ಬಸವನಬಾಗೇವಾಡಿ: ಪಟ್ಟಣದ ತಹಸೀಲ್ದಾರ ಕಚೇರಿಯ ಆವರಣದಲ್ಲಿ ಜುಲೈ ೧೯ ರಂದು ಬೆಳಗ್ಗೆ ೧೧ ಗಂಟೆಗೆ ಅಖಂಡ ಕರ್ನಾಟಕ ರೈತಸಂಘದ ನೇತೃತ್ವದಲ್ಲಿ ತಾಲೂಕಿನ ನಾಗರಾಳಹುಲಿ ಗ್ರಾಮದ ರೈತ ಕುಟುಂಬ ಸೇರಿದಂತೆ ಜಮೀನಿಗೆ ದಾರಿ ಬೇಕಾದ ರೈತರೊಂದಿಗೆ ಜಮೀನು ದಾರಿಗಾಗಿ ಕಾನೂನು ತಿದ್ದುಪಡಿ ಸರ್ಕಾರ ಮಾಡಬೇಕೆಂದು ಆಗ್ರಹಿಸಿ ಅಹೋರಾತ್ರಿ ಧರಣಿ ಆರಂಭಿಸಲಾಗುವುದು ಎಂದು ಅಖಂಡ ಕರ್ನಾಟಕ ರೈತ ಸಂಘದ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಅರವಿಂದ ಕುಲಕರ್ಣಿ ತಿಳಿಸಿದ್ದಾರೆ.
ಈ ಕುರಿತು ಪತ್ರಿಕಾ ಪ್ರಕಟಣೆ ನೀಡಿರುವ ಅವರು, ರಾಜ್ಯದಲ್ಲಿ ರೈತ ಬಾಂಧವರು ತಮ್ಮ ತಮ್ಮ ಜಮೀನುಗಳಿಗೆ ಹೋಗಲು ಮುಂದಿನ ರೈತಬಾಂಧವರು ದಾರಿ ಕೊಡಲು ತಕರಾರು ಮಾಡುತ್ತಿದ್ದಾರೆ. ಇದರಿಂದಾಗಿ ರಾಜ್ಯದ ಕೆಲ ರೈತ ಬಾಂಧವರಿಗೆ ಜಮೀನು ಬಿತ್ತನೆ ಮಾಡದೇ ಜಮೀನು ಪಾಳು ಬೀಳುವಂತಹ ಪರಿಸ್ಥಿತಿ ಎದುರಾಗುತ್ತಿದೆ.ರಾಜ್ಯದಲ್ಲಿ ಅನೇಕ ರೈತರು ಜಮೀನು ದಾರಿ ಸಮಸ್ಯೆ ಎದುರಿಸುತ್ತಿದ್ದಾರೆ. ಈಗ ನಡೆಯುತ್ತಿರುವ ಅಧಿವೇಶನದಲ್ಲಿ ರೈತರ ಜಮೀನು ದಾರಿ ಸಮಸ್ಯೆ ಚರ್ಚಿಸಿ ಜಮೀನುಗಳಿಗೆ ಹೋಗಲು ದಾರಿ ಕುರಿತು ಕಾನೂನು ತಿದ್ದುಪಡಿ ಮಾಡಿ ತಹಸೀಲ್ದಾರರಿಗೆ ದಾರಿ ಮಾಡಿಕೊಡುವ ಅಧಿಕಾರ ಕೊಡುವಂತಾದರೆ ರೈತರಿಗೆ ತುಂಬಾ ಅನುಕೂಲವಾಗುತ್ತದೆ. ಇದರ ಬಗ್ಗೆ ಸರ್ಕಾರದ ಗಮನ ಸೆಳೆಯಲು ಜು.೧೯ ರಿಂದ ಅಹೋರಾತ್ರಿ ಧರಣಿ ಮಾಡಲು ಮುಂದಾಗುತ್ತಿರುವುದಾಗಿ ತಿಳಿಸಿದ್ದಾರೆ.
Subscribe to Updates
Get the latest creative news from FooBar about art, design and business.
Related Posts
Add A Comment

