Author: editor.udayarashmi@gmail.com

ಪತ್ರಕರ್ತರ ಮಕ್ಕಳಿಗೆ ಪ್ರತಿಭಾ ಪುರಸ್ಕಾರ | ಪತ್ರಕರ್ತರಿಗೆ ವಾರ್ಷಿಕ ಪ್ರಶಸ್ತಿ ಪ್ರದಾನ ವಿಜಯಪುರ: ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ಜಿಲ್ಲಾ ಘಟಕ ಹಾಗೂ ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ ಸಹಯೋಗದಲ್ಲಿ ಪತ್ರಿಕಾ ದಿನಾಚರಣೆ, ಪ್ರತಿಭಾ ಪುರಸ್ಕಾರ ಹಾಗೂ ಪತ್ರಕರ್ತರಿಗೆ ವಾರ್ಷಿಕ ಪ್ರಶಸ್ತಿ ಪ್ರದಾನ ಸಮಾರಂಭ ಜು. ೨೮ರಂದು ಮಧ್ಯಾಹ್ನ ೩ ಗಂಟೆಗೆ ನಗರದ ಪೊಲೀಸ್ ಕವಾಯತು ಮೈದಾನ ಎದುರಿಗಿರುವ ಪೊಲೀಸ್ ಸಮುದಾಯ ಭವನದಲ್ಲಿ ನಡೆಯಲಿದೆ.ಬೃಹತ್ ಕೈಗಾರಿಕೆ, ಮೂಲಸೌಲಭ್ಯ ಅಭಿವೃದ್ಧಿ ಸಚಿವ ಎಂ.ಬಿ. ಪಾಟೀಲ ಕಾರ್ಯಕ್ರಮ ಉದ್ಘಾಟಿಸುವರು. ಜವಳಿ, ಕಬ್ಬು ಅಭಿವೃದ್ಧಿ, ಸಕ್ಕರೆ ಮತ್ತು ಎಪಿಎಂಸಿ ಸಚಿವ ಶಿವಾನಂದ ಪಾಟೀಲ ಪತ್ರಕರ್ತರ ಮಕ್ಕಳಿಗೆ ಪ್ರತಿಭಾ ಪುರಸ್ಕಾರ ನೀಡಿ ಗೌರವಿಸುವರು.ನಗರ ಶಾಸಕ ಬಸನಗೌಡ ಪಾಟೀಲ ಯತ್ನಾಳ ಪತ್ರಕರ್ತರಿಗೆ ವಾರ್ಷಿಕ ಪ್ರಶಸ್ತಿ ಪ್ರದಾನ ಮಾಡುವರು.ಈ ಸಮಾರಂಭಕ್ಕೆ ವಿಶೇಷ ಆಹ್ವಾನಿತರಾಗಿ ಮುಖ್ಯಮಂತ್ರಿ ಮಾಧ್ಯಮ ಸಲಹೆಗಾರ ಕೆ.ವಿ. ಪ್ರಭಾಕರ್ ಹಾಗೂ ಸಂಘದ ರಾಜ್ಯಾಧ್ಯಕ್ಷ ಶಿವಾನಂದ ತಗಡೂರ ಆಗಮಿಸುವರು.ಸಂಘದ ಜಿಲ್ಲಾಧ್ಯಕ್ಷ ಸಂಗಮೇಶ ಟಿ. ಚೂರಿ ಅಧ್ಯಕ್ಷತೆ ವಹಿಸುವ ಈ…

Read More

ಬಾಬಾನಗರ ಹಾಗೂ ಬಿಜ್ಜರಗಿ ಗ್ರಾಪಂಗೆ ಭೇಟಿ ನೀಡಿದ ಜಿಪಂ ಸಿಇಒ ರಿಷಿ ಆನಂದ ಸೂಚನೆ ವಿಜಯಪುರ: ತಿಕೋಟಾ ತಾಲೂಕಿನ ಬಾಬಾನಗರ ಮತ್ತು ಬಿಜ್ಜರಗಿ ಗ್ರಾಮ ಪಂಚಾಯತಿಗೆ ಜಿಲ್ಲಾ ಪಂಚಾಯತಿಯ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ರಿಷಿ ಆನಂದ ಶನಿವಾರ ಭೇಟಿ ನೀಡಿ ವಿವಿಧ ಯೋಜನೆಗಳ ಹಲವು ಕಾಮಗಾರಿಗಳ ಪರಿಶೀಲನೆ ನಡೆಸಿದರು.ಬಾಬಾನಗರ ಹಾಗೂ ಬಿಜ್ಜರಗಿ ಗ್ರಾಮ ಗ್ರಾಮದಲ್ಲಿ ಸರಕಾರಿ ಪ್ರೌಢಶಾಲೆ, ಗ್ರಂಥಾಲಯ, ಗ್ರಾಮ ಪಂಚಾಯತಿ ಕಾರ್ಯಾಲಯ, ಪಂಚಾಯತಿ ವ್ಯಾಪ್ತಿಯಲ್ಲಿ ಸರಕಾರಿ ಪ್ರಾಥಮಿಕ ಶಾಲೆ, ಸಮಾಜ ಕಲ್ಯಾಣ ಇಲಾಖೆಯ ವಸತಿ ನಿಲಯ ಹಾಗೂ ನರೇಗಾ ಯೋಜನೆಯಡಿ ಪ್ರಗತಿಯಲ್ಲಿರುವ ಸಮಗ್ರ ಅಭಿವೃದ್ಧಿ ಕಾಮಗಾರಿ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದರು.ಬಾಬಾನಗರ ಗ್ರಾಮದ ಸರಕಾರಿ ಪ್ರೌಢಶಾಲೆಗೆ ಭೇಟಿ ನೀಡಿ ನರೇಗಾ ಯೋಜನೆಯಡಿ ಅನುಷ್ಠಾನಗೊಂಡ ಆಟದ ಮೈದಾನ, ಶಾಲಾ ಕಂಪೌಂಡ, ಹೈಟೆಕ್ ಶೌಚಾಲಯ, ಸಸಿಗಳ ನಾಟಿ, ಅಡುಗೆ ಕೊಠಡಿ ವೀಕ್ಷಿಸಿದರು.ಶಾಲೆಯಲ್ಲಿ ಕುಡಿಯುವ ನೀರು ಹಾಗೂ ಸ್ವಚ್ಛತೆಗೆ ಆದ್ಯತೆ ನೀಡಿ, ಅತ್ಯಂತ ಕಾಳಜಿ ಪೂರ್ವಕವಾಗಿ ಕಾರ್ಯ ನಿರ್ವಹಿಸುವಂತೆ ಸೂಚಿಸಿದರು.ತರಗತಿಗಳಿಗೆ ತೆರಳಿ ವಿದ್ಯಾರ್ಥಿಗಳೊಂದಿಗೆ ಚರ್ಚೆ…

Read More

ಪ್ರಧಾನಿ ಮೋದಿ ಹೇಳಿಕೆ | “ಆರ್‌ಬಿಐ ಉದ್ಯೋಗದ ಕುರಿತು ಪ್ರಕಟಿಸಿದ ವಿಸ್ತೃತ ವರದಿ | ಪ್ರತಿಪಕ್ಷಗಳ ವಿರುದ್ಧ ಮೋದಿ ವಾಗ್ದಾಳಿ ಮುಂಬೈ: ಆರ್‌ಬಿಐ ವರದಿಯ ಪ್ರಕಾರ ಕಳೆದ ಮೂರ್ನಾಲ್ಕು ವರ್ಷಗಳಲ್ಲಿ ದೇಶದಲ್ಲಿ ಎಂಟು ಕೋಟಿ ಹೊಸ ಉದ್ಯೋಗಗಳು ಸೃಷ್ಟಿಯಾಗಿವೆ ಎಂದು ಪ್ರಧಾನಿ ನರೇಂದ್ರ ಮೋದಿ ಅವರು ಶನಿವಾರ ಹೇಳಿದ್ದಾರೆ.ಮುಂಬೈನ ಗೋರೆಗಾಂವ್ ಉಪನಗರದಲ್ಲಿ ನಡೆದ ಸಮಾರಂಭದಲ್ಲಿ ರಸ್ತೆ, ರೈಲ್ವೆ ಮತ್ತು ಬಂದರು ವಲಯಗಳಲ್ಲಿ 29,000 ಕೋಟಿ ರೂ.ಗಳ ಯೋಜನೆಗಳಿಗೆ ಚಾಲನೆ ಮತ್ತು ಶಂಕುಸ್ಥಾಪನೆ ನೆರವೇರಿಸಿ ಮಾತನಾಡಿದ ಮೋದಿ, “ಆರ್‌ಬಿಐ ಇತ್ತೀಚೆಗೆ ಉದ್ಯೋಗದ ಕುರಿತು ವಿಸ್ತೃತ ವರದಿಯನ್ನು ಪ್ರಕಟಿಸಿದೆ. ಆ ವರದಿಯ ಪ್ರಕಾರ, ಕಳೆದ ಮೂರು-ನಾಲ್ಕು ವರ್ಷಗಳಲ್ಲಿ ಸುಮಾರು ಎಂಟು ಕೋಟಿ ಹೊಸ ಉದ್ಯೋಗಗಳನ್ನು ಸೃಷ್ಟಿಸಲಾಗಿದೆ. ಈ ಅಂಕಿ ಅಂಶಗಳು ಉದ್ಯೋಗಗಳ ಬಗ್ಗೆ ಸುಳ್ಳು ಮಾಹಿತಿ ಹರಡುವವರ ಬಾಯಿ ಮುಚ್ಚಿಸಿದೆ ಎಂದರು.ಉದ್ಯೋಗದ ಬಗ್ಗೆ ಸುಳ್ಳು ಮಾಹಿತಿ ಹರಡುವವರು ಹೂಡಿಕೆ, ಮೂಲಸೌಕರ್ಯ ಮತ್ತು ದೇಶದ ಅಭಿವೃದ್ಧಿಯನ್ನು ವಿರೋಧಿಸುತ್ತಾರೆ. ಈಗ ಅವರ ಬುದ್ಧಿ ಬಯಲಾಗಿದೆ. ದೇಶದ ನಾಗರಿಕರು…

Read More

-ಶಿವಕುಮಾರ ಲೇಖಕರು – ಪತ್ರಕರ್ತರು ಅಪರ್ಣ ಇನ್ನಿಲ್ಲ ಎಂಬ ಸುದ್ಧಿ ಇಡೀ ಕನ್ನಡಿಗರನ್ನು ನೋವಿಗೆ ದೂಡಿದೆ. ಅಷ್ಟರ ಮಟ್ಟಿಗೆ ತನ್ನ ಅಧ್ಯಯನಶೀಲತೆಯಿಂದ ಭಾಷೆ ಸಂವೇದನೆಯ ಶಕ್ತಿಯನ್ನು ಸಿದ್ಧಿಸಿಕೊಂಡು ನಿರೂಪಣೆಯ ಕ್ಷೇತ್ರದಲ್ಲಿ ನಂಬರ್ ಒನ್ ಜನಪ್ರಿಯತೆ ಸಾಧಿಸಿದ್ದರು. ಸರ್ಕಾರದ ಯಾವುದೇ ಕಾರ್ಯಕ್ರಮವಿರಲಿ ಅಪರ್ಣರದೆ ನಿರೂಪಣೆಯಿಂದ ಕಳೆಗಟ್ಟುತಿತ್ತು. ಸ್ಪುಟವಾಗಿ ಸರಳವಾಗಿ ಉಚ್ಚಾರಣಾ ಶೈಲಿಯ ಜೊತೆ ತಕ್ಕ ಸಾಂಪ್ರದಾಯಿಕ ಉಡುಗೆಯೊಂದಿಗೆ ಗೌರವಿಸಲ್ಪಡುತ್ತಿದ್ದರು. ಅವರ ಪ್ರತಿಮಾತಿನಲ್ಲೂ ಸಾಹಿತ್ಯ ಸದಭಿರುಚಿ ಧ್ವನಿಸುತ್ತಿತ್ತು. ಅವರ ಸಹಜ ಮುಗ್ಧ ನಗುವಿನ ನಡವಳಿಕೆ ನಮ್ಮ ಮನೆ ಅಕ್ಕ ತಂಗಿ ಮಗಳಂತೆ ಆಪ್ತತೆ ಮೂಡಿಸುತ್ತಿದ್ದ ಅಪರ್ಣ, ಗಂಭೀರವಾಗಿ ಇರುವಂತೆಯೂ ಕಾಣುತ್ತಿದುಂಟು. ಆದರೆ ಮಜಾ ಟಾಕೀಸಿನ ಒನ್ ಅಂಡ್ ಒನ್ಲಿ ವರು-ವರಲಕ್ಷ್ಮಿ ಪಾತ್ರದ ಮೂಲಕ‌ ತನ್ನೊಳಗಿನ ಅದ್ಭುತ ಹಾಸ್ಯ ಪ್ರತಿಭಾ ಪ್ರಜ್ಞೆಯನ್ನು ಪ್ರದರ್ಶಿಸಿದ್ದರು. ಈ ಮೂಲಕ ಕೋಟ್ಯಾಂತರ ಪ್ರೇಕ್ಷಕರನ್ನು ನಕ್ಕು ನಗಿಸಿ ಅಭಿಮಾನ‌ ಸೂರೆಗೊಂಡಿದ್ದು‌ ಅಪರ್ಣರ ಬಹುಮುಖ ಪ್ರತಿಭಾ ಸಾಮರ್ಥ್ಯಕ್ಕೆ ಸಾಕ್ಷಿಯಾಗಿತ್ತು. ವಾಸ್ತವ ಬದುಕಿನಲ್ಲಿ ಹಲವು ಏರಿಳಿತದ ಅನುಭವಗಳನ್ನು ಕಂಡು ಮಾಗಿದ್ದ ಅಪರ್ಣರ ವ್ಯಕ್ತಿತ್ವದ ತೂಕವು…

Read More

ಇನ್ನು ಮುಂದೆ ಕಾರ್ಯಕ್ರಮಗಳಲ್ಲಿ ಸನ್ಮಾನ ಸ್ವೀಕರಿಸದಿರಲು ಸಚಿವ ಎಂ.ಬಿ.ಪಾಟೀಲ ನಿರ್ಧಾರ ವಿಜಯಪುರ: ಇನ್ನು ಮುಂದೆ ಕಾರ್ಯಕ್ರಮಗಳಲ್ಲಿ ಹಾರ, ಶಾಲು, ಸನ್ಮಾನ ಬೇಡ. ಇದಕ್ಕೆ ಖರ್ಚು ಮಾಡುವ ಹಣವನ್ನು ಬಡವರಿಗೆ ಸಹಾಯ ಮಾಡಿ ಎಂದು ಬೃಹತ್ ಮತ್ತು ಮಧ್ಯಮ ಕೈಗಾರಿಕೆ, ಮೂಲಸೌಲಭ್ಯ ಅಭಿವೃದ್ಧಿ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಎಂ. ಬಿ. ಪಾಟೀಲ ಹೇಳಿದ್ದಾರೆ.ಶನಿವಾರ ಬಬಲೇಶ್ವರ ತಾಲೂಕಿನ ಕಂಬಾಗಿ ಮತ್ತು ಬೋಳಚಿಕ್ಕಲಕಿ ಗ್ರಾಮಗಳಲ್ಲಿ ನಡೆದ ಪ್ರತ್ಯೇಕ ಕಾರ್ಯಕ್ರಮಗಳಲ್ಲಿ ಉದ್ಘಾಟನೆ ಹಾಗೂ ಭೂಮಿಪೂಜೆ ನೆರವೇರಿಸಿ ಅವರು ಮಾತನಾಡಿದರು.ಕಂಬಾಗಿಯಲ್ಲಿ ಪಿ. ಎಂ. ಶ್ರೀ ಸರಕಾರಿ ಪ್ರಾಥಮಿಕ ಶಾಲೆ ನೂತನ ಕೊಠಡಿಗಳನ್ನು ಉದ್ಘಾಟಿಸಿ ಮಾತನಾಡಿದ ಸಚಿವರು, ಸನ್ಮಾನ ಮಾಡಿಕೊಳ್ಳುತ್ತಿರುವುದು ಇದು ಕೊನೆಯ ಕಾರ್ಯಕ್ರಮ. ಇನ್ನು ಮುಂದೆ ಸನ್ಮಾನ ಬೇಡ ಎಂದು ಡಿಸಿ ಮೂಲಕ ಆದೇಶ ಮಾಡಿಸುವೆ. ಸನ್ಮಾನದ ಹಾರ, ಶಾಲು, ತುರಾಯಿ ಹಣವನ್ನು ಬಡವರಿಗೆ ಸಹಾಯ ಮಾಡಿ. ಸಿದ್ದೇಶ್ವರ ಸ್ವಾಮೀಜಿ ಎಂದೂ ಹಾರ ಹಾಕಿಸಿಕೊಳ್ಳಲಿಲ್ಲ. ಪಾದಗಳಿಗೆ ನಮಸ್ಕಾರ ಮಾಡಿಸಿಕೊಳ್ಳಲಿಲ್ಲ. ಅವರು ನಮಗೆ ಆದರ್ಶರಾಗಿದ್ದಾರೆ. ಸನ್ಮಾನ ಕಾರ್ಯಕ್ರಮದಿಂದಗಾಗಿ ಸಮಯವೂ…

Read More

ಎಂ.ಎಚ್.ಎಂ.ಪ.ಪೂ ಕಾಲೇಜಿಗೆ ಭೇಟಿ ನೀಡಿ ಪರಿಶೀಲಿಸಿದ ಡಿಡಿಪಿಐ ಹೊಸಮನಿ ಸಲಹೆ ಆಲಮಟ್ಟಿ: ಮಕ್ಕಳ ಶೈಕ್ಷಣಿಕ ಬಾಳಿನಲ್ಲಿಂದು ಪಿಯುಸಿ ಶಿಕ್ಷಣ ಮಹತ್ವದ್ದಾಗಿದೆ. ಅವರ ಉಜ್ವಲ ಭವಿಷ್ಯ ರೂಪಿಸುವಲ್ಲಿ ಮಹೋನ್ನತ ನಿಣಾ೯ಯಕ ಘಟ್ಟದ ಪಾತ್ರ ವಹಿಸುತ್ತದೆ ಎಂದು ವಿಜಯಪುರ ಜಿಲ್ಲಾ ಪದವಿಪೂರ್ವ ಶಿಕ್ಷಣ ಇಲಾಖೆ ಉಪನಿದೇ೯ಶಕ ಎಸ್.ಕೆ.ಹೊಸಮನಿ ಹೇಳಿದರು.ಇಲ್ಲಿನ ಎಸ್.ವಿ.ವಿ.ಸಂಸ್ಥೆಯ ಮಂಜಪ್ಪ ಹಡೇ೯ಕರ ಸ್ಮಾರಕ ಸಂಯುಕ್ತ ಪ.ಪೂ (ಎಂ.ಎಚ್.ಎಂ) ಕಾಲೇಜಿಗೆ ಶುಕ್ರವಾರ ಅನಿರೀಕ್ಷಿತ ಭೇಟಿ ನೀಡಿ ಆಡಳಿತಾತ್ಮಕ ದಾಖಲೆಗಳನ್ನು ಪರಿಶೀಲಿಸಿ ಮಾತನಾಡಿದ ಅವರು, ಕಾಲೇಜು ಉಪನ್ಯಾಸಕ ಬೋಧಕರು ಶಿಕ್ಷಣ ವೃತ್ತಿ ಕೇವಲ ವೃತ್ತಿಯನ್ನಾಗಿ ಪರಿಗಣಿಸದೇ ಮಕ್ಕಳ ಭವಿಷ್ಯತ್ತಿನ ಹಿತದೃಷ್ಟಿಯಿಂದ ಸೇವಾ ಮನೋಭಾವನೆಯ ಬದ್ದತೆ ಕಾಪಾಡಿಕೊಂಡು ಬರಬೇಕು. ಗುಣಾತ್ಮಕ ವಿಮರ್ಶೆ, ನಿರ್ದೇಶನ, ಮಾರ್ಗದರ್ಶನದ ಮೂಲಕ ಬೋಧನಾ ಕಾಯಕ ಕೈಗೊಂಡು ತಮ್ಮ ವೃತ್ತಿಪರತೆಗೆ ವಿಶೇಷ ಮೆರುಗು ತರಬೇಕೆಂದರು.ದೇಶದ ಸತ್ಪ್ರಜೆಗಳನ್ನು ರೂಪಿಸುವ ಗುರುತರ ದೊಡ್ಡ ಹೊಣೆಗಾರಿಕೆ ಗುರುಗಳ ಮೇಲಿದೆ. ವಿದ್ಯಾರ್ಥಿಗಳಲ್ಲಿ ಮೊದಲು ಸನ್ನಡತೆ ಸೃಷ್ಟಿಸಲು ಮುಂದಾಗಬೇಕು. ಸಮಾಜದಲ್ಲಿ ಗೌರವದಿಂದ ಬಾಳಿ ಬದುಕುವಂಥ ವ್ಯಕ್ತಿತ್ವದ ಮುಖಗಳು ರೂಪಿಸಿದಾಗ ಮಾತ್ರ ಶಿಕ್ಷಣ…

Read More

ಕೆಂಭಾವಿ: ಸರ್ಕಾರದ ಮಹತ್ವಾಕಾಂಕ್ಷಿ ಶಕ್ತಿ ಯೋಜನೆ ಜಾರಿಯಾದಾಗಿನಿಂದ ಜಿಲ್ಲಾ ಉಸ್ತುವಾರಿ ಸಚಿವ ಶರಣಬಸಪ್ಪಗೌಡ ದರ್ಶನಪುರ ಆದೇಶದ ಮೇರೆಗೆ ಪಟ್ಟಣದ ಬಸ್ ನಿಲ್ದಾಣಕ್ಕೆ ಮರು ಜೀವ ತುಂಬಿದ ಇಲಾಖೆ, ಕಲ್ಯಾಣ ಕರ್ನಾಟಕ ಸಾರಿಗೆ ಸಂಸ್ಥೆಯು ಜನರ ಅನುಕೂಲಕ್ಕಾಗಿ ಹೊಸ ಮಾರ್ಗಗಳನ್ನು ಕಂಡು ಕೊಂಡು ಬಸ್ಸ್ ಗಳ ಓಡಾಟಕ್ಕೆ ಅವಕಾಶ ಕಲ್ಪಿಸಿದ್ದು ಸಾರ್ವಜನಿಕರು ಸದುಪಯೋಗ ಪಡಿಸಿಕೊಳ್ಳಬೇಕು ಎಂದು ಸಂಜೀವರಾವ್ ಕುಲ್ಕರ್ಣಿ ಹೇಳಿದರು.ಪಟ್ಟಣದಿಂದ ಕಲಬುರ್ಗಿಗೆ ಆರಂಭವಾದ ನೂತನ ಬಸ್ಸ್ ಗೆ ಪೂಜೆ ಸಲ್ಲಿಸಿ ಮಾತನಾಡಿದ ಅವರು, ಈ ಬಸ್ಸು ಸಾಯಂಕಾಲ 5- 40, ಕ್ಕೆ ಕಲಬುರ್ಗಿ ಬಿಟ್ಟು ರಾತ್ರಿ 8-30, ಕ್ಕೆ ಕೆಂಭಾವಿ ತಲುಪಿ, ಬೆಳಿಗ್ಗೆ 6 ಗಂಟೆ 5 ನಿಮಿಷಕ್ಕೆ ಕೆಂಭಾವಿ ಬಿಟ್ಟು 8-30, ಕ್ಕೆ ಕಲ್ಬುರ್ಗಿ ತಲುಪಲಿದೆ. ಪಟ್ಟಣವು ಸೇರಿದಂತೆ ಸುತ್ತಲಿನ ಗ್ರಾಮಗಳ ಪ್ರಯಾಣಿಕರು ಈ ಬಸ್ಸಿನಲ್ಲಿ ಪ್ರಯಾಣಿಸಿ ಸಾರಿಗೆ ಸಂಸ್ಥೆಗೆ ಆದಾಯ ಹೆಚ್ಚಿಸಬೇಕು ಹಾಗೂ ಬಸ್ಸು ಕಾಯಂ ಓಡಾಡಲು ಜನಸಾಮಾನ್ಯರು ಸಹಕರಿಸಬೇಕು. ಸಾರಿಗೆ ಸಂಸ್ಥೆಗೆ ಆದಾಯ ಬರದಿದ್ದರೆ ಇಲಾಖೆ ಅಧಿಕಾರಿಗಳು ಬಸ್ಸ್…

Read More

ವಿಜಯಪುರ: ಪ್ರಾಥಮಿಕ ಆರೋಗ್ಯ ಕೇಂದ್ರದ ವ್ಯಾಪ್ತಿಯಲ್ಲಿ ಬರುವ ಕುಬಕಡ್ಡಿ ಗ್ರಾಮದ RMSMA ಪ್ರೌಢ ಶಾಲೆಯಲ್ಲಿ ವಿಶ್ವ ಜನಸಂಖ್ಯಾ ದಿನಾಚರಣೆ ಆಚರಿಸಲಾಯಿತುಈ ಕಾರ್ಯಕ್ರಮದಲ್ಲಿ ಶಾಲಾ ಶಿಕ್ಷಕರು ಮತ್ತು ಆರೋಗ್ಯ ಸಿಬ್ಬಂದಿ ಹಾಜರಿದ್ದರು.

Read More

ವಾಲ್ಮೀಕಿ ಅಭಿವೃದ್ಧಿ ನಿಗಮದ ಅವ್ಯವಹಾರ ಪ್ರಕರಣ | 20ಕ್ಕೂ ಹೆಚ್ಚು ಸ್ಥಳಗಳ ಮೇಲೆ ಇಡಿ ದಾಳಿ | ಶಾಂತಿನಗರದ ಇಡಿ ಕಚೇರಿಗೆ ಕರೆದೊಯ್ದ ಅಧಿಕಾರಿಗಳು ಬೆಂಗಳೂರು: ಮಹರ್ಷಿ ವಾಲ್ಮೀಕಿ ಪರಿಶಿಷ್ಟ ಪಂಗಡಗಳ ಅಭಿವೃದ್ದಿ ನಿಗಮದ ಬ್ಯಾಂಕ್‌ ಖಾತೆಯಿಂದ ಅಕ್ರಮವಾಗಿ ಹಣ ವರ್ಗಾವಣೆ ಮಾಡಿರುವ ಪ್ರಕರಣಕ್ಕೆ ಸಂಬಂಧಿಸಿದಂತೆ ಮಾಜಿ ಸಚಿವ, ಬಳ್ಳಾರಿ ಗ್ರಾಮೀಣ ಕಾಂಗ್ರೆಸ್ ಶಾಸಕ ಬಿ.ನಾಗೇಂದ್ರ ಅವರನ್ನು ಜಾರಿ ನಿರ್ದೇಶನಾಲಯ (ಇಡಿ) ಅಧಿಕಾರಿಗಳು ಜು.12 ರಂದು ತಮ್ಮ ವಶಕ್ಕೆ ಪಡೆದಿದ್ದಾರೆ.ಬೆಂಗಳೂರಿನ ಸದಾಶಿವನಗರದ ಡಾಲರ್ಸ್‌ ಕಾಲೊನಿಯ ನಿವಾಸದಿಂದ ನಾಗೇಂದ್ರ ಅವರನ್ನು ಶುಕ್ರವಾರ ಬೆಳಿಗ್ಗೆ ವಶಕ್ಕೆ ಪಡೆದ ಅಧಿಕಾರಿಗಳು, ಶಾಂತಿನಗರದಲ್ಲಿರುವ ಇಡಿ ಕಚೇರಿಗೆ ಕರೆದೊಯ್ದಿದ್ದಾರೆ. ನಾಗೇಂದ್ರ ಮತ್ತು ಶಾಸಕ ಬಸನಗೌಡ ದದ್ದಲ್ ಅವರ ಆಪ್ತರು ಮತ್ತು ಆಪ್ತ ಸಹಾಯಕರನ್ನು ಕೂಡ ಇದೇ ಕಚೇರಿಯಲ್ಲಿ ಇರಿಸಲಾಗಿದೆ.ಇಡಿ ಅಧಿಕಾರಿಗಳು ಕರೆದೊಯ್ಯುವಾಗ ಮಾಧ್ಯದವರಿಗೆ ಪ್ರತಿಕ್ರಿಯಿಸಿದ ಬಿ.ನಾಗೇಂದ್ರ “ನಾನೇನು ಮಾಡಿಲ್ಲ, ನನಗೇನು ಗೊತ್ತಿಲ್ಲ. ಸುಮ್ಮನೆ ಕರೆದುಕೊಂಡು ಬಂದಿದ್ದಾರೆ” ಎಂದು ಹೇಳಿದ್ದಾರೆ.ಮಾಜಿ ಸಚಿವ ಬಿ. ನಾಗೇಂದ್ರ ಮತ್ತು ವಾಲ್ಮೀಕಿ ನಿಗಮದ ಅಧ್ಯಕ್ಷರೂ…

Read More

ಬಂಜಾರಾ ಪ್ರೌಢ ಶಾಲೆಯಲ್ಲಿ ಚುನಾವಣಾ ಮಾದರಿಯಲ್ಲಿ ಶಾಲಾ ಸಂಸತ್ ಚುನಾವಣೆ ವಿಜಯಪುರ: ಭಾರತದ ಭಾವಿ ಮತದಾರ ಆಗಲಿರುವ ಫ್ರೌಢ ಶಾಲಾ ಮಕ್ಕಳು ನಮ್ಮ ಚುನಾವಣಾ ಮಾದರಿ ಅನುಸರಿಸಲಾಗಿದೆ. ಚುನಾವಣೆಯಲ್ಲಿ ಒಬ್ಬ ವ್ಯಕ್ತಿಯನ್ನು ಆಯ್ಕೆ ಮಾಡುವುದರಲ್ಲಿ ಮತದಾರರ ಜವಾಬ್ದಾರಿ ಬಗ್ಗೆ ಮಕ್ಕಳಲ್ಲಿ ಅರಿವು ಮೂಡಿಸುವುದಾಗಿದೆ ಎಂದು ಶಾಲಾ ಚುನಾವಣಾ ಅಧಿಕಾರಿಗಳಾದ ಎಸ್.ಕೆ.ಸಿಂಧೆಯವರು ಹೇಳಿದರು.ಶುಕ್ರವಾರದಂದು ನಗರದ ಜಿಲ್ಲಾ ಬಂಜಾರಾ ವಿದ್ಯಾವರ್ಧಕ ಸಂಘದ ಬಂಜಾರಾ ಪ್ರೌಢ ಶಾಲೆಯಲ್ಲಿ ಚುನಾವಣಾ ಮಾದರಿಯಲ್ಲಿ ಶಾಲಾ ಸಂಸತ್ ಚುನಾವಣೆ ಜರುಗಿತು. ನಾಮಪತ್ರ ಸಲ್ಲಿಕೆ, ಚಿಹ್ನೆ ನೀಡುವಿಕೆ, ಬ್ಯಾಲೇಟ್ ಪೇಪರ್, ಚುನಾವಣಾ ಪ್ರಚಾರ, ಸಿಬ್ಬಂದಿಗಳ ನೇಮಕ, ಮತ ಹಾಕಿದ ವಿದ್ಯಾರ್ಥಿಗಳಿಗೆ ಶಾಹಿ ಬಳಕೆ, ಏಜೆಂಟರ ನೇಮಕ ಮಾಡುವ ಮೂಲಕ ಚುನಾವಣಾ ಮಾದರಿಯಲ್ಲಿಯೇ ಶಾಲಾ ಸಂಸತ್ತು ಚುನಾವಣೆ ಯಶಸ್ವಿಯಾಗಿ ನೆರವಾಯಿತು. ಈ ವೇಳೆ ೪೫೦ ಕ್ಕೂ ಹೆಚ್ಚು ವಿದ್ಯಾರ್ಥಿಗಳು ಮತದಾನ ಮಾಡಿ ತಮ್ಮ ನಾಯಕರನ್ನು ಆರಿಸಿದರು.ಈ ವೇಳೆಯಲ್ಲಿ ಮಾತನಾಡಿದ ಅವರು. ಚುನಾವಣೆಯಲ್ಲಿ ಆಸಕ್ತಿ ಮತ್ತು ನಾಯಕತ್ವದ ಗುಣ ಬೆಳೆಸುವ ಭಾಗವಾಗಿ ಈ ಚುನಾವಣೆ…

Read More