ವಿಜಯಪುರ: ಮಹಾನಗರ ಪಾಲಿಕೆಯ ಮಹಾಪೌರರಾದ ಮಹೇಜಬಿನ್ ಹೊರ್ತಿ, ಪಾಲಿಕೆ ಆಯುಕ್ತ ವಿಜಯಕುಮಾರ ಮೆಕ್ಕಳಕಿ ಸೇರಿದಂತೆ ವಿವಿಧ ಪಾಲಿಕೆಯ ಸದಸ್ಯರು ಶನಿವಾರ ಬೆಳಿಗ್ಗೆ ವಿಜಯಪುರ ನಗರದ ವಿವಿಧೆಡೆ ಪರಿವೀಕ್ಷಣೆ ನಡೆಸಿ, ನಗರದ ಸ್ವಚ್ಛತೆ ಹಾಗೂ ಅಭಿವೃದ್ದಿ ಕಾರ್ಯಗಳ ಪರಿಶೀಲನೆ ನಡೆಸಿದರು.
ಶನಿವಾರ ಬೆಳಿಗ್ಗೆ ನಗರದ ಗಾಂಧಿವೃತ್ತದಿಂದ ಪರಿವೀಕ್ಷಣೆ ಆರಂಭಿಸಿದ ಅವರು, ಲಾಲಬಹಾದ್ದೂರ ಶಾಸ್ತ್ರೀ ಮಾರುಕಟ್ಟೆ ಹಾಗೂ ನೆಹರು ಮಾರುಕಟ್ಟೆಯಲ್ಲಿ ಕೆಲವೊಂದು ಉದ್ದಿಮೆದಾರರು ಅಂಗಡಿಯ ಮುಂಭಾಗದಲ್ಲಿ ಅತಿಕ್ರಮಣ ಮಾಡಿರುವುದನ್ನು ಕಂಡು, ಕೂಡಲೇ ಅತಿಕ್ರಮಣವಾದ ಜಾಗವನ್ನು ತೆರವುಗೊಳಿಸುವಂತೆ ಸೂಚಿಸಲಾಯಿತು.
ನಗರದ ಕೆ.ಸಿ.ಮಾರುಕಟ್ಟೆಯಿಂದ ಟಿಪ್ಪುಸುಲ್ತಾನ್ ವೃತ್ತ ಮಾರ್ಗವಾಗಿ ನವಬಾಗ ಪ್ರದೇಶದಲ್ಲಿ ನಡೆದಿರುವ ರಸ್ತೆ ಕಾಮಗಾರಿಯನ್ನು ಪರಿಶೀಲಿಸಿದ ಅವರು, ಕಾಮಗಾರಿಯನ್ನು ತುರ್ತಾಗಿ ಪೂರ್ಣಗೊಳಿಸಿ ಸಾರ್ವಜನಿಕರಿಗೆ ಅನುಕೂಲ ಕಲ್ಪಿಸಬೇಕು. ನಂತರ ಕೇಂದ್ರ ಬಸ್ ನಿಲ್ದಾಣಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ ಅವರು, ಸುತ್ತಮುತ್ತಲಿನ ಪ್ರದೇಶದಲ್ಲಿ ಸ್ವಚ್ಛತೆಯನ್ನು ಕಾಪಾಡಲು ಸೂಚನೆ ನೀಡಿದ ಅವರು, ನಗರದ ಸೌಂದರ್ಯಕ್ಕಾಗಿ ನಗರದಾದ್ಯಂತೆ ಸ್ವಚ್ಛತೆಗೆ ಆದ್ಯತೆ ನೀಡಿ ಅಭಿವೃದ್ದಿ ಕಾರ್ಯಗಳನ್ನು ಕೈಗೊಂಡು ಸ್ವಚ್ಛ ಹಾಗೂ ಸುಂದರ ನಿರ್ಮಾಣಕ್ಕಾಗಿ ಕ್ರಮ ವಹಿಸಲಾಗುವುದು ಎಂದು ಅವರು ಹೇಳಿದರು.
ಇದೇ ಸಂದರ್ಭದಲ್ಲಿ ನಗರದ ಕೇಂದ್ರ ಬಸ್ ನಿಲ್ದಾಣದ ಹತ್ತಿರದ ಮುಖ್ಯ ರಸ್ತೆಯ ಬದಿಯಲ್ಲಿ ಸಸಿನೆಗಳನ್ನು ನೆಡಲಾಯಿತು. ಮಹಾನಗರ ಪಾಲಿಕೆಯ ವಿವಿಧ ಸದಸ್ಯರು, ಪಾಲಿಕೆ ಅಧಿಕಾರಿ, ಸಿಬ್ಬಂದಿ ಉಪಸ್ಥಿತರಿದ್ದರು.
Subscribe to Updates
Get the latest creative news from FooBar about art, design and business.
ಪಾಲಿಕೆ ಮಹಾಪೌರ & ಆಯುಕ್ತರಿಂದ ಸ್ವಚ್ಛತೆ-ಅಭಿವೃದ್ದಿ ಕಾರ್ಯಗಳ ಪರಿಶೀಲನೆ
Related Posts
Add A Comment

