ಉದಯರಶ್ಮಿ ದಿನಪತ್ರಿಕೆ
ದೇವರಹಿಪ್ಪರಗಿ: ಮದ್ಯಪಾನ ಹಾಗೂ ಮಾದಕ ವಸ್ತುಗಳು ಮನಸ್ಸು ಹಾಗೂ ಶರೀರದ ಮೇಲೆ ನೇರ ಪರಿಣಾಮ ಬೀರುತ್ತವೆ ಎಂದು ಪಿಎಸೈ ಸಚೀನ ಆಲಮೇಲಕರ ಹೇಳಿದರು.
ತಾಲ್ಲೂಕಿನ ಪಡಗಾನೂರ ಗ್ರಾಮದ ಸರ್ಕಾರಿ ಕನ್ನಡ ಗಂಡು ಮಕ್ಕಳ ಮಾದರಿ ಶಾಲೆಯಲ್ಲಿ ಶನಿವಾರ ಜರುಗಿದ ಮಾದಕ ದ್ರವ್ಯ ವ್ಯಸನಮುಕ್ತ ಸಮಾಜ ನಿರ್ಮಾಣ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಿದರು.
ಮಾದಕ ಪದಾರ್ಥಗಳು ಹಾಗೂ ಮದ್ಯ ಸೇವನೆಯ ವ್ಯಸನ ಅತ್ಯಂತ ಗಂಭೀರವಾಗಿದ್ದು, ಶರೀರದ ಮೇಲೆ ನೇರವಾದ ಪರಿಣಾಮ ಉಂಟು ಮಾಡುತ್ತವೆ. ಆದ್ದರಿಂದ ಮಕ್ಕಳು, ವಿದ್ಯಾರ್ಥಿಗಳು ಇವುಗಳಿಂದ ದೂರವಿರಬೇಕು ಎಂದರು.
ಇದೇ ಸಂದರ್ಭದಲ್ಲಿ ಗ್ರಾಮದ ಶ್ರೀಗುರುಶಾಂತೇಶ್ವರ ಶಾಲೆ ಹಾಗೂ ವೆಂಕಟೇಶ್ವರ ಪ್ರೌಢಶಾಲೆಯ ವಿದ್ಯಾರ್ಥಿಗಳು ಪಾಲ್ಗೊಂಡಿದ್ದರು.
ಗುರುಶಾಂತೇಶ್ವರ ಶಾಲೆಯ ಅಧ್ಯಕ್ಷ ಅಯ್ಯಪ್ಪಯ್ಯ ಸ್ವಾಮಿ ಹಿರೇಮಠ, ಗೋವಿಂದಗೌಡ ಪಾಟೀಲ ಮುಖ್ಯಶಿಕ್ಷಕ ಧನಸಿಂಗ್ ಲಮಾಣಿ, ಸಿಬ್ಬಂದಿ ಮಲ್ಲಿಕಾರ್ಜುನ ತಳಕೇರಿ, ಶ್ವೇತಾ ಮಹಾಜನಶೆಟ್ಟಿ, ದೀಪಾ ಉಪ್ಪಲದಿನ್ನಿ, ಮಹಾದೇವಿ ಬಿರಾದಾರ, ಜಮುನಾ ಜಾತಗಾರ, ಡಿ.ಎಚ್.ರಾಠೋಡ, ಎನ್.ಎಸ್.ಹಿರೇಮಠ ಹಾಗೂ ಮಕ್ಕಳು ಇದ್ದರು.

