Subscribe to Updates
Get the latest creative news from FooBar about art, design and business.
Author: editor.udayarashmi@gmail.com
ದೇವರ ಹಿಪ್ಪರಗಿ: ತ್ಯಾಗ ಹಾಗೂ ಬಲಿದಾನದ ಪ್ರತೀಕವಾದ ಮೊಹರಂ ಹಬ್ಬವನ್ನು ಹಿಂದೂ- ಮುಸ್ಲಿಂರ ಗ್ರಾಮೀಣ ಸೊಗಡಿನೊಂದಿಗೆ ಭಾವೈಕ್ಯತೆಯ ಹಬ್ಬವಾಗಿ ಆಚರಿಸಿದರು.ಹಬ್ಬದ ಹಿನ್ನೆಲೆ: ಪಟ್ಟಣದಲ್ಲಿ ಮೊಹರಂ ಹಬ್ಬದ ನಿಮಿತ್ಯವಾಗಿ ಹಲವಾರು ವರ್ಷಗಳಿಂದ ಹಿಂದೂ-ಮುಸ್ಲಿಂ ಬಾಂಧವರು ಅಲಾಯಿ ದೇವರ ಪಂಜಾಗಳನ್ನು ಹೊರುವ ಸಂಪ್ರದಾಯ ಬೆಳೆದು ಬಂದಿದೆ. ಈ ಅಲಾಯಿ ದೇವರು ಮೂಲತಃ ಇಂಡಿ ಪಟ್ಟಣದ ಹಿರಿಯ ದೇವರೆಂದೇ ಪ್ರತೀತವಾಗಿದೆ. ಹಿಂದೆ ಮೊಹರಂ ಹಬ್ಬದ ದಿನದಂದು ಇಂಡಿ ಪಟ್ಟಣದ ಮುಲ್ಲಾ ಒಬ್ಬರು ಕಾಲ್ನಡಿಗೆಯಲ್ಲಿ ದೇವರ ಹಿಪ್ಪರಗಿ ಮೂಲಕ ಬೇರೆ ಊರಿಗೆ ಹೋರಟಾಗ ಹೊಟ್ಟೆ ಹಸಿದು ತಾವು ತಂದ ಬುತ್ತಿಯನ್ನು ಬಿಚ್ಚಿ ಊಟ ಮಾಡುವ ಸಂದರ್ಭದಲ್ಲಿ ಇಂಡಿಯ ಚಿಕ್ಕದಾದ ಪಂಜಾ ಬುತ್ತಿಯಲ್ಲಿ ಗೋಚರಿಸಿತಂತೆ. ಇದು ಮುಂದೆ ಇಂಡಿ ಪಟ್ಟಣದ ಪಂಜಾ ದೇವರ ಹಿಪ್ಪರಗಿಗೆ ಆಗಮಿಸಿದೆ ಎಂದೇ ಭಾವಿಸಿ ಇಂಡಿಯ ಹಿರಿಯ ದೇವರು ಎಂದು ತಿಳಿದು ಪಂಜೆಯ ಮೂಲಕ ಅಲಂಕರಿಸಿ ಗ್ರಾಮದ ಪ್ರಮುಖ ಬೀದಿಗಳಲ್ಲಿ ಮೆರವಣಿಗೆ ಮಾಡಲಾಗುತ್ತಿದೆ. ಮೆರವಣಿಗೆಗೆ ಮುನ್ನ ಪೂಜೆಗೊಂಡು ನಂತರ ಹಾಡಿಕೆ ಕೈಗೊಳ್ಳಲಾಗುತ್ತದೆ ನಂತರ ಮೂಲ…
ಇಂಡಿ: ಹಾವು ಎಂಬ ಎರಡಕ್ಷರ ಪದ ಕೇಳಿದ ಕೂಡಲೇ ಎಲ್ಲರ ಎದೆಯಲ್ಲಿ ನಡುಕ ಆರಂಭವಾಗುತ್ತದೆ. ಹಾವುಗಳೆಂದರೆ ವಿಷಕಾರಿಗಳು, ಕಚ್ಚುವ ಮೂಲಕ ಸಾವಿನ ಮನೆಗೆ ತಳ್ಳುವ ಜೀವಿಗಳು ಎಂಬ ನಂಬಿಕೆ ಅನೇಕರಲ್ಲಿದೆ. ಮೂಢನಂಬಿಕೆಗಳಿಂದಾಗಿ ಅನೇಕ ಅಪರೂಪದ ಹಾವುಗಳನ್ನು ಕಂಡ ಕಂಡಲ್ಲಿ ಕೊಲ್ಲುವ ಮೂಲಕ ಅವುಗಳ ಸಂತತಿಗೆ ಸಂಚಕಾರ ಬರುತ್ತಿದೆ ಎಂದು ಕಂದಾಯ ಉಪ ವಿಭಾಗಾಧಿಕಾರಿ ಅಬೀದ ಗದ್ಯಾಳ ಹೇಳಿದರು.ಮಂಗಳವಾರ ಪಟ್ಟಣದ ಸರಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಅರಣ್ಯ ಇಲಾಖೆ ಹಮ್ಮಿಕೊಂಡಿದ್ದ ಜಿಲ್ಲಾ ಮಟ್ಟದ “ವಿಶ್ವ ಹಾವುಗಳ ದಿನಾಚರಣೆʼ ಕಾರ‍್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.ಮನುಷ್ಯ ಪ್ರಾಣ ಸಂಕುಲವನ್ನು ಕಾಪಾಡಬೇಕಾದವನೆ ಸರಸರನೆ ಓಡಾಡುವ ಹಾವುಗಳನ್ನು ಕೊಲ್ಲುತಾನೆ. ವಿಷ ಕಾರುವ ಹಾವುಗಳನ್ನು, ಪುಂಗಿ ನಾದಕ್ಕೆ ತಲೆದೂಗುವ ಹಾವುಗಳೆಂದರೆ ಬಹುತೇಕರಿಗೆ ಭಯ, ಕೆಲವರಿಗೆ ಇದರ ಬಗ್ಗೆ ಭಯದಿಂದ ಕೂಡಿದ ಭಕ್ತಿ. ಇನ್ನು ಕೆಲವರಿಗೆ ಹಾವುಗಳೇ ದೇವರು. ನಮ್ಮ ಭೂಮಂಡಲದ ಅನೇಕ ಸೃಷ್ಟಿಗಳಲ್ಲಿ ಹಾವು ಕೂಡಾ ಒಂದು. ಈ ಜೀವಿ ಪರಿಸರದ ಸಮತೋಲನ ಕಾಯ್ದುಕೊಳ್ಳುವಲ್ಲಿ ಪ್ರಮುಖ ಪಾತ್ರ ವಹಿಸುತ್ತದೆ. ಇದರ…
ಇಂಡಿಯಲ್ಲಿ ನಡೆದ ಬಿಜೆಪಿ ಕಾರ್ಯಕಾರಣಿ ಸಭೆಯಲ್ಲಿ ಸಂಸದ ರಮೇಶ ಜಿಗಜಿಣಗಿ ಆರೋಪ ಇಂಡಿ: ಶೋಷಿತ, ಹಿಂದುಳಿದ ವರ್ಗಗಳ ಚಾಂಪಿಯನ್ ಎಂದು ಹೇಳುವ ರಾಜ್ಯ ಸರಕಾರ, ಆ ಜನಾಂಗದ ಶ್ರೇಯೋಭಿವೃದ್ದಿಗೆ ಮಿಸಲಿಟ್ಟಿರುವ ಹಣವನ್ನು ನುಂಗಿ ಭ್ರಷ್ಟಾಚಾರದಲ್ಲಿ ಮುಳುಗಿ ಚಾಂಪಿಯನ್ ಆಗಿದ್ದಾರೆ. ಒಂದು ವೇಳೆ ಭ್ರಷ್ಟಾಚಾರದಲ್ಲಿ ಪಾಲುದಾರಿಕೆ ಇಲ್ಲವೆಂದರೆ ಸಿಬಿಐ ತನಿಖೆಗೆ ನೀಡಿ ಎಂದು ಸಂಸದ ರಮೇಶ್ ಜಿಗಜಿಣಗೆ ರಾಜ್ಯ ಸರಕಾರಕ್ಕೆ ಸವಾಲು ಹಾಕಿದರು.ಅವರು ಬುಧವಾರ ಪಟ್ಟಣದ ಶಾಂತೇಶ್ವರ ಮಂಗಲ ಕಾರ್ಯಾಲಯದಲ್ಲಿ ಬಿಜೆಪಿ ಇಂಡಿ ಮಂಡಲ ವತಿಯಿಂದ ಹಮ್ಮಿಕೊಂಡಿದ್ದ ನೂತನ ಸಂಸದರಿಗೆ ಸನ್ಮಾನ ಹಾಗೂ ಕಾರ್ಯಕಾರಣಿ ಸಭೆಯಲ್ಲಿ ಸನ್ಮಾನ ಸ್ವೀಕರಿಸಿ ಮಾತನಾಡಿದರು.ನಾವು ದಲಿತ, ಅಲ್ಪಸಂಖ್ಯಾತ, ಹಿಂದುಳಿದ ವರ್ಗಗಳ ಮುಖಂಡರು ಎಂದು ಸಾರಿ ಹೇಳಿಕೊಳ್ಳುತ್ತೀರಿ, ಅವರ ಅಭಿವೃದ್ಧಿ ಮಾಡಬೇಕು ಎಂಬುದನ್ನು ಮರೆತು ಅವರಿಗಾಗಿ ಮೀಸಲಿಟ್ಟ ಹಣವನ್ನೇ ಗುಳುಂ ಮಾಡುತ್ತೀರಿ, ನೀವೆಲ್ಲ ಅಹಿಂದ ನಾಯಕರಾ ಎಂದು ಪ್ರಶ್ನಿಸಿದರು.ಶೀಘ್ರದಲ್ಲಿಯೇ ಅಕ್ಕಲಕೋಟ-ವಿಜಯಪೂರ ರಾಷ್ಟೀಯ ಹೆದ್ದಾರಿ ಕಾಮಗಾರಿಗೆ ಪೂಜೆ ನೆರವೇರಿಸಲಾಗುವುದು ಎಂದರು.ಮಾಜಿ ವಿ.ಪ ಸದಸ್ಯ ಅರುಣ ಶಹಾಪೂರ ಮಾತನಾಡಿ, ಸಂಸದ ರಮೇಶ…
ಶಿವಶರಣ ಹರಳಯ್ಯ ಸ್ಮಾರಕ ಪ್ರೌಢಶಾಲೆಯಲ್ಲಿ ಗುರಿ ಮತ್ತು ಸಾಧನೆ ಕುರಿತು ಉಪನ್ಯಾಸ ಚಿಕ್ಕಪಡಸಲಗಿ: ಇಂದಿನ ಯುವಜನತೆಯಲ್ಲಿ ಸ್ಪಷ್ಟತೆಯ ಗುರಿ, ಛಲ ಇಲ್ಲದಿರುವುದು ಎದ್ದು ಕಾಣುತ್ತಿದೆ. ಈ ಅಂಶ ಗಮನಿಸಿದರೆ ಬಾಲಕರಿಗಿಂತ ಬಾಲೆಯರೆ ಬಹುಪಾಲು ಉತ್ತಮ. ಅವರಲ್ಲಿ ಸ್ವಲ್ಪಮಟ್ಟಿಗಾದರೂ ಗುರಿ ಸಾಧಿಸುವ ನಿಟ್ಟಿನಲ್ಲಿ ಕಲಿಕಾ ಓದು, ಅಭ್ಯಾಸದ ಅಭಿರುಚಿ ಪ್ರಯತ್ನ ಇದೆ ಎಂದು ಹಳಿಯಾಳ ತಾಲೂಕಿನ ಮುರ್ಕವಾಡದ ಸುಕೃತಿ ವಿದ್ಯಾರ್ಥಿಗಳ ಅಭಿವೃದ್ಧಿ ಮತ್ತು ಸಾಂಸ್ಕೃತಿಕ ಅಕಾಡೆಮಿ ಉಸ್ತುವಾರಿ ಹೊತ್ತಿರುವ ಅನೀಲ ನಾಯ್ಕ ಹೇಳಿದರು.ಜಮಖಂಡಿ ತಾಲೂಕಿನ ಚಿಕ್ಕಪಡಸಲಗಿ ಗ್ರಾಮದಲ್ಲಿರುವ ಗದುಗಿನ ಜಗದ್ಗುರು ತೋಂಟದಾರ್ಯ ವಿದ್ಯಾಪೀಠ ಸಂಸ್ಥೆಯ ಶಿವಶರಣ ಹರಳಯ್ಯ ಸ್ಮಾರಕ ಪ್ರೌಢಶಾಲೆಯಲ್ಲಿ ಮಂಗಳವಾರ ಶಾಲಾ ವಿದ್ಯಾರ್ಥಿಗಳಿಗಾಗಿ “ಗುರಿ ಮತ್ತು ಸಾಧನೆ” ಹಾಗೂ “ವೃತ್ತಿಪರ ಮಾರ್ಗದರ್ಶನ” ಎಂಬ ವಿಷಯದ ಕುರಿತು ಹಮ್ಮಿಕೊಂಡಿದ್ದ ವಿಶೇಷ ಉಪನ್ಯಾಸ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.ಶಿಕ್ಷಣವೇ ಅಮೃತ. ಈ ಜ್ಞಾನ ವಾಹಿನಿಯ ಸಂಜೀವಿನಿ ಪ್ರತಿ ಮಗುವಿನಲ್ಲಿ ಹುದುಗಿದೆ. ಅದನ್ನು ಸುಪ್ತ, ಸೂಕ್ತ, ಸೂಕ್ಷ್ಮ ದೃಷ್ಟಿಯಿಂದ ಗುರುತಿಸಿ ಪ್ರತಿಭೆಗಳನ್ನು ಹೊರ ತಗೆಯಬೇಕಾಗಿದೆ. ಅದಕ್ಕೆ ಗುಣಾತ್ಮಕ…
ಕೆಂಭಾವಿ: ಹಿಂದೂ ಮುಸ್ಲಿಂರ ಸಂಗಮ ಭಾವೈಕ್ಯತೆಯ ಸಂದೇಶ ಸಾರುವ ಮೊಹರಂ ಹಬ್ಬದ ಕೊನೆಯ ದಿನ ಬುಧವಾರ ಸಂಭ್ರಮದಿಂದ ಸಂಪನ್ನಗೊಂಡಿತು.ಪಟ್ಟಣದ ಸಮೀಪವಿರುವ ತಿಪ್ಪನಟಿಗಿ ಗ್ರಾಮದಲ್ಲಿ ಪ್ರತಿ ವರ್ಷದಂತೆ ಈ ವರ್ಷವೂ ಕೂಡ ಎಲ್ಲಾ ಧರ್ಮೀಯರು ಪ್ರೀತಿ ವಿಶ್ವಾಸ ಶ್ರದ್ಧೆ ಭಕ್ತಿಯಿಂದ ಮೊಹರಂ ಹಬ್ಬ ಆಚರಿಸುವ ಮೂಲಕ ಭಗವಂತನ ಕೃಪೆಗೆ ಪಾತ್ರರಾಗಿ, ಸರ್ವಧರ್ಮ ಸಮನ್ವಯತೆ ಹಾಗೂ ಸಾಮರಸ್ಯವನ್ನು ಹೊತ್ತು ಸಾರಿದರು. ಧಾರ್ಮಿಕ ಹಬ್ಬ ಹರಿದಿನಗಳಲ್ಲಿ, ಜಾತ್ರೆ ಉತ್ಸವಗಳು ತನ್ನದೆಯಾದ ಚಾರಿತ್ರಿಕ ಮತ್ತು ಧಾರ್ಮಿಕ ಹಿನ್ನೆಲೆ ಹೊಂದಿರುವಂತೆ ಈ ಹಬ್ಬವು ಕೂಡ ಜನಪದ ಕಲೆ, ನೃತ್ಯ, ವೈಭವ ಕಣ್ಮುಂದೆಯೇ ತಂದೊಡ್ಡುವ ಮೂಲಕ ಭಕ್ತಿ ಪರಾಕಾಷ್ಠೆ ಮೆರೆದರು. ವಿಶೇಷವಾಗಿ ಯುವಕರ ವಿವಿಧ ಪ್ರಕಾರಗಳ ಕುಣಿತ, ರಿವಾಯತ ಹಾಡುಗಳು, ಸರ್ವ ಜನರ ಮನಸೂರೆಗೊಂಡಿತು.ಈ ಸಂದರ್ಭದಲ್ಲಿ ಉಸ್ಮಾನ್ ಖಾದ್ರಿ, ಜುಲ್ಫಿ ಖಾದ್ರಿ, ದೇವಪ್ಪ ಬೋಯಿ, ಮುದಕಪ್ಪ ಚಿಡಬಿ, ದೇವಪ್ಪ ಹೇರುಂಡಿ, ಬಸಪ್ಪ ನಾಯ್ಕೊಡಿ, ರಾಮಕೃಷ್ಣ ನಾಯ್ಕೊಡಿ, ನಯಮುದ್ದಿನ್ ಖಾದ್ರಿ ಸೇರಿದಂತೆ ಅನೇಕರು ಉಪಸ್ಥಿತರಿದ್ದರು.
ವಿಜಯಪುರ: ಜಿಲ್ಲಾ ನೂತನ ಛಾಯಾಗ್ರಾಹಕರ ಸಂಘದಿಂದ “ಜಿಲ್ಲೆಯ ಛಾಯಾಗ್ರಾಹಕರ ಮಕ್ಕಳಿಗೆ” 2023-2024ನೇ ಸಾಲಿನಲ್ಲಿ ಎಸ್.ಎಸ್.ಎಲ್.ಸಿ. ಮತ್ತು ದ್ವಿತೀಯ ಪಿ.ಯು.ಸಿ.ಯಲ್ಲಿ ಶೇ.80 ಕಿಂತ ಹೆಚ್ಚು ಅಂಕ ಪಡೆದು ಉತ್ತೀರ್ಣಗೊಂಡ. ಛಾಯಾಗ್ರಾಹಕರ ಮಕ್ಕಳಿಗೆ ಜಿಲ್ಲಾ ಮಟ್ಟದಲ್ಲಿ ಸಂಘದಿಂದ ಪ್ರತಿಭಾ ಪುರಸ್ಕಾರ ನೀಡಲು ನಿರ್ಧರಿಸಲಾಗಿದೆ.ವಿಜಯಪುರ ಜಿಲ್ಲೆಯ ಎಲ್ಲ ತಾಲೂಕಿನ ಛಾಯಾಗ್ರಾಹಕರು ತಮ್ಮ ಮಕ್ಕಳ ಪ್ರಸಕ್ತ ಸಾಲಿನ ಧೃಡೀಕೃತ ಎಸ್.ಎಸ್.ಎಲ್.ಸಿ. ಮತ್ತು ದ್ವಿತೀಯ ಪಿ.ಯು.ಸಿ ಅಂಕಪಟ್ಟಿ, ಆಧಾರ ಕಾರ್ಡ, ವಿದ್ಯಾರ್ಥಿಯ ಬ್ಯಾಂಕ್ ವಿವರ, ಇತ್ತಿಚ್ಚಿನ ಎರಡು ಪಾಸಪೋರ್ಟ ಅಳತೆಯ ಭಾವಚಿತ್ರ ಗಳೊಂದಿಗೆ ದಿನಾಂಕ 28-07-2024ರ ಒಳಗಡೆ ಸಂಘದ ಕಛೇರಿ, ಅಧ್ಯಕ್ಷರು, ವಿಜಯಪುರ ಜಿಲ್ಲಾ ನೂತನ ಛಾಯಾಗ್ರಾಹಕರ ಸಂಘ ನಂ. 201, ಎಸ್.ಎಸ್.ಕಾಂಪ್ಲೇಕ್ಸ, ಸಿದ್ದೇಶ್ವರ ದೇವಸ್ಥಾನದ ಹತ್ತಿರ, ಬಿ.ಎಲ್.ಡಿ.ಇ. ರಸ್ತೆ, ವಿಜಯಪುರ-586101 ಇಲ್ಲಿಗೆ ತಲುಪಿಸಲು ವಿನಂತಿ.ಹೆಚ್ಚಿನ ಮಾಹಿತಿಗಾಗಿ ಸಂಪರ್ಕಿಸಿ ಅಧ್ಯಕ್ಷರ‍್ಷು ರಮೇಶ ಚವ್ಹಾಣ ಮೊ : 9611563508, ಕಾರ್ಯದರ್ಶಿ ಸತೀಶ ಕಲಾಲ ಮೋ : 9900905291, ನಿರ್ದೇಶಕರಾದ ಸುನೀಲ ಗಲಗಲಿ 9448897073 ಅವರನ್ನು ಸಂಪರ್ಕಿಸುವಂತೆ ಪ್ರಕಟಣೆಯಲ್ಲಿ ಕೋರಲಾಗಿದೆ.
ವಿಜಯಪುರ: ಕರ್ನಾಟಕ ರಕ್ಷಣಾ ವೇದಿಕೆ ರಾಜ್ಯಾಧ್ಯಕ್ಷ ಟಿ.ಎ.ನಾರಾಯಣಗೌಡರ ನೆತೃತ್ವದಲ್ಲಿ ರಾಜ್ಯಾದ್ಯಂತ ಜು.೧ರಂದು ಡಾ.ಸರೋಜನಿ ಮಹೀಷಿ ವರದಿ ಅನುಗುಣವಾಗಿ ಉದ್ಯೋಗದಲ್ಲಿ ಮೀಸಲಾತಿ ಆಗ್ರಹಿಸಿ ಹೋರಾಟದ ಪ್ರತಿಫಲವಾಗಿ ಕರ್ನಾಟಕದಲ್ಲಿ ಖಾಸಗಿ ಒಡೆತನದ ಕಂಪನಿಗಳಲ್ಲಿ ಮತ್ತು ಕೈಗಾರಿಕಾಗಳಲ್ಲಿ ಕನ್ನಡಿಗರಿಗೆ ಸಿ”ಮತ್ತು ಡಿ”ದರ್ಜೆಯ ಹುದ್ದೆಗಳಿಗೆ ನೂರಕ್ಕೆ ನೂರರಷ್ಟು ಕನ್ನಡಿಗರ ನೇಮಕಾತಿಯನ್ನು ಕಡ್ಡಾಯಗೊಳಿಸುವ ವಿಧೇಯಕ್ಕೆ ಸಚಿವ ಸಂಪುಟದಲ್ಲಿ ಅನುಮತಿ ನೀಡಿದೆ ಇದೊಂದು ಐತಿಹಾಸಿಕ ಕಾಯ್ದೆ ಈ ಕಾಯ್ದೆ ಮಾಡಲು ಮುಂದೆ ಬಂದ ಮುಖ್ಯಮಂತ್ರಿ ಸಿದ್ದರಾಮಯ್ಯನವರಿಗೆ ಮತ್ತು ಸಚಿವ ಸಂಪುಟ ಸಚಿವರಿಗೆ ಕರವೇ ವಿಜಯಪುರ ಜಿಲ್ಲಾಧ್ಯಕ್ಷ, ನ್ಯಾಯವಾದಿ ಶ್ರೀಶೈಲ ಮುಳಜಿ ಕೃತಜ್ಞತೆ ಸಲ್ಲಿಸಿದ್ದಾರೆ.ಇದೊಂದು ಐತಿಹಾಸಿಕ ತೀರ್ಮಾನವಾಗಿ ಈ ಕಾಯ್ದೆಯಿಂದ ಕನ್ನಡಿಗರ ಹಿತವನ್ನು ಕಾಪಾಡಿದಂತಾಗಿದೆ ನಮ್ಮ ರಾಜ್ಯದ ಜನರು ಉದ್ಯೋಗ ಬೇರೆ ರಾಜ್ಯಕ್ಕೆ ವಲಸೆ ಹೊಗುತಿದ್ದರು ಹೀಗಾಗಿ ಕನ್ನಡಿಗರಿಗೆ ಇದೊಂದು ಮಹತ್ವದ ತೀರ್ಮಾನವಾಗಿದೆ ಎಂದರು
ಮರು ನಾಮಕರಣಕ್ಕೆ ಸಚಿವ ಎಂ.ಬಿ.ಪಾಟೀಲರಿಂದ ಮುಖ್ಯಮಂತ್ರಿ ಸಿದ್ದರಾಮಯ್ಯನವರಿಗೆ ಮನವಿ ವಿಜಯಪುರ: ಜಿಲ್ಲೆಯ ಬಬಲೇಶ್ವರ ತಾಲೂಕಿನ ಮಮದಾಪುರ ಗ್ರಾಮದಲ್ಲಿ 624 ಹೆಕ್ಟೆರ್ ಮೀಸಲಿಟ್ಟ ಅರಣ್ಯ ಪ್ರದೇಶಕ್ಕೆ ಜ್ಞಾನಯೋಗಿ ಸಿದ್ದೇಶ್ವರ ಶ್ರೀಗಳ ಮೀಸಲು ಅರಣ್ಯ ಪ್ರದೇಶವೆಂದು ಮರುನಾಮಕರಣ ಮಾಡಬೇಕೆಂದು ಕೈಗಾರಿಕೆ, ಮೂಲಸೌಕರ್ಯ ಅಭಿವೃದ್ಧಿ ಸಚಿವ ಎಂ.ಬಿ.ಪಾಟೀಲರವರು ಇಂದು ಮುಖ್ಯಮಂತ್ರಿ ಸಿದ್ದರಾಮಯ್ಯನರವರಿಗೆ ಮನವಿ ಸಲ್ಲಿಸಿದ್ದಾರೆ.ವಿಜಯಪುರ ಜಿಲ್ಲೆಯ ಮಮದಾಪುರ ಗ್ರಾಮದಲ್ಲಿ ‘ಆದಿಲ್‍ಶಾಹಿ’ ಸುಲ್ತಾನರ ಕಾಲದ ಇತಿಹಾಸ ಪ್ರಸಿದ್ದ ದೊಡ್ಡ ಕೆರೆ, ಸಣ್ಣಕೆರೆಗಳ ನೀರಿನ ಪಾತ್ರದಲ್ಲಿರುವ ಇದು ವಿಜಯಪುರ ಜಿಲ್ಲೆಯ ಏಕೈಕ ಕಾಯ್ದಿಟ್ಟ ‘624 ಹೆಕ್ಟೆರ್’ ಮೀಸಲು ಅರಣ್ಯ ಪ್ರದೇಶವಿದೆ. ಇದು ಈ ಪ್ರದೇಶಕ್ಕೆ ಮುಕುಟಪ್ರಾಯವಾಗಿದೆ.ಕಳೆದ ಮೂರು ವರ್ಷಗಳಿಂದ ಕೂಡಗಿ ಎನ್.ಟಿ.ಪಿ.ಸಿ ಮತ್ತು ಅರಣ್ಯ ಇಲಾಖೆಯ ಸಹಭಾಗಿತ್ವದಲ್ಲಿ 1 ಲಕ್ಷಕ್ಕಿಂತ ಹೆಚ್ಚು ಸಸಿಗಳನ್ನು ನೆಟ್ಟು ಪೋಷಿಸಲಾಗುತ್ತಿದೆ. ಇಲ್ಲಿ ಹೊಂಗೆ, ಬೇವು, ಅರಳಿ, ಆಲ, ಹತ್ತಿ, ಬಸರಿ, ನೆರಳೆ, ಶ್ರೀಗಂಧ, ಹುಣಸೆ ಅಲ್ಲದೇ ಬಗೆ-ಬಗೆಯ ಹಣ್ಣಿನ ಸಸಿಗಳನ್ನು ನೆಟ್ಟು, ಪೋಷಿಸಲಾಗುತ್ತಿದೆ. ಸದ್ಯ ಈ ಗಿಡಗಳು ಸೊಂಪಾಗಿ ಬೆಳೆದು ಹಸಿರು ಹೊದಿಕೆಯಂತಾಗಿದೆ.…
ವಿಜಯಪುರ: ಹನ್ನೆರಡನೆಯ ಶತಮಾನದ ವಚನ ಚಳುವಳಿ ಮತ್ತು ಸಾಮಾಜಿಕ ಕ್ರಾಂತಿಯ ಹರಿಕಾರರಲ್ಲೊಬ್ಬರಾದ ಹಡಪದ ಅಪ್ಪಣ್ಣನವರು 250 ಕ್ಕೂ ಅಧಿಕ ವಚನಗಳನ್ನು ರಚಿಸಿ ಸಮಾಜಕ್ಕೆ ಮಾದರಿಯಾಗಿದ್ದಾರೆ ಎಂದುಹಡಪದ ಅಪ್ಪಣ್ಣ ವಿವಿದ್ದೋದ್ದೇಶಗಳ ಸಹಕಾರಿ ಸಂಘ ಸಿಂದಗಿ ಅಧ್ಯಕ್ಷ ಶಿವಾನಂದ ಹಡಪದ ಹೇಳಿದರು.ಜಿಲ್ಲಾ , ತಾಲೂಕ ಹಾಗು ನಗರ ಘಟಕ ಕನ್ನಡ ಸಾಹಿತ್ಯ ಪರಿಷತ್ತಿನ ಆಶ್ರಯದಲ್ಲಿ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಸಭಾಂಗಣದಲ್ಲಿ ಲಿಂ ಷಡಕ್ಷರಯ್ಯ ಶಿವಪೂಜಯ್ಯ ಹಿರೇಮಠ ಹಾಗು ದಿ. ನಾಗಪ್ಪ ರೇವಪ್ಪ ಶೇಠೆ ಇವರ ಹೆಸರಿನ ದತ್ತಿ ನಿಧಿ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ಬಸವಣ್ಣನವರ ಆಪ್ತರಾಗಿ ಮೂಲ ಕಾಯಕವನ್ನು ಮಾಡುತ್ತಾ ಅಥ೯ಪೂಣ೯ ವಚನಗಳನ್ನು ರಚಿಸುವುದರ ಮೂಲಕ ವಚನಕಾರರಲ್ಲಿ ತಮ್ಮ ವ್ಯಕ್ತಿತ್ವವನ್ನು ಗುರುತಿಸಿಕೊಂಡರು ಎಂದರು.ಸಭೆಯ ಅಧ್ಯಕ್ಷ ವಹಿಸಿದ ಡಾ: ಜಿ ಡಿ ಕೊಟ್ನಾಳ ಮಾತನಾಡಿ, ಮೂಢ ನಂಬಿಕೆ, ಜಾತಿಯತೆ, ಲಿಂಗ ತಾರತಮ್ಯಗಳಂತಹ ಅನಿಷ್ಟ ಪದ್ಧತಿಗಳನ್ನು ಹೋಗಲಾಡಿಸಲು ಜೀವನಕ್ಕೆ ಬೇಕಾಗುವ ಮೌಲ್ಯಗಳನ್ನು ವಚನಗಳ ಮೂಲಕ ಸಂದೇಶ ಸಾರಿದರು ಎಂದರು.ಶರಣ ಹಡಪದ ಅಪ್ಪಣ್ಣ ನವರ ಕುರಿತು ಉಪನ್ಯಾಸ…
