Author: editor.udayarashmi@gmail.com

ವಿಜಯಪುರ: ಹನ್ನೆರಡನೆಯ ಶತಮಾನದ ವಚನ ಚಳುವಳಿ ಮತ್ತು ಸಾಮಾಜಿಕ ಕ್ರಾಂತಿಯ ಹರಿಕಾರರಲ್ಲೊಬ್ಬರಾದ ಹಡಪದ ಅಪ್ಪಣ್ಣನವರು 250 ಕ್ಕೂ ಅಧಿಕ ವಚನಗಳನ್ನು ರಚಿಸಿ ಸಮಾಜಕ್ಕೆ ಮಾದರಿಯಾಗಿದ್ದಾರೆ ಎಂದುಹಡಪದ ಅಪ್ಪಣ್ಣ ವಿವಿದ್ದೋದ್ದೇಶಗಳ ಸಹಕಾರಿ ಸಂಘ ಸಿಂದಗಿ ಅಧ್ಯಕ್ಷ ಶಿವಾನಂದ ಹಡಪದ ಹೇಳಿದರು.ಜಿಲ್ಲಾ , ತಾಲೂಕ ಹಾಗು ನಗರ ಘಟಕ ಕನ್ನಡ ಸಾಹಿತ್ಯ ಪರಿಷತ್ತಿನ ಆಶ್ರಯದಲ್ಲಿ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಸಭಾಂಗಣದಲ್ಲಿ ಲಿಂ ಷಡಕ್ಷರಯ್ಯ ಶಿವಪೂಜಯ್ಯ ಹಿರೇಮಠ ಹಾಗು ದಿ. ನಾಗಪ್ಪ ರೇವಪ್ಪ ಶೇಠೆ ಇವರ ಹೆಸರಿನ ದತ್ತಿ ನಿಧಿ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ಬಸವಣ್ಣನವರ ಆಪ್ತರಾಗಿ ಮೂಲ ಕಾಯಕವನ್ನು ಮಾಡುತ್ತಾ ಅಥ೯ಪೂಣ೯ ವಚನಗಳನ್ನು ರಚಿಸುವುದರ ಮೂಲಕ ವಚನಕಾರರಲ್ಲಿ ತಮ್ಮ ವ್ಯಕ್ತಿತ್ವವನ್ನು ಗುರುತಿಸಿಕೊಂಡರು ಎಂದರು.ಸಭೆಯ ಅಧ್ಯಕ್ಷ ವಹಿಸಿದ ಡಾ: ಜಿ ಡಿ ಕೊಟ್ನಾಳ ಮಾತನಾಡಿ, ಮೂಢ ನಂಬಿಕೆ, ಜಾತಿಯತೆ, ಲಿಂಗ ತಾರತಮ್ಯಗಳಂತಹ ಅನಿಷ್ಟ ಪದ್ಧತಿಗಳನ್ನು ಹೋಗಲಾಡಿಸಲು ಜೀವನಕ್ಕೆ ಬೇಕಾಗುವ ಮೌಲ್ಯಗಳನ್ನು ವಚನಗಳ ಮೂಲಕ ಸಂದೇಶ ಸಾರಿದರು ಎಂದರು.ಶರಣ ಹಡಪದ ಅಪ್ಪಣ್ಣ ನವರ ಕುರಿತು ಉಪನ್ಯಾಸ…

Read More

– ಚೇತನ ಶಿವಶಿಂಪಿಮುದ್ದೇಬಿಹಾಳ: ಮಕ್ಕಳ ಸಂತೋಷಕ್ಕಾಗಿ ಪಾಲಕರು ಏನೆಲ್ಲ ಮಾಡಲು ಮುಂದಾಗುತ್ತಾರೆ. ಮಕ್ಕಳ ಸಂತೋಷದಲ್ಲಿ ತಮ್ಮ ಏನೇ ಕಷ್ಟಗಳಿದ್ದರೂ ಮರೆಯುತ್ತಾರೆ. ಇಲ್ಲೊಬ್ಬ ತರಬೇತುದಾರ ತನ್ನ ಮಕ್ಕಳ ಸಂತೋಷದ ಜೊತೆಗೆ ಸಾರ್ವಜನಿಕರಿಗೂ ಅನುಕೂಲವಾಗುವಂತೆ ಉಚಿತ ತರಬೇತಿ ನೀಡುವ ಮೂಲಕ ಮಾದರಿಯ ಕಾರ್ಯ ಮಾಡುತ್ತಿದ್ದಾರೆ.ದುಡ್ಡು ಕೊಟ್ಟು ತಮ್ಮ ಮಕ್ಕಳಿಗೆ ತರಬೇತಿ ನೀಡಿ ಅಂದರೆ ಬೇಸರ ಪಟ್ಟುಕೊಳ್ಳುವ ಸಧ್ಯದ ಕಾಲಘಟ್ಟದಲ್ಲಿ ಯಾವುದೇ ಫಲಾಪೇಕ್ಷೆ ಇಲ್ಲದೇ ಮಕ್ಕಳಿಗೆ ಉಚಿತ ಕರಾಟೆ ಮತ್ತು ಸ್ಕೆಟಿಂಗ್ ತರಬೇತಿ ನೀಡುವ ಮೂಲಕ ತನ್ನಲ್ಲಿರುವ ವಿದ್ಯೆಯನ್ನು ಧಾರೆ ಎರೆದು ಸಾರ್ವಜನಿಕರ ಮೆಚ್ಚುಗೆಗೆ ಪಾತ್ರರಾಗಿದ್ದಾರೆ ಕರಾಟೆ ಶಿಕ್ಷಕ ಶಿವಕುಮಾರ ಶಾರದಳ್ಳಿ.ಶಾರದಳ್ಳಿ ಮೂಲತಃ ನಾರಾಯಣಪುರದವರು. ಮುದ್ದೇಬಿಹಾಳ ಪಟ್ಟಣದಲ್ಲಿ ವಾಸವಾಗಿ ಸಾಕಷ್ಟು ವರ್ಷಗಳಾಗಿವೆ. ಖಾಸಗಿ ಶಾಲೆಯೊಂದರಲ್ಲಿ ಕರಾಟೆ ಶಿಕ್ಷಕರಾಗಿ ಸೇವೆ ಸಲ್ಲಿಸುತ್ತಿರುವ ಇವರದು ಸೌಮ್ಯ ಸ್ವಭಾವ. ಇವರಿಗೆ ಇಬ್ಬರು ಮಕ್ಕಳು. ದೊಡ್ಡವಳು ಮಗಳಾದರೆ ಚಿಕ್ಕವನು ಮಗ. ಇವರಿಬ್ಬರಿಗೂ ದಿನಂಪ್ರತಿ ಬೆಳಿಗ್ಗೆ ಕರಾಟೆ ಮತ್ತು ಸ್ಕೆಟಿಂಗ್ ತರಬೇತಿ ಪ್ರಾರಂಭಿಸಿಸುತ್ತಿದ್ದಂತೆ ಹಲವರು ನಮ್ಮ ಮಕ್ಕಳಿಗೂ ತರಬೇತಿ ನೀಡುತ್ತೀರಾ ಅಂದಾಗ ಯಾವುದೇ…

Read More

ವಾಲ್ಮೀಕಿ ನಿಗಮದ ಹಗರಣ | ಲೂಟಿಗೆ ಕಾಂಗ್ರೆಸ್ ಸರ್ಕಾರವೇ ಹೊಣೆ | ಶೋಷಿತ ಸಮುದಾಯದ ಹಣ ಲೂಟಿ | ವಿಪಕ್ಷ ನಾಯಕ ವಾಗ್ದಾಳಿ ಬೆಂಗಳೂರು: ಕರ್ನಾಟಕ ಮಹರ್ಷಿ ವಾಲ್ಮೀಕಿ ಪರಿಶಿಷ್ಟ ಪಂಗಡಗಳ ಅಭಿವೃದ್ಧಿ ನಿಗಮದ 187 ಕೋಟಿ ರೂಪಾಯಿ ಹಗರಣಕ್ಕೆ ಸಂಬಂಧಿಸಿದಂತೆ ಎರಡನೇ ದಿನವಾದ ಮಂಗಳವಾರವೂ ವಿಧಾನಸಭೆಯಲ್ಲಿ ಗದ್ದಲ ಮುಂದುವರಿದಿದ್ದು, ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ರಾಜೀನಾಮೆಗೆ ಬಿಜೆಪಿ ಆಗ್ರಹಿಸಿದೆ.ವಾಲ್ಮೀಕಿ ಅಭಿವೃದ್ಧಿ ನಿಗಮದಲ್ಲಿ ನಡೆದ ಲೂಟಿಗೆ ಕಾಂಗ್ರೆಸ್ ಸರ್ಕಾರವೇ ನೇರ ಹೊಣೆ ಎಂದ ಪ್ರತಿಪಕ್ಷ ನಾಯಕ ಆರ್ ಅಶೋಕ್, ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ನೈತಿಕ ಹೊಣೆ ಹೊತ್ತು ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಬೇಕು ಮತ್ತು ಪ್ರಕರಣವನ್ನು ಸಿಬಿಐಗೆ ವಹಿಸಬೇಕು ಎಂದು ಆಗ್ರಹಿಸಿದರು.ವಾಲ್ಮೀಕಿ ಅಭಿವೃದ್ಧಿ ನಿಗಮದ ಖಾತೆಗಳ ಅಧೀಕ್ಷಕ ಚಂದ್ರಶೇಖರ್ ಪಿ ಅವರ ಸಾವಿಗೆ ಸರ್ಕಾರವೇ ಹೊಣೆ ಎಂದು ಆರೋಪಿಸಿದ ಆರ್ ಅಶೋಕ್, ಒಂದು ವೇಳೆ ಈ ಆತ್ಮಹತ್ಯೆ ನಡೆಯದಿದ್ದರೆ ಹಗರಣವೇ ಹೊರ ಬರುತ್ತಿರಲಿಲ್ಲ. ಇದರ ಬಗ್ಗೆ ತನಿಖೆ ನಡೆಸಲು ರಾಜ್ಯ ಸರ್ಕಾರ ರಚಿಸಿರುವ…

Read More

ಬಸವನಬಾಗೇವಾಡಿ: ತಾಲೂಕಿನ ಇಂಗಳೇಶ್ವರ ಗ್ರಾಮಕ್ಕೆ ಐವರು ಸ್ವಿಪ್ಟ್ ಕಾರಿನಲ್ಲಿ ಜುಲೈ ೮ ರಂದು ರಾತ್ರಿ ಹೋಗುವಾಗ ಮಾರ್ಗಮಧ್ಯ ರಸ್ತೆ ಬದಿಯಲ್ಲಿರುವ ಪೂಟ್ ಕಟ್ಟೆಗೆ ಚಾಲಕನ ನಿಯಂತ್ರಣ ತಪ್ಪಿ ಅಪಘಾತ ಸಂಭವಿಸಿದ ಸ್ಥಳದಲ್ಲಿಯೇ ಇಬ್ಬರು ಮೃತಪಟ್ಟು, ಒರ್ವ ಗಂಭೀರ ಗಾಯಗೊಂಡು, ಇನ್ನಿಬ್ಬರಿಗೆ ಗಾಯಗೊಂಡ ಘಟನೆ ಜರುಗಿತ್ತು. ಇದೀಗ ಸಾಮಾಜಿಕ ಜಾಲ ತಾಣದಲ್ಲಿ ಕುಡಿದ ಮತ್ತಿನಲ್ಲಿ ಖುಷಿಯಲ್ಲಿ ತೇಲಾಡುತ್ತಿದ್ದಾಗ ಕಾರು ಅಪಘಾತವಾಗುವ ದೃಶ್ಯ ಎಲ್ಲೆಡೆ ವೈರಲ್ ಆಗಿದೆ.ಬಸವನಬಾಗೇವಾಡಿಯಲ್ಲಿ ಎಣ್ಣೆ ಪಾರ್ಟಿ ಮಾಡಿಕೊಂಡು ರಾತ್ರಿ ಕಾರಿನಲ್ಲಿ ತಮ್ಮ ಇಂಗಳೇಶ್ವರ ಗ್ರಾಮಕ್ಕೆ ತೆರಳುವಾಗ ಕಾರಿನ ಮುಂಭಾಗ ಕುಳಿತುಕೊಂಡಿದ್ದ ಮಾಳಪ್ಪ ಡೋಳಗೊಂಡ ಅವರು ಮೊಬೈಲ್ನಲ್ಲಿ ಕಾರಿನ ಮುಂಭಾಗ ರಸ್ತೆಯ ವಿಡಿಯೋ ಚಿತ್ರೀಕರಣ ಮಾಡುವಾಗ ಹೇಂಗಿದ್ದಿ ಹೆಂಗ್ಯಾದಿ, ಕುಡುಕ ಕುಡುಕ ಅಂತ ಕರಿಯಬ್ಯಾಡ ನೀನ ಅನ್ನೊ ಲವ್ ಫೇಲ್ಯೂರ್ ಹಾಡು ಹಾಕಿಕೊಂಡು ಕಾರಿನಲ್ಲಿ ಕಾರಿನಲ್ಲಿದವರು ಹಾಡಿಗೆ ಧ್ವನಿಗೂಡಿಸಿದ ಸಂದರ್ಭದಲ್ಲಿ ಒವರ್ ಸ್ಪೀಡ್ನಲ್ಲಿ ಕಾರು ಚಾಲಕನ ನಿಯಂತ್ರಣ ತಪ್ಪಿ ರಸ್ತೆ ಪಕ್ಕದ ಪೂಟ್ ಕಟ್ಟೆಗೆ ಡಿಕ್ಕಿ ಹೊಡೆದ ದೃಶ್ಯ ವೈರಲ್ ಆಗಿದೆ.…

Read More

ಬಸವನಬಾಗೇವಾಡಿ: ಪಟ್ಟಣದ ತಹಸೀಲ್ದಾರ ಕಚೇರಿಯ ಆವರಣದಲ್ಲಿ ಜುಲೈ ೧೯ ರಂದು ಬೆಳಗ್ಗೆ ೧೧ ಗಂಟೆಗೆ ಅಖಂಡ ಕರ್ನಾಟಕ ರೈತಸಂಘದ ನೇತೃತ್ವದಲ್ಲಿ ತಾಲೂಕಿನ ನಾಗರಾಳಹುಲಿ ಗ್ರಾಮದ ರೈತ ಕುಟುಂಬ ಸೇರಿದಂತೆ ಜಮೀನಿಗೆ ದಾರಿ ಬೇಕಾದ ರೈತರೊಂದಿಗೆ ಜಮೀನು ದಾರಿಗಾಗಿ ಕಾನೂನು ತಿದ್ದುಪಡಿ ಸರ್ಕಾರ ಮಾಡಬೇಕೆಂದು ಆಗ್ರಹಿಸಿ ಅಹೋರಾತ್ರಿ ಧರಣಿ ಆರಂಭಿಸಲಾಗುವುದು ಎಂದು ಅಖಂಡ ಕರ್ನಾಟಕ ರೈತ ಸಂಘದ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಅರವಿಂದ ಕುಲಕರ್ಣಿ ತಿಳಿಸಿದ್ದಾರೆ.ಈ ಕುರಿತು ಪತ್ರಿಕಾ ಪ್ರಕಟಣೆ ನೀಡಿರುವ ಅವರು, ರಾಜ್ಯದಲ್ಲಿ ರೈತ ಬಾಂಧವರು ತಮ್ಮ ತಮ್ಮ ಜಮೀನುಗಳಿಗೆ ಹೋಗಲು ಮುಂದಿನ ರೈತಬಾಂಧವರು ದಾರಿ ಕೊಡಲು ತಕರಾರು ಮಾಡುತ್ತಿದ್ದಾರೆ. ಇದರಿಂದಾಗಿ ರಾಜ್ಯದ ಕೆಲ ರೈತ ಬಾಂಧವರಿಗೆ ಜಮೀನು ಬಿತ್ತನೆ ಮಾಡದೇ ಜಮೀನು ಪಾಳು ಬೀಳುವಂತಹ ಪರಿಸ್ಥಿತಿ ಎದುರಾಗುತ್ತಿದೆ.ರಾಜ್ಯದಲ್ಲಿ ಅನೇಕ ರೈತರು ಜಮೀನು ದಾರಿ ಸಮಸ್ಯೆ ಎದುರಿಸುತ್ತಿದ್ದಾರೆ. ಈಗ ನಡೆಯುತ್ತಿರುವ ಅಧಿವೇಶನದಲ್ಲಿ ರೈತರ ಜಮೀನು ದಾರಿ ಸಮಸ್ಯೆ ಚರ್ಚಿಸಿ ಜಮೀನುಗಳಿಗೆ ಹೋಗಲು ದಾರಿ ಕುರಿತು ಕಾನೂನು ತಿದ್ದುಪಡಿ ಮಾಡಿ ತಹಸೀಲ್ದಾರರಿಗೆ ದಾರಿ…

Read More

ಬಸವನಬಾಗೇವಾಡಿ: ಸುಕ್ಷೇತ್ರ ಧರ್ಮಸ್ಥಳದ ಧರ್ಮಾಧಿಕಾರಿ ಡಾ.ಡಿ.ವಿರೇಂದ್ರ ಹೆಗ್ಗಡೆ ಅವರು ಮದ್ಯವ್ಯಸನಿಗಳನ್ನು ಮದ್ಯದಿಂದ ದೂರಮಾಡುವ ಸದುದ್ದೇಶದಿಂದ ವಿನೂತನವಾಗಿ ಮದ್ಯವರ್ಜನ ಶಿಬಿರವನ್ನು ಆಯೋಜನೆ ಮಾಡುವ ಮೂಲಕ ಮದ್ಯವ್ಯಸನಿಗಳು ಮದ್ಯದಿಂದ ದೂರ ಮಾಡುವಂತೆ ಮಾಡುತ್ತಿರುವ ಕಾರ್ಯ ಶ್ಲಾಘನೀಯ ಎಂದು ಮನಗೂಳಿ ಹಿರೇಮಠದ ಅಭಿನವ ಸಂಗನಬಸವ ಸ್ವಾಮೀಜಿ ಹೇಳಿದರು.ತಾಲೂಕಿನ ಯರನಾಳ ಗ್ರಾಮದ ವಿರಕ್ತಮಠದಲ್ಲಿ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಬಿ.ಸಿ.ಟ್ರಸ್ಟ್. ಅಖಿಲ ಕರ್ನಾಟಕ ಜನಜಾಗೃತಿ ವೇದಿಕೆ, ಮದ್ಯವರ್ಜನ ಶಿಬಿರದ ವ್ಯವಸ್ಥಾಪನಾ ಸಮಿತಿ,ಧರ್ಮಸ್ಥಳದ ಮಂಜುನಾಥೇಶ್ವರ ವ್ಯಸನಮುಕ್ತಿ ಮತ್ತು ಸಂಶೋಧನಾ ಕೇಂದ್ರ, ರಾಜ್ಯ ಮದ್ಯಪಾನ ಸಂಯಮ ಮಂಡಳಿ, ವಿವಿಧ ಸಂಘ-ಸಂಸ್ಥೆಗಳ ಸಹಯೋಗದಲ್ಲಿ ಒಂದು ವಾರ ಕಾಲ ಹಮ್ಮಿಕೊಂಡಿರುವ ೧೮೨೩ ನೇ ಮದ್ಯವರ್ಜನ ಶಿಬಿರದ ಉದ್ಘಾಟನಾ ಸಮಾರಂಭದ ಸಾನಿಧ್ಯ ವಹಿಸಿ ಶಿಬಿರವನ್ನು ಜ್ಯೋತಿ ಬೆಳಗಿಸುವ ಮೂಲಕ ಉದ್ಘಾಟಿಸಿ ಮಾತನಾಡಿದ ಅವರು, ಸಮಾಜದಲ್ಲಿ ಇದುವರೆಗೂ ಯಾರೂ ಮಾಡದೇ ಇರುವ ವಿಶೇಷವಾದ ಕಾರ್ಯಕ್ರಮಗಳನ್ನು ಧರ್ಮಸ್ಥಳದ ಧರ್ಮಾಧಿಕಾರಿ ಡಾ.ಡಿ.ವಿರೇಂದ್ರ ಹೆಗ್ಗಡೆ ಅವರು ಮಾಡುವ ಮೂಲಕ ಸಮಾಜವನ್ನು ಸನ್ಮಾರ್ಗದಲ್ಲಿ ತೆಗೆದುಕೊಂಡು ಹೋಗುತ್ತಿದ್ದಾರೆ. ಮದ್ಯಪಾನದಿಂದ ಅನೇಕ ಕುಟುಂಬಗಳು ಬೀದಿಗೆ…

Read More

ಬಸವನಬಾಗೇವಾಡಿ: ಪಟ್ಟಣದ ವಿಜಯಪುರ ಮುಖ್ಯರಸ್ತೆಯಲ್ಲಿರುವ ಹಳೆ ನ್ಯಾಯಾಲಯ ಎದುರಿನ ಪಾದಚಾರಿ(ಪುಟ್ಪಾತ) ರಸ್ತೆಯ ಮೇಲಿರುವ ಬೀದಿ ಅಂಗಡಿಗಳನ್ನು ಪುರಸಭೆಯಿಂದ ತೆರವು ಗೊಳಿಸುವ ಕಾರ್ಯಾಚರಣೆ ಮಂಗಳವಾರ ಬೆಳ್ಳಂಬೆಳಗ್ಗೆ ಆರಂಭವಾಯಿತು. ನಂತರ ಜನರ ವಿರೋಧದಿಂದಾಗಿ ಅಧಿಕಾರಿಗಳು ಶುಕ್ರವಾರ ಕಾರ್ಯಾಚರಣೆ ಮುಂದೂಡಿದ ಘಟನೆ ಜರುಗಿತು.ಹಳೆಯ ನ್ಯಾಯಾಲಯದ ಎದುರುಗಡೆ ಇದ್ದ ಎರಡು ಬೀದಿ ಬದಿಯ ಅಂಗಡಿಗಳನ್ನು ಜೆಸಿಬಿಯಿಂದ ತೆರವುಗೊಳಿಸಲಾಯಿತು. ನಂತರ ತಾಲೂಕು ಪಂಚಾಯಿತಿ ಎದುರಿಗೆ ಇದ್ದ ಎರಡು ಅಂಗಡಿಗಳನ್ನು ಪುರಸಭೆ ಜೆಸಿಬಿಯಿಂದ ತೆರವುಗೊಳಿಸಲಾಯಿತು.ಬೀದಿ ಬದಿಯ ಅಂಗಡಿಗಳನ್ನು ತೆರವು ಗೊಳಿಸುವ ಕಾರ್ಯಾಚರಣೆ ಸುದ್ದಿ ತಿಳಿಯುತ್ತಿದ್ದಂತೆ ಬೀದಿ ಬದಿಯ ವ್ಯಾಪಾರಸ್ಥರು ಸೇರಿದಂತೆ ಸಾರ್ವಜನಿಕರು ಕಾರ್ಯಾಚರಣೆ ನಡೆಯುವ ಸ್ಥಳಕ್ಕೆ ಬಂದರು. ಸ್ಥಳಕ್ಕೆ ಆಗಮಿಸಿದ್ದ ಪುರಸಭೆ ಹಿರಿಯ ಸದಸ್ಯ ನೀಲಪ್ಪ ನಾಯಕ ಅವರು ಪುರಸಭೆ ಮುಖ್ಯಾಧಿಕಾರಿಗಳಿಗೆ ಯಾಕೆ ಬೀದಿ ಬದಿಯ ಅಂಗಡಿಗಳನ್ನು ತೆರವು ಮಾಡುತ್ತಿದ್ದೀರಿ. ನಿಮ್ಮ ಹತ್ತಿರ ಯಾವ ಆದೇಶವಿದೆ. ಒಮ್ಮೆಲೆ ಈ ರೀತಿಯಾಗಿ ಅಂಗಡಿಗಳನ್ನು ತೆರವು ಗೊಳಿಸಬಾರದು ಎಂದು ಅಧಿಕಾರಿಗಳೊಂದಿಗೆ ವಾಗ್ವಾದ ಮಾಡಿದರು. ಇವರೊಂದಿಗೆ ಕೆಲ ಸಾರ್ವಜನಿಕರು ಜೊತೆಯಾದರು. ಕೆಲ ಹೊತ್ತು ಗೊಂದಲದ…

Read More

-ಮಲಿಕ್. ಎಲ್. ಜಮಾದಾರ ಉಪನ್ಯಾಸಕರು, ಲೇಖಕರು ವಿಜಯಪುರ. ಮೊ:9743129744 ಇಂದು ಮೊಹರಂ ಹಬ್ಬದ ಪ್ರಯುಕ್ತ ವಿಶೇಷ ಲೇಖನ ಭಾರತೀಯ ಸಂಸ್ಕೃತಿಯು ಜಗಮೆಚ್ಚುವಂಥದ್ದು ಅಂತಹ ಪವಿತ್ರ ದೇಶ ನಮ್ಮದು. ವಿವಿಧತೆಯಲ್ಲಿ ಏಕತೆಯ, ಭಾವೈಕ್ಯತೆಯ, ಸಾಂಸ್ಕೃತಿಕ, ಸಾಂಪ್ರದಾಯಿಕ ಹಿನ್ನೆಲೆಯ ನೆಲೆಬೀಡಾಗಿದ್ದು ಅದು ವಿಶೇಷವಾಗಿ ಹಲವು ಧರ್ಮಗಳ ವಿವಿಧ ಆಚರಣೆಗಳಾಧಾರಿತವಾದ ಹಬ್ಬ ಹರಿದಿನಗಳು ನಾವು ಕಾಣುತಿದ್ದೇವೆ.ಇಸ್ಲಾಮಿಕ್ ನ ಹೊಸ ವರ್ಷವೆಂದು ಕರೆಯಲ್ಪಡುವ ‘ಮೊಹರಂ’ ಎಂಬ ಪವಿತ್ರ ತಿಂಗಳು ಅದು ಅಮವಾಸ್ಯೆ ದೃಶ್ಯದೊಂದಿಗೆ ಇಸ್ಲಾಮಿಕ್‌ನ ಪ್ರಸ್ತುತದಲ್ಲಿ ಹಿಜರಿ ಸನ್ ೧೪೪೬ ನೇ ಮೊಹರಂ ಇಸ್ಲಾಮಿಕ್ ಕ್ಯಾಲೆಂಡರ್ ಈ ತಿಂಗಳಿನಿಂದ ಪ್ರಾರಂಭ. ಪ್ರಾರಂಭದ ಹತ್ತು ದಿನಗಳ ಕಾಲ ಆಚರಿಸುವ ಈ ಹಬ್ಬವು ಶೋಕವನ್ನು ಒಳಗೊಂಡಿರುವಂಥದ್ದು.ಮೊಹರಂ ಐತಿಹಾಸಿಕ ಹಿನ್ನೆಲೆ: ಮೊಹರಂ ಎಂಬ ಹಬ್ಬವು ಸುನ್ನಿ ಮತ್ತು ಶಿಯಾ ಮುಸ್ಲಿಂ ಪಂಗಡಗಳು ವಿಭಿನ್ನವಾಗಿ ಆಚರಿಸುತ್ತಾರೆ. ಪ್ರವಾದಿ ಮೊಹಮ್ಮದ ಅವರ ಮೊಮ್ಮಗ ಹುಸೇನ್ ಇಬ್ನ ಅಳಿಯ ಕೊಲೆಯ ಅವರ ಸಾವಿನ ರೋಚಕತೆ ಒಳಗೊಂಡಿರುವ ಇತಿಹಾಸ ಇದಾಗಿದೆ. ಮೊಹರಂ ಎಂಬುದು ಒಂದು ಇಸ್ಲಾಮಿಕ್ ಧರ್ಮದ…

Read More

೨ನೇ ಅವಧಿಗೆ ಘೋಷಣೆಯಾಗದ ಮೀಸಲು | ಏ೨೮ಕ್ಕೆ ಮುಗಿದ ಆಡಳಿತ ಮಂಡಳಿ ಮೊದಲ ಅವಧಿ – ಶಂಕರ್ ಜೆ ಎಮ್ಇಂಡಿ: ನಿರಾಸೆಯಲ್ಲಿ ಪುರಸಭೆ ಸದಸ್ಯರಿದ್ದರೆ, ಆಕ್ರೋಶದಲ್ಲಿ ನಗರ ನಿವಾಸಿಗಳು ಇದ್ದಾರೆ. ಹೌದು ಪುರಸಭೆ ಆಡಳಿತ ಮಂಡಳಿ ರಚನೆ ಇಲ್ಲದ ಕಾರಣಕ್ಕೆ ಪುರಸಭೆ ಸದಸ್ಯರು ವಾರ್ಡಗಳಲ್ಲಿ ಮತ್ತು ಸಾರ್ವಜನಿಕರ ಕೆಲಸಗಳನ್ನು ಮಾಡಲು ಅನಾನುಕೂಲ ಉಂಟಾಗಿದೆ ಎಂಬ ಬೇಸರದಲ್ಲಿದ್ದರೆ, ಇನ್ನೊಂದು ಕಡೆ ಭರವಸೆಯಿಟ್ಟು ಸದಸ್ಯರನ್ನ ಆಯ್ಕೆ ಮಾಡಿದ್ದೇವೆ. ಆದರೆ ವಾರ್ಡಗಳಲ್ಲಿ ಸದಸ್ಯರು ಕೆಲಸ ಮಾಡುತ್ತಿಲ್ಲ ಎಂಬ ವಿಚಾರದಲ್ಲಿ ಆಕ್ರೋಶದಲ್ಲಿ ನಗರ ನಿವಾಸಿಗಳು ಇದ್ದಾರೆ. ಇದು ಭವಿಷ್ಯದ ಜಿಲ್ಲಾ ಕೇಂದ್ರದ ಕನಸು ಕಾಣುತ್ತಿರುವ ಇಂಡಿ ಪುರಸಭೆಯ ಕಥೆ-ವ್ಯಥೆ!ಇಂಡಿ ಪುರಸಭೆ ಆಡಳಿತ ಮಂಡಳಿಯ ಮೊದಲ ಅವಧಿ ಮುಕ್ತಾಯವಾಗಿದ್ದು, ಮುಂದಿನ ಅವಧಿಗೆ ಅಧ್ಯಕ್ಷ- ಉಪಾಧ್ಯಕ್ಷರ ಆಯ್ಕೆ ಆಗಬೇಕಿದೆ. ಎರಡನೇ ಅವಧಿಗೆ ಮೀಸಲು ನಿಗದಿಯಾಗದ ಕಾರಣ ಸದ್ಯಕ್ಕೆ ನೂತನ ಆಡಳಿತ ಮಂಡಳಿ ರಚನೆಯಾಗುವುದು ಅನುಮಾನ ಎಂಬಂತಾಗಿದೆ.ಪುರಸಭೆ ಆಡಳಿತ ಮಂಡಳಿಯ ಮೊದಲ ಅವಧಿ ಏ.೨೮ಕ್ಕೆ ಕೊನೆಗೊಂಡಿದೆ. ಆ ಮೂಲಕ ಶೈಲಜಾ ಪೂಜಾರಿ,…

Read More

ವಿಜಯಪುರ: ಕರ್ನಾಟಕ ಪರಿಶಿಷ್ಟ ಪಂಗಡ ವಾಲ್ಮೀಕಿ ರಾಜ್ಯ ಯುವ ಘಟಕದ ವತಿಯಿಂದ ಶ್ರೀ ಮಹರ್ಷಿ ವಾಲ್ಮೀಕಿ ಅಭಿವೃದ್ಧಿ ನಿಗಮದಲ್ಲಿ 187 ಕೋಟಿ ಭ್ರಷ್ಟಾಚಾರದಲ್ಲಿ ಪಾಲ್ಗೊಂಡಿದ್ದ ನಿಗಮದ ಅಧಿಕಾರಿಗಳು ಮತ್ತು ರಾಜಕಾರಣಿಗಳ ಮೇಲೆ ಕಾನೂನು ಶಿಸ್ತು ಕ್ರಮ ಜರುಗಿಸಿ ಮರಳಿ ನಿಗಮಕ್ಕೆ ವಿನಿಯೋಗ ಮಾಡಬೇಕು,ಪ್ರತಿ ವರ್ಷ ಸರಕಾರದ ವತಿಯಿಂದ ಪ. ಜಾತಿ /ಪ. ಪಂಗಡ ಸಮುದಾಯದ ಜನರಿಗೆ ಅಂಬೇಡ್ಕರ್ ಅವರ ನಿಗಮದಿಂದ ಮತ್ತು ವಾಲ್ಮೀಕಿ ಅಭಿವೃದ್ಧಿ ನಿಗಮದಿಂದ ಹಲವು ಯೋಜನೆಗಳು ಒಳಗೊಂಡ ಅರ್ಜಿ ಕರೆಯಲಾಗುತ್ತದೆ. ಪ್ರತಿ ವರ್ಷ ಫಲಾನುಭವಿಗಳಿಗೆ ಯೋಜನೆಗಳು ತಲುಪುವಂತಾಗಬೇಕು ಎಂದು ಕರ್ನಾಟಕ ಪರಿಶಿಷ್ಟ ಪಂಗಡದ ವಾಲ್ಮೀಕಿ ರಾಜ್ಯ ಯುವ ಘಟಕದ ಜಿಲ್ಲಾಧ್ಯಕ್ಷರಾದ ಅಮರೇಶ್ ಉಪ್ಪಳದ್ದಿನಿಯವರು ರಾಜ್ಯಪಾಲರು ಮತ್ತು ಮುಖ್ಯಮಂತ್ರಿಗಳಿಗೆ ಮನವಿ ಸಲ್ಲಿಸಿ ಮಾತನಾಡಿದರು.ವಾಲ್ಮೀಕಿ ನಿಗಮದಲ್ಲಿ ಬ್ರಹ್ಮಾಂಡ ಬ್ರಷ್ಟಾಚಾರವಾಗಿದೆ ಅಧಿಕಾರಿಗಳು ಮತ್ತು ರಾಜಕಾರಣಿಗಳು ಸಮುದಾಯಕ್ಕೆ ಅನ್ಯಾಯ ಮಾಡಿದ್ದಾರೆ ನಿಗಮ ಇರುವದು ಬಡಜನರ ಕಲ್ಯಾಣಕ್ಕಾಗಿ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದ ಸಮುದಾಯಗಳಿಗೆ ಸಿಗುವ ಅನುದಾನ ತುಂಬಾ ಕಡಿಮೆ ಮಾಡಲಾಗಿದೆ ಅನುದಾನದಲ್ಲಿ ಕನಿಷ್ಠ20%…

Read More