ದೇವರ ಹಿಪ್ಪರಗಿ: ತ್ಯಾಗ ಹಾಗೂ ಬಲಿದಾನದ ಪ್ರತೀಕವಾದ ಮೊಹರಂ ಹಬ್ಬವನ್ನು ಹಿಂದೂ- ಮುಸ್ಲಿಂರ ಗ್ರಾಮೀಣ ಸೊಗಡಿನೊಂದಿಗೆ ಭಾವೈಕ್ಯತೆಯ ಹಬ್ಬವಾಗಿ ಆಚರಿಸಿದರು.
ಹಬ್ಬದ ಹಿನ್ನೆಲೆ: ಪಟ್ಟಣದಲ್ಲಿ ಮೊಹರಂ ಹಬ್ಬದ ನಿಮಿತ್ಯವಾಗಿ ಹಲವಾರು ವರ್ಷಗಳಿಂದ ಹಿಂದೂ-ಮುಸ್ಲಿಂ ಬಾಂಧವರು ಅಲಾಯಿ ದೇವರ ಪಂಜಾಗಳನ್ನು ಹೊರುವ ಸಂಪ್ರದಾಯ ಬೆಳೆದು ಬಂದಿದೆ. ಈ ಅಲಾಯಿ ದೇವರು ಮೂಲತಃ ಇಂಡಿ ಪಟ್ಟಣದ ಹಿರಿಯ ದೇವರೆಂದೇ ಪ್ರತೀತವಾಗಿದೆ. ಹಿಂದೆ ಮೊಹರಂ ಹಬ್ಬದ ದಿನದಂದು ಇಂಡಿ ಪಟ್ಟಣದ ಮುಲ್ಲಾ ಒಬ್ಬರು ಕಾಲ್ನಡಿಗೆಯಲ್ಲಿ ದೇವರ ಹಿಪ್ಪರಗಿ ಮೂಲಕ ಬೇರೆ ಊರಿಗೆ ಹೋರಟಾಗ ಹೊಟ್ಟೆ ಹಸಿದು ತಾವು ತಂದ ಬುತ್ತಿಯನ್ನು ಬಿಚ್ಚಿ ಊಟ ಮಾಡುವ ಸಂದರ್ಭದಲ್ಲಿ ಇಂಡಿಯ ಚಿಕ್ಕದಾದ ಪಂಜಾ ಬುತ್ತಿಯಲ್ಲಿ ಗೋಚರಿಸಿತಂತೆ. ಇದು ಮುಂದೆ ಇಂಡಿ ಪಟ್ಟಣದ ಪಂಜಾ ದೇವರ ಹಿಪ್ಪರಗಿಗೆ ಆಗಮಿಸಿದೆ ಎಂದೇ ಭಾವಿಸಿ ಇಂಡಿಯ ಹಿರಿಯ ದೇವರು ಎಂದು ತಿಳಿದು ಪಂಜೆಯ ಮೂಲಕ ಅಲಂಕರಿಸಿ ಗ್ರಾಮದ ಪ್ರಮುಖ ಬೀದಿಗಳಲ್ಲಿ ಮೆರವಣಿಗೆ ಮಾಡಲಾಗುತ್ತಿದೆ. ಮೆರವಣಿಗೆಗೆ ಮುನ್ನ ಪೂಜೆಗೊಂಡು ನಂತರ ಹಾಡಿಕೆ ಕೈಗೊಳ್ಳಲಾಗುತ್ತದೆ ನಂತರ ಮೂಲ ಸ್ಥಾನಕ್ಕೆ ಮರಳುತ್ತದೆ.
ಮೆರವಣಿಗೆ ನಂತರ ಅಲಾಯಿ ದೇವರ ಪಂಜಾ ಭಾವಿಗೆ ತೆರಳುವ ಸಂಪ್ರದಾಯ ಜರುಗಿತು.
ಈ ಸಂದರ್ಭದಲ್ಲಿ ಪಂಜಾಗಳಿಗೆ ಲೋಬಾನ ಹಾಕಿ, ನೈವಿಧ್ಯ ಅರ್ಪಿಸಿ ಚಾಲನೆ ನೀಡಲಾಯಿತು. ನಂತರ ಹೈಜಾನ್ ಕೂಗುತ್ತಾ ವಾದ್ಯ ವೈಭವದೊಂದಿಗೆ ಗಂಗಾಸ್ಥಳಕ್ಕೆ ತೆರಳಲಾಯಿತು.
ಮಲ್ಲನಗೌಡ ಪಾಟೀಲ, ದೊಡ್ಡಪ್ಪ ಸಜ್ಜನ, ಮಲ್ಲು ಸೌದಿ, ಶ್ರೀಶೈಲ ಯಾಳಗಿ, ಮುತ್ತು ತೋಟದ, ಜಮೀರ್ ಮಕಾಂದಾರ, ಅಬ್ದುಲ್ ಬಾಗವಾನ, ಜಾಕೀರ್ ಮಕಾಂದಾರ, ಸೈಫನ್ ಅತ್ತಾರ ಸೇರಿದಂತೆ ಹಲವರು ಇದ್ದರು.
Subscribe to Updates
Get the latest creative news from FooBar about art, design and business.
Related Posts
Add A Comment

