ಕೆಂಭಾವಿ: ಪಠ್ಯದಲ್ಲಿದ್ದನ್ನು ಪ್ರಾತ್ಯಕ್ಷಿಕೆ ತೋರಿಸಿ ಪ್ರಜಾಪ್ರಭುತ್ವದ ಬಗ್ಗೆ ಅರಿವು ಮೂಡಿಸುವ ನಿಟ್ಟಿನಲ್ಲಿ ಶಾಲಾ ಸಂಸತ್ತು ಚುನಾವಣೆಯನ್ನು ಲೋಕಸಭೆ ಮತ್ತು ರಾಜ್ಯ ವಿಧಾನಸಭೆ ಚುನಾವಣೆ ಮಾದರಿಯಲ್ಲಿಯೇ ಬುಧವಾರ ಪಟ್ಟಣದ ಸಮೀಪವಿರುವ ಮುದನೂರು ಪ್ರೌಢ ಶಾಲೆಯಲ್ಲಿ ನಡೆಯಿತು.
ಒಟ್ಟು 15 ವಿದ್ಯಾರ್ಥಿಗಳು ಚುನಾವಣೆಯಲ್ಲಿ ಸ್ಪರ್ಧಿಸಿದ್ದರು,10 ನೇ ತರಗತಿಯಿಂದ 3 ವಿದ್ಯಾರ್ಥಿಗಳು, 9 ನೇ ತರಗತಿಯಿಂದ 4, ಮತ್ತು 8 ನೇ ತರಗತಿಯಿಂದ 4 ವಿದ್ಯಾರ್ಥಿಗಳು ಆಯ್ಕೆಯಾದರು. ಒಟ್ಟು 151 ಮಕ್ಕಳು ಅರ್ಹ ಮತದಾರರಾಗಿದ್ದು 132 ಮಕ್ಕಳು ಮತದಾನ ಮಾಡಿದರು. ಮತದಾನಕ್ಕೆ ಮುನ್ನ ನಾಲ್ಕು ದಿನಗಳ ಮುಂಚೆ ನಾಮಪತ್ರ ಸಲ್ಲಿಕೆ, ಚುನಾವಣೆ ಪ್ರಚಾರ, ಗುಪ್ತ ಮತದಾನ, ಮತಪತ್ರ ನೀಡುವಿಕೆ, ಶಾಯಿ ಹಚ್ಚುವಿಕೆ, ಮತ ಒತ್ತುವುದು, ಸಹಿ ಮಾಡುವುದು ನಿಜವಾದ ಚುನಾವಣೆಯನ್ನೇ ನಾಚಿಸುವಂತೆ ನೂರಾರು ವಿದ್ಯಾರ್ಥಿಗಳು ತಾಸು ಗಟ್ಟಲೇ ಸರತಿ ಸಾಲಿನಲ್ಲಿ ನಿಂತು ತಮ್ಮ ಹಕ್ಕು ಚಲಾಯಿಸುವ ಮೂಲಕ ಶಾಲಾ ಸಂಸತ್ತು ರಚನೆ ಮಾಡಿಕೊಂಡರು.
ಮುಖ್ಯ ಶಿಕ್ಷಕರಾದ ಎಂ.ಬಿ.ಪಾಟೀಲ, ಮುಖ್ಯ ಚುನಾವಣೆ ಅಧಿಕಾರಿಯಾಗಿ, ಅಬ್ದುಲ್ ಖಯೂಮ್, ಶರಣಬಸಯ್ಯ ಹಿರೇಮಠ, ನಿಂಗನಗೌಡ ದೇಸಾಯಿ, ಭುವನೇಶ್ವರಿ ಅಂಗಡಿ , ಈರಣ್ಣ ಪತ್ತಾರ ಶಂಕ್ರಮ್ಮ ಪವನ, ಗುರುಸ್ವಾಮಿ ಮತಗಟ್ಟೆ ಅಧಿಕಾರಿಗಳಾಗಿ ಸೆಕ್ಟರ್ ಆಫೀಸರ್, ಪೋಲೀಸ್ ಅಧಿಕಾರಿಯಾಗಿ ಸುಸೂತ್ರ ಚುನಾವಣೆ ನಡೆಸಿಕೊಟ್ಟರು.
ಇದೇ ವೇಳೆ ಮಾತನಾಡಿದ ಮುಖ್ಯ ಶಿಕ್ಷಕ ಎಂ ಬಿ ಪಾಟೀಲ ಶಾಲೆಯ ವಿವಿಧ ಚಟುವಟಿಕೆಗಳಾದ ಸಾಂಸ್ಕೃತಿಕ, ಕ್ರೀಡಾ, ಶಾಲೆ ಸ್ವಚ್ಛತೆ, ಊಟ ಇನ್ನಿತರ ಜವಾಬ್ದಾರಿಯನ್ನು ತೆಗೆದುಕೊಂಡು ಪರಿಣಾಮಕಾರಿಯಾಗಿ ಕೆಲಸ ಮಾಡುವ ಉದ್ದೇಶದಿಂದ ಶಾಲಾ ಸಂಸತ್ತು ರಚಿಸಲಾಗುತ್ತದೆ. ಮಕ್ಕಳಿಗೆ ಜವಾಬ್ದಾರಿ, ಮುಂದಾಳತ್ವ, ವಹಿಸಿ ಕೊಳ್ಳಲು ನಾಳೆ ನಾಡಿನ ನಾಯಕರಾಗಿ ಕೆಲಸ ಮಾಡಲು ಶಾಲಾ ಸಂಸತ್ತು ಸಹಕಾರಿಯಾಗುತ್ತದೆ ಎಂದರು.
Subscribe to Updates
Get the latest creative news from FooBar about art, design and business.
Related Posts
Add A Comment

