ಆಲಮೇಲ: “ನಿರ್ಮಲಾ ಸೀತಾರಾಮನ್ ಏಳನೆಯ ಬಾರಿ ಬಜೆಟ್ ಮಂಡಿಸಿದ್ದು ಮಾತ್ರ ಹೆಗ್ಗಳಿಕೆಯಾಗಿದ್ದು, ಕೇಂದ್ರ ಬಜೆಟ್ ಅತ್ಯಂತ ನಿರಾಶಾದಾಯಕವಾಗಿದೆ. ಬಜೆಟ್ ಮಂಡನೆ ನಂತರ ತೀವ್ರಗತಿಯಲ್ಲಿ ಷೇರು ಮಾರುಕಟ್ಟೆ ಕುಸಿತ ಕಂಡಿರುವುದು ಇದಕ್ಕೆ ಸಾಕ್ಷಿಯಾಗಿದೆ.
ಸರ್ಕಾರದ ಪ್ರಾದೇಶಿಕ ಮಿತ್ರಪಕ್ಷಗಳ ರಾಜ್ಯಗಳಿಗೆ ಬಂಪರ್ ಪ್ಯಾಕೇಜ್ ಗಳನ್ನು ಘೋಷಿಸಿ, ಒಕ್ಕೂಟ ವ್ಯವಸ್ಥೆಯ ದೇಶದಲ್ಲಿ ತಾರತಮ್ಯ ನೀತಿ ಅನುಸರಿಸಿದ್ದಾರೆ. ಕರ್ನಾಟಕ ಸೇರಿದಂತೆ ಅತೀ ಹೆಚ್ಚು ರಾಜಸ್ವ ಪಡೆಯುವ ರಾಜ್ಯಗಳಿಗೆ ಕೇಂದ್ರ ಚೊಂಬು ನೀಡಿದೆ.”
– ಡಾ.ಸಮೀರ ಹಾದಿಮನಿ
ಅಧ್ಯಕ್ಷರು, ಬ್ಲಾಕ್ ಕಾಂಗ್ರೆಸ್ ಡಾಕ್ಟರ್ಸ್ ಸೆಲ್, ಆಲಮೇಲ.

