ಕೆಂಭಾವಿ: ಹಿಂದೂ ಮುಸ್ಲಿಂರ ಸಂಗಮ ಭಾವೈಕ್ಯತೆಯ ಸಂದೇಶ ಸಾರುವ ಮೊಹರಂ ಹಬ್ಬದ ಕೊನೆಯ ದಿನ ಬುಧವಾರ ಸಂಭ್ರಮದಿಂದ ಸಂಪನ್ನಗೊಂಡಿತು.
ಪಟ್ಟಣದ ಸಮೀಪವಿರುವ ತಿಪ್ಪನಟಿಗಿ ಗ್ರಾಮದಲ್ಲಿ ಪ್ರತಿ ವರ್ಷದಂತೆ ಈ ವರ್ಷವೂ ಕೂಡ ಎಲ್ಲಾ ಧರ್ಮೀಯರು ಪ್ರೀತಿ ವಿಶ್ವಾಸ ಶ್ರದ್ಧೆ ಭಕ್ತಿಯಿಂದ ಮೊಹರಂ ಹಬ್ಬ ಆಚರಿಸುವ ಮೂಲಕ ಭಗವಂತನ ಕೃಪೆಗೆ ಪಾತ್ರರಾಗಿ, ಸರ್ವಧರ್ಮ ಸಮನ್ವಯತೆ ಹಾಗೂ ಸಾಮರಸ್ಯವನ್ನು ಹೊತ್ತು ಸಾರಿದರು. ಧಾರ್ಮಿಕ ಹಬ್ಬ ಹರಿದಿನಗಳಲ್ಲಿ, ಜಾತ್ರೆ ಉತ್ಸವಗಳು ತನ್ನದೆಯಾದ ಚಾರಿತ್ರಿಕ ಮತ್ತು ಧಾರ್ಮಿಕ ಹಿನ್ನೆಲೆ ಹೊಂದಿರುವಂತೆ ಈ ಹಬ್ಬವು ಕೂಡ ಜನಪದ ಕಲೆ, ನೃತ್ಯ, ವೈಭವ ಕಣ್ಮುಂದೆಯೇ ತಂದೊಡ್ಡುವ ಮೂಲಕ ಭಕ್ತಿ ಪರಾಕಾಷ್ಠೆ ಮೆರೆದರು. ವಿಶೇಷವಾಗಿ ಯುವಕರ ವಿವಿಧ ಪ್ರಕಾರಗಳ ಕುಣಿತ, ರಿವಾಯತ ಹಾಡುಗಳು, ಸರ್ವ ಜನರ ಮನಸೂರೆಗೊಂಡಿತು.
ಈ ಸಂದರ್ಭದಲ್ಲಿ ಉಸ್ಮಾನ್ ಖಾದ್ರಿ, ಜುಲ್ಫಿ ಖಾದ್ರಿ, ದೇವಪ್ಪ ಬೋಯಿ, ಮುದಕಪ್ಪ ಚಿಡಬಿ, ದೇವಪ್ಪ ಹೇರುಂಡಿ, ಬಸಪ್ಪ ನಾಯ್ಕೊಡಿ, ರಾಮಕೃಷ್ಣ ನಾಯ್ಕೊಡಿ, ನಯಮುದ್ದಿನ್ ಖಾದ್ರಿ ಸೇರಿದಂತೆ ಅನೇಕರು ಉಪಸ್ಥಿತರಿದ್ದರು.
Subscribe to Updates
Get the latest creative news from FooBar about art, design and business.
Related Posts
Add A Comment

