Author: editor.udayarashmi@gmail.com

ಎಸ್.ಬಿ ಕಲಾ ಮತ್ತು ಕೆ.ಸಿ.ಪಿ ವಿಜ್ಞಾನ ಮಹಾವಿದ್ಯಾಲಯದಲ್ಲಿ ನಡೆದ ಕಾರ್ಯಾಗಾರ ವಿಜಯಪುರ: ಶಿಕ್ಷಣದಲ್ಲಿ ಮುಂದುವರೆಯಬೇಕಾದರೆ ನಮಗೆ ಆರ್ಥಿಕವಾಗಿ ಸಹಾಯ ಬೇಕು ಅದರಂತೆ ಸರ್ಕಾರದ ಹಿಂದುಳಿದ ಮತ್ತು ಅಲ್ಪಸಂಖ್ಯಾತರ ಮತ್ತು ಇನ್ನಿತರ ಇಲಾಖೆಗಳ ಸಂಬಂಧಿಸಿದ ಯೋಜನೆಗಳು ವಿದ್ಯಾರ್ಥಿಗಳಿಗೆ ಆರ್ಥಿಕವಾಗಿ ತುಂಬಾ ಸಹಾಯಕವಾಗಿವೆ ಎಂದು ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯ ವಿಜಯಪುರ ತಾಲೂಕು ಅಧಿಕಾರಿ ಬಸವರಾಜ ಎಸ್.ಅಂಗಡಿ ಹೇಳಿದರು.ನಗರದ ಬಿ.ಎಲ್.ಡಿ. ಇ ಸಂಸ್ಥೆಯ ಎಸ್.ಬಿ. ಕಲಾ ಮತ್ತು ಕೆ.ಸಿ.ಪಿ ವಿಜ್ಞಾನ ಮಹಾವಿದ್ಯಾಲಯದ ಐಕ್ಯೂಎಸಿ, ಓಬಿಸಿ ಮತ್ತು ಅಲ್ಪಸಂಖ್ಯಾತರ ಸೆಲ್ ವತಿಯಿಂದ ಅಯೋಜಿಸಲಾದ ‘ಒಬಿಸಿ ಮತ್ತು ಅಲ್ಪಸಂಖ್ಯಾತರ ವಿದ್ಯಾರ್ಥಿಗಳ ಕಲ್ಯಾಣ ಯೋಜನೆಗಳು ಮತ್ತು ಉದ್ಯಮಶೀಲತೆ’ ಕಾರ್ಯಾಗಾರದಲ್ಲಿ ಮಾತನಾಡಿದ ಅವರು, ಹಿಂದುಳಿದ, ಅಲ್ಪಸಂಖ್ಯಾತರ ಇಲಾಖೆಯಿಂದ ವಿದ್ಯಾರ್ಥಿಗಳಿಗೆ ಹತ್ತು ಹಲವು ಯೋಜನೆಗಳಿವೆ ಅವುಗಳನ್ನು ಸದುಪಯೋಗಪಡಿಸಿಕೊಳ್ಳಬೇಕು.ಅಲ್ಲದೆ ವಿದ್ಯಾರ್ಥಿಗಳ ವಸತಿ ವ್ಯವಸ್ಥೆಗೆ ಹಾಸ್ಟೇಲ್ ಕಲ್ಪಿಸಲಾಗಿದೆ. ಉತ್ತಮ ಅಂಕಗಳನ್ನು ಪಡೆದುಕೊಂಡು ಹಾಸ್ಟೇಲ್ ಸೌಲಭ್ಯ ಪಡೆದುಕೊಂಡು ಉನ್ನತ ವ್ಯಾಸಂಗಕ್ಕೆ ಮುಂದಾಗಬೇಕು. ಮತ್ತು ವಿದ್ಯಾರ್ಥಿವೇತನವು ವಿದ್ಯಾರ್ಥಿಗಳಿಗೆ ಆರ್ಥಿಕವಾಗಿ ಉತ್ತೇಜನ ಒದಗಿಸುವ ಪ್ರಮುಖ ಯೋಜನೆಯಾಗಿದೆ. ಇದಕ್ಕೆ ಸಂಬಂಧಿಸಿದ…

Read More

ಕೆಂಭಾವಿ: ಪಠ್ಯದಲ್ಲಿದ್ದನ್ನು ಪ್ರಾತ್ಯಕ್ಷಿಕೆ ತೋರಿಸಿ ಪ್ರಜಾಪ್ರಭುತ್ವದ ಬಗ್ಗೆ ಅರಿವು ಮೂಡಿಸುವ ನಿಟ್ಟಿನಲ್ಲಿ ಶಾಲಾ ಸಂಸತ್ತು ಚುನಾವಣೆಯನ್ನು ಲೋಕಸಭೆ ಮತ್ತು ರಾಜ್ಯ ವಿಧಾನಸಭೆ ಚುನಾವಣೆ ಮಾದರಿಯಲ್ಲಿಯೇ ಬುಧವಾರ ಪಟ್ಟಣದ ಸಮೀಪವಿರುವ ಮುದನೂರು ಪ್ರೌಢ ಶಾಲೆಯಲ್ಲಿ ನಡೆಯಿತು.ಒಟ್ಟು 15 ವಿದ್ಯಾರ್ಥಿಗಳು ಚುನಾವಣೆಯಲ್ಲಿ ಸ್ಪರ್ಧಿಸಿದ್ದರು,10 ನೇ ತರಗತಿಯಿಂದ 3 ವಿದ್ಯಾರ್ಥಿಗಳು, 9 ನೇ ತರಗತಿಯಿಂದ 4, ಮತ್ತು 8 ನೇ ತರಗತಿಯಿಂದ 4 ವಿದ್ಯಾರ್ಥಿಗಳು ಆಯ್ಕೆಯಾದರು. ಒಟ್ಟು 151 ಮಕ್ಕಳು ಅರ್ಹ ಮತದಾರರಾಗಿದ್ದು 132 ಮಕ್ಕಳು ಮತದಾನ ಮಾಡಿದರು. ಮತದಾನಕ್ಕೆ ಮುನ್ನ ನಾಲ್ಕು ದಿನಗಳ ಮುಂಚೆ ನಾಮಪತ್ರ ಸಲ್ಲಿಕೆ, ಚುನಾವಣೆ ಪ್ರಚಾರ, ಗುಪ್ತ ಮತದಾನ, ಮತಪತ್ರ ನೀಡುವಿಕೆ, ಶಾಯಿ ಹಚ್ಚುವಿಕೆ, ಮತ ಒತ್ತುವುದು, ಸಹಿ ಮಾಡುವುದು ನಿಜವಾದ ಚುನಾವಣೆಯನ್ನೇ ನಾಚಿಸುವಂತೆ ನೂರಾರು ವಿದ್ಯಾರ್ಥಿಗಳು ತಾಸು ಗಟ್ಟಲೇ ಸರತಿ ಸಾಲಿನಲ್ಲಿ ನಿಂತು ತಮ್ಮ ಹಕ್ಕು ಚಲಾಯಿಸುವ ಮೂಲಕ ಶಾಲಾ ಸಂಸತ್ತು ರಚನೆ ಮಾಡಿಕೊಂಡರು.ಮುಖ್ಯ ಶಿಕ್ಷಕರಾದ ಎಂ.ಬಿ.ಪಾಟೀಲ, ಮುಖ್ಯ ಚುನಾವಣೆ ಅಧಿಕಾರಿಯಾಗಿ, ಅಬ್ದುಲ್ ಖಯೂಮ್, ಶರಣಬಸಯ್ಯ ಹಿರೇಮಠ, ನಿಂಗನಗೌಡ…

Read More

ವಿಜಯಪುರ: ಹಿಂದೆ ಗ್ರಾಮೀಣ ಪ್ರದೇಶದಲ್ಲಿ ಗೌಡರೇ ಮುಖ್ಯಸ್ಥರು. ಗ್ರಾಮದ ರಾಜಕೀಯ, ಸಾಮಾಜಿಕ, ಧಾರ್ಮಿಕ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮಗಳಿಗೆ ಗೌಡರೇ ಮುಖ್ಯಸ್ಥರಾಗಿದ್ದರು. ಸ್ವಾತಂತ್ರ್ಯ ಪೂರ್ವದಲ್ಲಿ ಗ್ರಾಮದ ಎಲ್ಲಾ ನಿಣ೯ಯಗಳನ್ನು ಗೌಡರೇ ಕೈಗೊಳ್ಳುತ್ತಿದ್ದರು ಎಂದು ವಿಶ್ರಾಂತ ಪ್ರಾಧ್ಯಾಪಕ ಪ್ರೊ.ಎಚ್.ಎಂ.ಕಡಕೋಳ ಅಭಿಪ್ರಾಯ ವ್ಯಕ್ತಪಡಿಸಿದರು.ಜಿಲ್ಲಾ, ತಾಲೂಕಾ ಹಾಗೂ ನಗರ ಘಟಕ ಕನ್ನಡ ಸಾಹಿತ್ಯ ಪರಿಷತ್ತಿನ ಆಶ್ರಯದಲ್ಲಿ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಸಭಾಂಗಣದಲ್ಲಿ ಜರುಗಿದ ಪ್ರೊ ಸಿದ್ದಣ್ಣ ಬೀಡಗೊಂಡ ರಚಿಸಿದ “ವಿಜಯಪುರ ಜಿಲ್ಲೆಯ ಗೌಡ ಮನೆತನಗಳ ಆಡಳಿತ ಮತ್ತು ಸಂಸ್ಕೃತಿ” ಎಂಬ ಸಂಶೋಧನಾತ್ಮಕ ಕೃತಿಯನ್ನು ಅನಾವರಣಗೊಳಿಸಿ ಅವರು ಮಾತನಾಡುತ್ತಾ, ಬ್ರಿಟಿಷರ ಕಾಲದಲ್ಲಿ ಅದರಲ್ಲೂ ವಿಶೇಷವಾಗಿ ಉತ್ತರ ಕರ್ನಾಟಕದಲ್ಲಿ ಪ್ರತಿ ಗ್ರಾಮಗಳಲ್ಲಿ ಗೌಡರದೇ ಆಡಳಿತ ಇತ್ತೆಂದು ನಮ್ಮೆಲ್ಲರ ಪೂರ್ವಜರಿಂದ ತಿಳಿದು ಬರುತ್ತದೆ ಎಂದರು.ಕೃತಿಯನ್ನು ಪರಿಚಯಿಸಿದ ವಿಜಯಪುರ ತಾಲೂಕಾ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಡಾ.ಆನಂದ ಕುಲಕರ್ಣಿ ಮಾತನಾಡುತ್ತಾ, ಇದೊಂದು ಮೌಲಿಕ ಕೃತಿ. ಗ್ರಾಮೀಣ ಭಾಗದ ಬಹುತೇಕ ವಿಚಾರಗಳನ್ನು ಈ ಕೃತಿ ಒಳಗೊಂಡಿದೆ. ಲೇಖಕರು ಸಂಶೋಧನೆಯ ಎಲ್ಲ ಆಯಾಮಗಳನ್ನು ಈ…

Read More

ಬಸವನಬಾಗೇವಾಡಿ: ವಿದ್ಯಾರ್ಥಿಗಳು ಪಾಠ ಬೋಧನೆಯೊಂದಿಗೆ ಪಠ್ಯೇತರ ಚಟುವಟಿಕೆ ಹಾಗೂ ಕ್ರೀಡಾ ಚಟುವಟಿಕೆಯನ್ನು ಅಳವಡಿಸಿಕೊಳ್ಳಬೇಕೆಂದು ಜನತಾ ಎಜ್ಯುಕೇಶನ್ ಸೊಸೈಟಿಯ ನಿರ್ದೇಶಕ ರವಿಗೌಡ ಪಾಟೀಲ ಹೇಳಿದರು.ತಾಲೂಕಿನ ಮನಗೂಳಿ ಪಟ್ಟಣದ ಬಿ.ಎಸ್. ಪಾಟೀಲ ಪದವಿಪೂರ್ವ ಕಾಲೇಜಿನಲ್ಲಿ ಬುಧವಾರ ಹಮ್ಮಿಕೊಂಡಿದ್ದ ಪ್ರಥಮ ವರ್ಷದ ವಿದ್ಯಾರ್ಥಿಗಳ ಸ್ವಾಗತ, ಪಠ್ಯೇತರ ಹಾಗೂ ಕ್ರೀಡಾ ಚಟುವಟಿಕೆ ಉದ್ಘಾಟನೆ ಮತ್ತು ರಾಷ್ಟೀಯ ಭಾವೈಕ್ಯತೆ, ರಾಷ್ಟ್ರಧ್ವಜ, ರಾಷ್ಟ್ರಗೀತೆ ಕುರಿತಾದ ಕಾಯಾ೯ಗಾರವನ್ನು ಸಸಿಗೆ ನೀರುಣಿಸುವ ಉದ್ಘಾಟಿಸಿ ಮಾತನಾಡಿದ ಅವರು,ಪಠ್ಯೇತರ ಚಟುವಟಿಕೆ ಮನಸ್ಸಿಗೆ ಮುದ ನೀಡಿದರೆ, ಕ್ರೀಡಾ ಚಟುವಟಿಕೆಯಲ್ಲಿ ಭಾಗವಹಿಸುವದರಿಂದ ದೇಹದ ಸದೃಢತೆಯನ್ನು, ಆರೋಗ್ಯವನ್ನು ಕಾಪಾಡುತ್ತದೆ. ಸದೃಡವಾದ ದೇಹದಲ್ಲಿ ಸದೃಡವಾದ ಮನಸ್ಸು ಇರುತ್ತದೆ. ಹಾಗೇ ಇದರ ಜೊತೆಗೆ ವಿದ್ಯಾರ್ಥಿಗಳು ದೇಶಪ್ರೇಮ, ಶಿಸ್ತು, ಸಮಯಪ್ರಜ್ಞೆ, ಸೇವಾಮನೋಭವನೆಯನ್ನು ಬೆಳೆಸಿಕೊಳ್ಳಬೇಕೆಂದು ಹೇಳಿದರು.ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿದ ಭಾರತ ಸೇವಾದಳದ ವಲಯ ಸಂಘಟಕ ನಾಗೇಶ ಡೋಣೂರ ಮಾತನಾಡಿದ ಅವರು, ಧ್ವಜಾರೋಹಣ, ಅವರೋಹಣ, ಧ್ವಜ ನೀತಿಸಂಹಿತೆ, ಧ್ವಜ ನಿಯಮಗಳ ಕುರಿತು ಹಾಗೂ ರಾಷ್ಟ್ರಗೀತೆ, ನಾಡಗೀತೆಯನ್ನು,ರಾಗ,ಲಯ,ತಾಳ, ಸಮಯ, ಹಾಗೂ ಸಂಪೂರ್ಣ ಸಂಪೂರ್ಣ ಹಾಡಿನ ಶಬ್ದಗಳ ಅರ್ಥವನ್ನು…

Read More

ಬೆಂಗಳೂರಿನಲ್ಲಿ ರಾಜ್ಯ ಭೂ-ಮಾಪನ ಇಲಾಖೆಯ ಆಯುಕ್ತ ಮಂಜುನಾಥ ಗೆ ರೈತ ಸಂಘದಿಂದ ಮನವಿ ಬಸವನಬಾಗೇವಾಡಿ: ರಾಜ್ಯದಲ್ಲಿರುವ ಎಲ್ಲ ಜಮೀನುಗಳನ್ನು ಮೋಜಣಿ ಮಾಡಿ ಸರಿಯಾದ ಹದ್ದು ಗುರುತಿಸುವಂತೆ ಆಗ್ರಹಿಸಿ ಬೆಂಗಳೂರಿನಲ್ಲಿ ಸೋಮವಾರ ರಾಜ್ಯ ಭೂ-ಮಾಪನ ಇಲಾಖೆಯ ಆಯುಕ್ತ ಮಂಜುನಾಥ ಜೆ. ಅಖಂಡ ಕರ್ನಾಟಕ ರೈತ ಸಂಘದಿಂದ ಸಂಘದ ವಿಜಯಪುರ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಅರವಿಂದ ಕುಲಕರ್ಣಿ ಮನವಿ ಪತ್ರ ಸಲ್ಲಿಸಿದರು.ಅವರು ಸಲ್ಲಿಸಿದ ಮನವಿಯಲ್ಲಿ ರಾಜ್ಯದ ಪ್ರತಿಯೊಂದು ಗ್ರಾಮದಲ್ಲಿರುವ ಜಮೀನುಗಳು ಒತ್ತುವರಿಯಾಗಿ ಜಮೀನುಗಳ ಹದ್ದು ಗುರುತು ಸಿಗದಂತಾಗಿದೆ. ಇದರಿಂದಾಗಿ ಎಷ್ಟೋ ರೈತ ಬಾಂಧವರಲ್ಲಿ ಮಧ್ಯ ವೈಮನಸ್ಸು ಉಂಟಾಗಿ ಬಡಿದಾಟ-ಹೊಡೆದಾಟ ನಡೆಯುತ್ತಿವೆ. ಬ್ರಿಟಿಷರ ಆಡಳಿತ ಕಾಲದಲ್ಲಿ ಸರ್ವೆ ಮಾಡಿದ್ದನ್ನು ಬಿಟ್ಟರೆ ಇದುವರೆಗೂ ಮತ್ತೆ ಜಮೀನುಗಳ ಸರ್ವೇ ಕಾರ್ಯ ಮಾಡಿಲ್ಲ. ಪ್ರತಿ ೩೦ ವರ್ಷಕ್ಕೊಮ್ಮೆ ಸರ್ವೆ ಮಾಡಬೇಕೆಂಬ ನಿಯಮವಿದೆ. ಆದರೂ ಸ್ವತಂತ್ರ ಬಂದು ೭೬ ವರ್ಷ ಗತಿಸಿದರೂ ಇದುವರೆಗೂ ಜಮೀನುಗಳ ಸರ್ವೆ ಕಾರ್ಯ ಮಾಡಿಲ್ಲ. ಕೆಲವೆಡೆ ಜಮೀನುಗಳಿಗೆ ಹೋಗುವ ವಹಿವಾಟು ದಾರಿ ಗುರುತು ಸಹ ಸಿಗದಂತಾಗಿದೆ. ಇದು…

Read More

ಬಸವನಬಾಗೇವಾಡಿ: ಪಟ್ಟಣದ ಬಿಎಲ್ಡಿಇ ಸಂಸ್ಥೆಯ ಬಸವೇಶ್ವರ ಕಲಾ ಮತ್ತು ವಾಣಿಜ್ಯ ಮಹಾವಿದ್ಯಾಲಯವು ತಾಲೂಕಿನ ಟಕ್ಕಳಕಿ ಗ್ರಾಮದಲ್ಲಿ ಏಳು ದಿನಗಳ ಕಾಲ ಶೈಕ್ಷಣಿಕ ವರ್ಷದ ರಾಷ್ಟ್ರೀಯ ಸೇವಾ ಯೋಜನೆಯ ವಾರ್ಷಿಕ ಶಿಬಿರ ಆಯೋಜಿಸಿದ್ದು. ಈ ಶಿಬಿರದಲ್ಲಿ ಶಿಬಿರಾರ್ಥಿಗಳಿಗೆ ಕರಾಟೆ ತರಬೇತಿ ಆಯೋಜನೆ ಮಾಡಿದ್ದು ವಿಶೇಷ.ಕರಾಟೆ ತರಬೇತುದಾರ ಜಗದೀಶ ತಳವಾರ ಅವರು, ಪ್ರಾಚೀನ ಕಾಲದಿಂದಲೂ ಮಹಿಳೆ ಪುರುಷನ ಅಡಿಯಾಳಾಗಿ ಮತ್ತು ಅವರ ರಕ್ಷಣೆಯಲ್ಲಿಯೇ ಕಾಲ ಕಳೆಯುತ್ತಿದ್ದಳು. ಇಂದು ೨೧ ನೇ ಶತಮಾನದಲ್ಲಿಯೂ ಮುಂದುವರಿದಿದೆ. ಇಂದು ಮಹಿಳೆಯರು ತಮ್ಮನ್ನು ರಕ್ಷಿಸಿಕೊಳ್ಳಲು ಕರಾಟೆ ಕಲಿಯುವದು ತುಂಬಾ ಅಗತ್ಯವಿದೆ. ಈ ಶಿಬಿರದ ಏಳು ದಿನಗಳ ಕಾಲ ವಿದ್ಯಾರ್ಥಿನಿಯರಿಗೆ ತಮ್ಮ ಆತ್ಮರಕ್ಷಣೆಯಲ್ಲಿ ಪ್ರಮುಖ ಪಾತ್ರ ನಿರ್ವಹಿಸುವ ಕರಾಟೆ ಕಲೆಯನ್ನು ಕಲಿಸಿ ಅವರಲ್ಲಿ ಧೈರ್ಯ, ಸ್ವಾಭಿಮಾನದ ಬದುಕನ್ನು ಕಟ್ಟಿಕೊಳ್ಳುವ ತಂತ್ರಗಳನ್ನು ತಿಳಿಸಿಕೊಡಲಾಗುವುದು. ಪ್ರಜಾಪ್ರಭುತ್ವದಲ್ಲಿ ಸಂವಿಧಾನವು ನಮಗೆ ಎಲ್ಲ ಸ್ವಾತಂತ್ರ್ಯ ನೀಡಿದರೂ ನಾವು ಸ್ವಯಂ ಆತ್ಮರಕ್ಷಣೆ ಮಾಡಿಕೊಳ್ಳುವ ಕಲೆಯನ್ನು ಕರಗತಿ ಮಾಡಿಕೊಳ್ಳಬೇಕು. ನಾವು ಸದಾಕಾಲ ಪುರುಷರನ್ನೇ ಅವಲಂಬಿಸುವ ಹೊಣೆಗಾರಿಕೆಯಿಂದ ಹೊರಬಂದು ಸ್ವತಂತ್ರ, ಸ್ವಾವಲಂಬಿ…

Read More

ಬಸವನಬಾಗೇವಾಡಿ: ಪ್ರತಿಯೊಬ್ಬರೂ ತಮ್ಮ ಜೀವನದಲ್ಲಿ ಎಲ್ಲ ವ್ಯಸನಗಳನ್ನು ತ್ಯಾಗ ಮಾಡುತ್ತೇನೆ ಎಂದು ಸಂಕಲ್ಪ ಮಾಡಿಕೊಂಡು ಪರಿಶುದ್ಧ ಬದುಕು ಸಾಗಿಸಬೇಕೆಂದು ಯರನಾಳ ವಿರಕ್ತಮಠದ ಗುರು ಸಂಗನಬಸವ ಸ್ವಾಮೀಜಿ ಹೇಳಿದರು.ತಾಲೂಕಿನ ಯರನಾಳ ಗ್ರಾಮದ ವಿರಕ್ತಮಠದಲ್ಲಿ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ, ವಿಜಯಪುರದ ಅಖಿಲಕರ್ನಾಟಕ ಜನಜಾಗೃತಿ ವೇದಿಕೆ ಟ್ರಸ್ಟ್, ಧರ್ಮಸ್ಥಳ ಮಂಜುನಾಥೇಶ್ವರ ವ್ಯಸನ ಮುಕ್ತಿ ಮತ್ತು ಸಂಶೋಧನಾ ಕೇಂದ್ರ ಹಾಗೂ ಯರನಾಳದ ಜಗದ್ಗುರು ಪಂಪಾಪತಿ ಮಹಾ ಶಿವಯೋಗೀಶ್ವರ ವಿದ್ಯಾವರ್ಧಕ ಸಂಘ ಸೇರಿದಂತೆ ವಿವಿಧ ಸ್ವಸಹಾಯ ಸಂಘಗಳ ಒಕ್ಕೂಟದ ಸಹಯೋಗದಲ್ಲಿ ಮಂಗಳವಾರ ಹಮ್ಮಿಕೊಂಡಿದ್ದ ಮದ್ಯವರ್ಜನ ಶಿಬಿರದ ಸಮಾರೋಪ ಸಮಾರಂಭದ ಸಾನಿಧ್ಯ ವಹಿಸಿ ಮಾತನಾಡಿದ ಅವರು, ಸಮಾಜದಲ್ಲಿ ಸಮಾಜಮುಖಿ ಚಟುವಟಿಕೆಗಳನ್ನು ಕೈಗೊಳ್ಳುವ ಮೂಲಕ ನಿಮ್ಮನ್ನು ಗುರುತಿಸುವಂತಹ ಮಹತ್ತರ ಕಾರ್ಯದಲ್ಲಿ ತೊಡಗಿಕೊಳ್ಳಬೇಕು. ಜೀವನವನ್ನು ಸನ್ಮಾರ್ಗದಲ್ಲಿ ಸಾಗಿಸಬೇಕೆಂದರು.ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಕಲಬುರಗಿ ಪ್ರಾದೇಶಿಕ ಯೋಜನಾ ಅಧಿಕಾರಿ ರಾಜೇಶ ಮಾತನಾಡಿ, ಕುಡಿತದಿಂದ ಎಷ್ಟೋ ಮನೆಗಳು ಹಾಳಾಗಿವೆ. ಕುಡಿತದ ಚಟ ಮಕ್ಕಳ ಮೇಲೆ ದುಷ್ಪರಿಣಾಮ ಬೀರುವ ಸಾಧ್ಯತೆ ಇದೆ. ಕುಡಿತದ ನಶೆಯಲ್ಲಿ ಅಹಿತಕರ ಘಟನೆಗಳು ಸಂಭವಿಸುತ್ತವೆ.…

Read More

ಬಸವನಬಾಗೇವಾಡಿ: ಪಟ್ಟಣದ ಹೃದಯಭಾಗದಲ್ಲಿ ನಿರ್ಮಾಣವಾಗಿರುವ ಮೆಗಾಮಾರುಕಟ್ಟೆಯಲ್ಲಿ ಅಂಗಡಿಯನ್ನು ಬಾಡಿಗೆ ಪಡೆದ ಅಂಗಡಿ ಮಾಲೀಕರು ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಆಗ್ರಹಿಸಿ ಮಂಗಳವಾರ ಪುರಸಭೆ ಮುಖ್ಯಾಧಿಕಾರಿ ಎಚ್.ಎಸ್.ಚಿತ್ತರಗಿ ಅವರಿಗೆ ಮನವಿ ಸಲ್ಲಿಸಿದರು.ಅವರು ಸಲ್ಲಿಸಿದ ಮನವಿಯಲ್ಲಿ ನಾವು ಪಟ್ಟಣದ ಮಧ್ಯದಲ್ಲಿ ನಿರ್ಮಿಸಿರುವ ಮೆಗಾ ಮಾರುಕಟ್ಟೆಯಲ್ಲಿ ಲೀಲಾವಿನಲ್ಲಿ ಅಂಗಡಿಗಳನ್ನು ಬಾಡಿಗೆ ಹಿಡಿದಿದ್ದೇವೆ. ಲೀಲಾವಿನ ಪ್ರಕಾರ ಡಿಪಾಜಿಟ್ ಕಟ್ಟಿರುತ್ತೇವೆ. ಆದರೆ ಹನುಮಾನ ಮಂದಿರದಿಂದ ನಾಗೂರ ರಸ್ತೆ ಕೂಡುವವರೆಗೆ ಮೆಗಾ ಮಾರುಕಟ್ಟೆಗೆ ಇರುವ ಕಂಪೌಂಡ ಗೋಡೆಯನ್ನು ತೆಗೆಸುವುದು. ಅಂಗಡಿಗಳಿಂದ ರಸ್ತೆಯವರೆಗೆ ಪಾವಟಿಗೆಗಳನ್ನು ಕಟ್ಟಿಸಿ ಕೊಡುವುದು. ಅಂಗಡಿಗಳಿಗೆ ಇರುವ ಶಟರಗಳನ್ನು ಸರಳವಾಗಿ ಏರಿಸಿ ಇಳಿಸಲು ಬರುವ ಹಾಗೆ ಮಾಡಿ ಕೊಡುವ ಮೂಲಕ ವ್ಯಾಪಾರಕ್ಕೆ ಅನುಕೂಲವಾಗುವ ಕೆಲಸಗಳನ್ನು ಮಾಡಿಕೊಡುವುದಾಗಿ ತಿಳಿಸಿದ್ದಿರಿ. ಆದರೆ ಯಾವ ಕೆಲಸಗಳು ಇದುವರೆಗೂ ಆಗಿರುವದಿಲ್ಲ. ತಾವುಗಳು ತಿಳಿಸಿದಂತೆ ನಮ್ಮ ಬೇಡಿಕೆಗಳನ್ನು ಈಡೇರಿಸುವ ಮೂಲಕ ಹೆಚ್ಚಿನ ಸಂಖ್ಯೆಯ ಗ್ರಾಹಕರನ್ನು ಆಕರ್ಷಿಸುವ ನಿಟ್ಟಿನಲ್ಲಿ ಶೀಘ್ರವೇ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಲಾಗಿದೆ.ಈ ಸಂದರ್ಭದಲ್ಲಿ ಬಾಡಿಗೆ ಅಂಗಡಿಗಳ ಮಾಲೀಕರಾದ ಮಂಜುನಾಥ ಬಡಿಗೇರ, ಬಸವರಾಜ ಸೊನ್ನದ, ಈರಣ್ಣ…

Read More

ಮುದ್ದೇಬಿಹಾಳ: ತಾಲೂಕಿನಲ್ಲಿ ಸಾಹಿತ್ಯ ಕ್ಷೇತ್ರ ಬಡವಾಗಬಾರದು. ಸಾಹಿತ್ಯ ಕ್ಷೇತ್ರಕ್ಕೆ ನೆಲೆ ನೀಡುವ ಶತಪ್ರಯತ್ನವನ್ನು ತಾಲೂಕಿನ ಎಲ್ಲ ಹಿರಿಯ ಸಾಹಿತಿಗಳ ಮತ್ತು ಕನ್ನಡಾಭಿಮಾನಿಗಳ ಆಶೀರ್ವಾದದಿಂದ ಮಾಡುವೆ ಎಂದು ಕಸಾಪ ಅಧ್ಯಕ್ಷ ಕಾಮರಾಜ ಬಿರಾದಾರ ಹೇಳಿದರು.ಪಟ್ಟಣದ ಮಾರುತಿ ನಗರದಲ್ಲಿರುವ ಕಾಶಿ ವಿಶ್ವನಾಥ ಮಠದಲ್ಲಿ ಕನ್ನಡ ಸಾಹಿತ್ಯ ಪರಿಷತ್ತಿನ ವತಿಯಿಂದ ಆಯೋಜಿಸಲಾಗಿದ್ದ ಶರಣಯೋಗಿ ಹಡಪದ ಅಪ್ಪಣ್ಣನವರ ಮತ್ತು ವಚನ ಪಿತಾಮಹ ಫ.ಗು.ಹಳಕಟ್ಟಿ ಅವರ ಜಯಂತಿ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.ಕನ್ನಡದ ತೇರನ್ನು ಎಳೆಯುವ ಅವಕಾಶ ಸಿಕ್ಕಿರೋದು ನನ್ನ ಸೌಭಾಗ್ಯ. ಈ ಹುದ್ದೆಗೆ ನಾನು ಯಾವತ್ತೂ ಧಕ್ಕೆ ಬಾರದ ರೀತಿಯಲ್ಲಿ ಸಾಗುವೆ. ಇನ್ನು ಮೇಲಿಂದ ಮೇಲೆ ಕನ್ನಡದ ಕಾರ್ಯಕ್ರಮಗಳು ಜರುಗಲಿವೆ. ಅದಕ್ಕೆ ಎಲ್ಲ ಸಾಹಿತಿಗಳ ಸಹಾಯ ಸಹಕಾರ ಕೋರುವೆ ಎಂದರು.ಈ ವೇಳೆ ಹಿರಿಯ ಸಾಹಿತಿ ಬಿ.ಎಂ.ಹಿರೇಮಠರು ಮಾತನಾಡಿ, ಕ್ರಿಯಾಶೀಲ ಅಧ್ಯಕ್ಷರು ಭುವನೇಶ್ವರಿ ತಾಯಿಯ ತೇರನ್ನು ಎಳೆಯಲು ಎಲ್ಲ ಸಾಹಿತಿಗಳು, ಕನ್ನಡಾಭಿಮಾನಿಗಳು ಅದ್ಭುತ ಸಹಾಯ ಸಹಕಾರ ನೀಡೋಣ ಎಂದರು.ಮಹಾದೇಶ ಶಾಸ್ತ್ರಿಗಳು ಆಶೀರ್ವಚನ ನೀಡಿದರು. ಮುಖ್ಯ ಅತಿಥಿಗಳಾಗಿ ಆಗಮಿಸಿದ್ದ…

Read More

ಮುದ್ದೇಬಿಹಾಳ: ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ವಿಜಯಪುರ ಜಿಲ್ಲಾ ಘಟಕದಿಂದ ಕೊಡಮಾಡುವ ವಾರ್ಷಿಕ ಪ್ರಶಸ್ತಿಗೆ ತಾಲೂಕಿನ ಢವಳಗಿ ಗ್ರಾಮದ ವಿಜಯವಾಣಿ ವರದಿಗಾರ ಜಿ.ಎನ್.ಬೀರಗೊಂಡ (ಮುತ್ತು) ಮತ್ತು ಡೈಲಿ ಸಾಲಾರ ವರದಿಗಾರ ಲಾಡ್ಲೆಮಶಾಕ ನದಾಫ ಆಯ್ಕೆಯಾಗಿದ್ದಾರೆ.ಜುಲೈ ೨೮ ರವಿವಾರದಂದು ವಿಜಯಪುರದ ಪೊಲೀಸ್ ಭವನದಲ್ಲಿ ನಡೆಯುತ್ತಿರುವ ಪತ್ರಿಕಾ ದಿನಾಚರಣೆ ಕಾರ್ಯಕ್ರಮದಲ್ಲಿ ಸಚಿವರು, ಶಾಸಕರು ಮತ್ತು ಗಣ್ಯರ ಸಮ್ಮುಖದಲ್ಲಿ ಅವರಿಗೆ ಪ್ರಶಸ್ತಿ ನೀಡಿ ಗೌರವಿಸಲಾಗುತ್ತಿದೆ.

Read More