ದೇವರಹಿಪ್ಪರಗಿ: ತಾಲ್ಲೂಕು ಪಂಚಾಯಿತಿಯಲ್ಲಿ ಶನಿವಾರ ಸ್ವಚ್ಛತಾ ಅಭಿಯಾನಕ್ಕೆ ಇಓ ಭಾರತಿ ಚಲುವಯ್ಯ ಚಾಲನೆ ನೀಡಿದರು.
ಜಿಲ್ಲಾ ಪಂಚಾಯಿತಿ ಆದೇಶದ ಅನ್ವಯ ತಿಂಗಳ ಮೊದಲನೇ ಶನಿವಾರದಂದು ತಾಲ್ಲೂಕಿನ ಕಚೇರಿ ಒಳಗಡೆ ಮತ್ತು ಹೊರಗಡೆ ಸ್ವಚ್ಛತೆ ಕಾಪಾಡುವ ಹಿನ್ನೆಲೆಯಲ್ಲಿ ಸ್ವತ ಇಓ ಅವರು ಪೊರಕೆ ಹಿಡಿದು ಸಿಬ್ಬಂದಿಯೊಂದಿಗೆ ಕಚೇರಿ ಆವರಣವನ್ನು ಸ್ವಚ್ಛಗೊಳಿಸಿದರು.
ಈ ಸಂದರ್ಭದಲ್ಲಿ ಮಾತನಾಡಿದ ಇಓ ಭಾರತಿ ಚಲುವಯ್ಯ, ತಾಲ್ಲೂಕು ಕಚೇರಿ ಒಳಗೊಂಡಂತೆ ಗ್ರಾಮ ಪಂಚಾಯಿತಿಗಳಲ್ಲಿ ಸ್ವಚ್ಛತೆ ಕಾಪಾಡುವ ದೃಷ್ಟಿಯಿಂದ ಪ್ರತಿತಿಂಗಳ ಮೊದಲ ಶನಿವಾರ ೨ ಗಂಟೆಗಳ ಕಾಲ ಸ್ವಚ್ಛತಾ ಅಭಿಯಾನವನ್ನು ಹಮ್ಮಿಕೊಳ್ಳಲಾಗುತ್ತಿದೆ. ಕಾರ್ಯಾಲಯದ ಜನಸ್ನೇಹಿ ಕಚೇರಿ ವಾತಾವರಣ ನಿರ್ಮಿಸುವ ಹಿತದೃಷ್ಟಿಯಲ್ಲಿ ಮಾದರಿ ಕಚೇರಿಯನ್ನು ನಿರ್ಮಿಸುವುದು ಈ ಅಭಿಯಾನದ ಉದ್ದೇಶವಾಗಿದೆ. ಈಗಾಗಲೇ ತಾಲ್ಲೂಕಿನ ಎಲ್ಲಾ ಗ್ರಾಮ ಪಂಚಾಯಿತಿಗಳಲ್ಲಿ ಸ್ವಚ್ಛತಾ ಅಭಿಯಾನವನ್ನು ಹಮ್ಮಿಕೊಳ್ಳಲಾಗುತ್ತಿದೆ ಎಂದರು.
ಪಂಚಾಯತ ರಾಜ್ ಸಹಾಯಕ ನಿರ್ದೇಶಕ ಶಿವಾನಂದ ಮೂಲಿಮನಿ, ಗ್ರಾಮೀಣ ಉದ್ಯೋಗ ಖಾತ್ರಿ ಸಹಾಯಕ ನಿರ್ದೇಶಕ ಶಾಂತಗೌಡ ನ್ಯಾಮಣ್ಣವರ, ತಾಲ್ಲೂಕು ಯೋಜನಾಧಿಕಾರಿ ಶ್ರೀನಿವಾಸ ಪವಾರ, ವಿಷಯ ನಿರ್ವಾಹಕ ಜಿ.ಎಸ್.ರೋಡಗಿ, ಲೆಕ್ಕಾಧಿಕಾರಿ ಬೈರು ಮೂಲಿಮನಿ, ಐಇಸಿ ಸಂಯೋಜಕ ಸಿದ್ದು ಕಾಂಬಳೆ, ಕಿರಣ ಪಾಟೀಲ, ಆನಂದ ಮುದೋಡಗಿ, ಪರಶುರಾಮ ಗುಬ್ಬೇವಾಡ ಹಾಜರಿದ್ದರು.
Subscribe to Updates
Get the latest creative news from FooBar about art, design and business.
Related Posts
Add A Comment

