೨,೬೧,೩೪೯ ಮತದಾರರಿಗೆ ಗಣತಿ ನಮೂನೆ ವಿತರಣೆ | ಮತದಾರರ ನೋಂದಣಿ ಅಧಿಕಾರಿ ವಿಜಯ ಮೆಕ್ಕಳಕಿ ಹೇಳಿಕೆ
ಉದಯರಶ್ಮಿ ದಿನಪತ್ರಿಕೆ
ವಿಜಯಪುರ: ನಗರ ಮತಕ್ಷೇತ್ರದಲ್ಲಿ ೨,೯೦,೪೭೯ ಮತದಾರರಿದ್ದು, ಈ ಪೈಕಿ ೨,೬೧,೩೪೯ ಮತದಾರರಿಗೆ ಗಣತಿ ನಮೂನೆಗಳನ್ನು ವಿತರಿಸಲಾಗಿದೆ ಎಂದು ಮತದಾರರ ನೋಂದಣಿ ಅಧಿಕಾರಿ ವಿಜಯ ಮೆಕ್ಕಳಕಿ ತಿಳಿಸಿದ್ದಾರೆ.
ಗಣತಿ ಕಾರ್ಯಕ್ಕೆ ಸಂಬಂಧಿಸಿದಂತೆ ಶೇ.೭೭.೬೮ ರಷ್ಟು ಮತದಾರರು ಮ್ಯಾಪ್ ಪ್ರಕ್ರಿಯೆಗೆ ಒಳಪಟ್ಟಿದ್ದಾರೆ. ಮನೆ ಮನೆ ಭೇಟಿ ಹಾಗೂ ಆನ್ ಲೈನ್ ಮೂಲಕ ಸಲ್ಲಿಕೆಯಾಗುತ್ತಿರುವ ಅರ್ಜಿಗಳ ಡಿಜಿಟಲೀಕರಣ ಪ್ರಕ್ರಿಯೆಯು ಚುರುಕಾಗಿ ನಡೆದಿದೆ ಎಂದವರು ತಿಳಿಸಿದ್ದಾರೆ.
ಒಟ್ಟು ೧,೧೫,೩೩೮ ಗಣತಿ ನಮೂನೆಗಳನ್ನು ಡಿಜಿಟಲೀಕರಣಗೊಳಿಸಲಾಗಿದೆ. ಆನ್‌ಲೈನ್ ನಲ್ಲಿ ೨,೨೩೬ ಮತದಾರರು ಸಲ್ಲಿಸಿದ್ದಾರೆ. ೧,೫೫೭ ಮತದಾರರು ಮರಣ ಹೊಂದಿದ್ದನ್ನು ದೃಢಪಡಿಸಲಾಗಿದೆ. ಹೊಸಾಗಿ ೧,೫೪೮ ಮತದಾರರು ನೋಂದಾಯಿಸಿಕೊಂಡಿದ್ದಾರೆ. ೯೩೪ ಮತದಾರರು ಶಾಶ್ವತವಾಗಿ ಸ್ಥಳಾಂತರಗೊಂಡಿದ್ದಾರೆ ಹಾಗೂ ೮೯ ಇತರೆ ಎಂದವರು ತಿಳಿಸಿದ್ದಾರೆ.
ಎಸ್ ಐಆರ್ ಕಾರ್ಯಕ್ಕೆ ಮತದಾರರು ತಮ್ಮ ವಿವರಗಳನ್ನು ಸರಿಯಾಗಿ ಪರಿಶೀಲಿಸಿಕೊಂಡು, ಈ ಪ್ರಕ್ರಿಯೆಗೆ ಸಂಪೂರ್ಣ ಸಹಕಾರ ನೀಡಬೇಕು ಎಂದವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

