ಉದಯರಶ್ಮಿ ದಿನಪತ್ರಿಕೆ
ಆಲಮಟ್ಟಿ: ಕಾಲುವೆ ಮತ್ತೀತರ ಉದ್ದೇಶಕ್ಕಾಗಿ ರೈತರಿಂದ ವಶಪಡಿಸಿಕೊಂಡ ಭೂಮಿಗೆ ನ್ಯಾಯಾಲಯ ನಿಗದಿಪಡಿಸಿದ ಹೆಚ್ಚುವರಿ ಪರಿಹಾರ ನೀಡದ ಕಾರಣ ಮಂಗಳವಾರ ಕೃಷ್ಣಾ ಭಾಗ್ಯ ಜಲ ನಿಗಮದ ಇಲ್ಲಿಯ ವ್ಯವಸ್ಥಾಪಕ ನಿರ್ದೇಶಕರ ಕಚೇರಿಯನ್ನು ಜಪ್ತಿ ಮಾಡಲಾಯಿತು.
ರೈತರಾದ ನಾನಾಗೌಡ ಪಾಟೀಲ ಅವರ 41,96,074 ರೂ, ದೇವೇಂದ್ರ ಬಸಣ್ಣ ತಳವಾರ ಅವರ 32,07,990 ರೂ, ಭೀಮನಗೌಡ ಬಸನಗೌಡ ಟಕ್ಕಳಕಿ ಅವರಿಗೆ ,65,39,367 ರೂ ಪರಿಹಾರವನ್ನು ಇಂಡಿ ನಗರದ ಯುಕೆಪಿಯ ವಿಶೇಷ ಭೂಸ್ವಾಧೀನಾಧಿಕಾರಿಗಳು ನೀಡಬೇಕಿತ್ತು. ಪರಿಹಾರ ನೀಡಲು ವಿಫಲರಾದ ಕಾರಣ ವಿಜಯಪುರದ ಮೂರನೇ ಹೆಚ್ಚುವರಿ ಜಿಲ್ಲಾ ಮತ್ತು ಸೆಷನ್ಸ್ ನ್ಯಾಯಾಲಯದ ಆದೇಶದಂತೆ ಮಂಗಳವಾರ ಒಂದು ಕಂಪ್ಯೂಟರ್ ನ್ನು ಜಪ್ತಿ ಮಾಡಲಾಯಿತು.
ವಕೀಲರಾದ ಡಿ.ಜಿ. ಬಿರಾದಾರ, ಕೆ.ಎಚ್. ನಿಡೋಣಿ, ಕೆ.ಪಿ. ಬೂದಿಹಾಳ, ಐ.ಜಿ. ವಾದಿಶೆಟ್ಟಿ ರೈತರ ಪರ ವಾದ ಮಂಡಿಸಿದ್ದರು.

