ದೇವರಹಿಪ್ಪರಗಿ: ಶಿಕ್ಷಣತಜ್ಞ ಹಾಗೂ ಜನಸಂಘದ ಸ್ಥಾಪಕ ಶ್ಯಾಮ್‌ಪ್ರಸಾದ್ ಮುಖರ್ಜಿ ಅವರ ಜಯಂತಿ ಅಂಗವಾಗಿ ಬಿಜೆಪಿ ಕಾರ್ಯಕರ್ತರು ಹಾಗೂ ಮಂಡಲ ಯುವಮೋರ್ಚಾ ಪದಾಧಿಕಾರಿಗಳು ಅವರ ಭಾವಚಿತ್ರಕ್ಕೆ ಪೂಜೆ ಸಲ್ಲಿಸಿ ನಂತರ ಸಸಿಗಳನ್ನು ನೆಟ್ಟು ನೀರುಣಿಸಿದರು.
ಪಟ್ಟಣದ ಇಂಡಿ ರಸ್ತೆಯಲ್ಲಿನ ರೇಣುಕಾಚಾರ್ಯ ಮಂದಿರ ಆವರಣದಲ್ಲಿ ಸೇರಿದ ಬಿಜೆಪಿ ಕಾರ್ಯಕರ್ತರು ಜಿಲ್ಲಾ ಕಾರ್ಯದರ್ಶಿ ರಮೇಶ ಮಸಬಿನಾಳ ಹಾಗೂ ತಾಲ್ಲೂಕು ಜಂಗಮಾಭಿವೃದ್ಧಿ ಸಂಘದ ಅಧ್ಯಕ್ಷ ಸೋಮಶೇಖರ ಹಿರೇಮಠ ನೇತೃತ್ವದಲ್ಲಿ ಶ್ಯಾಮ್‌ಸುಂದರ್ ಮುಖರ್ಜಿ ಅವರ ಭಾವಚಿತ್ರಕ್ಕೆ ಮಾಲಾರ್ಪಣೆಗೈದು ಪೂಜೆ ಸಲ್ಲಿಸಿದರು.
ನಂತರ ದೇವಸ್ಥಾನದ ಆವರಣದಲ್ಲಿ ಸಸಿಗಳನ್ನು ನೆಟ್ಟು ನೀರುಣಿಸಿದರು.
ಬಿಜೆಪಿ ಯುವಮೋರ್ಚಾ ಉಪಾಧ್ಯಕ್ಷ ಕಲ್ಮೇಶ ಬುದ್ನಿ, ಪ್ರಧಾನ ಕಾರ್ಯದರ್ಶಿ ಶಿವರಾಜ್ ತಳವಾರ, ಹಿಂದುಳಿದ ವರ್ಗಗಳ ಮೋರ್ಚಾ ಪ್ರಧಾನ ಕಾರ್ಯದರ್ಶಿ ರಮೇಶ ಈಳಗೇರ, ರಾವುತ ಅಗಸರ, ಸೋಮು ದೇವೂರ, ಚಂದ್ರಶೇಖರ ದಾನಗೊಂಡ, ಶ್ರೀಶೈಲ ಯಂಭತ್ನಾಳ, ಚಿದಾನಂದ ಕುಂಬಾರ, ಮಹಾಂತೇಶ ಬಿರಾದಾರ, ಬಾಪುಗೌಡ ಪಾಟೀಲ ಇದ್ದರು.
Subscribe to Updates
Get the latest creative news from FooBar about art, design and business.
Related Posts
Add A Comment

