ವಿಜಯಪುರ: ಮಹರಾಷ್ಟ್ರದ ಫಂಡರಪುರದಲ್ಲಿ ದಿನಾಂಕ ೧೪-೭-೨೦೨೪ರಿಂದ ೨೭-೦೭-೨೦೨೪ರವರೆಗೆ ನಡೆಯುವ ಜರಗುವ ಆಷಾಢ ಏಕಾದಶಿ ಜಾತ್ರೆಯ ಅಂಗವಾಗಿ ಜಿಲ್ಲೆಯ ಯಾತ್ರಾರ್ಥಿಗಳಿಗೆ ಉತ್ತಮ ಸಾರಿಗೆ ಸೌಲಭ್ಯ ಕಲ್ಪಿಸುವ ದೃಷ್ಟಿಯಿಂದ ಕಲ್ಯಾಣ ಕರ್ನಾಟಕ ರಸ್ತೆ ಸಾರಿಗೆ ನಿಗಮದ ವಿಜಯಪುರ ವಿಭಾಗದ ವಿಜಯಪುರ, ಇಂಡಿ, ಸಿಂದಗಿ, ತಾಳಿಕೋಟೆ, ಮುದ್ದೇಬಿಹಾಳ, ಬಸವನ ಬಾಗೇವಾಡಿ ಘಟಕದ ಕೇಂದ್ರ ನಿಲ್ದಾಣದಿಂದ ವಿಶೇಷ ಸಾರಿಗೆ ಕಾರ್ಯಾಚರಣೆ ಮಾಡಲಾಗುವುದು. ಒಂದೇ ಗುಂಪಿನಿಂದ ಪ್ರಯಾಣಿಸುವ ಕನಿಷ್ಟ ೪೭ ಜನ ಪ್ರಯಾಣಿಕರು ಲಭ್ಯವಾದಲ್ಲಿ ಅವರ ಸ್ವ-ಸ್ಥಳದಿಂದಲೇ ನೇರವಾಗಿ ಫಂಡರಾಪುರಕ್ಕೆ ಬಸ್ಸಿನ ವ್ಯವಸ್ಥೆ ಕಲ್ಪಿಸಲಾಗುವುದು.
ಪ್ರಯಾಣಿಕರು ಸಾರಿಗೆ ಸೌಲಭ್ಯ ಹಾಗೂ ಹೆಚ್ಚಿನ ಮಾಹಿತಿಗಾಗಿ ವಿಭಾಗಿಯ ಸಾರಿಗೆ ಅಧಿಕಾರಿ ೭೭೬೦೯೯೨೨೫೨, ೭೭೬೦೯೯೨೨೬೩(ವಿಜಯಪುರ ಘಟಕ ೧), ೭೭೬೦೯೯೨೨೬೪(ವಿಜಯಪುರ ಘಟಕ ೨), ೭೭೬೦೯೯೨೨೬೫(ಇಂಡಿ), ೭೭೬೦೯೯೨೨೬೭(ಮುದ್ದೇಬಿಹಾಳ), ೭೭೬೦೯೯೨೨೬೯(ಬಸವನ ಬಾಗೇವಾಡಿ), ೭೭೬೦೯೯೨೨೬೬(ಸಿಂದಗಿ), ೭೭೬೦೯೯೨೨೬೮(ತಾಳಿಕೋಟೆ) ಕೇಂದ್ರ ಬಸ್ ನಿಲ್ದಾಣ ವಿಜಯಪುರದ ದೂ. ೦೮೩೫೨-೨೫೧೩೪೪, ಮೊ.೧೧೬೦೯೯೨೨೫೮ಕ್ಕೆ ಮಾಡಬಹುದು ಎಂದು ವಿಜಯಪುರ ಕಕರಸ ನಿಗಮದ ವಿಭಾಗೀಯ ನಿಯಂತ್ರಣಾಧಿಕಾರಿಗಳ ಪ್ರಕಟಣೆ ತಿಳಿಸಿದೆ.
Subscribe to Updates
Get the latest creative news from FooBar about art, design and business.
Related Posts
Add A Comment
