Close Menu
  • ಮುಖಪುಟ
  • (ರಾಜ್ಯ ) ಜಿಲ್ಲೆ
  • ವಿಶೇಷ ಲೇಖನ
  • ಸಾಹಿತ್ಯ
  • ಆರೋಗ್ಯ
  • ಚಿಂತನ
  • ಪ್ರೇಮಲೋಕ
  • ದಿನಪತ್ರಿಕೆ
  • ಸಂಪರ್ಕಿಸಿ

Subscribe to Updates

Get the latest creative news from FooBar about art, design and business.

What's Hot

ಶಾಸಕರೆ ನಾಟಕ ನಿಲ್ಲಿಸಿ, ರೈತರ ಪರ ಕೆಲಸ ಮಾಡಿ

ಗ್ಯಾರಂಟಿ ಸಮಿತಿಗೆ ಅಧ್ಯಕ್ಷರಾಗಿ ತೆಲ್ಲೂರ ಆಯ್ಕೆ

ಶಾಸಕ ಶಿವಾನಂದ ರಿಂದ ಕಾನಿಪ ಸಂಘಕ್ಕೆ 5 ಲಕ್ಷ ರೂ. ದೇಣಿಗೆ

Facebook X (Twitter) Instagram
  • ಮುಖಪುಟ
  • (ರಾಜ್ಯ ) ಜಿಲ್ಲೆ
  • ವಿಶೇಷ ಲೇಖನ
  • ಸಾಹಿತ್ಯ
  • ಆರೋಗ್ಯ
  • ಚಿಂತನ
  • ಪ್ರೇಮಲೋಕ
  • ದಿನಪತ್ರಿಕೆ
  • ಸಂಪರ್ಕಿಸಿ
Facebook X (Twitter) Instagram YouTube WhatsApp
udayarashminews.comudayarashminews.com
  • ಮುಖಪುಟ
  • (ರಾಜ್ಯ ) ಜಿಲ್ಲೆ
  • ವಿಶೇಷ ಲೇಖನ
  • ಸಾಹಿತ್ಯ
  • ಆರೋಗ್ಯ
  • ಚಿಂತನ
  • ಪ್ರೇಮಲೋಕ
  • ದಿನಪತ್ರಿಕೆ
  • ಸಂಪರ್ಕಿಸಿ
udayarashminews.comudayarashminews.com
Home»(ರಾಜ್ಯ ) ಜಿಲ್ಲೆ»ಮನೆತನಗಳ ಅಧ್ಯಯನ ಇಂದಿನ ಅಗತ್ಯತೆ: ಪ್ರೊ.ಕಡಕೋಳ
(ರಾಜ್ಯ ) ಜಿಲ್ಲೆ

ಮನೆತನಗಳ ಅಧ್ಯಯನ ಇಂದಿನ ಅಗತ್ಯತೆ: ಪ್ರೊ.ಕಡಕೋಳ

By No Comments2 Mins Read
Facebook Twitter Pinterest LinkedIn Telegram WhatsApp
Share
Facebook Twitter LinkedIn Email Telegram WhatsApp

ವಿಜಯಪುರ: ಹಿಂದೆ ಗ್ರಾಮೀಣ ಪ್ರದೇಶದಲ್ಲಿ ಗೌಡರೇ ಮುಖ್ಯಸ್ಥರು. ಗ್ರಾಮದ ರಾಜಕೀಯ, ಸಾಮಾಜಿಕ, ಧಾರ್ಮಿಕ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮಗಳಿಗೆ ಗೌಡರೇ ಮುಖ್ಯಸ್ಥರಾಗಿದ್ದರು. ಸ್ವಾತಂತ್ರ್ಯ ಪೂರ್ವದಲ್ಲಿ ಗ್ರಾಮದ ಎಲ್ಲಾ ನಿಣ೯ಯಗಳನ್ನು ಗೌಡರೇ ಕೈಗೊಳ್ಳುತ್ತಿದ್ದರು ಎಂದು ವಿಶ್ರಾಂತ ಪ್ರಾಧ್ಯಾಪಕ ಪ್ರೊ.ಎಚ್.ಎಂ.ಕಡಕೋಳ ಅಭಿಪ್ರಾಯ ವ್ಯಕ್ತಪಡಿಸಿದರು.
ಜಿಲ್ಲಾ, ತಾಲೂಕಾ ಹಾಗೂ ನಗರ ಘಟಕ ಕನ್ನಡ ಸಾಹಿತ್ಯ ಪರಿಷತ್ತಿನ ಆಶ್ರಯದಲ್ಲಿ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಸಭಾಂಗಣದಲ್ಲಿ ಜರುಗಿದ ಪ್ರೊ ಸಿದ್ದಣ್ಣ ಬೀಡಗೊಂಡ ರಚಿಸಿದ “ವಿಜಯಪುರ ಜಿಲ್ಲೆಯ ಗೌಡ ಮನೆತನಗಳ ಆಡಳಿತ ಮತ್ತು ಸಂಸ್ಕೃತಿ” ಎಂಬ ಸಂಶೋಧನಾತ್ಮಕ ಕೃತಿಯನ್ನು ಅನಾವರಣಗೊಳಿಸಿ ಅವರು ಮಾತನಾಡುತ್ತಾ, ಬ್ರಿಟಿಷರ ಕಾಲದಲ್ಲಿ ಅದರಲ್ಲೂ ವಿಶೇಷವಾಗಿ ಉತ್ತರ ಕರ್ನಾಟಕದಲ್ಲಿ ಪ್ರತಿ ಗ್ರಾಮಗಳಲ್ಲಿ ಗೌಡರದೇ ಆಡಳಿತ ಇತ್ತೆಂದು ನಮ್ಮೆಲ್ಲರ ಪೂರ್ವಜರಿಂದ ತಿಳಿದು ಬರುತ್ತದೆ ಎಂದರು.
ಕೃತಿಯನ್ನು ಪರಿಚಯಿಸಿದ ವಿಜಯಪುರ ತಾಲೂಕಾ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಡಾ.ಆನಂದ ಕುಲಕರ್ಣಿ ಮಾತನಾಡುತ್ತಾ, ಇದೊಂದು ಮೌಲಿಕ ಕೃತಿ. ಗ್ರಾಮೀಣ ಭಾಗದ ಬಹುತೇಕ ವಿಚಾರಗಳನ್ನು ಈ ಕೃತಿ ಒಳಗೊಂಡಿದೆ. ಲೇಖಕರು ಸಂಶೋಧನೆಯ ಎಲ್ಲ ಆಯಾಮಗಳನ್ನು ಈ ಕೃತಿಯಲ್ಲಿ ಅಳವಡಿಸಿರುವುದು ಕೃತಿಯ ವೈಶಿಷ್ಟ್ಯ. ಲಿಂಗಾಯತ, ಬ್ರಾಹ್ಮಣ, ಕುರುಬ, ಕಬ್ಬಲಿಗ, ರೆಡ್ಡಿ, ಒಕ್ಕಲಿಗ, ಮುಂತಾದವರು ಗೌಡರಾಗಿದ್ದರು ಎಂದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದ ಸರಕಾರಿ ಮಹಿಳಾ ಪದವಿ ಮಹಾವಿದ್ಯಾಲಯದ ದೈಹಿಕ ನಿರ್ದೇಶಕ ಡಾ.ರಾಜಶೇಖರ ಬೆನಕನಹಳ್ಳಿ ಮಾತನಾಡುತ್ತಾ, ಲೇಖಕ ಪ್ರೊ ಸಿದ್ದಣ್ಣ ಬೀಡಗೊಂಡ ಇವರಿಂದ ಇನ್ನೂ ಅನೇಕ ಸಂಶೋಧನಾತ್ಮಕ ಕೃತಿಗಳು ಹೊರಬರಲಿ, ಕೃತಿಯನ್ನು ಕಂಡು ತೆಗೆದುಕೊಳ್ಳುವುದಕ್ಕಿಂತ ಕೊಂಡು ಓದುವುದು ಉತ್ತಮ ಎಂದರು.
ಕಸಾಪ ಗೌರವ ಕಾರ್ಯದರ್ಶಿ ಡಾ ಮಾಧವ ಗುಡಿ ಸ್ವಾಗತಿಸಿ ಪರಿಚಯಿಸುತ್ತಾ ಪ್ರಾಸ್ತಾವಿಕವಾಗಿ ಮಾತನಾಡಿದರು.
ಕಾರ್ಯಕ್ರಮವನ್ನು ಶ್ರೀಮತಿ ಮಮತಾ ಮುಳಸಾವಳಗಿ ನಿರೂಪಿಸಿದರು. ಸುನಯನಾ ದೇಶಪಾಂಡೆ ಹಾಗೂ ಸಂಗೀತಾ ಹಿರೇಮಠ ವಚನ ಗಾಯನ ಮಾಡಿದರು. ಮೆಹತಾಬ್ ಕಾಗವಾಡ ವಂದಿಸಿದರು.
ಕಾರ್ಯಕ್ರಮದಲ್ಲಿ ಕಸಾಪ ಜಿಲ್ಲಾಧ್ಯಕ್ಷ ಹಾಸಿಂಪೀರ್ ವಾಲೀಕಾರ, ಡಾ. ಬಸವರಾಜ ಹಡಪದ, ರಾಜೇಸಾಬ ಶಿವನಗುತ್ತಿ, ಪ್ರೊ. ಸಿದ್ರಾಮಯ್ಯ ಲಕ್ಕುಂಡಿಮಠ, ಪ್ರಾಚಾರ್ಯರಾದ ಡಾ ಆರ್. ಎಸ್ ಕಲ್ಲೂರಮಠ, ಡಾ. ಪಿ.ಬಿ ಬಿರಾದಾರ, ಲಕ್ಷ್ಮೀ ಮೋರೆ, ರಮೇಶ ಬಳ್ಳೊಳ್ಳಿ, ನಾಥೂರಾಮ ಜಾಧವ, ಡಾ. ರಾಘವೇಂದ್ರ ಗುಜಾ೯ಲ, ಬಿ.ಎಂ. ಆಜೂರ, ಕೆ.ಎಸ್.ಹಣಮಾಣಿ, ಟಿ.ಆರ್. ಹಾವಿನಾಳ, ಎಸ್.ಎಲ್ ಇಂಗಳೇಶ್ವರ, ಶ್ರೀಕಾಂತ ನಾಡಗೌಡ, ಅಶೋಕ ಬಾಳಿಕಾಯಿ, ಡಾ. ನಾರಾಯಣ ಬಗಲಿ, ಡಾ ನೀಲಕಂಠ ಹಳ್ಳಿ, ಡಾ ಶ್ರೀಶೈಲ ಪೂಜಾರಿ, ಸಂಗಮೇಶ ಬಗಲಿ, ಶಿವಾನಂದ ಸಾಂಗೋಲಿ,ನವೀನ ಗೌಡ ಬಿರಾದಾರ, ಸುಖದೇವಿ ಅಲಬಾಳಮಠ ಮುಂತಾದವರು ಉಪಸ್ಥಿತರಿದ್ದರು.

BIJAPUR NEWS public public news udaya rashmi Udayarashmi today newspaper udayarashminews.com
Share. Facebook Twitter Pinterest Email Telegram WhatsApp
  • Website

Related Posts

ಶಾಸಕರೆ ನಾಟಕ ನಿಲ್ಲಿಸಿ, ರೈತರ ಪರ ಕೆಲಸ ಮಾಡಿ

ಗ್ಯಾರಂಟಿ ಸಮಿತಿಗೆ ಅಧ್ಯಕ್ಷರಾಗಿ ತೆಲ್ಲೂರ ಆಯ್ಕೆ

ಶಾಸಕ ಶಿವಾನಂದ ರಿಂದ ಕಾನಿಪ ಸಂಘಕ್ಕೆ 5 ಲಕ್ಷ ರೂ. ದೇಣಿಗೆ

ಜನರೇ ಮಾಲೀಕರು, ಅಧಿಕಾರಿಗಳು ಅವರ ಸೇವಕರು

Add A Comment
Leave A Reply Cancel Reply

Categories
  • (ರಾಜ್ಯ ) ಜಿಲ್ಲೆ
  • Helldivers
  • Typora
  • Uncategorized
  • Wemod
  • ಆರೋಗ್ಯ
  • ಇತರೆ
  • ಕಾವ್ಯರಶ್ಮಿ
  • ಚಿಂತನ
  • ದಿನಪತ್ರಿಕೆ
  • ಪುಸ್ತಕ ಪರಿಚಯ
  • ಪ್ರೇಮಲೋಕ
  • ಭಾವರಶ್ಮಿ
  • ರಾಷ್ಚ್ರ
  • ವಿಜಯಪುರ
  • ವಿದ್ಯಾರ್ಥಿ ನಿಧಿ
  • ವಿಶೇಷ ಲೇಖನ
  • ಸಾಹಿತ್ಯ
  • ಸಿನಿಮಾ
  • ಹೊತ್ತಿಗೆ ಹೊರಣ
Recent Posts
  • ಶಾಸಕರೆ ನಾಟಕ ನಿಲ್ಲಿಸಿ, ರೈತರ ಪರ ಕೆಲಸ ಮಾಡಿ
    In (ರಾಜ್ಯ ) ಜಿಲ್ಲೆ
  • ಗ್ಯಾರಂಟಿ ಸಮಿತಿಗೆ ಅಧ್ಯಕ್ಷರಾಗಿ ತೆಲ್ಲೂರ ಆಯ್ಕೆ
    In (ರಾಜ್ಯ ) ಜಿಲ್ಲೆ
  • ಶಾಸಕ ಶಿವಾನಂದ ರಿಂದ ಕಾನಿಪ ಸಂಘಕ್ಕೆ 5 ಲಕ್ಷ ರೂ. ದೇಣಿಗೆ
    In (ರಾಜ್ಯ ) ಜಿಲ್ಲೆ
  • ಜನರೇ ಮಾಲೀಕರು, ಅಧಿಕಾರಿಗಳು ಅವರ ಸೇವಕರು
    In (ರಾಜ್ಯ ) ಜಿಲ್ಲೆ
  • ಎಸ್.ಎಸ್.ಖಾದ್ರಿ ಗೆ ಪಿ.ಎಚ್.ಡಿ ಪದವಿ ಪ್ರದಾನ
    In (ರಾಜ್ಯ ) ಜಿಲ್ಲೆ
  • ಬಹುಭಾಷಾ ಜ್ಞಾನವೇ ವಿದ್ಯಾರ್ಥಿಗಳ ಪ್ರಗತಿಯ ಕೀಲಿಕೈ :ಶಿಂತ್ರೆ
    In (ರಾಜ್ಯ ) ಜಿಲ್ಲೆ
  • ಗಣೇಶನ ಆಗಮನಕ್ಕೆ ಮಾರುಕಟ್ಟೆಗೆ ಹೊಸ ಕಳೆ!
    In (ರಾಜ್ಯ ) ಜಿಲ್ಲೆ
  • ಚಕ್ರವಿಲ್ಲದ ಜೋಡು ಬಸವಣ್ಣನ ರಥಕ್ಕೆ ಹೆಗಲು ನೀಡಿದ ಭಕ್ತರು
    In (ರಾಜ್ಯ ) ಜಿಲ್ಲೆ
  • ಕಠಿಣ ಪರಿಶ್ರಮ, ನಿರಂತರ ಅಧ್ಯಯನದಿಂದ ಯಶಸ್ಸು ಸಾಧ್ಯ
    In (ರಾಜ್ಯ ) ಜಿಲ್ಲೆ
  • ತೋಟದ ಮನೆ ನಿರ್ಮಾಣಕ್ಕೆ ರೂ.20 ಲಕ್ಷವರೆಗೆ ಮನೆ ಸಾಲ
    In (ರಾಜ್ಯ ) ಜಿಲ್ಲೆ
Editors Picks
Top Reviews
udayarashminews.com
Facebook X (Twitter) Instagram Pinterest Vimeo YouTube
  • ಮುಖಪುಟ
  • (ರಾಜ್ಯ ) ಜಿಲ್ಲೆ
  • ವಿಶೇಷ ಲೇಖನ
  • ಸಾಹಿತ್ಯ
  • ಆರೋಗ್ಯ
  • ಚಿಂತನ
  • ಪ್ರೇಮಲೋಕ
  • ದಿನಪತ್ರಿಕೆ
  • ಸಂಪರ್ಕಿಸಿ
© 2026 udayarashminews.com. Designed by udayarashmi news .

Type above and press Enter to search. Press Esc to cancel.