Author: editor.udayarashmi@gmail.com

ಇಂಡಿ ತಾಲೂಕಿನ ಸಾವಳಸಂಗದಲ್ಲಿ ಜ್ಞಾನಯೋಗಿ ಶ್ರೀ ಸಿದ್ದೇಶ್ವರ ಸ್ವಾಮೀಜಿ ವೃಕ್ಷೋದ್ಯಾನ ಲೋಕಾರ್ಪಣೆ | ಸಚಿವ ರಾಮಲಿಂಗಾರೆಡ್ಡಿ ಭರವಸೆ ಉದಯರಶ್ಮಿ ದಿನಪತ್ರಿಕೆ ಇಂಡಿ: ಇಂಡಿ ಕ್ಷೇತ್ರದ ಶಾಸಕ ಯಶವಂತ್ರಾಯಗೌಡರು ನಮ್ಮ ಇಲಾಖೆಗೆ ಸಂಬಂಧಿಸಿದಂತೆ ಅಭಿವೃಧ್ಧಿಯ ಯಾವುದೇ ಕೆಲಸ ತಂದರೂ ಅದನ್ನು ಕೂಡಲೆ ಮಾಡಿಕೊಡುವುದಾಗಿ ಅರಣ್ಯ, ಜೀವಿಶಾಸ್ತ್ರ ಮತ್ತು ಪರಿಸರ ಸಚಿವರಾದ ರಾಮಲಿಂಗಾರೆಡ್ಡಿ ಅವರು ಹೇಳಿದರು.ವಿಜಯಪುರದ ಸಾಮಾಜಿಕ ಅರಣ್ಯ ವಿಭಾಗ ಹಾಗೂ ಇಂಡಿ ಸಾಮಾಜಿಕ ಅರಣ್ಯ ವಲಯದ ಜಂಟಿ ಸಹಯೋಗದಲ್ಲಿ ಇಂಡಿ ತಾಲೂಕಿನ ಸಾವಳಸಂಗದಲ್ಲಿ ನಿರ್ಮಿಸಲಾಗಿರುವ ಜ್ಞಾನಯೋಗಿ ಶ್ರೀ ಸಿದ್ದೇಶ್ವರ ಸ್ವಾಮೀಜಿ ವೃಕ್ಷೋದ್ಯಾನವನ್ನು ಭಾನುವಾರ ವಿದ್ಯುಕ್ತವಾಗಿ ಲೋಕಾರ್ಪಣೆಗೊಳಿಸಿ ಅವರು ಮಾತನಾಡಿದರು.ವಿಜಯಪೂರ ಜಿಲ್ಲೆಯಲ್ಲಿ ಕೇವಲ ೨ ಪ್ರತಿಶತದಷ್ಟು ಮಾತ್ರ ಅರಣ್ಯೀಕರಣವಿದೆ. ಈ ಭಾಗದಲ್ಲಿ ಇನ್ನೂ ಅರಣ್ಯ ಪ್ರದೇಶ ಹೆಚ್ಚಾಗಬೇಕು. ಅಂದಾಗ ಮಾತ್ರ ಇಲ್ಲಿ ಉತ್ತಮ ಮಳೆ, ಬೆಳೆ ಬರಲು ಸಾಧ್ಯವಾಗುತ್ತದೆ. ಮತ್ತು ಜನರು ಆರೋಗ್ಯವಂತರಾಗಿ ಬಾಳಲು ಅನುಕೂಲವಾಗುತ್ತದೆ ಎಂದರು.ಸಾವಳಸಂಗ ಭಾಗದಲ್ಲಿ ಅರಣ್ಯ ಇಲಾಖೆಯವರು ಹಸಿರೀಕರಣ ಹೆಚ್ಚಿಸಲು ಕೈಗೊಂಡಿರುವ ಈ ಕಾರ್ಯವನ್ನು ಪ್ರಶಂಸಿಸಿದ ಸಚಿವರು, ಕೇವಲ ೨.೫೦…

Read More

ಗುರುಪೂರ್ಣಿಮಾ ಮಹೋತ್ಸವ, ಕನ್ನಡ ಉಳಿಸಿ ಉಪನ್ಯಾಸ ಮಾಲಿಕೆ & ಜಿಲ್ಲಾ ಯುವಗೋಷ್ಟಿ ಕಾರ್ಯಕ್ರಮದಲ್ಲಿ ಮಯೂರ ತಿಳಗೂಳಕರ ಅಭಿಮತ ಉದಯರಶ್ಮಿ ದಿನಪತ್ರಿಕೆ ವಿಜಯಪುರ: ಸರ್ಕಾರ ದ್ವಿಭಾಷಾ ನೀತಿಯಿಂದ ಕನ್ನಡವನ್ನು ಪರೋಕ್ಷವಾಗಿ ನಿರ್ಲಕ್ಷ್ಯಿಸಿ ಇಂಗ್ಲಿಷ ಭಾಷೆ ಕಲಿಕೆಗೆ ಪ್ರೋತ್ಸಾಹ ಕೊಡುತ್ತಿದೆ ಎಂದು ಮಯೂರ ತಿಳಗೂಳಕರ ಹೇಳಿದರು.ನಗರದ ದರ್ಬಾರ್ ಸಭಾಭವನದಲ್ಲಿ ರವಿವಾರ ದಿನಾಂಕ 30 ರಂದು ನಡೆದ ಗುರುಪೂರ್ಣಿಮಾ ಮಹೋತ್ಸವ ಮತ್ತು ಕನ್ನಡ ಉಳಿಸಿ ಉಪನ್ಯಾಸ ಮಾಲಿಕೆ ಹಾಗೂ ಜಿಲ್ಲಾ ಯುವಗೋಷ್ಟಿ ಕಾರ್ಯಕ್ರಮದಲ್ಲಿ ಅವರು ಮಾತಾಡಿ ದ್ವಿಭಾಷಾ ನೀತಿಯಿಂದಾಗಿ ಕನ್ನಡ ಭಾಷೆಯಮೇಲಾಗುವ ಪರಿಣಾಮ ಕುರಿತು ವಿವರಿಸಿದರು.”ಭಾರತೀಯ ಸಾಹಿತಿಗಳ ಸಾಹಿತ್ಯ ಸೇರಿ ಒಂದು ತೂಕವಾದರೆ ವೇದವ್ಯಾಸರ ಸಾಹಿತ್ಯ ಮತ್ತೊಂದು ತೂಕವೆಂದು” ಆನಂದ ಗೋಡಸೆ ವೇದವ್ಯಾಸ ಸಾಹಿತ್ಯ ಕುರಿತು ತಿಳಿಸಿದರು.ಈ ಸಂದರ್ಭದಲ್ಲಿ ಜಿಲ್ಲಾ ಯುವಗೋಷ್ಟಿ ಸ್ಪರ್ಧೆಯು ಜರುಗಿತು.ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಿವೇಕ ಕುಲಕರ್ಣಿ ವಹಿಸಿದ್ದರು. ನಿರೂಪಣೆ – ರಾಹುಲ್‌ ಮರಳಿ , ಪ್ರಾರ್ಥನೆ ಸೌಮ್ಯ ಕುಲಕರ್ಣಿ , ವಂದನೆ ಅನಿಲ ಬಳುಂಡಗಿ ನಿರ್ವಹಣೆ ಮಾಡಿದರು. ಕಾರ್ಯಕ್ರಮದಲ್ಲಿ ನಾರಾಯಣ ಬಾಬಾನಗರ, ಸುಕಾಂತ…

Read More

ಉದಯರಶ್ಮಿ ದಿನಪತ್ರಿಕೆ ವಿಜಯಪುರ: ಪ್ರತಿಯೊಬ್ಬ ಕ್ರೀಡಾಪಟು ಕ್ರೀಡಾ ಸ್ಪೂರ್ತಿ, ಶಿಸ್ತು ಹಾಗೂ ಆತ್ಮವಿಶ್ವಾಸದಿಂದ ಕ್ರೀಡೆಯಲ್ಲಿ ಭಾಗವಹಿಸಿ ಕ್ರೀಡಾಕೂಟವನ್ನು ಯಶಸ್ವಿಗೊಳಿಸಬೇಕು ಎಂದು ನಗರ ವಲಯ ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಾರ್ಯಾಲಯದ ಶಿಕ್ಷಣ ಸಂಯೋಜಕ ಪ್ರಕಾಶ ನಾಲತವಾಡ ಹೇಳಿದರು.ನಗರದ ಡಾ.‌ಬಿ.ಆರ್. ಅಂಬೇಡ್ಕರ್ ಕ್ರೀಡಾಂಗಣದಲ್ಲಿ ರವಿವಾರ ನಡೆದ ಸಿದ್ದೇಶ್ವರ ಬಿ ವಲಯದ ಪ್ರೌಢಶಾಲೆಗಳ ಪಂದ್ಯಾವಳಿಯ ಉದ್ಘಾಟನಾ ಸಮಾರಂಭದಲ್ಲಿ ಮಾತನಾಡಿದ ಅವರು, ಕ್ರೀಡೆ ವಿದ್ಯಾರ್ಥಿಗಳ ದೈಹಿಕ ಸಾಮರ್ಥ್ಯವನ್ನು ಹೆಚ್ಚಿಸುವುದರ ಜೊತೆಗೆ ಶಿಸ್ತು, ಸಮಯಪ್ರಜ್ಞೆ, ನಾಯಕತ್ವ ಗುಣ ಹಾಗೂ ಆತ್ಮವಿಶ್ವಾಸ ಬೆಳೆಸುತ್ತದೆ. ಸೋಲು ಗೆಲುವನ್ನು ಸಮಾನ ಮನಸ್ಸಿನಿಂದ ಸ್ವೀಕರಿಸಿ, ಉತ್ತಮ ಪ್ರದರ್ಶನ ನೀಡುವ ಮೂಲಕ ಕ್ರೀಡಾ ಕ್ಷೇತ್ರದಲ್ಲಿ ಸಾಧನೆ ಮಾಡಬೇಕು ಎಂದು ಕರೆ ನೀಡಿದರು.ಪಂದ್ಯಾವಳಿ ಉದ್ಘಾಟಿಸಿದ ಶಿಕ್ಷಕರ ಸಂಘದ ನಗರ ಘಟಕದ ಅಧ್ಯಕ್ಷ ಸಯ್ಯದಜುಬೇರ ಕೆರೂರ ಮಾತನಾಡಿ, ಮಕ್ಕಳು ಮೊಬೈಲ್‌ ದಾಸರಾಗದೆ ಕ್ರೀಡೆಯಲ್ಲಿ ಹೆಚ್ಚು ತೊಡಗಿಸಿಕೊಳ್ಳಬೇಕು. ದೈಹಿಕ ಶ್ರಮದ ಮೂಲಕ ಆರೋಗ್ಯ ಕಾಪಾಡಿಕೊಂಡು, ಕ್ರೀಡೆಯಿಂದ ಮಾನಸಿಕ ನೆಮ್ಮದಿ ಹಾಗೂ ಉತ್ಸಾಹ ಪಡೆಯಬೇಕು ಎಂದರು.ಕಾರ್ಯಕ್ರಮದಲ್ಲಿ ಜಿಲ್ಲಾ ಶಿಕ್ಷಕರ ಸಂಘದ ಸಂಘಟನಾ ಕಾರ್ಯದರ್ಶಿ…

Read More

ಉದಯರಶ್ಮಿ ದಿನಪತ್ರಿಕೆ ಸಿಂದಗಿ: ತಾಲೂಕಿನ ಚಾಂದಕವಟೆಯ ಎಸ್.ಬಿ.ಬಿ.ಕಂಠಿಗೊಂಡ ಪದವಿಪೂರ್ವ ಕಾಲೇಜಿನಲ್ಲಿ ೨೦೨೬-೨೭ನೆಯ ಸಾಲಿನ ಸಿಂದಗಿ, ದೇವರಹಿಪ್ಪರಗಿ ಹಾಗೂ ಆಲಮೇಲ ತಾಲೂಕುಗಳ ಪದವಿ ಪೂರ್ವ ಕಾಲೇಜುಗಳ ಗುಂಪು ಕ್ರೀಡಾಕೂಟದಲ್ಲಿ ಬಾಲಕರ ಖೋ-ಖೋ ಪ್ರಥಮ ಸ್ಥಾನ, ಬಾಲಕಿಯರ ಖೋ-ಖೋ ಪ್ರಥಮ ಸ್ಥಾನ, ಬಾಲಕಿಯರ ವಾಲಿಬಾಲ್ ಪ್ರಥಮ ಸ್ಥಾನ, ಬಾಲಕರ ಕಬಡ್ಡಿ ದ್ವಿತೀಯ ಸ್ಥಾನ, ಬಾಲಕಿಯರ ಕಬಡ್ಡಿ ದ್ವಿತೀಯ ಸ್ಥಾನ ಸೇರಿದಂತೆ ವಿವಿಧ ಪಂದ್ಯಾವಳಿಗಳಲ್ಲಿ ವಿಜಯ ಶಾಲಿಯಾದ ಕಾಲೇಜಿನ ಸುಮಾರು ೪೪ವಿದ್ಯಾರ್ಥಿಗಳು ಜಿಲ್ಲಾ ಮಟ್ಟಕ್ಕೆ ಆಯ್ಕೆಯಾಗಿದ್ದಾರೆ.ವಿದ್ಯಾರ್ಥಿಗಳ ಈ ಸಾಧನೆಗೆ ಹಾಗೂ ಮಾರ್ಗದರ್ಶನ ಮಾಡಿದ ದೈಹಿಕ ಉಪನ್ಯಾಸಕ ಗವಿಸಿದ್ದಪ್ಪ ಆನೆಗುಂದಿ ಅವರಿಗೆ ಸಂಸ್ಥೆಯ ಅಧ್ಯಕ್ಷರಾದ ಡಾ.ಪ್ರಭುಸಾರಂಗದೇವ ಶಿವಾಚಾರ್ಯರು, ಉತ್ತರಾಧಿಕಾರಿಗಳಾದ ಡಾ.ವಿಶ್ವಪ್ರಭುದೇವ ಶಿವಾಚಾರ್ಯರು, ಕಾಲೇಜಿನ ಆಡಳಿತ ಮಂಡಳಿ ಸದಸ್ಯರು, ಪ್ರಾಚಾರ್ಯ ಭೀಮನಗೌಡ ಸಿಂಗನಳ್ಳಿ, ಬೋಧಕ, ಬೋಧಕೇತರ ಸಿಬ್ಬಂದಿ ಅಭಿನಂದನೆ ಸಲ್ಲಿಸಿ ಹರ್ಷವ್ಯಕ್ತಪಡಿಸಿ, ಗುಂಪು ಕ್ರೀಡಾಕೂಟದಲ್ಲಿ ಅತ್ಯುತ್ತಮ ಪ್ರದರ್ಶನ ನೀಡಿ ಸಾಧನೆ ಮಾಡಿದ ವಿದ್ಯಾರ್ಥಿಗಳಿಗೆ ಕಾಲೇಜಿನ ಪರವಾಗಿ ಸನ್ಮಾನಿಸಿ ಗೌರವಿಸಲಾಯಿತು.ಈ ಸಂದರ್ಭದಲ್ಲಿ ಡಾ.ರವಿ ಗೋಲಾ, ಪಿ.ವಿ.ಮಹಾಲಿನಮಠ, ಡಾ.ಶರಣಬಸವ ಜೋಗೂರ, ಎಸ್.ಎಚ್.ಜಾಧವ…

Read More

ಉದಯರಶ್ಮಿ ದಿನಪತ್ರಿಕೆ ಸಿಂದಗಿ: ಶಿಕ್ಷಣ ಕ್ಷೇತ್ರದಲ್ಲಿ ತಮ್ಮದೇ ಆದ ಛಾಪು ಮೂಡಿಸಿ, ಸಾವಿರಾರು ವಿದ್ಯಾರ್ಥಿಗಳ ಬದುಕಿಗೆ ದಾರಿದೀಪವಾದ ಎಚ್.ಟಿ.ಕುಲಕರ್ಣಿ ಗುರುಗಳ ಸ್ಮರಣಾರ್ಥ, ಎಚ್.ಟಿ.ಕುಲಕರ್ಣಿ ಪ್ರತಿಷ್ಠಾನದ ವತಿಯಿಂದ ಸೆ.೬ರಂದು ಮಾಂಗಲ್ಯ ಭವನದಲ್ಲಿ ಗುರುಸ್ಮರಣೆ ಕಾರ್ಯಕ್ರಮ ಹಾಗೂ ದೇಹದಾನ, ರಕ್ತದಾನ ಶಿಬಿರವನ್ನು ಆಯೋಜಿಸಲಾಗಿದ ಎಂದು ನಿವೃತ್ತ ದೈಹಿಕ ಶಿಕ್ಷಕ ಎಸ್.ಎಸ್.ಮಲ್ಲೇದ ಹೇಳಿದರು,ಸಿಂದಗಿ ನಗರದ ಬಸವ ಪಟ್ಟಣದಲ್ಲಿ ಹಮ್ಮಿಕೊಂಡ ಪೂರ್ವಭಾವಿ ಸಭೆಯಲ್ಲಿ ಭಾಗವಹಿಸಿ ಮಾತನಾಡಿದ ಅವರು, ಗುರುಗಳ ಬೋಧನೆ, ಆದರ್ಶ ಹಾಗೂ ಸಮಾಜಮುಖಿ ಸೇವಾ ಮನೋಭಾವವನ್ನು ಸ್ಮರಿಸುವ ಉದ್ದೇಶದಿಂದ ಈ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ. ಗುರುಗಳು ತಮ್ಮ ಶಿಷ್ಯರ ಬದುಕಿನಲ್ಲಿ ಬೀರಿದ ಪ್ರಭಾವವನ್ನು ಸ್ಮರಿಸುವುದರ ಜೊತೆಗೆ, ಅವರ ಸಮಾಜಸೇವೆಯ ಆಶಯವನ್ನು ಮುಂದುವರಿಸುವ ನಿಟ್ಟಿನಲ್ಲಿ ದೇಹದಾನ ಮತ್ತು ರಕ್ತದಾನ ಕಾರ್ಯಕ್ರಮವನ್ನು ಆಯೋಜಿಸಲಾಗಿದೆ.ಈ ವೇಳೆ ಸುಭಾಸ ಪಾಟೀಲ ಮಾತನಾಡಿ, ಗುರುರಾಜ ಪಡಶೆಟ್ಟಿ, ಮಹಾಂತೇಶ ನೂಲಾನವರ, ಶೈಲಜಾ ಸ್ಥಾವರಮಠ ಮಾತನಾಡಿ, ಎಚ್.ಟಿ.ಕುಲಕರ್ಣಿ ಗುರುಗಳೊಂದಿಗೆ ಶಿಕ್ಷಣ ಪಡೆದ ಎಲ್ಲ ಶಿಷ್ಯರು, ಹಳೆಯ ವಿದ್ಯಾರ್ಥಿಗಳು ಹಾಗೂ ಅವರ ಅಭಿಮಾನಿಗಳು ಹೆಚ್ಚಿನ ಸಂಖ್ಯೆಯಲ್ಲಿ ಕಾರ್ಯಕ್ರಮದಲ್ಲಿ ಭಾಗವಹಿಸಿ,…

Read More

ಶಿವಶರಣೆ ಅಕ್ಕಮಹಾದೇವಿ ಮೂರ್ತಿ ಪ್ರಾಣ ಪ್ರತಿಷ್ಟಾಪನೆಯ 3ನೇಯ ವಾರ್ಷಿಕೋತ್ಸವ ಉದಯರಶ್ಮಿ ದಿನಪತ್ರಿಕೆ ದೇವರಹಿಪ್ಪರಗಿ: ಮಹಾಶಿವಶರಣೆ ಅಕ್ಕಮಹಾದೇವಿಯವರ ಮೂರ್ತಿ ಪ್ರಾಣ ಪ್ರತಿಷ್ಟಾಪನೆಯ ಮೂರನೇ ವರ್ಷದ ವಾರ್ಷಿಕೋತ್ಸವ ಭಕ್ತಿಭಾವದೊಂದಿಗೆ ಅತ್ಯಂತ ವಿಜೃಂಭಣೆಯಿಂದ ಜರುಗಿತು.ತಾಲ್ಲೂಕಿನ ಮುಳಸಾವಳಗಿ ಗ್ರಾಮದ ಮಲ್ಲಯ್ಯನ ದೇವಸ್ಥಾನದಲ್ಲಿ ಶ್ರಾವಣ ಶುಕ್ರವಾರದ ಅಂಗವಾಗಿ ಮಹಾಶಿವಶರಣೆ ಅಕ್ಕಮಹಾದೇವಿಯವರ ಮೂರ್ತಿ ಪ್ರಾಣ ಪ್ರತಿಷ್ಟಾಪನೆಯ ಮೂರನೇ ವರ್ಷದ ವಾರ್ಷಿಕೋತ್ಸವ ಹಲವಾರು ವೈಶಿಷ್ಟ್ಯಗಳಿಂದ ಗಮನಸೆಳೆಯಿತು.ಸಾಕ್ಷಾತ್ ಅಕ್ಕಮಹಾದೇವಿಯೇ ಕುಳಿತಿರುವಂತೆ ಅಕ್ಕಮಹಾದೇವಿ ವೇಷಧಾರಿಯನ್ನು ಟ್ರ‍್ಯಾಕ್ಟರನಲ್ಲಿ ಕುಳ್ಳಿರಿಸಿ ಗ್ರಾಮದಲ್ಲಿ ಮೆರವಣಿಗೆ ಮಾಡಲಾಯಿತು.ಸಕಲ ವಾದ್ಯ ವೈಭವ, ಸುಮಂಗಲೆಯರ ಕಳಶ, ಶ್ರೀಶೈಲ ಮಲ್ಲಯ್ಯನ ಗೀತೆಗಳಿಗೆ ಮುದ್ದುಮಕ್ಕಳ ಕೋಲಾಟ, ಮಾತೆಯರಿಂದ ಅಕ್ಕಮಹಾದೇವಿಯ ವಚನ ವೈಭವ ನೋಡುಗರ ಮನಸೆಳೆದವು. ನಂತರ ಎಲ್ಲಾ ಭಕ್ತಾದಿಗಳಿಗೆ ಪ್ರಸಾದ ವ್ಯವಸ್ಥೆ ಜರುಗಿತು.ಕಸ್ತೂರಿ ರೋಡಗಿ, ಶರಣಮ್ಮ ಬಿರಾದಾರ, ರೇಣುಕಾ ಬಿರಾದಾರ, ಪಾರ್ವತಿ ಉಕುಮನಾಳ, ಕಮಲಾಬಾಯಿ ರೋಡಗಿ, ಶಾಂತಾಬಾಯಿ ಗಬ್ಬೂರ, ಅನಿತಾ ಬಿರಾದಾರ, ಭಾಗೀರಥಿ ಆಲಗೂರ, ನೀಲಮ್ಮಕೊಟೀನ, ಶಂಕ್ರೆಮ್ಮ ಬಸರಕೋಡ, ಪಾರ್ವತಿ ಹಚಡದ, ಭಾರತಿ ಗಬ್ಬೂರ, ಕಲಾವತಿ ಮನಗೂಳಿ, ಪಿಕೆಪಿಎಸ್ ಅಧ್ಯಕ್ಷ ಸಂಗನಗೌಡ ಬಿರಾದಾರ, ಬಿ.ಎಸ್.ಪೊಲೇಶಿ, ಶರಣಯ್ಯ…

Read More

ಉದಯರಶ್ಮಿ ದಿನಪತ್ರಿಕೆ ದೇವರಹಿಪ್ಪರಗಿ: ಪರಿಸರ ಸ್ನೇಹಿ ಗಣೇಶೋತ್ಸವದ ಕುರಿತು ಜಾಗೃತಿ ಮೂಡಿಸುವ ಉದ್ದೇಶದಿಂದ ದೃಶ್ಯಬಿಂಬ ಕಲಾ ಪ್ರತಿಷ್ಠಾನ(ರಿ), ವಿಜಯಪುರ ಹಾಗೂ ಬಸವ ಹಸಿರು ಬಳಗ(ರಿ), ದೇವರಹಿಪ್ಪರಗಿ ವತಿಯಿಂದ ಆಯೋಜಿಸಿರುವ “ಅಮೃತ ಹಸ್ತದ ಮಣ್ಣಿನ ಗಣೇಶ” ೮ ದಿನಗಳ ಪರಿಸರ ಸ್ನೇಹಿ ಮಣ್ಣಿನ ಗಣೇಶ ಮೂರ್ತಿ ತಯಾರಿಕಾ ಕಲಾ ಶಿಬಿರವು ಐದನೇ ದಿನಕ್ಕೆ ಕಾಲಿಟ್ಟಿತು.ಯಾಳವಾರ ಗ್ರಾಮದಲ್ಲಿ ನಡೆಯುತ್ತಿರುವ ಶಿಬಿರದಲ್ಲಿ ಕಲಾವಿದರು ಹಾಗೂ ಶಿಬಿರಾರ್ಥಿಗಳು ಉತ್ಸಾಹದಿಂದ ಮಣ್ಣಿನ ಗಣೇಶ ಮೂರ್ತಿಗಳ ತಯಾರಿಕೆಯಲ್ಲಿ ತೊಡಗಿಸಿಕೊಂಡರು. ಮಣ್ಣಿನ ಸಿದ್ಧತೆ, ಮೂರ್ತಿಯ ಮೂಲ ರಚನೆ, ಅಂಗಾಂಗಗಳ ಪ್ರಮಾಣ, ಮುಖಭಾವ, ಸೂಕ್ಷ್ಮ ಕೆತ್ತನೆ ಹಾಗೂ ಅಲಂಕಾರ ಸೇರಿದಂತೆ ವಿವಿಧ ಹಂತಗಳ ಕುರಿತು ಪ್ರಾಯೋಗಿಕ ತರಬೇತಿ ನೀಡಲಾಯಿತು.ಶಿಬಿರದಲ್ಲಿ ಕಲಾವಿದರಾದ ಶರಣಪ್ಪ ನಾಯಕ, ಯೇಸುರಾಜ್, ಸತೀಶ್ ಕೇಮಶೆಟ್ಟಿ ಹಾಗೂ ಉಮೇಶ್ ಭೋಳ ಅವರು ತರಬೇತಿ ನೀಡಿದರು. ಬಸವ ಹಸಿರು ಬಳಗದ ಅಧ್ಯಕ್ಷ ಭೀಮನಗೌಡ ಗುಣಕನಾಳ ಹಾಗೂ ಕಾರ್ಯದರ್ಶಿ ರವಿಕುಮಾರ ಬಿರಾದಾರ ಸೇರಿದಂತೆ ಶಿಬಿರಾರ್ಥಿಗಳು ತರಬೇತಿಯಲ್ಲಿ ಪಾಲ್ಗೊಂಡರು.ಶಿಬಿರದಲ್ಲಿ ತಯಾರಾಗುವ ಪರಿಸರ ಸ್ನೇಹಿ ಮಣ್ಣಿನ ಗಣೇಶ…

Read More

ಮೂಲಸೌಲಭ್ಯ ಅಭಿವೃದ್ಧಿ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಎಂ. ಬಿ. ಪಾಟೀಲ ಅಭಿಮತ ಉದಯರಶ್ಮಿ ದಿನಪತ್ರಿಕೆ ವಿಜಯಪುರ: ಮುಂದಿನ ಜಾತ್ರೆಯೊಳಗೆ ಕರಾಡದೊಡ್ಡಿಯಲ್ಲಿ ಶ್ರೀ ಬಾಳುಮಾಮಾ ಅವರ ಭವ್ಯ ಗುಡಿ ನಿರ್ಮಾಣವಾಗಲಿದೆ ಎಂದು ಕೈಗಾರಿಕೆ, ಮೂಲಸೌಲಭ್ಯ ಅಭಿವೃದ್ಧಿ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಎಂ. ಬಿ. ಪಾಟೀಲ ಹೇಳಿದ್ದಾರೆ.ರವಿವಾರ ಕರಾಡದೊಡ್ಡಿಯಲ್ಲಿ ನಡೆಯುತ್ತಿರುವ ಶ್ರೀ ಬಾಳು ಮಾಮಾ ಜಾತ್ರಾ ಮಹೋತ್ಸವದಲ್ಲಿ ಪಾಲ್ಗೊಂಡು, ಸಂತ ಬಾಳು ಮಾಮಾ ಅವರ ಆಶೀರ್ವಾದ ಪಡೆದು ಅವರು ಮಾತನಾಡಿದರು.ಸಂತ ಬಾಳು ಮಾಮಾ ಅವರು ಶ್ರೇಷ್ಠ ಸಂತರಾಗಿದ್ದು, ಅವರ ಸರಳ ಬದುಕು, ಆದರ್ಶಗಳು ಹಾಗೂ ಸಮಾಜಕ್ಕೆ ನೀಡಿದ ಸಂದೇಶಗಳು ನಮಗೆಲ್ಲ ಮಾದರಿಯಾಗಿವೆ. ಮುಂದಿನ ಸಲ ತಾವು ಇಲ್ಲಿಗೆ ಬರುವಷ್ಟರಲ್ಲಿ ಸಂತ ಬಾಳು ಮಾಮಾ ಅವರ ಭವ್ಯ ಗುಡಿ ನಿರ್ಮಾಣವಾಗಿರುತ್ತದೆ ಎಂದು ಅವರು ಭರವಸೆ ನೀಡಿದೆ.ತಾಂಡಾದಲ್ಲಿ ಸಿಎಸ್‌ಆರ್ ಅನುದಾನದಡಿ ಎರಡು ಶಾಲಾ ಕೊಠಡಿಗಳನ್ನು ನಿರ್ಮಿಸುವುದರ ಜೊತೆಗೆ, ಮಕ್ಕಳಿಗೆ ಆಟಿಕೆ ಹಾಗೂ ಅಗತ್ಯ ಆಟದ ಸಲಕರಣೆಗಳನ್ನು ಒದಗಿಸಲಾಗುವುದು. ಗ್ರಾಮಸ್ಥರ ಕುಡಿಯುವ ನೀರಿನ ಸಮಸ್ಯೆಗೆ ಶಾಶ್ವತ…

Read More

ಬಬಲೇಶ್ವರದ ಗುರುಪಾದೇಶ್ವರ ಬೃಹನ್ಮಠದಲ್ಲಿ ನಡೆದ ಕಾರ್ಯಕ್ರಮದಲ್ಲಿ ಸಚಿವ ಎಂ.ಬಿ.‌ಪಾಟೀಲ ಹೇಳಿಕೆ ಉದಯರಶ್ಮಿ ದಿನಪತ್ರಿಕೆ ವಿಜಯಪುರ: ಮಠ ಮಾನ್ಯಗಳ ಪ್ರವಚನ, ಧಾರ್ಮಿಕ ಕಾರ್ಯಕ್ರಮಗಳಿಂದ ಸಮಾಜದಲ್ಲಿ ಉತ್ತಮ ನಡೆ ಮತ್ತು ಬಸವಾದಿ ಶರಣರ ದಾಸೋಹ ತತ್ವ ಎಲ್ಲೆಡೆ ನೆಲೆಗೊಳ್ಳುತ್ತಿದೆ ಎಂದು ಕೈಗಾರಿಕೆ, ಮೂಲಸೌಲಭ್ಯ ಅಭಿವೃದ್ಧಿ ಹಾಗೂ ಜಿಲ್ಲಾ ಉಸ್ತುವಾರಿ ಸಚಿವರಾದ ಎಂ. ಬಿ.‌ ಪಾಟೀಲ ಹೇಳಿದ್ದಾರೆ.ಶನಿವಾರ ರಾತ್ರಿ ಬಬಲೇಶ್ವರ ಪಟ್ಟಣದ ಗುರುಪಾದೇಶ್ವರ ಬೃಹನ್ಮಠದಲ್ಲಿ ಶ್ರೀ ಗುರುಪಾದೇಶ್ವರ ಶಿವಯೋಗಿಗಳ 184ನೇ ಮಹಾಗಣಾರಾಧನೆ, ಡಾ.‌ ಮಹಾದೇವ ಶಿವಾಚಾರ್ಯ ಮಹಾಸ್ವಾಮಿಗಳ ವಜ್ರಮಹೋತ್ಸವ ಹಾಗೂ ಉತ್ತರಾಧಿಕಾರಿ ಪೂಜ್ಯ ಮಲ್ಲಿಕಾರ್ಜುನ ದೇವರ ಪಟ್ಟಾಧಿಕಾರ ಅಂಗವಾಗಿ ‘ತಿರಂಗಾ ಬುತ್ತಿ ಯಾತ್ರೆ’ಯನ್ನು ಮಠದ ಮಹಾದ್ವಾರದಲ್ಲಿ ಸ್ವಾಗತಿಸಿ, ನಂತರ ನಡೆದ ಭವ್ಯ ಪ್ರವಚನ ಸಮಾರಂಭದಲ್ಲಿ ಪಾಲ್ಗೊಂಡು ಅವರು ಮಾತನಾಡಿದರು.12ನೇ ಶತಮಾನವೇ ಬಬಲೇಶ್ವರ ಮಠದ ಕಾರ್ಯಕ್ರಮದಲ್ಲಿ ಮರುಕಳಿಸಿದಂತೆ ಗೋಚರಿಸುತ್ತಿದೆ. ತಾಯಂದಿರು ಬುತ್ತಿ ಉತ್ಸವವನ್ನು ಭಕ್ತಿ, ಶ್ರದ್ಧೆಯಿಂದ ಮಾಡಿದ್ದಾರೆ. ಈ ಸೇವೆಯಲ್ಲಿ ತಮ್ಮದೂ ಒಂದು ಅಗುಳಿನ ಪಾತ್ರವಿದೆ, ಅದೇನೆಂದರೆ ಇಲ್ಲಿಗೆ ನೀರು ಹರಿಸಿದ ತೃಪ್ತಿ ತಮ್ಮದು. ಸಮೃದ್ಧ ಬೆಳೆ…

Read More

ಉದಯರಶ್ಮಿ ದಿನಪತ್ರಿಕೆ ​ವಿಜಯಪುರ: ಜಿಲ್ಲಾ ವಿಕಲಚೇತನರ ಹಾಗೂ ಹಿರಿಯ ನಾಗರಿಕರ ಸಬಲೀಕರಣ ಇಲಾಖೆಯ ವತಿಯಿಂದ ೨೦೨೬–೨೭ನೇ ಸಾಲಿನ ಎಸ್.ಎಸ್.ಎಲ್.ಸಿ ನಂತರದ ಉನ್ನತ ಶಿಕ್ಷಣ, ವೃತ್ತಿ ಶಿಕ್ಷಣ, ತಾಂತ್ರಿಕ ಶಿಕ್ಷಣ ಹಾಗೂ ಸ್ನಾತಕೋತ್ತರ ಪದವಿ ವ್ಯಾಸಂಗ ಮಾಡುತ್ತಿರುವ ಅರ್ಹ ವಿಶೇಷಚೇತನ ವಿದ್ಯಾರ್ಥಿಗಳಿಗೆ ಶುಲ್ಕ ಮರುಪಾವತಿಗಾಗಿ ಅರ್ಜಿ ಆಹ್ವಾನಿಸಲಾಗಿದೆ.​ಅರ್ಹ ವಿಶೇಷಚೇತನ ವಿದ್ಯಾರ್ಥಿಗಳು ಅರ್ಜಿ ಸಲ್ಲಿಸಲು ಸೆಪ್ಟೆಂಬರ್ ೧೧ ಕೊನೆಯ ದಿನವಾಗಿದೆ. ಹೆಚ್ಚಿನ ಮಾಹಿತಿಗಾಗಿ ವಿಜಯಪುರ ಜಿಲ್ಲಾ ಸಂಯೋಜಕರಾದ ಶ್ರೀಮತಿ ಪ್ರತಿಭಾ (ಮೊ:೯೬೦೬೧೫೧೧೪೯), ವಿವಿಧೋದ್ದೇಶ ಪುನರ್ವಸತಿ ಕಾರ್ಯಕರ್ತರಾದ ವಿಜಯಪುರ ತಾಲೂಕು ಪಂಚಾಯತಿಯ ರವಿ ರಾಠೋಡ (ಮೊ:೯೦೩೫೫೫೩೩೩೭), ಇಂಡಿ ತಾಲೂಕಿನ ಪರಶುರಾಮ ಭೋಸಲೆ (ಮೊ:೯೯೭೨೪೪೧೪೬೪), ಸಿಂಧಗಿ ತಾಲೂಕಿನ ಮುತ್ತುರಾಜ ಸಾತಿಹಾಳ (ಮೊ:೯೯೮೦೦೧೯೬೩೫), ಮುದ್ದೇಬಿಹಾಳ ತಾಲೂಕಿನ ಎಸ್.ಕೆ. ಘಾಟಿ (ಮೊ:೯೭೪೦೬೮೨೯೭೯) ಹಾಗೂ ಬಸವನ ಬಾಗೇವಾಡಿ ತಾಲೂಕು ಪಂಚಾಯತಿಯ ಶಿವಲೀಲಾ ಬಿರಾದಾರ (ಮೊ:೮೭೨೨೧೩೫೬೬೦) ಅವರನ್ನು ಸಂಪರ್ಕಿಸಬಹುದಾಗಿದೆ ಎಂದು ಜಿಲ್ಲಾ ಜಿಲ್ಲಾ ವಿಕಲಚೇತನರ ಹಾಗೂ ಹಿರಿಯ ನಾಗರಿಕರ ಸಬಲೀಕರಣ ಇಲಾಖೆಯ ಅಧಿಕಾರಿ ಪ್ರಕಟಣೆಯಲ್ಲಿ ಕೋರಿದ್ದಾರೆ.

Read More