇಲ್ಲಿನ ಕ್ರೈಂ ಪಿಎಸ್‌ಐ ಆರ್.ಎಲ್.ಮನ್ನಾಬಾಯಿ ಹೇಳಿದರು.
ಪಟ್ಟಣದ ಪೊಲೀಸ್ ಠಾಣೆಯಲ್ಲಿ ಮೊಹರಂ ಹಬ್ಬದ ಕುರಿತು ನಡೆದ ಶಾಂತಿ ಸಭೆಯಲ್ಲಿ ಅವರು ಮಾತನಾಡಿದರು.
ದೇವರು ಕೂರುವ ದಿನದಿಂದ ಕಳುಹಿಸಿ ಕೊಡುವ ದಿನದವರೆಗೂ ಗ್ರಾಮದ ಮುಖಂಡರು, ಹಿರಿಯರು ಹಬ್ಬವನ್ನು ಶಾಂತಿಯುತ ಮತ್ತು ಸೌಹಾರ್ದಯುತವಾಗಿ ಆಚರಿಸಿ ಯಾವುದೇ ಅಹಿತಕರ ಘಟನೆಗಳು ನಡೆಯದಂತೆ ಮುನ್ನೆಚ್ಚರಿಕೆ ವಹಿಸುವಂತೆ, ಅವಶ್ಯವಿದ್ದಲ್ಲಿ ಪೊಲೀಸ್ ಇಲಾಖೆಯ ಸಹಕಾರ ಕೋರುವಂತೆ ಸಲಹೆ ನೀಡಿದರು. ಹಬ್ಬದ ಕೊನೆಯ ದಿನವಾದ ದಪ್ಪನ ದಿನದಂದು ಸೂಕ್ತ ಬಂದೋಬಸ್ತ ನೀಡಲಿರುವದಾಗಿ ತಿಳಿಸಿದರು.
ಈ ವೇಳೆ ಕಸಾಪ ಅಧ್ಯಕ್ಷ ಕಾಮರಾಜ ಬಿರಾದಾರ, ಪುರಸಭೆ ಸದಸ್ಯ ಮಹೆಬೂಬ ಗೊಳಸಂಗಿ, ಎನ್‌ಎಸ್‌ಯುಐ ಪ್ರಧಾನ ಕಾರ್ಯದರ್ಶಿ ಸದ್ದಾಂ ಕುಂಟೋಜಿ, ಯುವ ಕಾಂಗ್ರೇಸ್ ಅಧ್ಯಕ್ಷ ರಫೀಕ ಶಿರೋಳ ಮತ್ತೀತರರು ಮಾತನಾಡಿ, ನಮ್ಮ ಪಟ್ಟಣ ಶಾಂತಿ ಮತ್ತು ಸೌಹಾರ್ಧಯುತೆಗೆ ಹೆಸರುವಾಸಿಯಾಗಿದೆ. ಇದುವರೆಗೆ ಯಾವುದೇ ಅಹಿತಕರ ಘಟನೆಗಳು ಸಂಭವಿಸಿಲ್ಲ. ಈ ಬಾರಿಯೂ ನಾವು ಯಾವುದೇ ಅಹಿತಕರ ಘಟನೆಗಳು ಸಂಭವಿಸದಂತೆ ಶಾಂತಿ ಮತ್ತು ಸೌಹಾರ್ಧಯುತವಾಗಿ ಹಬ್ಬವನ್ನು ಆಚರಿಸುತ್ತೇವೆ ಎಂದರು.
ಈ ವೇಳೆ ಪ್ರಮುಖರಾದ ಸಂಗಣ್ಣ ಮೇಲಿನಮನಿ, ರಾಮಣ್ಣ ಪೂಜಾರಿ, ಶಿವಣ್ಣ ಕಿರಶ್ಯಾಳ, ಹುಸೇನ ಮುಲ್ಲಾ, ಸದಾಶಿವ ಮಠ, ಶಿಕಂದರ ಜಾನ್ವೇಕರ, ತಿಪ್ಪಣ್ಣ ಮಾದರ, ಸಂಗಣ್ಣ ಮೇಲಿನಮನಿ, ಸಮೀರ ದ್ರಾಕ್ಷಿ, ಅಲ್ತಾಫ್ ಮುಲ್ಲಾ, ಐ.ಡಿ.ಮೋಮಿನ, ಬಸನಗೌಡ ಗೌಡರ, ಎಂ.ಎ.ಬನ್ನೆಟ್ಟಿ ಸೇರಿದಂತೆ ಮತ್ತೀತರರು ಇದ್ದರು.
Subscribe to Updates
Get the latest creative news from FooBar about art, design and business.
Related Posts
Add A Comment

