ಬಸವನಬಾಗೇವಾಡಿ: ತಾಲೂಕಿನ ಇಂಗಳೇಶ್ವರ ಗ್ರಾಮಕ್ಕೆ ಐವರು ಸ್ವಿಪ್ಟ್ ಕಾರಿನಲ್ಲಿ ಜುಲೈ ೮ ರಂದು ರಾತ್ರಿ ಹೋಗುವಾಗ ಮಾರ್ಗಮಧ್ಯ ರಸ್ತೆ ಬದಿಯಲ್ಲಿರುವ ಪೂಟ್ ಕಟ್ಟೆಗೆ ಚಾಲಕನ ನಿಯಂತ್ರಣ ತಪ್ಪಿ ಅಪಘಾತ ಸಂಭವಿಸಿದ ಸ್ಥಳದಲ್ಲಿಯೇ ಇಬ್ಬರು ಮೃತಪಟ್ಟು, ಒರ್ವ ಗಂಭೀರ ಗಾಯಗೊಂಡು, ಇನ್ನಿಬ್ಬರಿಗೆ ಗಾಯಗೊಂಡ ಘಟನೆ ಜರುಗಿತ್ತು. ಇದೀಗ ಸಾಮಾಜಿಕ ಜಾಲ ತಾಣದಲ್ಲಿ ಕುಡಿದ ಮತ್ತಿನಲ್ಲಿ ಖುಷಿಯಲ್ಲಿ ತೇಲಾಡುತ್ತಿದ್ದಾಗ ಕಾರು ಅಪಘಾತವಾಗುವ ದೃಶ್ಯ ಎಲ್ಲೆಡೆ ವೈರಲ್ ಆಗಿದೆ.
ಬಸವನಬಾಗೇವಾಡಿಯಲ್ಲಿ ಎಣ್ಣೆ ಪಾರ್ಟಿ ಮಾಡಿಕೊಂಡು ರಾತ್ರಿ ಕಾರಿನಲ್ಲಿ ತಮ್ಮ ಇಂಗಳೇಶ್ವರ ಗ್ರಾಮಕ್ಕೆ ತೆರಳುವಾಗ ಕಾರಿನ ಮುಂಭಾಗ ಕುಳಿತುಕೊಂಡಿದ್ದ ಮಾಳಪ್ಪ ಡೋಳಗೊಂಡ ಅವರು ಮೊಬೈಲ್ನಲ್ಲಿ ಕಾರಿನ ಮುಂಭಾಗ ರಸ್ತೆಯ ವಿಡಿಯೋ ಚಿತ್ರೀಕರಣ ಮಾಡುವಾಗ ಹೇಂಗಿದ್ದಿ ಹೆಂಗ್ಯಾದಿ, ಕುಡುಕ ಕುಡುಕ ಅಂತ ಕರಿಯಬ್ಯಾಡ ನೀನ ಅನ್ನೊ ಲವ್ ಫೇಲ್ಯೂರ್ ಹಾಡು ಹಾಕಿಕೊಂಡು ಕಾರಿನಲ್ಲಿ ಕಾರಿನಲ್ಲಿದವರು ಹಾಡಿಗೆ ಧ್ವನಿಗೂಡಿಸಿದ ಸಂದರ್ಭದಲ್ಲಿ ಒವರ್ ಸ್ಪೀಡ್ನಲ್ಲಿ ಕಾರು ಚಾಲಕನ ನಿಯಂತ್ರಣ ತಪ್ಪಿ ರಸ್ತೆ ಪಕ್ಕದ ಪೂಟ್ ಕಟ್ಟೆಗೆ ಡಿಕ್ಕಿ ಹೊಡೆದ ದೃಶ್ಯ ವೈರಲ್ ಆಗಿದೆ. ನಂತರ ವಿಡಿಯೋ ಆಫ್ ಆಗಿ ನರಳಾಟದ ಧ್ವನಿ ಕೇಳಿ ಬರುತ್ತದೆ. ಏ ಮಾಳಾ, ರೇವಣಸಿದ್ದ, ಏ ಅಣ್ಣ, ಏ ಮಾಳಾ, ಏ ಅಣ್ಣ ಏನು ಆಗಿಲ್ಲ. ಏಳು ಏಳು, ಏನು ಹುಚ್ಚ ಅದಿಯೋ, ಪಟ್ಟನೇ ಹೊರಗ ನಡಿ, ಕಾಲ ಬೀಳತೀನಿ, ಬಾಳಾ ಡೇಂಜರ್ ಆಕ್ಸಿಂಡೆಟ್ ಆಗಿದೆ. ಬೇಗ ಹೊರಗ ನಡಿ, ಪೋನ್ ಹಚ್ಚಬೇಕೆಂದು ಅಂದಿರೋ ಅಡಿಯೋ ಕೇಳಿ ಬರುತ್ತಿದೆ.
ಈ ಅಪಘಾತದಲ್ಲಿ ಸ್ಥಳದಲ್ಲಿಯೇ ಮಾಳಪ್ಪ ಡೋಳಗೊಂಡ(೩೦), ಪ್ರಶಾಂತ ಮಿಣಜಗಿ (೨೮) ಮೃತಪಟ್ಟಿದ್ದರು.
ಗಂಭೀರ ಗಾಯಗೊಂಡಿದ್ದ ರೇವಣಸಿದ್ದ ಶೇಖಣ್ಣಿ (೨೪) ಅವರು ಆಸ್ಪತ್ರೆಯಲ್ಲಿ ಚಿಕಿತ್ಸೆ ಫಲಿಸದೇ ಮೃತ ಪಟ್ಟಿದ್ದಾರೆ. ವಿಜಯಕುಮಾರ ದಳವಾಯಿ(೨೦), ಮಾಳಪ್ಪ ತೆಲಗಿ( ೨೧) ಇವರು ಗಾಯಗೊಂಡಿದ್ದು ಪ್ರಾಣಾಪಾಯದಿಂದ ಪಾರಾಗಿದ್ದಾರೆ.
Subscribe to Updates
Get the latest creative news from FooBar about art, design and business.
Related Posts
Add A Comment
