Close Menu
  • ಮುಖಪುಟ
  • (ರಾಜ್ಯ ) ಜಿಲ್ಲೆ
  • ವಿಶೇಷ ಲೇಖನ
  • ಸಾಹಿತ್ಯ
  • ಆರೋಗ್ಯ
  • ಚಿಂತನ
  • ಪ್ರೇಮಲೋಕ
  • ದಿನಪತ್ರಿಕೆ
  • ಸಂಪರ್ಕಿಸಿ

Subscribe to Updates

Get the latest creative news from FooBar about art, design and business.

What's Hot

ಜು.೧೯ ರಂದು ಕಾನಿಪ ಸಂಘದ ವಾರ್ಷಿಕ ಸಾಮಾನ್ಯ ಸಭೆ

ಉದಯರಶ್ಮಿ ಇಂದಿನ ದಿನಪತ್ರಿಕೆ ಜುಲೈ 18, 2026

ಕಾರ್ಯನಿರತ ಪತ್ರಕರ್ತರ ಸಂಘದ ವಾರ್ಷಿಕ ಜಿಲ್ಲಾ ಪ್ರಶಸ್ತಿ ಪ್ರಕಟ

Facebook X (Twitter) Instagram
  • ಮುಖಪುಟ
  • (ರಾಜ್ಯ ) ಜಿಲ್ಲೆ
  • ವಿಶೇಷ ಲೇಖನ
  • ಸಾಹಿತ್ಯ
  • ಆರೋಗ್ಯ
  • ಚಿಂತನ
  • ಪ್ರೇಮಲೋಕ
  • ದಿನಪತ್ರಿಕೆ
  • ಸಂಪರ್ಕಿಸಿ
Facebook X (Twitter) Instagram YouTube WhatsApp
udayarashminews.comudayarashminews.com
  • ಮುಖಪುಟ
  • (ರಾಜ್ಯ ) ಜಿಲ್ಲೆ
  • ವಿಶೇಷ ಲೇಖನ
  • ಸಾಹಿತ್ಯ
  • ಆರೋಗ್ಯ
  • ಚಿಂತನ
  • ಪ್ರೇಮಲೋಕ
  • ದಿನಪತ್ರಿಕೆ
  • ಸಂಪರ್ಕಿಸಿ
udayarashminews.comudayarashminews.com
Home»ವಿಶೇಷ ಲೇಖನ»ತ್ಯಾಗ ಬಲಿದಾನದ, ಹಿಂದು-ಮುಸ್ಲಿಂ ಭಾವೈಕ್ಯತೆ ಸಂಕೇತ ಪವಿತ್ರ ’ಮೊಹರಂ’ ಹಬ್ಬ
ವಿಶೇಷ ಲೇಖನ

ತ್ಯಾಗ ಬಲಿದಾನದ, ಹಿಂದು-ಮುಸ್ಲಿಂ ಭಾವೈಕ್ಯತೆ ಸಂಕೇತ ಪವಿತ್ರ ’ಮೊಹರಂ’ ಹಬ್ಬ

By No Comments3 Mins Read
Facebook Twitter Pinterest LinkedIn Telegram WhatsApp
Share
Facebook Twitter LinkedIn Email Telegram WhatsApp

-ಮಲಿಕ್. ಎಲ್. ಜಮಾದಾರ ಉಪನ್ಯಾಸಕರು, ಲೇಖಕರು ವಿಜಯಪುರ. ಮೊ:9743129744

ಇಂದು ಮೊಹರಂ ಹಬ್ಬದ ಪ್ರಯುಕ್ತ ವಿಶೇಷ ಲೇಖನ

ಭಾರತೀಯ ಸಂಸ್ಕೃತಿಯು ಜಗಮೆಚ್ಚುವಂಥದ್ದು ಅಂತಹ ಪವಿತ್ರ ದೇಶ ನಮ್ಮದು. ವಿವಿಧತೆಯಲ್ಲಿ ಏಕತೆಯ, ಭಾವೈಕ್ಯತೆಯ, ಸಾಂಸ್ಕೃತಿಕ, ಸಾಂಪ್ರದಾಯಿಕ ಹಿನ್ನೆಲೆಯ ನೆಲೆಬೀಡಾಗಿದ್ದು ಅದು ವಿಶೇಷವಾಗಿ ಹಲವು ಧರ್ಮಗಳ ವಿವಿಧ ಆಚರಣೆಗಳಾಧಾರಿತವಾದ ಹಬ್ಬ ಹರಿದಿನಗಳು ನಾವು ಕಾಣುತಿದ್ದೇವೆ.
ಇಸ್ಲಾಮಿಕ್ ನ ಹೊಸ ವರ್ಷವೆಂದು ಕರೆಯಲ್ಪಡುವ ‘ಮೊಹರಂ’ ಎಂಬ ಪವಿತ್ರ ತಿಂಗಳು ಅದು ಅಮವಾಸ್ಯೆ ದೃಶ್ಯದೊಂದಿಗೆ ಇಸ್ಲಾಮಿಕ್‌ನ ಪ್ರಸ್ತುತದಲ್ಲಿ ಹಿಜರಿ ಸನ್ ೧೪೪೬ ನೇ ಮೊಹರಂ ಇಸ್ಲಾಮಿಕ್ ಕ್ಯಾಲೆಂಡರ್ ಈ ತಿಂಗಳಿನಿಂದ ಪ್ರಾರಂಭ. ಪ್ರಾರಂಭದ ಹತ್ತು ದಿನಗಳ ಕಾಲ ಆಚರಿಸುವ ಈ ಹಬ್ಬವು ಶೋಕವನ್ನು ಒಳಗೊಂಡಿರುವಂಥದ್ದು.
ಮೊಹರಂ ಐತಿಹಾಸಿಕ ಹಿನ್ನೆಲೆ: ಮೊಹರಂ ಎಂಬ ಹಬ್ಬವು ಸುನ್ನಿ ಮತ್ತು ಶಿಯಾ ಮುಸ್ಲಿಂ ಪಂಗಡಗಳು ವಿಭಿನ್ನವಾಗಿ ಆಚರಿಸುತ್ತಾರೆ. ಪ್ರವಾದಿ ಮೊಹಮ್ಮದ ಅವರ ಮೊಮ್ಮಗ ಹುಸೇನ್ ಇಬ್ನ ಅಳಿಯ ಕೊಲೆಯ ಅವರ ಸಾವಿನ ರೋಚಕತೆ ಒಳಗೊಂಡಿರುವ ಇತಿಹಾಸ ಇದಾಗಿದೆ. ಮೊಹರಂ ಎಂಬುದು ಒಂದು ಇಸ್ಲಾಮಿಕ್ ಧರ್ಮದ ಪವಿತ್ರ ತಿಂಗಳಲ್ಲಿ ಒಂದಾಗಿದ್ದು ಮೊಹರಂಅನ್ನು ಅರೆಬಿಕ್ ಭಾಷೆಯಲ್ಲಿ ‘ಮುಹ್ರಾಮ್’ ಎಂದು ಕರೆಯಲಾಗುತ್ತದೆ. ಪವಿತ್ರ ರಂಜಾನ್ ತಿಂಗಳ ನಂತರ ಇಸ್ಲಾಮಿಕ್‌ನ ಮೊದಲ ವರ್ಷವೆಂದು ಮೊಹರಂ ತಿಂಗಳು ಕರೆಯಲಾಗುತ್ತದೆ. ವಿಶೇಷವೆಂದರೆ ಇಸ್ಲಾಮಿಕ್ ಕ್ಯಾಲೆಂಡರ್ ಇದು ಚಂದ್ರನ ಕ್ಯಾಲೆಂಡರ್ ಆಗಿದ್ದು ಗ್ರೆಗೋರಿಯನ್ ಕ್ಯಾಲೆಂಟರ್ ನೊಂದಿಗೆ ಹೋಲಿಸಿದಾಗ ಮೊಹರಂ ವರ್ಷದಿಂದ ವರ್ಷಕ್ಕೆ ಚಲಿಸುತ್ತದೆ. ಈ ಒಂದು ಪವಿತ್ರ ಇಸ್ಲಾಮಿಕ್ ತಿಂಗಳಲ್ಲಿ ಮೊಹರಂ ಹತ್ತನೆಯ ದಿನ ಶಿಯಾ ರಿಗೆ ಮೊಹರಂ ಆಪ್ ಮೌರ್ನ (ಶೋಕಾಚರಣೆ) ಮತ್ತು ಶುನ್ನಿ ಮುಸ್ಲಿಂರಿಗೆ ಒಂದು ದಿನದ ಉಪವಾಸ ಮಾಡಲಾಗುತ್ತದೆ. ಈ ಸಂದರ್ಭದಲ್ಲಿ ಶಿಯಾ ಅವರ ಕುಟುಂಬ ಮರಣವನ್ನು ಸ್ಮರಿಸಿ ದುಃಖ ಪಡುತ್ತಾರೆ. ಹುತಾತ್ಮರ ತ್ಯಾಗ ಬಲಿದಾನವನ್ನು ಸ್ಮರಿಸುತ್ತಾರೆ. ಈ ದಿನದಂದು ಜಿಯಾರತ್ ಅನ್ನು ಓದುವುದು ಜನಪ್ರೀಯವಾಗಿದೆ.


ಮೊಹರಂ ಇದು ಸ್ಮರಣೆಯ ತಿಂಗಳಾಗಿದ್ದು ಮತ್ತು ಶಿಯಾ ಧ್ಯಾನವಾಗಿದ್ದು ಇದನ್ನು ಸಾಮಾನ್ಯವಾಗಿ ಅಶುರಾಗ ಸಮಾನಾರ್ಥಕವೆಂದು ಪರಿಗಣಿಸಲಾಗುತ್ತದೆ. “ಅಶುರ” ಎಂದರೆ ಅರೇಬಿಕ್ ಭಾಷೆಯಲ್ಲಿ “ಹತ್ತನೆ” ಎಂಬ ಅರ್ಥವನ್ನು ಸೂಚಿಸಲಾಗುತ್ತದೆ. ಮೊಹಮ್ಮದ್ ಅವರ ಮೊಮ್ಮಗ ಹುಸೇನ್ ಇಬ್ನ ಅಳಿಯ ಕೊಲೆಯ ಐತಿಹಾಸಿಕ ಪ್ರಾಮುಖ್ಯತೆ ಮತ್ತು ದುಃಖದಿಂದ ಇದು ಪ್ರಸಿದ್ದಿ ಪಡೆದಿದೆ. ಜಗತ್ತಿಗೆ ಸೈನ್ಯ ಮತ್ತು ಶಸ್ತ್ರಾಸ್ತ್ರಗಳ ಬದಲು ನ್ಯಾಯ ಮತ್ತು ಸತ್ಯವನ್ನು ಜೀವಂತವಾಗಿರಿಸಲು ಜೀವನವನ್ನು ತ್ಯಾಗಮಾಡುವುದು ಮೂಲಕ ಯಶಸ್ಸು ಸಾಧಿಸಬಹುದು ಎಂದು ಜಗತ್ತಿಗೆ ತೋರಿಸಿದ, ಅಲ್ಲದೆ ಶೋಷಣೆಯನ್ನು ಮೆಟ್ಟಿ ನಿಲ್ಲುವುದು ಹೇಗೆ ಎಂದು ಜಗತ್ತಿಗೆ ಸಾರಿದ ಇಮಾಮ ಹುಸೇನ್ ಅವರ ಖಲಿಫಾ ಕರ್ಬಲಾ ಎಂಬ ಪ್ರದೇಶದಲ್ಲಿ ಹುಸೇನ್ ಅವರನ್ನು ಕೊಲ್ಲಲಾಯಿತು. ಇವರ ನೆನಪಿನ ಹಿನ್ನಲೆ ಮೊಹರಂ ಆಚರಿಸಲಾಗುತ್ತದೆ.


ಶಿಯತ್ ಮೊದಲ ರಾತ್ರಿಯಲ್ಲಿ ದುಃಖದಿಂದ ಪ್ರಾರಂಭವಾಗುತ್ತದೆ. ಅದೇ ರೀತಿಯಾಗಿ ಹತ್ತು ದಿನಗಳ ವರೆಗೆ ಮುಂದುವರೆಯುತ್ತದೆ. ಅಶೋರಾದ ಹತ್ತನೇ ದಿನದಂದು ಪರಾಕಾಷ್ಠೆಗೊಳ್ಳುತ್ತದೆ. ಇದನ್ನು “ಅಶುರ” ದಿನವೆಂದು ಕರೆಯಲಾಗುತ್ತದೆ. ಈ ರೀತಿಯಾಗಿ ಒಂದು ಮೌರ್ನಿಂಗ್ ಅಥವಾ ಆಚರಣೆಯ ಸ್ಮರಣೆ ಶಿಯಾ ಮತ್ತು ಸುನ್ನಿ ಪಂಗಡಗಳ ಇಸ್ಲಾಮಿಕ್ ಸಂಬಂಧಿಸಿರುವ ಒಂದು ತನ್ನದೇ ಆದ ಐತಿಹ್ಯ ಹೊಂದಿರುವ ಸಾಂಪ್ರದಾಯಿಕ ಆಚರಣೆಯಾಗಿದೆ. ಇಂದಿಗೂ ಜಗತ್ತಿನಾದ್ಯಂತವಾಗಿ ಆಚರಿಸುವ ಒಂದು ವಿಶೇಷ ಹಬ್ಬ ಇದಾಗಿದೆ.
ನಮ್ಮ ಉತ್ತರ ಕರ್ನಾಟಕದಲ್ಲಿ ವಿಶೇಷ ಆಚರಣೆ ಹಿಂದು-ಮುಸ್ಲಿಂ ಭಾಂದವ್ಯದ ಸ್ವರೂಪ:
ಪ್ರಸ್ತುತದಲ್ಲಿ ಮೊಹರಂ ಹಬ್ಬ ದೇಶ್ಯಾದ್ಯಂತ ಹಿಂದು ಮುಸ್ಲಿಂ ಭಾಂಧವ್ಯದ ಪ್ರತೀಕವಾಗಿ ಹೊರಹೊಮ್ಮಿದೆ. ವಿವಿಧತೆಯಲ್ಲಿ ಏಕತೆ ಸಾರುವ ನಮ್ಮ ದೇಶದಲ್ಲಿ ಭಾವೈಕ್ಯತೆ ಸಂಕೇತವಾಗಿ ಪ್ರಮುಖ ಪಾತ್ರವಹಿಸುತ್ತದೆ, ಹಿಂದು ಮುಸ್ಲಿಂ ಎಂಬ ಭೇದಭಾವವಿಲ್ಲದೆ ಆಚರಿಸುವ ಹಬ್ಬವಾಗಿದೆ. ಕರ್ನಾಟಕ ರಾಜ್ಯದಲ್ಲಿ ವಿಶಿಷ್ಟವಾಗಿ ಆಚರಿಸಲಾಗುತ್ತದೆ, ವಿಶೇಷ ಉತ್ತರ ಕರ್ನಾಟಕ ಭಾಗದಲ್ಲಿ ಹಿಂದು-ಮುಸ್ಲಿಂ ಒಗ್ಗಟ್ಟಾಗಿ ವಿಭಿನ್ನವಾಗಿ ಎಲ್ಲರೂ ಸಾಂಪ್ರದಾಯಿಕವಾಗಿ ಆಚರಿಸುವ ಪದ್ದತಿ ರೂಡಿಗತವಾಗಿ ಹೊರಹೊಮ್ಮಿದೆ. ಅಲಾಯಿ ದೇವರುಗಳ ಪಂಜಿನ ಮೆರವಣಿಗೆ, ವಿವಿಧ ಸಾಂಸ್ಕೃತಿಕ ಸ್ಪರ್ದೆಗಳು ಏರ್ಪಡಿಸುವುದು, ಕರ್ಬಲಾ ಗೀತೆಗಳು ಹಾಡುವುದು, ಬೀಬಿ ಫಾತಿಮಾ ಗೀತೆಗಳ ಹಾಡುವುದು, ಹಳ್ಳಿ ಸೊಗಡಿನಲ್ಲಿ ನೃತ್ಯ,ಗೆಜ್ಜೆ ಪದಗಳು, ವಿವಿಧ ನೃತ್ಯ ಕಲಾವಿದರಿಂದ ಸಾಹಸ ಪ್ರದರ್ಶನ ಹಾಗೂ ಅಲಾಯಿ ದೇವರುಗಳ ಶೋಕದಿಂದ ಭರಿತವಾದ ಸಂದರ್ಭವನ್ನು ಸ್ಮರಿಸಿ ಶ್ರದ್ಧಾ ಭಕ್ತಿಯಿಂದ ಅಗ್ನಿಕುಂಡವನ್ನು ಪ್ರವೇಶಿಸುವುದು ಹೀಗೆ ಮೊಹರಂ ಹಬ್ಬ ಉತ್ತರ ಕರ್ನಾಟಕದ ಭಾಗದಲ್ಲೆಲ್ಲ ವಿಭಿನ್ನವಾಗಿ ಆಚರಿಸಲಾಗುತ್ತದೆ.
ಗಾಮೀಣ ಭಾಗದ ಅನೇಕ ಕಡೆಗಳೆಲ್ಲ ಹಿಂದೂಗಳೇ ಪೂಜೆ ಸಲ್ಲಿಸಿ ಅಲಾಯಿ ದೇವರಿಗೆ ಶ್ರದ್ಧಾಭಕ್ತಿಯಿಂದ ವಿಶೇಷ ಭಕ್ತಿ ಮೆರೆಯುತ್ತಾರೆ. ಈ ರೀತಿ ಎಲ್ಲರೂ ಭೇದಭಾವವಿಲ್ಲದ ಏಕತೆಯ ಪತ್ರೀಕ, ಸಾಂಪ್ರದಾಯಿಕವಾಗಿ ದೇಶದ ಪ್ರತಿಯೊಂದು ಮೂಲೆಮೂಲೆಯಲ್ಲೂ ಈ ಮೊಹರಂ ಆಚರಿಸುತ್ತಾರೆ. ಈ ಸಂದರ್ಭದಲ್ಲಿ ಮೊಹರಂನ ಹತ್ತನೇ ದಿನದಂದು ಉಪವಾಸ, ಕಠಿಣ ವೃತವನ್ನು ಕೈಗೊಂಡು ಭಕ್ತಿಭಾವದಿಂದ ನಮನ ಸಲ್ಲಿಸುತ್ತಾರೆ.

– ಮಲಿಕ್. ಎಲ್. ಜಮಾದಾರ
ಉಪನ್ಯಾಸಕರು, ಲೇಖಕರು
ವಿಜಯಪುರ. ಮೊ:9743129744

BIJAPUR NEWS public public news udaya rashmi Udayarashmi today newspaper udayarashminews.com
Share. Facebook Twitter Pinterest Email Telegram WhatsApp
  • Website

Related Posts

ಜು.೧೯ ರಂದು ಕಾನಿಪ ಸಂಘದ ವಾರ್ಷಿಕ ಸಾಮಾನ್ಯ ಸಭೆ

ಉದಯರಶ್ಮಿ ಇಂದಿನ ದಿನಪತ್ರಿಕೆ ಜುಲೈ 18, 2026

ಕಾರ್ಯನಿರತ ಪತ್ರಕರ್ತರ ಸಂಘದ ವಾರ್ಷಿಕ ಜಿಲ್ಲಾ ಪ್ರಶಸ್ತಿ ಪ್ರಕಟ

ಕ್ಷಯ ಮುಕ್ತ ಭಾರತ ವಿಶೇಷ ಕಾರ್ಯಕ್ರಮಕ್ಕೆ ಚಾಲನೆ

Add A Comment
Leave A Reply Cancel Reply

Categories
  • (ರಾಜ್ಯ ) ಜಿಲ್ಲೆ
  • Helldivers
  • Typora
  • Uncategorized
  • Wemod
  • ಆರೋಗ್ಯ
  • ಇತರೆ
  • ಕಾವ್ಯರಶ್ಮಿ
  • ಚಿಂತನ
  • ದಿನಪತ್ರಿಕೆ
  • ಪುಸ್ತಕ ಪರಿಚಯ
  • ಪ್ರೇಮಲೋಕ
  • ಭಾವರಶ್ಮಿ
  • ರಾಷ್ಚ್ರ
  • ವಿಜಯಪುರ
  • ವಿದ್ಯಾರ್ಥಿ ನಿಧಿ
  • ವಿಶೇಷ ಲೇಖನ
  • ಸಾಹಿತ್ಯ
  • ಸಿನಿಮಾ
  • ಹೊತ್ತಿಗೆ ಹೊರಣ
Recent Posts
  • ಜು.೧೯ ರಂದು ಕಾನಿಪ ಸಂಘದ ವಾರ್ಷಿಕ ಸಾಮಾನ್ಯ ಸಭೆ
    In (ರಾಜ್ಯ ) ಜಿಲ್ಲೆ
  • ಉದಯರಶ್ಮಿ ಇಂದಿನ ದಿನಪತ್ರಿಕೆ ಜುಲೈ 18, 2026
    In ದಿನಪತ್ರಿಕೆ
  • ಕಾರ್ಯನಿರತ ಪತ್ರಕರ್ತರ ಸಂಘದ ವಾರ್ಷಿಕ ಜಿಲ್ಲಾ ಪ್ರಶಸ್ತಿ ಪ್ರಕಟ
    In (ರಾಜ್ಯ ) ಜಿಲ್ಲೆ
  • ಕ್ಷಯ ಮುಕ್ತ ಭಾರತ ವಿಶೇಷ ಕಾರ್ಯಕ್ರಮಕ್ಕೆ ಚಾಲನೆ
    In (ರಾಜ್ಯ ) ಜಿಲ್ಲೆ
  • ಆಪ್ತ ಸಮಾಲೋಚನೆ & ಪರೀಕ್ಷಾ ಕೇಂದ್ರ ಸ್ಥಾಪನೆಗೆ ಆಗ್ರಹ
    In (ರಾಜ್ಯ ) ಜಿಲ್ಲೆ
  • ಅರಳದಿನ್ನಿಯಲ್ಲಿ ಮಳೆಗಾಗಿ ವಿಶೇಷ ಪ್ರಾರ್ಥನೆ :ಗುರ್ಜಿ ಸೇವೆ
    In (ರಾಜ್ಯ ) ಜಿಲ್ಲೆ
  • ಸ್ಪರ್ಧಾತ್ಮಕ ಪರೀಕ್ಷೆಗಳ ತರಬೇತಿಗಾಗಿ ಅರ್ಜಿ ಆಹ್ವಾನ
    In (ರಾಜ್ಯ ) ಜಿಲ್ಲೆ
  • ಬೆಳೆ ವಿಮೆಗೆ ಅಧಿಸೂಚಿಸಿದ ಬೆಳೆಗಳ ವಿವರ
    In (ರಾಜ್ಯ ) ಜಿಲ್ಲೆ
  • ಬೆಳೆ ವಿಮೆ ಮಾಡಿಸಲು ರೈತರಿಗೆ ಡಿಸಿ ಡಾ.ಆನಂದ್ ಮನವಿ
    In (ರಾಜ್ಯ ) ಜಿಲ್ಲೆ
  • ವಿವಿಧ ಕೋರ್ಸ್ಗಳಿಗೆ ಪ್ರವೇಶಾತಿ ಆರಂಭ
    In (ರಾಜ್ಯ ) ಜಿಲ್ಲೆ
Editors Picks
Top Reviews
udayarashminews.com
Facebook X (Twitter) Instagram Pinterest Vimeo YouTube
  • ಮುಖಪುಟ
  • (ರಾಜ್ಯ ) ಜಿಲ್ಲೆ
  • ವಿಶೇಷ ಲೇಖನ
  • ಸಾಹಿತ್ಯ
  • ಆರೋಗ್ಯ
  • ಚಿಂತನ
  • ಪ್ರೇಮಲೋಕ
  • ದಿನಪತ್ರಿಕೆ
  • ಸಂಪರ್ಕಿಸಿ
© 2026 udayarashminews.com. Designed by udayarashmi news .

Type above and press Enter to search. Press Esc to cancel.