Close Menu
  • ಮುಖಪುಟ
  • (ರಾಜ್ಯ ) ಜಿಲ್ಲೆ
  • ವಿಶೇಷ ಲೇಖನ
  • ಸಾಹಿತ್ಯ
  • ಆರೋಗ್ಯ
  • ಚಿಂತನ
  • ಪ್ರೇಮಲೋಕ
  • ದಿನಪತ್ರಿಕೆ
  • ಸಂಪರ್ಕಿಸಿ

Subscribe to Updates

Get the latest creative news from FooBar about art, design and business.

What's Hot

ವಿಶ್ವಶಾಂತಿಗಾಗಿ 14ನೇ ವೇದಾಂತ ಪರಿಷತ್

ಅಡಿಹುಡಿ ಸರ್ಕಾರಿ ಪ್ರೌಢಶಾಲೆ ನೂತನ ಎಸ್‌ಡಿಎಂಸಿ ರಚನೆ

ಜಿಲ್ಲಾಧಿಕಾರಿ ಡಾ.ಆನಂದ ಕೆ. ಅವರಿಂದ ಕೊಲ್ಹಾರ ತಾಲ್ಲೂಕಿನ ವಿವಿಧ ಕಚೇರಿಗಳಿಗೆ ಭೇಟಿ : ಪರಿಶೀಲನೆ

Facebook X (Twitter) Instagram
  • ಮುಖಪುಟ
  • (ರಾಜ್ಯ ) ಜಿಲ್ಲೆ
  • ವಿಶೇಷ ಲೇಖನ
  • ಸಾಹಿತ್ಯ
  • ಆರೋಗ್ಯ
  • ಚಿಂತನ
  • ಪ್ರೇಮಲೋಕ
  • ದಿನಪತ್ರಿಕೆ
  • ಸಂಪರ್ಕಿಸಿ
Facebook X (Twitter) Instagram YouTube WhatsApp
udayarashminews.comudayarashminews.com
  • ಮುಖಪುಟ
  • (ರಾಜ್ಯ ) ಜಿಲ್ಲೆ
  • ವಿಶೇಷ ಲೇಖನ
  • ಸಾಹಿತ್ಯ
  • ಆರೋಗ್ಯ
  • ಚಿಂತನ
  • ಪ್ರೇಮಲೋಕ
  • ದಿನಪತ್ರಿಕೆ
  • ಸಂಪರ್ಕಿಸಿ
udayarashminews.comudayarashminews.com
Home»(ರಾಜ್ಯ ) ಜಿಲ್ಲೆ»ಪಿಯುಸಿ ಶಿಕ್ಷಣ ಮಹತ್ವದ್ದು, ಗುಣಾತ್ಮಕ ಬೋಧನೆ ಇರಲಿ
(ರಾಜ್ಯ ) ಜಿಲ್ಲೆ

ಪಿಯುಸಿ ಶಿಕ್ಷಣ ಮಹತ್ವದ್ದು, ಗುಣಾತ್ಮಕ ಬೋಧನೆ ಇರಲಿ

By Updated:No Comments3 Mins Read
Facebook Twitter Pinterest LinkedIn Telegram WhatsApp
Share
Facebook Twitter LinkedIn Email Telegram WhatsApp

ಎಂ.ಎಚ್.ಎಂ.ಪ.ಪೂ ಕಾಲೇಜಿಗೆ ಭೇಟಿ ನೀಡಿ ಪರಿಶೀಲಿಸಿದ ಡಿಡಿಪಿಐ ಹೊಸಮನಿ ಸಲಹೆ

ಆಲಮಟ್ಟಿ: ಮಕ್ಕಳ ಶೈಕ್ಷಣಿಕ ಬಾಳಿನಲ್ಲಿಂದು ಪಿಯುಸಿ ಶಿಕ್ಷಣ ಮಹತ್ವದ್ದಾಗಿದೆ. ಅವರ ಉಜ್ವಲ ಭವಿಷ್ಯ ರೂಪಿಸುವಲ್ಲಿ ಮಹೋನ್ನತ ನಿಣಾ೯ಯಕ ಘಟ್ಟದ ಪಾತ್ರ ವಹಿಸುತ್ತದೆ ಎಂದು ವಿಜಯಪುರ ಜಿಲ್ಲಾ ಪದವಿಪೂರ್ವ ಶಿಕ್ಷಣ ಇಲಾಖೆ ಉಪನಿದೇ೯ಶಕ ಎಸ್.ಕೆ.ಹೊಸಮನಿ ಹೇಳಿದರು.
ಇಲ್ಲಿನ ಎಸ್.ವಿ.ವಿ.ಸಂಸ್ಥೆಯ ಮಂಜಪ್ಪ ಹಡೇ೯ಕರ ಸ್ಮಾರಕ ಸಂಯುಕ್ತ ಪ.ಪೂ (ಎಂ.ಎಚ್.ಎಂ) ಕಾಲೇಜಿಗೆ ಶುಕ್ರವಾರ ಅನಿರೀಕ್ಷಿತ ಭೇಟಿ ನೀಡಿ ಆಡಳಿತಾತ್ಮಕ ದಾಖಲೆಗಳನ್ನು ಪರಿಶೀಲಿಸಿ ಮಾತನಾಡಿದ ಅವರು, ಕಾಲೇಜು ಉಪನ್ಯಾಸಕ ಬೋಧಕರು ಶಿಕ್ಷಣ ವೃತ್ತಿ ಕೇವಲ ವೃತ್ತಿಯನ್ನಾಗಿ ಪರಿಗಣಿಸದೇ ಮಕ್ಕಳ ಭವಿಷ್ಯತ್ತಿನ ಹಿತದೃಷ್ಟಿಯಿಂದ ಸೇವಾ ಮನೋಭಾವನೆಯ ಬದ್ದತೆ ಕಾಪಾಡಿಕೊಂಡು ಬರಬೇಕು. ಗುಣಾತ್ಮಕ ವಿಮರ್ಶೆ, ನಿರ್ದೇಶನ, ಮಾರ್ಗದರ್ಶನದ ಮೂಲಕ ಬೋಧನಾ ಕಾಯಕ ಕೈಗೊಂಡು ತಮ್ಮ ವೃತ್ತಿಪರತೆಗೆ ವಿಶೇಷ ಮೆರುಗು ತರಬೇಕೆಂದರು.
ದೇಶದ ಸತ್ಪ್ರಜೆಗಳನ್ನು ರೂಪಿಸುವ ಗುರುತರ ದೊಡ್ಡ ಹೊಣೆಗಾರಿಕೆ ಗುರುಗಳ ಮೇಲಿದೆ. ವಿದ್ಯಾರ್ಥಿಗಳಲ್ಲಿ ಮೊದಲು ಸನ್ನಡತೆ ಸೃಷ್ಟಿಸಲು ಮುಂದಾಗಬೇಕು. ಸಮಾಜದಲ್ಲಿ ಗೌರವದಿಂದ ಬಾಳಿ ಬದುಕುವಂಥ ವ್ಯಕ್ತಿತ್ವದ ಮುಖಗಳು ರೂಪಿಸಿದಾಗ ಮಾತ್ರ ಶಿಕ್ಷಣ ರಂಗದ ಶೈಕ್ಷಣಿಕ ವಲಯಕ್ಕೆ ಸಂಬಂಧಿಸಿದಂತೆ ಇನ್ನಷ್ಟು ಹೆಚ್ಚಿನ ಮೌಲಯುತ ಸೃಜನಶೀಲ ಭಾವಲೋಕವೊಂದು ಸಮಾಜದಲ್ಲಿ ಸೃಷ್ಟಿಯಾಗಲು ಸಾಧ್ಯವಾದೀತೆಂದು ಅವರು ಅಭಿಪ್ರಾಯಿಸಿದರು.
ಏಕಾಗ್ರತೆಯಿಂದ ಪಾಠ-ಪ್ರವಚನಗಳಿಗೆ ಹೆಚ್ಚಿನ ಒತ್ತು ಗುರುವೃಂದ ನೀಡಿದಾಗ ವಿದ್ಯಾರ್ಥಿಗಳು ಸಾಧನೆಯ ನಡೆಯಲ್ಲಿ ಹೆಜ್ಜೆಯಿರಿಸಲು ಸಾಧ್ಯ. ಗುರಿ ಸಾಧನೆಗೆ ಏಕಚಿತ್ತದ ಹಂಬಲ ಇರಬೇಕು. ಅಂದಾಗ ಭವಿಷ್ಯತ್ತಿನ ಗುರಿ ತಲುಪಲು ಯುವಪೀಳಿಗೆಗೆ ಸಾಧ್ಯ. ಆ ದಿಸೆಯಲ್ಲಿ ಕ್ರಿಯಾಶೀಲ, ವಿನಯಶೀಲರಾಗಿ ನಿಷ್ಠೆಯ ಪರಿಶ್ರಮದಿಂದ ಮಕ್ಕಳಿಗೆ ಒಳ್ಳೆಯ ಸೂಕ್ತ ಮಾರ್ಗದರ್ಶನ ತೋರಬೇಕು. ಯುವಮನಸ್ಸಿನ ವಿದ್ಯಾರ್ಥಿಗಳಲ್ಲಿ ಸಂಕೋಚಿತ ಭಾವನೆ ಹೋಗಲಾಡಿಸಿ ಗಟ್ಟಿತನದ ಆತ್ಮವಿಶ್ವಾಸ ಭಾವ ತುಂಬಬೇಕು. ತಮ್ಮ ಆತ್ಮಗೌರವಕ್ಕೆ ಧಕ್ಕೆ ಬಾರದಂತೆ ಜೀವನದ ವೃತ್ತಿಪರತೆ ಕಾಯಕ ನಿಷ್ಠೆಯಿಂದ ಗೈದು ಸಂತೃಪ್ತಿ ಕಾಣಬೇಕು. ವಿದ್ಯಾರ್ಥಿಗಳಿಗೆ ಉತ್ತಮ ಗುಣಮಟ್ಟದ ಶೈಕ್ಷಣಿಕ ಭವಿಷ್ಯಕ್ಕೆ ಕಾರಣಕರ್ತರಾಗಬೇಕು. ಆ ನಿಟ್ಟಿನಲ್ಲಿ ಪಿಯು ಕಾಲೇಜು ಉಪನ್ಯಾಸಕ ಬಳಗದವರು ಹೃದಯದಿಂದ ಶ್ರಮಿಸಬೇಕು. ಶೈಕ್ಷಣಿಕ ಪ್ರಗತಿಗಾಗಿ ಶಿಕ್ಷಣ ಇಲಾಖೆಯೊಂದಿಗೆ ಜೊತೆಯಾಗಿ ನಿಂತು ಸಹಕರಿಸಬೇಕು ಎಂದರು.
ಕಾಲೇಜು ಕ್ಯಾಂಪಸ್ ಹಸಿರು, ಕಲಿಕೆಗೆ ಉತ್ತೇಜಕ ! ತಾಜಾತನದ ಹಸಿರು ಪರಿಸರದಲ್ಲಿರುವ ಈ ಕಾಲೇಜು ಮಕ್ಕಳ ಶಿಕ್ಷಣ ಕಲಿಕೆಗೆ ಅನುಕೂಲವಾಗಿದೆ. ಪರಿಸರ ಕಾಳಜಿಯಿಂದ ರಮ್ಯತೆ ವಾತಾವರಣ ಇಲ್ಲಿದೆ. ಸಂಸ್ಥೆಯವರು ಹಾಗೂ ಸಿಬ್ಬಂದಿಗಳ ಶ್ರಮ ಶ್ಲಾಘನೀಯವಾಗಿದೆ. ಈ ವೈವಿಧ್ಯಮಯ ಪರಿಸರದಲ್ಲಿರುವ ಕಾಲೇಜು ಅಚ್ಚುಕಟ್ಟಾಗಿ ನಡೆಯುತ್ತಿರುವದು ತಮಗೆ ಖುಷಿ ತಂದಿದೆ ಎಂದು ಮೆಚ್ಚುಗೆ ಸೂಚಿಸಿದರು.
ಗುಣಾತ್ಮಕ ಶಿಕ್ಷಣದ ಜೊತೆಗೆ ಸಂಸ್ಕಾರಯುತ ಶಿಕ್ಷಣ ಇಲ್ಲಿ ಗದುಗಿನ ತೋಂಟದ ಪೂಜ್ಯರ ಕೃಪೆಯಿಂದ ದೊರೆಯುತ್ತಿರುವುದು ವಿಶೇಷ. ಇದಕ್ಕೆ ತೋಂಟದ ಉಭಯ ಪೂಜ್ಯರ ಆಶೀವಾ೯ದ ಹಾಗೂ ಸಂಸ್ಥೆಯವರ ಕೊಡುಗೆ ಬಹಳ ಅಪಾರವಾಗಿದೆ. ಅದನ್ನು ಇಲ್ಲಿನ ಮಕ್ಕಳು ಸರಿಯಾಗಿ ಬಳಿಸಿಕೊಂಡು ಭವಿಷ್ಯವನ್ನು ಉಜ್ವಲ ಗೊಳಿಸಿಕೊಳ್ಳಬೇಕು. ಇಂದಿನ ಸ್ಪಧಾ೯ತ್ಮಕ ಯುಗದಲ್ಲಿ ಪಟ್ಟಣದ ಕಾಲೇಜುಗಳ ಜೊತೆಗೆ ಸರಿಸಾಟಿಯಾಗಿ ಈ ಕಾಲೇಜು ಉತ್ತಮ ಶಿಕ್ಷಣ ನೀಡಿ ಬೆಳವಣಿಗೆ ಹೊಂದುತ್ತಿರುವದು ಸಂತಸದ ಸಂಗತಿ ಎಂದರು.
ದಾಖಲೆಗಳ ಪರಿಶೀಲನೆ : ಡಿಡಿಪಿಯು ಎಸ್.ಕೆ.ಹಾದಿಮನಿ ಎಂಎಚ್ಎಂ ಪಪೂ ಕಾಲೇಜು ನಿರ್ವಹಿಸಿರುವ ಹಲವಾರು ದಾಖಲೆಗಳನ್ನು ಪರಿಶೀಲಿಸಿದರು. ಫಲಿತಾಂಶ ಸುಧಾರಣೆಗೆ ಕೈಗೊಂಡಿರುವ ವಿಶೇಷ ಪಾಠ,ಯೋಜನಾ ಕ್ರಮಗಳ ಮಾಹಿತಿ ಪಡೆದರು.
ಫಲಿತಾಂಶ ವೃದ್ಧಿ, ಪಿಯುಸಿ ವಿದ್ಯಾರ್ಥಿಗಳ ದಾಖಲಾತಿ, ಹಾಜರಾತಿ, ಆಸೈನ್ಮೆಂಟ್, ಕಿರುಪರೀಕ್ಷೆ, ಅರ್ಧವಾರ್ಷಿಕ ಪರೀಕ್ಷೆ ಅಂಕಗಳ ಪರಿಶೀಲನೆ ನಡೆಸಿದರು. ವಾಷಿ೯ಕ ಪಠ್ಯ ಯೋಜನೆ, ಕ್ರೋಡೀಕರಿಸಿದ ಅಂಕಗಳ ರೆಜಿಸ್ಟರ್, ಕಾಲೇಜು ಮಾನ್ಯತಾ ನವೀಕರಣ ಪ್ರಮಾಣ ಪತ್ರ ಸೇರಿದಂತೆ ಅನೇಕ ಮಹತ್ವದ ಆಡಳಿತಾತ್ಮಕ ದಾಖಲೆಗಳನ್ನು ಕೂಲಂಕಷವಾಗಿ ಪರಿಶೀಲಿಸಿದರು. ಎಲ್ಲ ದಾಖಲೆಗಳನ್ನು ಉತ್ತಮ ರೀತಿಯಲ್ಲಿ ಸರಿಯಾಗಿ ಸಂಗ್ರಹಿಸಿಟ್ಟಿದ್ದಿರಿ. ಕಳೆದ ವರ್ಷದ ಪಿಯುಸಿ ದ್ವೀತಿಯ ಫಲಿತಾಂಶ ಕೂಡಾ ಅತ್ಯುತ್ತಮ ತೃಪ್ತಿಕರವಾಗಿದೆ ಎಂದು ಪ್ರಶಂಸೆ ವ್ಯಕ್ತಪಡಿಸಿ ಇದೇ ರೀತಿ ಮುಂದುವರೆಯಲಿ ಎಂದರು. ಕಾಲೇಜು ಅಭಿವೃದ್ಧಿ ಕೆಲಸ,ಕಾರ್ಯ, ವಿದ್ಯಾರ್ಥಿಗಳ ಶೈಕ್ಷಣಿಕ ಪ್ರಗತಿಯೇ ನಮಗೆಲ್ಲ ಮುಖ್ಯ ಧೈಯವಾಗಬೇಕು ಎಂದರು.
ಶಿಕ್ಷಣದ ಬೋಧನಾ ಕೈಂಕರ್ಯಕ್ಕೆ ಮೊದಲ ಆದ್ಯತೆ ನೀಡಬೇಕು. ಗಟ್ಟಿಯಾಗಿ ಮಕ್ಕಳ ಶ್ರೇಯಸ್ಸಿಗೆ ಒಲವು ತೋರಬೇಕು. ವಿದ್ಯಾರ್ಥಿಗಳು ಪರೀಕ್ಷೆಯಲ್ಲಿ ಹೆಚ್ಚಿನ ಅಂಕದೊಂದಿಗೆ ಹೆಚ್ಚು ಪಾಸಾಗುವಲ್ಲಿ ಹಾಗೂ ಹಾಜರಾತಿ ಪ್ರಮಾಣ‌ ಹೆಚ್ಚಿಸುವಲ್ಲಿ ಉಪನ್ಯಾಸಕರು ಇನ್ನಷ್ಟು ಮುತುವರ್ಜಿ ವಹಿಸಬೇಕು. ಮುಂಬರುವ ದ್ವಿತೀಯ ಪಿಯುಸಿ ವಾಷಿ೯ಕ ಪರೀಕ್ಷೆಯಲ್ಲೂ ಮಕ್ಕಳು ಸಾಧನೆ ತೋರುವಂತೆ ಈಗಿನಿಂದಲೇ ಪ್ರೇರಣೆ ನೀಡಿ. ಉತ್ತಮ ಕಾರ್ಯದಕ್ಷತೆ, ಪ್ರಾಮಾಣಿಕ ಪ್ರಯತ್ನ, ಶ್ರದ್ಧೆ ಇದ್ದರೆ ಇವೆಲ್ಲವೂ ಸಾಧ್ಯ. ಪರಿಣಾಮಕಾರಿ ಬೋಧನೆಯಿಂದ ಉತ್ತಮ ಫಲಿತಾಂಶ ಲಭ್ಯ. ಆ ನಿರೀಕ್ಷೆ ನನ್ನದು. ಅದನ್ನು ಈಡೇರಿಸುತ್ತಿರಿ ಎಂಬ ಆಶಾದಾಯಕ ಭಾವನೆ ಹೊಂದಿರುವೆ ಎಂದು ಎಸ್.ಕೆ.ಹೊಸಮನಿ ನುಡಿದರು.
ಪ್ರಾಚಾರ್ಯ ಪಿ.ಎ.ಹೇಮಗಿರಿಮಠ ಮಾತನಾಡಿ, ಕಾಲೇಜು ಸುಸಜ್ಜಿತ ಕಟ್ಟಡ ಹೊಂದಿದ್ದು ಸುತ್ತಲೂ ಶುಚಿತ್ವ ಕಾಪಾಡಲಾಗಿದೆ. ಕ್ಯಾಂಪಸ್ ಆವರಣ ಸಂಪೂರ್ಣ ಹಸಿರೆಲೆಗಳ ಸಸ್ಯಗಳಿಂದ ನಳನಳಿಸಿದೆ. ಇಲ್ಲಿನ ಪರಿಸರ ಸೊಬಗು ಮಕ್ಕಳ ಓದು,ಬರಹದ ಕಲಿಕಾಭ್ಯಾಸಕ್ಕೆ ಪೂರಕವಾಗಿದೆ. ಗದುಗಿನ ತೋಂಟದ ಲಿಂಗೈಕ್ಯ ಡಾ.ಸಿದ್ದಲಿಂಗ ಮಹಾಸ್ವಾಮಿಗಳು, ಸಂಸ್ಥೆ ಅಧ್ಯಕ್ಷರಾದ ತೋಂಟದ ಡಾ,ಸಿದ್ದರಾಮ ಶ್ರೀಗಳು ಹಾಗೂ ಸಂಸ್ಥೆಯ ಕಾರ್ಯದರ್ಶಿ, ಶಿಕ್ಷಣ ತಜ್ಞರಾದ ಪ್ರೊ, ಶಿವಾನಂದ ಪಟ್ಟಣಶೆಟ್ಟರ ಅವರುಗಳ ಕೃಪಾಶೀವಾ೯ದ ಭಾವದ ವಿನೂತನ ಆಲೋಚನೆಗಳೇ ಇಲ್ಲಿನ ಶಿಕ್ಷಣ ಸಂಸ್ಥೆಗಳ ಭವ್ಯ ಕಟ್ಟಡಗಳಿಗೆ ಕಾರಣವಾಗಿವೆ.ಗ್ರಾಮೀಣ ಮಕ್ಕಳ ನವಭವಿಷ್ಯ ರೂಪಿಸಲು ಪ್ರೇರಣೆವಾಗಿವೆ.ಹೆಚ್ಚು ಮಕ್ಕಳನ್ನು ಹೊಂದಿರುವ ಗ್ರಾಮೀಣ ಪ್ರದೇಶದ ತಮ್ಮ ಈ ಕಾಲೇಜಿಗೆ ಬೇಕಾದ ಎಲ್ಲ ಅಗತ್ಯ ಮೂಲಭೂತ ಸೌಲಭ್ಯಗಳನ್ನು ಸಂಸ್ಥೆಯ ಮಹನೀಯರು ಒದಗಿಸಿದ್ದಾರೆ. ಇನ್ನೂ ಬೇಕಾಗುವ ಸೌಲಭ್ಯಗಳನ್ನು ಒದಗಿಸಲು ಬದ್ದರಾಗಿದ್ದಾರೆ. ಪದವಿಪೂರ್ವ ಹಾಗೂ ಪದವಿ ಕಾಲೇಜು ಅಭಿವೃದ್ಧಿಗೆ ಸಂಸ್ಥೆ ತನ್ನದೇಯಾದ ಕೊಡುಗೆ ನೀಡಿ ಹಳ್ಳಿಯ ಮಕ್ಕಳಿಗೆ ಅಕ್ಷರ ದಾಸೋಹದ ಜ್ಞಾನ ಸಿಂಚನ ಉಣಬಡಿಸುತ್ತಿದೆ. ಹಸಿರು ನಂದನವನದಲ್ಲಿರುವ ಈ ಕಾಲೇಜು ಕನಾ೯ಟಕ ಗಾಂಧಿ ಶರಣ ಮಂಜಪ್ಪ ಹಡೇ೯ಕರ ನಾಮಾಂಕಿತ ಹೊಂದಿ ಪ್ರಗತಿ ಕಾಣುತ್ತಿದೆ. ನುರಿತ ಉಪನ್ಯಾಸಕ ಸಮೂಹದಿಂದ ಗುಣಮಟ್ಟದ ಪಾಠ ಪ್ರವಚನ ನಡೆಯುತ್ತಿದೆ ಎಂದರು.
ಹಿರಿಯ ಉಪನ್ಯಾಸಕ ಪಿ.ವೈ.ಧನಶೆಟ್ಟಿ, ಎಂ.ಎಸ್.ಸಜ್ಜನ,ಟಿ.ಬಿ.ಕರದಾನಿ, ಉಪನ್ಯಾಸಕಿ ಶ್ರೀಮತಿ ಮಮತಾ ಕರೆಮುರಗಿ, ಡಿ.ಟಿ.ಸಿಂಗಾರಿ,ತಿಮ್ಮಣ್ಣ ದಾಸರ, ಶಾಂತೂ ತಡಸಿ,ವಾಹನ ಚಾಲಕ ಭೀಮು ಮೊದಲಾದವರಿದ್ದರು.

BIJAPUR NEWS public public news udaya rashmi Udayarashmi today newspaper udayarashminews.com
Share. Facebook Twitter Pinterest Email Telegram WhatsApp
  • Website

Related Posts

ವಿಶ್ವಶಾಂತಿಗಾಗಿ 14ನೇ ವೇದಾಂತ ಪರಿಷತ್

ಅಡಿಹುಡಿ ಸರ್ಕಾರಿ ಪ್ರೌಢಶಾಲೆ ನೂತನ ಎಸ್‌ಡಿಎಂಸಿ ರಚನೆ

ಜಿಲ್ಲಾಧಿಕಾರಿ ಡಾ.ಆನಂದ ಕೆ. ಅವರಿಂದ ಕೊಲ್ಹಾರ ತಾಲ್ಲೂಕಿನ ವಿವಿಧ ಕಚೇರಿಗಳಿಗೆ ಭೇಟಿ : ಪರಿಶೀಲನೆ

ಉತ್ತಮ ನಿರ್ಧಾರ ಯಶಸ್ಸಿನ ಕೀಲಿ ಕೈ

Add A Comment

Leave A Reply Cancel Reply

Categories
  • (ರಾಜ್ಯ ) ಜಿಲ್ಲೆ
  • Uncategorized
  • ಆರೋಗ್ಯ
  • ಇತರೆ
  • ಕಾವ್ಯರಶ್ಮಿ
  • ಚಿಂತನ
  • ದಿನಪತ್ರಿಕೆ
  • ಪುಸ್ತಕ ಪರಿಚಯ
  • ಪ್ರೇಮಲೋಕ
  • ಭಾವರಶ್ಮಿ
  • ರಾಷ್ಚ್ರ
  • ವಿಜಯಪುರ
  • ವಿದ್ಯಾರ್ಥಿ ನಿಧಿ
  • ವಿಶೇಷ ಲೇಖನ
  • ಸಾಹಿತ್ಯ
  • ಸಿನಿಮಾ
  • ಹೊತ್ತಿಗೆ ಹೊರಣ
Recent Posts
  • ವಿಶ್ವಶಾಂತಿಗಾಗಿ 14ನೇ ವೇದಾಂತ ಪರಿಷತ್
    In (ರಾಜ್ಯ ) ಜಿಲ್ಲೆ
  • ಅಡಿಹುಡಿ ಸರ್ಕಾರಿ ಪ್ರೌಢಶಾಲೆ ನೂತನ ಎಸ್‌ಡಿಎಂಸಿ ರಚನೆ
    In (ರಾಜ್ಯ ) ಜಿಲ್ಲೆ
  • ಜಿಲ್ಲಾಧಿಕಾರಿ ಡಾ.ಆನಂದ ಕೆ. ಅವರಿಂದ ಕೊಲ್ಹಾರ ತಾಲ್ಲೂಕಿನ ವಿವಿಧ ಕಚೇರಿಗಳಿಗೆ ಭೇಟಿ : ಪರಿಶೀಲನೆ
    In (ರಾಜ್ಯ ) ಜಿಲ್ಲೆ
  • ಉತ್ತಮ ನಿರ್ಧಾರ ಯಶಸ್ಸಿನ ಕೀಲಿ ಕೈ
    In ವಿಶೇಷ ಲೇಖನ
  • ಸರಗೂರು ತಾಲೂಕಿನಲ್ಲಿ ನಿಲ್ಲದ ಕಾಡುಪ್ರಾಣಿ-ಮಾನವ ಸಂಘರ್ಷ
    In (ರಾಜ್ಯ ) ಜಿಲ್ಲೆ
  • ಕೇವಲ ಅಂಕ ಗಳಿಕೆ ಶಿಕ್ಷಣವಲ್ಲˌ ತಹಶೀಲ್ದಾರ ಅನೀಲ ಬಡಿಗೇರ
    In (ರಾಜ್ಯ ) ಜಿಲ್ಲೆ
  • ಸಾರ್ವಜನಿಕ ಬ್ಯಾಂಕುಗಳಿಂದ ಆರ್ಥಿಕ ಸಾಕ್ಷರತೆ ಸಪ್ತಾಹ
    In (ರಾಜ್ಯ ) ಜಿಲ್ಲೆ
  • ಶನಿವಾರ ವಿದ್ಯುತ್ ವ್ಯತ್ಯಯ
    In (ರಾಜ್ಯ ) ಜಿಲ್ಲೆ
  • ಆಂಧ್ರದಲ್ಲಿ ಕೆ.ಜಿ ತಂಬಾಕಿಗೆ 400, ಕರ್ನಾಟಕದಲ್ಲಿ ಕೇವಲ 292 ರೂ.ಹೆಚ್ ಡಿ ಕೋಟೆಯಲ್ಲಿ ಹರಾಜು ಮಾರುಕಟ್ಟೆ ಬಂದ್, ರೈತರ ಆಕ್ರೋಶ
    In (ರಾಜ್ಯ ) ಜಿಲ್ಲೆ
  • ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಅಡಿಯಲ್ಲಿ ನಿರ್ಗತಿಕರಿಗೆ ವಾತ್ಸಲ್ಯ ಕಿಟ್ ವಿತರಣೆಉದಯರಶ್ಮಿ ದಿನಪತ್ರಿಕೆ
    In (ರಾಜ್ಯ ) ಜಿಲ್ಲೆ
Editors Picks
Top Reviews
udayarashminews.com
Facebook X (Twitter) Instagram Pinterest Vimeo YouTube
  • ಮುಖಪುಟ
  • (ರಾಜ್ಯ ) ಜಿಲ್ಲೆ
  • ವಿಶೇಷ ಲೇಖನ
  • ಸಾಹಿತ್ಯ
  • ಆರೋಗ್ಯ
  • ಚಿಂತನ
  • ಪ್ರೇಮಲೋಕ
  • ದಿನಪತ್ರಿಕೆ
  • ಸಂಪರ್ಕಿಸಿ
© 2026 udayarashminews.com. Designed by udayarashmi news .

Type above and press Enter to search. Press Esc to cancel.