Subscribe to Updates
Get the latest creative news from FooBar about art, design and business.
Author: editor.udayarashmi@gmail.com
ಆಲಮೇಲ: “ನಿರ್ಮಲಾ ಸೀತಾರಾಮನ್ ಏಳನೆಯ ಬಾರಿ ಬಜೆಟ್ ಮಂಡಿಸಿದ್ದು ಮಾತ್ರ ಹೆಗ್ಗಳಿಕೆಯಾಗಿದ್ದು, ಕೇಂದ್ರ ಬಜೆಟ್ ಅತ್ಯಂತ ನಿರಾಶಾದಾಯಕವಾಗಿದೆ. ಬಜೆಟ್ ಮಂಡನೆ ನಂತರ ತೀವ್ರಗತಿಯಲ್ಲಿ ಷೇರು ಮಾರುಕಟ್ಟೆ ಕುಸಿತ ಕಂಡಿರುವುದು ಇದಕ್ಕೆ ಸಾಕ್ಷಿಯಾಗಿದೆ.ಸರ್ಕಾರದ ಪ್ರಾದೇಶಿಕ ಮಿತ್ರಪಕ್ಷಗಳ ರಾಜ್ಯಗಳಿಗೆ ಬಂಪರ್ ಪ್ಯಾಕೇಜ್ ಗಳನ್ನು ಘೋಷಿಸಿ, ಒಕ್ಕೂಟ ವ್ಯವಸ್ಥೆಯ ದೇಶದಲ್ಲಿ ತಾರತಮ್ಯ ನೀತಿ ಅನುಸರಿಸಿದ್ದಾರೆ. ಕರ್ನಾಟಕ ಸೇರಿದಂತೆ ಅತೀ ಹೆಚ್ಚು ರಾಜಸ್ವ ಪಡೆಯುವ ರಾಜ್ಯಗಳಿಗೆ ಕೇಂದ್ರ ಚೊಂಬು ನೀಡಿದೆ.” – ಡಾ.ಸಮೀರ ಹಾದಿಮನಿಅಧ್ಯಕ್ಷರು, ಬ್ಲಾಕ್ ಕಾಂಗ್ರೆಸ್ ಡಾಕ್ಟರ್ಸ್ ಸೆಲ್, ಆಲಮೇಲ.
ಸಿಂದಗಿ: ಕೇಂದ್ರ ಸರಕಾರ ಮಂಡಿಸಿದ ೨೦೨೪ರ ಬಜೆಟ್ ಸಂಪೂರ್ಣ ತಾರತಮ್ಯ ನೀತಿಯನ್ನು ಒಳಗೊಂಡಿದೆ. ಬಿಜೆಪಿ ಪಕ್ಷಕ್ಕೆ ಕೈಜೋಡಿಸಿದ ಪಕ್ಷಗಳ ರಾಜ್ಯಗಳಿಗೆ ಹೆಚ್ಚು ಹೆಚ್ಚು ವಿಶೇಷ ಪ್ಯಾಕೇಜ್‌ಗಳನ್ನು ನೀಡುವ ಮೂಲಕ ಆಯಾ ರಾಜ್ಯಗಳ ಅಭಿವೃದ್ಧಿಗೆ ಕೇಂದ್ರ ಸರಕಾರ ಬಜೆಟ್‌ನಲ್ಲಿ ಅನುದಾನ ಘೋಷಣೆ ಮಾಡಿದೆ. ಆದರೆ ಕರ್ನಾಟಕಕ್ಕೆ ಕೇಂದ್ರ ಸರಕಾರ ಸಂಪೂರ್ಣವಾಗಿ ಅನುದಾನ ವಿಚಾರದಲ್ಲಿ ಕಡೆಗಣಿಸಿದ್ದು ಖಂಡನೀಯ. ಎಲ್ಲ ರಾಜ್ಯಗಳಂತೆ ಕರ್ನಾಟಕಕ್ಕೆ ಸಿಗಬೇಕಾಗಿರುವ ಅನುದಾನವನ್ನ ಮಾತ್ರ ಕರ್ನಾಟಕಕ್ಕೆ ಸಿಕ್ಕಿದೆ ಹೊರತು ವಿಶೇಷ ಅನುದಾನ ನೀಡಿಲ್ಲ. ಈ ಬಾರಿಯು ಬಜೆಟ್ ರೈತರ ವಿರೋಧಿಯಾಗಿದೆ. ಬಡ ಮತ್ತು ಹಿಂದುಳಿದ ವರ್ಗದ ಜನರಿಗೆ ಕಲ್ಯಾಣದ ಯೋಜನೆಗಳು ಯಾವುದು ಜಾರಿಗೆ ಬಂದಿಲ್ಲ. ಮಹಿಳೆಯರಿಗೆ ಈ ಬಜೆಟ್‌ನಲ್ಲಿ ಆರ್ಥಿಕ ಸಾಮರ್ಥ್ಯ ಹೆಚ್ಚಿಸುವ ಯೋಜನೆಗಳು ಇಲ್ಲ. ಗ್ರಾಮೀಣ ಭಾಗದ ಕೂಲಿ ಕಾರ್ಮಿಕರಿಗೆ ಆದ್ಯತೆ ನೀಡಿಲ್ಲ.” – ಅಶೋಕ ಮನಗೂಳಿಶಾಸಕರು, ಸಿಂದಗಿ
ಸಿಂದಗಿ: ” ಕೇಂದ್ರ ಸರಕಾರದ ಬಜೆಟ್ ವಿಶೇಷವಾಗಿ ನೌಕರರ ವರ್ಗಕ್ಕೆ ಬಹಳ ದೊಡ್ಡ ಅನುಕೂಲವಾಗಿದೆ. ಎಮ್‌ಎಸ್‌ಎಮ್‌ಇ ಎಲ್ಲವೂ ಸಾಕಷ್ಟು ಒಳ್ಳೆಯದಾಗುವ ಸಾಧ್ಯತೆಗಳಿವೆ. ಒಟ್ಟಿನಲ್ಲಿ ಸಾಮಾನ್ಯ ಜನರಿಗೂ ಇದರಿಂದ ಅನುಕೂಲವಾಗಿದೆ. ಇದೊಂದು ಎಲ್ಲ ಕ್ಷೇತ್ರಕ್ಕೂ ಸಮತೋಲಿತ ಬಜೆಟ್ ಆಗಿದೆ. – ಅರುಣ ಶಹಾಪೂರವಿಧಾನ ಪರಿಷತ್ ಮಾಜಿ ಸದಸ್ಯರು
ದೇವರಹಿಪ್ಪರಗಿ: ನಮ್ಮ ಜೀವನ ಪಯಣದಲ್ಲಿ ನಮಗೆ ಮಾರ್ಗದರ್ಶನ ನೀಡುವ ತಂದೆ, ತಾಯಿ, ಗುರು ಹಿರಿಯರು, ಶಿಕ್ಷಕ ವೃಂದವನ್ನು ಗೌರವಿಸುವುದು ನಮ್ಮ ಸತ್ಸಂಪ್ರದಾಯವಾಗಿದೆ ಎಂದು ಬೆಂಗಳೂರು ನೀಟ್ ಅಕಾಡೆಮಿಯ ನಿರ್ದೇಶಕ ಸಿ.ಎನ್. ವೆಂಕಟೇಶ ಹೇಳಿದರು.ಪಟ್ಟಣದ ಶ್ರೀಸಿದ್ಧೇಶ್ವರ ಸ್ವಾಮೀಜಿ ಪ್ರೌಢಶಾಲಾ ಆವರಣದಲ್ಲಿ ಸೋಮವಾರ ಜರುಗಿದ ಗುರುನಮನ ಕಾರ್ಯಕ್ರಮಕ್ಕೆ ಸಸಿಗೆ ನೀರುಣಿಸುವುದರ ಮೂಲಕ ಚಾಲನೆ ನೀಡಿ ಮಾತನಾಡಿದರು.ಭಾರತೀಯ ಸಂಸ್ಕೃತಿ ಹಾಗೂ ಶಿಕ್ಷಣದಲ್ಲಿ ಗುರುವಿನ ಸ್ಥಾನ ಹಿರಿದಾದುದಾಗಿದ್ದು, ಅಂತೆಯೇ ಗುರುಪೂರ್ಣಿಮಾ ದಿನವನ್ನು ಕೃತಜ್ಞತೆ, ಭಕ್ತಿ ಮತ್ತು ಸಾಂಸ್ಕೃತಿಕ ಏಕತೆಯ ಪ್ರತೀಕವಾಗಿ ಆಚರಿಸಲಾಗುತ್ತಿದೆ ಎಂದರು.ಸಂಸ್ಥೆಯ ಸಂಸ್ಥಾಪಕ ಅಧ್ಯಕ್ಷ ವ್ಹಿ.ಕೆ.ಪಾಟೀಲ ಮಾತನಾಡಿ, ಮಗುವಿನ ಸರ್ವತೋಮುಖ ಬೆಳವಣಿಗೆಯಲ್ಲಿ ಶಿಕ್ಷಕರು ಹಾಗೂ ಪಾಲಕರು ಪ್ರಮುಖ ಪಾತ್ರ ವಹಿಸುತ್ತಾರೆ. ಮನೆಯೇ ಮೊದಲ ಪಾಠಶಾಲೆ, ತಾಯಿಯೇ ಮೊದಲ ಗುರು ಎಂಬ ಅರ್ಥಗರ್ಭಿತ ಮಾತುಗಳಿಂದ ಆರಂಭಗೊಳ್ಳುವ ಶಿಕ್ಷಣ ಹಾಗೂ ಗುರುವಿನ ಕುರಿತಾದ ಮಹತ್ವವನ್ನು ನಾವೆಲ್ಲ ತಿಳಿದುಕೊಳ್ಳಬೇಕಾಗಿದೆ ಎಂದರು.ಸಾನಿಧ್ಯ ವಹಿಸಿದ್ದ ಸ್ಥಳೀಯ ಸದಯ್ಯನಮಠ ವೀರಗಂಗಾಧರ ಸ್ವಾಮೀಜಿ ಆಶೀರ್ವಚನ ನೀಡಿ, ನಮ್ಮ ಜೀವನಪಥದಲ್ಲಿ ನಮಗೆ ಉತ್ತಮ ಮಾರ್ಗದರ್ಶನ ನೀಡುವ, ಜ್ಞಾನ…
ವಿಜಯಪುರ: ಕಾರ್ಮಿಕ ಇಲಾಖೆ ಹಾಗೂ ಕರ್ನಾಟಕ ಕಟ್ಟಡ ಮತ್ತು ಇತರೆ ನಿರ್ಮಾಣ ಕಾರ್ಮಿಕರ ಕಲ್ಯಾಣ ಮಂಡಳಿ ವತಿಯಿಂದ ಮಹಿಳಾ ಕಟ್ಟಡ ಕಾರ್ಮಿಕರಿಗೆ ನ್ಯೂಟ್ರಿಷಿಯನ್ ಕಟಿ ವಿತರಿಸಲು ಅರ್ಜಿ ಆಹ್ವಾನಿಸಲಾಗಿದೆ.ಫಲಾನುಭವಿಯು ಕಾರ್ಮಿಕ ಗುರುತಿನ ಚೀಟಿ, ಆಧಾರ ಕಾರ್ಡ ಮತ್ತು ಭಾವಚಿತ್ರದೊಂದಿಗೆ ದಿ: ೦೨-೦೮-೨೦೨೪ರೊಳಗಾಗಿ ಕಾರ್ಮಿಕ ನಿರೀಕ್ಷಕರ ಕಚೇರಿ, ೧ನೇ ವೃತ್ತ ಮತ್ತು ೨ನೇ ವೃತ್ತ, ಕಲ್ಯಾಣ ಸಮುದಾಯ ಭವನ ಸಿಂದಗಿ ನಾಕಾ, ಅಲ್ಲಾಪೂರ ಓಣಿ ವಿಜಯಪುರ ವಿಳಾಸಕ್ಕೆ ಅರ್ಜಿ ಸಲ್ಲಿಸಬೇಕು. ಸ್ವೀಕರಿಸಲಾದ ಅರ್ಜಿಗಳನ್ನು ಪರಿಶೀಲಿಸಿ ಜೇಷ್ಠತಾ ಆಧಾರದ ಮೇಲೆ ಕಿಟ್‌ಗಳನ್ನು ವಿತರಿಸಲಾಗುವುದು ಎಂದು ಕಾರ್ಮಿಕ ನಿರೀಕ್ಷಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ವಿಜಯಪುರ: ಮೀನುಗಾರಿಕೆ ಇಲಾಖೆಯಿಂದ ಕೇಂದ್ರ ಪುರಸ್ಕೃತ ಪ್ರಧಾನ ಮಂತ್ರಿ ಮತ್ಸ್ಯ ಸಂಪದ ಯೋಜನೆಯಡಿ ೨೦೨೦-೨೧ ರಿಂದ ೨೦೨೩-೨೪ನೇ ಸಾಲಿನವರೆಗಿನ ಬಾಕಿ ಉಳಿದ ಘಟಕಗಳಿಗೆ ಸಹಾಯಧನ ಪಡೆಯಲು ಅರ್ಜಿ ಆಹ್ವಾನಿಸಲಾಗಿದೆ.ಹೊಸ ಮೀನು ಕೃಷಿ ಕೊಳ ನಿರ್ಮಾಣ, ಸಣ್ಣ ಗಾತ್ರದ ಆರ್.ಎ.ಎಸ್. ಘಟಕ, ಮತ್ಸ್ಯವಾಹಿನಿ ಯೋಜನೆಯಡಿ ತ್ರಿಚಕ್ರ ವಾಹನ ಪರವಾನಿ ಆಧಾರದಲ್ಲಿ ಪಡೆಯಲು ಅರ್ಜಿ ಆಹ್ವಾನಿಸಲಾಗಿದ್ದು, ಅರ್ಜಿ ಸಲ್ಲಿಸಲು ದಿನಾಂಕ : ೦೫-೦೮-೨೦೨೪ ಕೊನೆಯ ದಿನಾಂಕವಾಗಿದ್ದು, ಆಸಕ್ತ ಮೀನು ಕೃಷಿಕರು ಸಂಬಂಧಪಟ್ಟ ತಾಲೂಕಾ ಮೀನುಗಾರಿಕೆ ಸಹಾಯಕ ನಿರ್ದೇಶಕರ ಕಚೇರಿಗೆ ಅರ್ಜಿ ಸಲ್ಲಿಸಬೇಕು. ಈ ಕುರಿತಂತೆ ಹೆಚ್ಚಿನ ಮಾಹಿತಿಗಾಗಿ ಮೀನುಗಾರಿಕೆ ಉಪನಿರ್ದೇಶಕರು ವಿಜಯಪುರ ಮೊ: ೯೯೮೬೧೩೨೭೧೭, ಮೀನುಗಾರಿಕೆ ಸಹಾಯಕ ನಿರ್ದೇಶಕರು ವಿಜಯಪುರ ಮೊ: ೯೮೪೫೯೨೭೧೧೦, ಮೀನುಗಾರಿಕೆ ಸಹಾಯಕ ನಿರ್ದೇಶಕರು ಮುದ್ದೇಬಿಹಾಳ ಮೊ: ೯೮೪೫೯೨೭೧೧೦ ಸಂಖ್ಯೆಗೆ ಸಂಪರ್ಕಿಸುವಂತೆ ಮೀನುಗಾರಿಕೆ ಇಲಾಖೆ ಉಪನಿದೇಶಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಇಂಡಿ: ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಮಂಡಿಸಿರುವ ಬಜೆಟನ್ನು ಇಂಡಿಯಲ್ಲಿ ಸ್ವಾಗತಿಸಿದ್ದು, ಇದು ಜನಸಾಮಾನ್ಯರಿಗೆ ಒತ್ತು ನೀಡುವ ಬಜೆಟ್ ಆಗಿದೆ ಎಂದಿದ್ದಾರೆ. ” ಸಾಮಾನ್ಯರ ಅಭಿವೃದ್ದಿಗೆ ಒತ್ತು ನೀಡುವ ಬಜೆಟ್ ಇದಾಗಿದೆ. ಯುವಕರು, ಮಹಿಳೆಯರು, ಬಡವರು, ಮತ್ತು ರೈತರ ಮೇಲೆ ಕೇಂದ್ರಿಕರಿಸಿ ಬಜೆಟ್ ಸಿದ್ದ ಪಡಿಸಲಾಗಿದೆ. ಕೃಷಿಯಲ್ಲಿ ಉತ್ಪಾದನೆ ಗುರಿ ಹೊಂದಿದ್ದು ರೈತರಿಗೆ ಉತ್ತೇಜನವಾಗಿದೆ ” ಎಂದು ವಿಜಯಪುರ ಜಿಲ್ಲಾ ಬಿಜೆಪಿ ರೈತ ಮೋರ್ಚಾ ಮಾಜಿ ಅಧ್ಯಕ್ಷ ಕಾಸುಗೌಡ ಬಿರಾದಾರ ಅಭಿಪ್ರಾಯಿಸಿದ್ದಾರೆ. ” ತೆರಿಗೆ ಪದ್ದತಿ ಮತ್ತಷ್ಟು ಸರಳೀಕರಣ, ಚಿನ್ನ ಮತ್ತು ಬೆಳ್ಳಿಯ ಮೇಲಿನ ಕಸ್ಟಮ್ಸ ಸುಂಕವನ್ನು ಶೇ.೬ ಇಳಿಕೆ ಸೇರಿದಂತೆ ಕೃಷಿಯಲ್ಲಿ ಉತ್ಪಾದಕತೆ ಮತ್ತು ಸ್ಥಿತಿ ಸ್ಥಾಪಕತ್ವ ಸಂಶೋಧನೆ ಮತ್ತು ಅಭಿವೃದ್ದಿಗೆ ಸುಧಾರಣೆಗಳ ಪ್ರಸ್ತಾಪ ಮಾಡಿದ್ದಾರೆ” ಎಂದು ಇಂಡಿಬಿಜೆಪಿ ಮಂಡಲ ಅಧ್ಯಕ್ಷ ಮಲ್ಲಿಕಾರ್ಜುನ ಕಿವಡೆ ಪ್ರತಿಕ್ರಿಯಿಸಿದ್ದಾರೆ. ” ೨೦ ಲಕ್ಷ ಯುವಕರಿಗೆ ಕೌಶಲ್ಯಾಭಿವೃದ್ದಿ ಯೋಜನೆ, ಉನ್ನತ ಶಿಕ್ಷಣಕ್ಕೆ ೧೦ ಸಾಲ ಕೈಗಾರಿಕೆ ಕಾರಿಡಾರ್ ತೆರಿಗೆ ಪದ್ದತಿ ಸರಳೀಕರಣ ವರದಾನವಾಗಲಿದೆ” ಎಂದು…
ವಿಜಯಪುರ: ಕೇಂದ್ರ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಅವರು ಲೋಕಸಭೆಯಲ್ಲಿ ಮಂಡಿಸಿದ ಕೇಂದ್ರ ಬಜೆಟ್ ಯುವಕರು, ಮಹಿಳೆಯರು, ಬಡವರು ಮತ್ತು ರೈತರ ಮೇಲೆ ಕೇಂದ್ರೀಕರಿಸಿ ಸಿದ್ದಪಡಿಸಲಾದ ಬಜೆಟ್ ಇದಾಗಿದೆ ಎಂದು ನಗರದ ಪ್ರಗತಿಪರ ಯುವಕ ಸೋಮನಾಥ ನಡಗೇರಿ ಅಭಿಪ್ರಾಯಪಟ್ಟಿದ್ದಾರೆ.ಕೃಷಿಯಲ್ಲಿ ಉತ್ಪಾದಕತೆ, ಮತ್ತು ಸ್ಥಿತಿಸ್ಥಾಪಕತ್ವ, ಉದ್ಯೋಗ ಮತ್ತು ಕೌಶಲ್ಯ-ಎಚ್ಆರ್‌ಡಿ ಮತ್ತು ಸಾಮಾಜಿಕ ನ್ಯಾಯ, ಉತ್ಪಾದಕತೆ, ಸೇವೆಗಳು, ನಗರಾಭಿವೃದ್ದಿ, ಶಕ್ತಿಬದ್ರತೆ, ಮೂಲಭೂತ ಸೌಕರ‍್ಯಗಳನ್ನು ಒಳಗೊಂಡ ಸರ್ವರಿಗೂ ಅನುಕೂಲವಾಗುವ ಬಜೆಟ್ ಇದಾಗಿದೆ. ಅಭಿವೃದ್ಧಿ ಪೂರಕ ಬಜೆಟ್ ನ್ನು ಸ್ವಾಗತಿಸುತ್ತೇನೆ.ಮಂಡಿಸಲು ಮಾರ್ಗದರ್ಶನ ಮಾಡಿದ ದೇಶವನ್ನು ಜಗದ್ಗುರುವನ್ನಾಗಿ ಮಾಡಿದ ವಿಶ್ವನಾಯಕ ನರೇಂದ್ರ ಮೋದಿಜಿ ಅವರಿಗೆ ನಡಗೇರಿ ಅಭಿನಂದನೆ ಸಲ್ಲಿಸಿದ್ದಾರೆ.
” ವಿಕಸಿತ ಭಾರತದ ಆಶಯದೊಂದಿಗೆ ಹಲವು ಆರ್ಥಿಕ ಸುಧಾರಣಾ ಕ್ರಮ. ಶಿಕ್ಷಣ, ಉದ್ಯೋಗ, ಕೌಶಲ್ಯಾಭಿವೃದ್ಧಿಗೆ 1.48 ಲಕ್ಷ ಕೋಟಿ ಮೀಸಲು, ಗ್ರಾಮೀಣ ಭಾಗದ ಆರ್ಥಿಕತೆ ವೃದ್ದಿಗೆ ಆದ್ಯತೆ, ಬಡವರು, ಮಹಿಳೆಯರು, ರೈತರು ಹಾಗೂ ಯುವಕರತ್ತ ಸರ್ಕಾರದ ಚಿತ್ತ , ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಸತತ 7ನೇ ಬಾರಿಗೆ ಕೇಂದ್ರ ಬಜೆಟ್ ಮಂಡನೆ ಮಾಡಿದ್ದು ಇದೊಂದು ಐತಿಹಾಸಿಕ ಬಜೆಟ್ ಆಗಿದೆ.” – ರಮೇಶ ಜಿಗಜಿಣಗಿಸಂಸದರು, ವಿಜಯಪುರ
” ವಿಕಸಿತ ಭಾರತದ ಆಶಯದೊಂದಿಗೆ ಹಲವು ಆರ್ಥಿಕ ಸುಧಾರಣಾ ಕ್ರಮ. ಶಿಕ್ಷಣ, ಉದ್ಯೋಗ, ಕೌಶಲ್ಯಾಭಿವೃದ್ಧಿಗೆ 1.48 ಲಕ್ಷ ಕೋಟಿ ಮೀಸಲು, ಗ್ರಾಮೀಣ ಭಾಗದ ಆರ್ಥಿಕತೆ ವೃದ್ದಿಗೆ ಆದ್ಯತೆ, ಬಡವರು, ಮಹಿಳೆಯರು, ರೈತರು ಹಾಗೂ ಯುವಕರತ್ತ ಸರ್ಕಾರದ ಚಿತ್ತ , ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಸತತ 7ನೇ ಬಾರಿಗೆ ಕೇಂದ್ರ ಬಜೆಟ್ ಮಂಡನೆ ಮಾಡಿದ್ದು ಇದೊಂದು ಐತಿಹಾಸಿಕ ಬಜೆಟ್ ಆಗಿದೆ.” – ರಮೇಶ ಜಿಗಜಿಣಗಿಸಂಸದರು, ವಿಜಯಪುರ
