Close Menu
  • ಮುಖಪುಟ
  • (ರಾಜ್ಯ ) ಜಿಲ್ಲೆ
  • ವಿಶೇಷ ಲೇಖನ
  • ಸಾಹಿತ್ಯ
  • ಆರೋಗ್ಯ
  • ಚಿಂತನ
  • ಪ್ರೇಮಲೋಕ
  • ದಿನಪತ್ರಿಕೆ
  • ಸಂಪರ್ಕಿಸಿ

Subscribe to Updates

Get the latest creative news from FooBar about art, design and business.

What's Hot

ಆಲಮಟ್ಟಿ ಡ್ಯಾಂನಿಂದ ೬೭,೫೦೦ ಕ್ಯೂಸೆಕ್ ನೀರು ಬಿಡುಗಡೆ

ಕೊಲ್ಹಾರದಲ್ಲಿ ಆಧಾರ್ ಸೇವೆ ಸ್ಥಗಿತ: ಸಾರ್ವಜನಿಕರ ಪರದಾಟ

ನೀಟ್ ಪರೀಕ್ಷೆ ವಿರೋಧಿ ಪ್ರತಿಭಟನೆಗೆ ಡಿಎಸ್ಸೆಸ್ ಬೆಂಬಲ

Facebook X (Twitter) Instagram
  • ಮುಖಪುಟ
  • (ರಾಜ್ಯ ) ಜಿಲ್ಲೆ
  • ವಿಶೇಷ ಲೇಖನ
  • ಸಾಹಿತ್ಯ
  • ಆರೋಗ್ಯ
  • ಚಿಂತನ
  • ಪ್ರೇಮಲೋಕ
  • ದಿನಪತ್ರಿಕೆ
  • ಸಂಪರ್ಕಿಸಿ
Facebook X (Twitter) Instagram YouTube WhatsApp
udayarashminews.comudayarashminews.com
  • ಮುಖಪುಟ
  • (ರಾಜ್ಯ ) ಜಿಲ್ಲೆ
  • ವಿಶೇಷ ಲೇಖನ
  • ಸಾಹಿತ್ಯ
  • ಆರೋಗ್ಯ
  • ಚಿಂತನ
  • ಪ್ರೇಮಲೋಕ
  • ದಿನಪತ್ರಿಕೆ
  • ಸಂಪರ್ಕಿಸಿ
udayarashminews.comudayarashminews.com
Home»(ರಾಜ್ಯ ) ಜಿಲ್ಲೆ»ಆಲಮಟ್ಟಿ ಡ್ಯಾಂನಿಂದ ೬೭,೫೦೦ ಕ್ಯೂಸೆಕ್ ನೀರು ಬಿಡುಗಡೆ
(ರಾಜ್ಯ ) ಜಿಲ್ಲೆ

ಆಲಮಟ್ಟಿ ಡ್ಯಾಂನಿಂದ ೬೭,೫೦೦ ಕ್ಯೂಸೆಕ್ ನೀರು ಬಿಡುಗಡೆ

By No Comments2 Mins Read
Facebook Twitter Pinterest LinkedIn Telegram WhatsApp
Share
Facebook Twitter LinkedIn Email Telegram WhatsApp

ಮಹಾರಾಷ್ಟ್ರದಲ್ಲಿ ವರುಣನ ಅಬ್ಬರ | ಈ ವರ್ಷ ಮೊದಲ ಬಾರಿ ೧೪ ಗೇಟ್ ತೆರೆದು ನೀರು ಹರಿಬಿಡುವಿಕೆ | ನದಿ ತೀರಕ್ಕೆ ಜನ-ಜಾನುವಾರು ಸುಳಿಯದಂತೆ ಸೂಚನೆ

ಉದಯರಶ್ಮಿ ದಿನಪತ್ರಿಕೆ

ಆಲಮಟ್ಟಿ: ಒಳಹರಿವು ಹೆಚ್ಚಳದ ಹಿನ್ನೆಲೆಯಲ್ಲಿ ಈ ವರ್ಷದಲ್ಲಿ ಮೊದಲ ಬಾರಿಗೆ ಆಲಮಟ್ಟಿ ಜಲಾಶಯದ ೧೪ ಗೇಟ್‌ಗಳನ್ನು ಶುಕ್ರವಾರದಿಂದ ತೆರೆದು ಕೃಷ್ಣಾ ನದಿ ಪಾತ್ರಕ್ಕೆ ನೀರು ಬಿಡಲಾಗುತ್ತಿದೆ.
ಜಲಾಶಯದ ಬಲಭಾಗದ ಆಲಮಟ್ಟಿ ವಿದ್ಯುತ್ ಉತ್ಪಾದನಾ ಘಟಕದ ಮೂಲಕ ೪೨,೫೦೦ ಕ್ಯೂಸೆಕ್ ಮತ್ತು ಗೇಟ್‌ಗಳ ಮೂಲಕ ೨೫,೦೦೦ ಕ್ಯೂಸೆಕ್ ಸೇರಿ ಒಟ್ಟು ೬೭,೫೦೦ ಕ್ಯೂಸೆಕ್ ನೀರನ್ನು ಹೊರಬಿಡಲಾಗುತ್ತಿದೆ.
ಗುರುವಾರ ೪೨,೫೦೦ ಕ್ಯೂಸೆಕ್ ಇದ್ದ ಹೊರಹರಿವನ್ನು ಶುಕ್ರವಾರ ಬೆಳಿಗ್ಗೆ ೮ ಗಂಟೆಗೆ ಹೆಚ್ಚಿಸಲಾಯಿತು.
ಗರಿಷ್ಠ ೫೧೯.೬೦ ಮೀಟರ್ ಎತ್ತರದಲ್ಲಿ ೧೨೩.೦೮೧ ಟಿಎಂಸಿ ನೀರು ಸಂಗ್ರಹಣಾ ಸಾಮರ್ಥ್ಯದ ಜಲಾಶಯದಲ್ಲಿ ಶುಕ್ರವಾರ ೫೧೮.೬೦ ಮೀಟರ್ ಎತ್ತರದಲ್ಲಿ ಒಟ್ಟು ೧೦೬.೩೨ ಟಿಎಂಸಿ ನೀರು ಸಂಗ್ರಹವಾಗಿತ್ತು. ಒಳಹರಿವು ೭೩,೧೬೨ ಕ್ಯೂಸೆಕ್ ಇತ್ತು.
ಮಹಾರಾಷ್ಟ್ರದಲ್ಲಿ ಮಳೆ
ಮಹಾರಾಷ್ಟ್ರದ ಪಶ್ಚಿಮ ಘಟ್ಟಗಳಲ್ಲಿ ವರುಣನ ಅಬ್ಬರ ಮುಂದುವರೆದಿದೆ. ಕೊಯ್ನಾ ೭೭ ಮಿ.ಮೀ, ನವಜಾ ೬೬ ಮಿ.ಮೀ, ಮಹಾಬಳೇಶ್ವರ ೭೮ ಮಿ.ಮೀ, ರಾಧಾನಗರಿ ೨೪ ಮಿ.ಮೀ, ಧೂದಗಂಗಾ ೪೮ ಮಿ.ಮೀ ಮಳೆಯಾಗಿದೆ. ಗುರುವಾರಕ್ಕಿಂತ ಶುಕ್ರವಾರ ಮಳೆಯ ಪ್ರಮಾಣ ಕಡಿಮೆಯಾಗಿದೆ.
ಕೃಷ್ಣಾ ನದಿಗೆ ಅಪಾರ ಪ್ರಮಾಣದ ನೀರು ಹರಿದು ಬರುತ್ತಿದೆ. ಕಲ್ಲೋಳ ಬ್ಯಾರೇಜ್‌ನಿಂದ ಹೆಚ್ಚಿನ ನೀರನ್ನು ಕೃಷ್ಣಾ ನದಿಗೆ ಹರಿಸುತ್ತಿರುವುದರಿಂದ ಆಲಮಟ್ಟಿ ಜಲಾಶಯಕ್ಕೆ ಒಳಹರಿವಿನ ಪ್ರಮಾಣ ಅಧಿಕವಾಗಿದೆ.
ಹವಾಮಾನ ಇಲಾಖೆಯ ಮುನ್ಸೂಚನೆ ಮತ್ತು ಮೇಲ್ಭಾಗದ ಜಲಾನಯನ ಪ್ರದೇಶದಲ್ಲಿ ಸುರಿಯುತ್ತಿರುವ ಮಳೆಯನ್ನು ಪರಿಗಣಿಸಿದರೆ, ಮುಂದಿನ ದಿನಗಳಲ್ಲಿ ಜಲಾಶಯಕ್ಕೆ ಒಳಹರಿವು ಇನ್ನಷ್ಪು ಹೆಚ್ಚುವ ಸಾಧ್ಯತೆ ಇದೆ. ಈ ಹಿನ್ನೆಲೆಯಲ್ಲಿ ಪರಿಸ್ಥಿತಿಗೆ ಅನುಗುಣವಾಗಿ ನೀರಿನ ಹೊರಹರಿವಿನ ಪ್ರಮಾಣವನ್ನು ಅಗತ್ಯವಿದ್ದರೆ ಮತ್ತಷ್ಟು ಪರಿಷ್ಕರಿಸಲಾಗುವುದು ಎಂದು ಅಧಿಕಾರಿಗಳು ತಿಳಿಸಿದ್ದಾರೆ.

೨೭೦ ಮೆಗಾವ್ಯಾಟ್ ವಿದ್ಯುತ್ ಉತ್ಪಾದನೆ

ಜಲಾಶಯದ ಬಲಭಾಗದ ಆಲಮಟ್ಟಿ ವಿದ್ಯುತ್ ಉತ್ಪಾದನಾ ಘಟಕದಲ್ಲಿ ಎಲ್ಲಾ ೬ ಘಟಕಗಳ ಮೂಲಕ ೨೭೦ ಮೆಗಾವ್ಯಾಟ್ ವಿದ್ಯುತ್ ಉತ್ಪಾದನೆಯಾಗುತ್ತಿದೆ ಎಂದು ಕೆಪಿಸಿಎಲ್ ಮೂಲಗಳು ತಿಳಿಸಿವೆ.

ನದಿ ತೀರಕ್ಕೆ ಜನ-ಜಾನುವಾರು ಸುಳಿಯದಂತೆ ಸೂಚನೆ

ಜಲಾಶಯದಿಂದ ಹೆಚ್ಚಿನ ಪ್ರಮಾಣದಲ್ಲಿ ನೀರು ಬಿಡುಗಡೆ ಮಾಡುತ್ತಿರುವುದರಿಂದ ಆಲಮಟ್ಟಿಯಿಂದ ಕೆಳಭಾಗದ ಕೃಷ್ಣಾ ನದಿಪಾತ್ರದ ಗ್ರಾಮಗಳ ನಿವಾಸಿಗಳು, ರೈತರು, ಮೀನುಗಾರರು ಮತ್ತು ಸಾರ್ವಜನಿಕರು ನದಿಯ ದಡಕ್ಕೆ ಅನಗತ್ಯವಾಗಿ ತೆರಳದಂತೆ, ಜಾನುವಾರುಗಳನ್ನು ನದಿಗೆ ಇಳಿಸದಂತೆ ಹಾಗೂ ಮಕ್ಕಳನ್ನು ನದಿಯ ಸಮೀಪ ಬಿಡದಂತೆ ಜಲಾಶಯ ಆಡಳಿತ ಮನವಿ ಮಾಡಿದೆ.
ಸಂಬಂಧಿಸಿದ ತಾಲ್ಲೂಕು ಮತ್ತು ಗ್ರಾಮ ಮಟ್ಟದ ಅಧಿಕಾರಿಗಳು ಸಾರ್ವಜನಿಕರಿಗೆ ಮುನ್ನೆಚ್ಚರಿಕೆ ನೀಡುವಂತೆ ಸೂಚಿಸಲಾಗಿದೆ. ನದಿ ತೀರಕ್ಕೆ ಜನ-ಜಾನುವಾರು ಸುಳಿಯದಂತೆ ಡಂಗೂರ ಸಾರುವುದು ಮತ್ತು ಧ್ವನಿವರ್ಧಕ ಮೂಲಕ ಜನರನ್ನು ಎಚ್ಚರಿಸಲಾಗುತ್ತಿದೆ.

“ಜಲಾಶಯದಿಂದ ೪ ಲಕ್ಷ ಕ್ಯೂಸೆಕ್‌ಗಿಂತ ಹೆಚ್ಚಿನ ಪ್ರಮಾಣದಲ್ಲಿ ನೀರು ಹರಿಬಿಟ್ಟಾಗ ಮಾತ್ರ ತಾಲ್ಲೂಕಿನ ಮಸೂತಿ ಗ್ರಾಮದ ಜನವಸತಿ ಪ್ರದೇಶಕ್ಕೆ ಸ್ವಲ್ಪ ನೀರು ಬರುತ್ತದೆ. ಉಳಿದಂತೆ ತಾಲ್ಲೂಕಿನ ಯಾವುದೇ ಜನವಸತಿ ಪ್ರದೇಶಗಳಿಗೆ ನೀರು ನುಗ್ಗುವುದಿಲ್ಲ. ಮುಂಜಾಗ್ರತೆ ಕ್ರಮವಾಗಿ ಈಜುಗಾರರು, ಉರಗ ತಜ್ಞರು, ಸುಸಜ್ಜಿತ ಬೋಟ್‌ಗಳನ್ನು ಗುರುತು ಮಾಡಿಟ್ಟುಕೊಳ್ಳಲಾಗಿದೆ.”

– ಎ.ಡಿ. ಅಮರಾವದಗಿ
ತಹಶೀಲ್ದಾರ್

ಆಲಮಟ್ಟಿ ಜಲಾಶಯದ ನೀರಿನ ಮಾಹಿತಿ

  • ಗರಿಷ್ಠ ಸಾಮರ್ಥ್ಯ: ೧೨೩.೦೮೧ ಟಿಎಂಸಿ
  • ಇಂದಿನ ಸಂಗ್ರಹ: ೧೦೬.೩೨೩ ಟಿಎಂಸಿ
  • ಗರಿಷ್ಠ ಎತ್ತರ: ೫೧೯.೬೦ ಮೀ.
  • ಇಂದಿನ ಮಟ್ಟ: ೫೧೮.೬೦ ಮೀ.
  • ಒಳಹರಿವು: ೭೩,೧೬೨ ಕ್ಯೂಸೆಕ್
  • ಹೊರಹರಿವು: ೬೭,೫೦೦ ಕ್ಯೂಸೆಕ್

BIJAPUR NEWS public public news udaya rashmi Udayarashmi today newspaper udayarashminews.com
Share. Facebook Twitter Pinterest Email Telegram WhatsApp
  • Website

Related Posts

ಕೊಲ್ಹಾರದಲ್ಲಿ ಆಧಾರ್ ಸೇವೆ ಸ್ಥಗಿತ: ಸಾರ್ವಜನಿಕರ ಪರದಾಟ

ನೀಟ್ ಪರೀಕ್ಷೆ ವಿರೋಧಿ ಪ್ರತಿಭಟನೆಗೆ ಡಿಎಸ್ಸೆಸ್ ಬೆಂಬಲ

ಕಾಂಗ್ರೆಸ್ ಸರ್ಕಾರದ ದಬ್ಬಾಳಿಕೆ ತಡೆಗೆ ಆಗ್ರಹಿಸಿ ಬಿಜೆಪಿ ಪ್ರತಿಭಟನೆ

13 ವರ್ಷ ಕಳೆದರೂ ನೀರಿಲ್ಲ: ಚಿಕ್ಕಲಕಿ ಕ್ರಾಸ್‌ನಲ್ಲಿ ರೈತರ ಆಕ್ರೋಶ ಸ್ಫೋಟ

Add A Comment
Leave A Reply Cancel Reply

Categories
  • (ರಾಜ್ಯ ) ಜಿಲ್ಲೆ
  • Helldivers
  • Typora
  • Uncategorized
  • Wemod
  • ಆರೋಗ್ಯ
  • ಇತರೆ
  • ಕಾವ್ಯರಶ್ಮಿ
  • ಚಿಂತನ
  • ದಿನಪತ್ರಿಕೆ
  • ಪುಸ್ತಕ ಪರಿಚಯ
  • ಪ್ರೇಮಲೋಕ
  • ಭಾವರಶ್ಮಿ
  • ರಾಷ್ಚ್ರ
  • ವಿಜಯಪುರ
  • ವಿದ್ಯಾರ್ಥಿ ನಿಧಿ
  • ವಿಶೇಷ ಲೇಖನ
  • ಸಾಹಿತ್ಯ
  • ಸಿನಿಮಾ
  • ಹೊತ್ತಿಗೆ ಹೊರಣ
Recent Posts
  • ಆಲಮಟ್ಟಿ ಡ್ಯಾಂನಿಂದ ೬೭,೫೦೦ ಕ್ಯೂಸೆಕ್ ನೀರು ಬಿಡುಗಡೆ
    In (ರಾಜ್ಯ ) ಜಿಲ್ಲೆ
  • ಕೊಲ್ಹಾರದಲ್ಲಿ ಆಧಾರ್ ಸೇವೆ ಸ್ಥಗಿತ: ಸಾರ್ವಜನಿಕರ ಪರದಾಟ
    In (ರಾಜ್ಯ ) ಜಿಲ್ಲೆ
  • ನೀಟ್ ಪರೀಕ್ಷೆ ವಿರೋಧಿ ಪ್ರತಿಭಟನೆಗೆ ಡಿಎಸ್ಸೆಸ್ ಬೆಂಬಲ
    In (ರಾಜ್ಯ ) ಜಿಲ್ಲೆ
  • ಕಾಂಗ್ರೆಸ್ ಸರ್ಕಾರದ ದಬ್ಬಾಳಿಕೆ ತಡೆಗೆ ಆಗ್ರಹಿಸಿ ಬಿಜೆಪಿ ಪ್ರತಿಭಟನೆ
    In (ರಾಜ್ಯ ) ಜಿಲ್ಲೆ
  • 13 ವರ್ಷ ಕಳೆದರೂ ನೀರಿಲ್ಲ: ಚಿಕ್ಕಲಕಿ ಕ್ರಾಸ್‌ನಲ್ಲಿ ರೈತರ ಆಕ್ರೋಶ ಸ್ಫೋಟ
    In (ರಾಜ್ಯ ) ಜಿಲ್ಲೆ
  • ಬಿಎಲ್ಡಿಇ ಎಸ್.ಎಸ್.ಎಂ ಕಾಲೇಜ‌ ಆಫ್ ಫಾರ್ಮಸಿಗೆ ೨ನೇ ಸ್ಥಾನ
    In (ರಾಜ್ಯ ) ಜಿಲ್ಲೆ
  • ಜು.೨೭ ರಂದು ಡಾ.ಹಳಕಟ್ಟಿ, ಬಂಥನಾಳ ಶ್ರೀ & ಬಂಗಾರಮ್ಮ ಸ್ಮರಣೆ ಕಾರ್ಯಕ್ರಮ
    In (ರಾಜ್ಯ ) ಜಿಲ್ಲೆ
  • ಯುವಕರನ್ನು ಕೆಣಕಿದವರಾರೂ ಉದ್ಧಾರವಾಗಿಲ್ಲ :ಎಂಎಲ್ಸಿ ಸುನೀಲಗೌಡ
    In (ರಾಜ್ಯ ) ಜಿಲ್ಲೆ
  • ಯುವಕರ ನ್ಯಾಯಯುತ ಹೋರಾಟ ಗೌರವಿಸಿ :ಬಬಲೇಶ್ವರ
    In (ರಾಜ್ಯ ) ಜಿಲ್ಲೆ
  • ಮಕ್ಕಳಲ್ಲಿ ಒಳ್ಳೆಯ ಅಭ್ಯಾಸಗಳ ರೂಢಿ
    In ವಿಶೇಷ ಲೇಖನ
Editors Picks
Top Reviews
udayarashminews.com
Facebook X (Twitter) Instagram Pinterest Vimeo YouTube
  • ಮುಖಪುಟ
  • (ರಾಜ್ಯ ) ಜಿಲ್ಲೆ
  • ವಿಶೇಷ ಲೇಖನ
  • ಸಾಹಿತ್ಯ
  • ಆರೋಗ್ಯ
  • ಚಿಂತನ
  • ಪ್ರೇಮಲೋಕ
  • ದಿನಪತ್ರಿಕೆ
  • ಸಂಪರ್ಕಿಸಿ
© 2026 udayarashminews.com. Designed by udayarashmi news .

Type above and press Enter to search. Press Esc to cancel.