ಸಿಂದಗಿ: ಕೇಂದ್ರ ಸರಕಾರ ಮಂಡಿಸಿದ ೨೦೨೪ರ ಬಜೆಟ್ ಸಂಪೂರ್ಣ ತಾರತಮ್ಯ ನೀತಿಯನ್ನು ಒಳಗೊಂಡಿದೆ. ಬಿಜೆಪಿ ಪಕ್ಷಕ್ಕೆ ಕೈಜೋಡಿಸಿದ ಪಕ್ಷಗಳ ರಾಜ್ಯಗಳಿಗೆ ಹೆಚ್ಚು ಹೆಚ್ಚು ವಿಶೇಷ ಪ್ಯಾಕೇಜ್‌ಗಳನ್ನು ನೀಡುವ ಮೂಲಕ ಆಯಾ ರಾಜ್ಯಗಳ ಅಭಿವೃದ್ಧಿಗೆ ಕೇಂದ್ರ ಸರಕಾರ ಬಜೆಟ್‌ನಲ್ಲಿ ಅನುದಾನ ಘೋಷಣೆ ಮಾಡಿದೆ. ಆದರೆ ಕರ್ನಾಟಕಕ್ಕೆ ಕೇಂದ್ರ ಸರಕಾರ ಸಂಪೂರ್ಣವಾಗಿ ಅನುದಾನ ವಿಚಾರದಲ್ಲಿ ಕಡೆಗಣಿಸಿದ್ದು ಖಂಡನೀಯ. ಎಲ್ಲ ರಾಜ್ಯಗಳಂತೆ ಕರ್ನಾಟಕಕ್ಕೆ ಸಿಗಬೇಕಾಗಿರುವ ಅನುದಾನವನ್ನ ಮಾತ್ರ ಕರ್ನಾಟಕಕ್ಕೆ ಸಿಕ್ಕಿದೆ ಹೊರತು ವಿಶೇಷ ಅನುದಾನ ನೀಡಿಲ್ಲ. ಈ ಬಾರಿಯು ಬಜೆಟ್ ರೈತರ ವಿರೋಧಿಯಾಗಿದೆ. ಬಡ ಮತ್ತು ಹಿಂದುಳಿದ ವರ್ಗದ ಜನರಿಗೆ ಕಲ್ಯಾಣದ ಯೋಜನೆಗಳು ಯಾವುದು ಜಾರಿಗೆ ಬಂದಿಲ್ಲ. ಮಹಿಳೆಯರಿಗೆ ಈ ಬಜೆಟ್‌ನಲ್ಲಿ ಆರ್ಥಿಕ ಸಾಮರ್ಥ್ಯ ಹೆಚ್ಚಿಸುವ ಯೋಜನೆಗಳು ಇಲ್ಲ. ಗ್ರಾಮೀಣ ಭಾಗದ ಕೂಲಿ ಕಾರ್ಮಿಕರಿಗೆ ಆದ್ಯತೆ ನೀಡಿಲ್ಲ.”
– ಅಶೋಕ ಮನಗೂಳಿ
ಶಾಸಕರು, ಸಿಂದಗಿ

