ಇಂಡಿ: ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಮಂಡಿಸಿರುವ ಬಜೆಟನ್ನು ಇಂಡಿಯಲ್ಲಿ ಸ್ವಾಗತಿಸಿದ್ದು, ಇದು ಜನಸಾಮಾನ್ಯರಿಗೆ ಒತ್ತು ನೀಡುವ ಬಜೆಟ್ ಆಗಿದೆ ಎಂದಿದ್ದಾರೆ.
” ಸಾಮಾನ್ಯರ ಅಭಿವೃದ್ದಿಗೆ ಒತ್ತು ನೀಡುವ ಬಜೆಟ್ ಇದಾಗಿದೆ. ಯುವಕರು, ಮಹಿಳೆಯರು, ಬಡವರು, ಮತ್ತು ರೈತರ ಮೇಲೆ ಕೇಂದ್ರಿಕರಿಸಿ ಬಜೆಟ್ ಸಿದ್ದ ಪಡಿಸಲಾಗಿದೆ. ಕೃಷಿಯಲ್ಲಿ ಉತ್ಪಾದನೆ ಗುರಿ ಹೊಂದಿದ್ದು ರೈತರಿಗೆ ಉತ್ತೇಜನವಾಗಿದೆ ” ಎಂದು ವಿಜಯಪುರ ಜಿಲ್ಲಾ ಬಿಜೆಪಿ ರೈತ ಮೋರ್ಚಾ ಮಾಜಿ ಅಧ್ಯಕ್ಷ ಕಾಸುಗೌಡ ಬಿರಾದಾರ ಅಭಿಪ್ರಾಯಿಸಿದ್ದಾರೆ.
” ತೆರಿಗೆ ಪದ್ದತಿ ಮತ್ತಷ್ಟು ಸರಳೀಕರಣ, ಚಿನ್ನ ಮತ್ತು ಬೆಳ್ಳಿಯ ಮೇಲಿನ ಕಸ್ಟಮ್ಸ ಸುಂಕವನ್ನು ಶೇ.೬ ಇಳಿಕೆ ಸೇರಿದಂತೆ ಕೃಷಿಯಲ್ಲಿ ಉತ್ಪಾದಕತೆ ಮತ್ತು ಸ್ಥಿತಿ ಸ್ಥಾಪಕತ್ವ ಸಂಶೋಧನೆ ಮತ್ತು ಅಭಿವೃದ್ದಿಗೆ ಸುಧಾರಣೆಗಳ ಪ್ರಸ್ತಾಪ ಮಾಡಿದ್ದಾರೆ” ಎಂದು ಇಂಡಿ
ಬಿಜೆಪಿ ಮಂಡಲ ಅಧ್ಯಕ್ಷ ಮಲ್ಲಿಕಾರ್ಜುನ ಕಿವಡೆ ಪ್ರತಿಕ್ರಿಯಿಸಿದ್ದಾರೆ.
” ೨೦ ಲಕ್ಷ ಯುವಕರಿಗೆ ಕೌಶಲ್ಯಾಭಿವೃದ್ದಿ ಯೋಜನೆ, ಉನ್ನತ ಶಿಕ್ಷಣಕ್ಕೆ ೧೦ ಸಾಲ ಕೈಗಾರಿಕೆ ಕಾರಿಡಾರ್ ತೆರಿಗೆ ಪದ್ದತಿ ಸರಳೀಕರಣ ವರದಾನವಾಗಲಿದೆ” ಎಂದು ಇಂಡಿ ಸರಕಾರಿ ಪ್ರಥಮ ದರ್ಜೆ ಮಹಾವಿದ್ಯಾಲಯದ ಪ್ರಾಚಾರ್ಯ ರಮೇಶ ಎಚ್.ಆರ್. ಪತ್ರಿಕೆಗೆ ತಿಳಿಸಿದ್ದಾರೆ.
” ಇದು ದೇಶದ ಅಭಿವೃದ್ಧಿಪೂರಕ ಬಜೆಟ್, ಮೂಲಭೂತ ಸೌಲಭ್ಯಕ್ಕೆ ಹೆಚ್ಚಿನ ಒತ್ತು ನೀಡಲಾಗಿದೆ. ಶಿಕ್ಷಣಕ್ಕೆ ಹೆಚ್ಚಿನ ಮಹತ್ವ ಹಿಂದುಳಿದ ವರ್ಗದ ಜನರಿಗೆ ಆಧ್ಯತೆ, ರಾಷ್ಟ್ರೀಯ ಹೆದ್ದಾರಿ ಯೋಜನೆ ರೈಲ್ವೆ ಮಾರ್ಗ ಅಭಿವೃದ್ಧಿ ಬಡವರಿಗೆ ಆವಾಸ್ ಯೋಜನೆ ಹಾಗೂ ಎಲ್ಲ ವರ್ಗದ ಜನರಿಗೆ ಅನ್ವಯವಾಗುವ ಬಜೆಟ್ ಮಾಡಲಾಗಿದೆ. ಇದು ದೇಶದ ಅಭಿವೃದ್ಧಿಪೂರಕ ಬಜೆಟ್” ಎಂದು ಇಂಡಿಯ ಭಾಜಪ ಯುವ ಮುಖಂಡ ರಾಮಸಿಂಗ ಕನ್ನೊಳ್ಳಿ ಅಭಿಪ್ರಾಯಿಸಿದ್ದಾರೆ.
“ಹೆಣ್ಣು ಮಕ್ಕಳಿಗೆ ಪ್ರೋತ್ಸಾಹ ಹಾಗೂ ಮಧ್ಯಮ ವರ್ಗಕ್ಕೆ ತೆರಿಗೆ ರಿಲೀಫ್, ಉದ್ಯೋಗ ಸೃಷ್ಟಿ, ಕೃಷಿ, ಆರೋಗ್ಯ, ಮಹಿಳೆಯರು ಮತ್ತು ಯುವಕರಿಗೆ ಆದ್ಯತೆ, ಮೂಲಸೌಕರ್ಯ ಹಾಗೂ ಆರೋಗ್ಯಕ್ಕೆ ಒತ್ತು ಸೇರಿದಂತೆ ಹತ್ತು ಹಲವು ಭಾರಿ ನಿರೀಕ್ಷೆಗಳ ಜನಸಾಮಾನ್ಯರ ಬಜೆಟ್ ಇದಾಗಿದೆ” ಎಂದು ಇಂಡಿಯ ಹಿರಿಯ ನ್ಯಾಯವಾದಿ ಎಸ್ ಜೆ ವಾಲಿಕಾರ ಪ್ರತಿಕ್ರಿಯಿಸಿದ್ದಾರೆ.

