ಕೆಂಭಾವಿ: ಸರ್ಕಾರದ ಮಹತ್ವಾಕಾಂಕ್ಷಿ ಶಕ್ತಿ ಯೋಜನೆ ಜಾರಿಯಾದಾಗಿನಿಂದ ಜಿಲ್ಲಾ ಉಸ್ತುವಾರಿ ಸಚಿವ ಶರಣಬಸಪ್ಪಗೌಡ ದರ್ಶನಪುರ ಆದೇಶದ ಮೇರೆಗೆ ಪಟ್ಟಣದ ಬಸ್ ನಿಲ್ದಾಣಕ್ಕೆ ಮರು ಜೀವ ತುಂಬಿದ ಇಲಾಖೆ, ಕಲ್ಯಾಣ ಕರ್ನಾಟಕ ಸಾರಿಗೆ ಸಂಸ್ಥೆಯು ಜನರ ಅನುಕೂಲಕ್ಕಾಗಿ ಹೊಸ ಮಾರ್ಗಗಳನ್ನು ಕಂಡು ಕೊಂಡು ಬಸ್ಸ್ ಗಳ ಓಡಾಟಕ್ಕೆ ಅವಕಾಶ ಕಲ್ಪಿಸಿದ್ದು ಸಾರ್ವಜನಿಕರು ಸದುಪಯೋಗ ಪಡಿಸಿಕೊಳ್ಳಬೇಕು ಎಂದು ಸಂಜೀವರಾವ್ ಕುಲ್ಕರ್ಣಿ ಹೇಳಿದರು.
ಪಟ್ಟಣದಿಂದ ಕಲಬುರ್ಗಿಗೆ ಆರಂಭವಾದ ನೂತನ ಬಸ್ಸ್ ಗೆ ಪೂಜೆ ಸಲ್ಲಿಸಿ ಮಾತನಾಡಿದ ಅವರು, ಈ ಬಸ್ಸು ಸಾಯಂಕಾಲ 5- 40, ಕ್ಕೆ ಕಲಬುರ್ಗಿ ಬಿಟ್ಟು ರಾತ್ರಿ 8-30, ಕ್ಕೆ ಕೆಂಭಾವಿ ತಲುಪಿ, ಬೆಳಿಗ್ಗೆ 6 ಗಂಟೆ 5 ನಿಮಿಷಕ್ಕೆ ಕೆಂಭಾವಿ ಬಿಟ್ಟು 8-30, ಕ್ಕೆ ಕಲ್ಬುರ್ಗಿ ತಲುಪಲಿದೆ. ಪಟ್ಟಣವು ಸೇರಿದಂತೆ ಸುತ್ತಲಿನ ಗ್ರಾಮಗಳ ಪ್ರಯಾಣಿಕರು ಈ ಬಸ್ಸಿನಲ್ಲಿ ಪ್ರಯಾಣಿಸಿ ಸಾರಿಗೆ ಸಂಸ್ಥೆಗೆ ಆದಾಯ ಹೆಚ್ಚಿಸಬೇಕು ಹಾಗೂ ಬಸ್ಸು ಕಾಯಂ ಓಡಾಡಲು ಜನಸಾಮಾನ್ಯರು ಸಹಕರಿಸಬೇಕು. ಸಾರಿಗೆ ಸಂಸ್ಥೆಗೆ ಆದಾಯ ಬರದಿದ್ದರೆ ಇಲಾಖೆ ಅಧಿಕಾರಿಗಳು ಬಸ್ಸ್ ಸೇವೆ ಸ್ಥಗಿತಗೊಳಿಸಬಹುದು, ಆದ ಕಾರಣ ಪ್ರಯಾಣಿಕರು ಹೆಚ್ಚಿನ ಸಂಖ್ಯೆಯಲ್ಲಿ ಪ್ರಯಾಣಿಸಬೇಕು ಎಂದು ಮನವಿ ಮಾಡಿದರು.
Subscribe to Updates
Get the latest creative news from FooBar about art, design and business.
Related Posts
Add A Comment

