ಇಂಡಿ: ಹಾವು ಎಂಬ ಎರಡಕ್ಷರ ಪದ ಕೇಳಿದ ಕೂಡಲೇ ಎಲ್ಲರ ಎದೆಯಲ್ಲಿ ನಡುಕ ಆರಂಭವಾಗುತ್ತದೆ. ಹಾವುಗಳೆಂದರೆ ವಿಷಕಾರಿಗಳು, ಕಚ್ಚುವ ಮೂಲಕ ಸಾವಿನ ಮನೆಗೆ ತಳ್ಳುವ ಜೀವಿಗಳು ಎಂಬ ನಂಬಿಕೆ ಅನೇಕರಲ್ಲಿದೆ. ಮೂಢನಂಬಿಕೆಗಳಿಂದಾಗಿ ಅನೇಕ ಅಪರೂಪದ ಹಾವುಗಳನ್ನು ಕಂಡ ಕಂಡಲ್ಲಿ ಕೊಲ್ಲುವ ಮೂಲಕ ಅವುಗಳ ಸಂತತಿಗೆ ಸಂಚಕಾರ ಬರುತ್ತಿದೆ ಎಂದು ಕಂದಾಯ ಉಪ ವಿಭಾಗಾಧಿಕಾರಿ ಅಬೀದ ಗದ್ಯಾಳ ಹೇಳಿದರು.
ಮಂಗಳವಾರ ಪಟ್ಟಣದ ಸರಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಅರಣ್ಯ ಇಲಾಖೆ ಹಮ್ಮಿಕೊಂಡಿದ್ದ ಜಿಲ್ಲಾ ಮಟ್ಟದ “ವಿಶ್ವ ಹಾವುಗಳ ದಿನಾಚರಣೆʼ ಕಾರ‍್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಮನುಷ್ಯ ಪ್ರಾಣ ಸಂಕುಲವನ್ನು ಕಾಪಾಡಬೇಕಾದವನೆ ಸರಸರನೆ ಓಡಾಡುವ ಹಾವುಗಳನ್ನು ಕೊಲ್ಲುತಾನೆ. ವಿಷ ಕಾರುವ ಹಾವುಗಳನ್ನು, ಪುಂಗಿ ನಾದಕ್ಕೆ ತಲೆದೂಗುವ ಹಾವುಗಳೆಂದರೆ ಬಹುತೇಕರಿಗೆ ಭಯ, ಕೆಲವರಿಗೆ ಇದರ ಬಗ್ಗೆ ಭಯದಿಂದ ಕೂಡಿದ ಭಕ್ತಿ. ಇನ್ನು ಕೆಲವರಿಗೆ ಹಾವುಗಳೇ ದೇವರು. ನಮ್ಮ ಭೂಮಂಡಲದ ಅನೇಕ ಸೃಷ್ಟಿಗಳಲ್ಲಿ ಹಾವು ಕೂಡಾ ಒಂದು. ಈ ಜೀವಿ ಪರಿಸರದ ಸಮತೋಲನ ಕಾಯ್ದುಕೊಳ್ಳುವಲ್ಲಿ ಪ್ರಮುಖ ಪಾತ್ರ ವಹಿಸುತ್ತದೆ. ಇದರ ಅಸ್ತಿತ್ವದಿಂದ ಪರಿಸರಕ್ಕೆ ಅನೇಕ ಪ್ರಯೋಜನಗಳಿವೆ ಎಂದರು.
ಪ್ರಾಚಾರ‍್ಯ ರಮೇಶ ಆರ್.ಎಚ್ ಅಧ್ಯಕ್ಷತೆ ವಹಿಸಿ ಮಾತನಾಡಿ, ಹಾವಿನ ಮೊದಲ ಗುರಿ ಮನುಷ್ಯರಿಂದ ತಪ್ಪಿಸಿಕೊಳ್ಳುವುದಾಗಿರುತ್ತದೆ. ಏಕೆಂದರೆ ಹಾವು ಯಾವತ್ತೂ ಮನುಷ್ಯರನ್ನು ಬೆನ್ನಟ್ಟಿ ಕಚ್ಚುವುದಿಲ್ಲ, ಕಚ್ಚುವುದು ಹಾವಿನ ಕೊನೆಯ ಅಸ್ತ್ರ ಎಂದರು.
ಗಸ್ತು ವನಪಾಲಕ ಪರಶುರಾಮ ಭಜಂತ್ರಿ ಮಾತನಾಡಿ, ವಿವಿಧ ಪ್ರಾತ್ಯಕ್ಷಿಕೆಯ ಮೂಲಕ ವಿಷಪೂರಿತ ಮತ್ತು ವಿಷರಹಿತ ಹಾವುಗಳ ಕುರಿತು ಮಾಹಿತಿ ನೀಡಿದರಲ್ಲದೆ, ಹಾವು ಕಂಡಾಗ ಹಾಗೂ ಕಚ್ಚಿದಾಗ ಮಾಡಬೇಕಾದ ಮುನ್ನೆಚ್ಚರಿಕೆ ಕ್ರಮಗಳ ಕುರಿತು ಮಾಹಿತಿ ನೀಡಿದರು.
ವಿಜಯಪುರದ ಉರಗಪ್ರೇಮಿ ಶಿವಶಂಕರ ಬೇವನೂರು ಮಾತನಾಡಿದರು.
ಇಂಡಿ ಉಪವಲಯದ ಅರಣ್ಯಾಧಿಕಾರಿ ಜಗದೀಶ ಬಾಬುಳಗಾಂವ ಪ್ರಾಸ್ತಾವಿಕವಾಗಿ ಮಾತನಾಡಿದರು.
ಉಪ ಅರಣ್ಯ ಸಂರಕ್ಷಣಾಧಿಕಾರಿ ಶಿವಶರಣಯ್ಯ, ಸಯಾಯಕ ಅರಣ್ಯಾಧಿಕಾರಿ ಭಾಗ್ಯವಂತ ಮಸೂಬ, ಬಿ.ಪಿ. ಚವ್ಹಾಣ ಹಾಗೂ ಮುದ್ದೇಬಿಹಾಳ, ಇಂಡಿ ವಲಯದ ಅರಣ್ಯಾಧಿಕಾರಿಗಳು ಭಾಗವಹಿಸಿದ್ದರು.
ಆಲಮೇಲದ ಮೌಲಾಲಿ ಕಮಲಾಪೂರ, ಸಿದ್ದು ಪೂಜಾರಿ, ಕಾಶೀನಾಥ ಬುಯ್ಯಾರ, ಕಲ್ಲಯ್ಯ ಶಾಸ್ತ್ರೀ, ಶಿವಯೋಗೆಪ್ಪ ಭಜಂತ್ರಿ, ಶಿವು ಬೇನೂರ, ಸೊಹೇಲಗ ಮಂಟೂರು, ಉಮೇಶ, ನಿತಿನ್ ಸೇರಿದಂತೆ ಅನೇಕರು ಉಪಸ್ಥಿತರಿದ್ದರು.
ಅರಣ್ಯಾಧಿಕಾರಿ ಜಗದೀಶ ಬಾಬುಳಗಾಂವ ಸ್ವಾಗತಿಸದರು. ಪ್ರೊ. ಕಾಶೀನಾಥ ಜಾಧವ ವಂದಿಸಿದರು.
ಇದೇ ಸಂದರ್ಭದಲ್ಲಿ ಉರಗ ರಕ್ಷಕರಿಗೆ ಸನ್ಮಾನ ಮಾಡಲಾಯಿತು.
Subscribe to Updates
Get the latest creative news from FooBar about art, design and business.
ಮೂಢನಂಬಿಕೆಗಳಿಂದಾಗಿ ಹಾವುಗಳ ಸಂತತಿಗೆ ಸಂಚಕಾರ :ಎಸಿ ಗದ್ಯಾಳ
Related Posts
Add A Comment

