ಬಸವನಬಾಗೇವಾಡಿ: ಪಟ್ಟಣದ ಬಿಎಲ್ಡಿಇ ಸಂಸ್ಥೆಯ ಬಸವೇಶ್ವರ ಕಲಾ ಮತ್ತು ವಾಣಿಜ್ಯ ಮಹಾವಿದ್ಯಾಲಯವು ತಾಲೂಕಿನ ಟಕ್ಕಳಕಿ ಗ್ರಾಮದಲ್ಲಿ ಏಳು ದಿನಗಳ ಕಾಲ ಶೈಕ್ಷಣಿಕ ವರ್ಷದ ರಾಷ್ಟ್ರೀಯ ಸೇವಾ ಯೋಜನೆಯ ವಾರ್ಷಿಕ ಶಿಬಿರ ಆಯೋಜಿಸಿದ್ದು. ಈ ಶಿಬಿರದಲ್ಲಿ ಶಿಬಿರಾರ್ಥಿಗಳಿಗೆ ಕರಾಟೆ ತರಬೇತಿ ಆಯೋಜನೆ ಮಾಡಿದ್ದು ವಿಶೇಷ.
ಕರಾಟೆ ತರಬೇತುದಾರ ಜಗದೀಶ ತಳವಾರ ಅವರು, ಪ್ರಾಚೀನ ಕಾಲದಿಂದಲೂ ಮಹಿಳೆ ಪುರುಷನ ಅಡಿಯಾಳಾಗಿ ಮತ್ತು ಅವರ ರಕ್ಷಣೆಯಲ್ಲಿಯೇ ಕಾಲ ಕಳೆಯುತ್ತಿದ್ದಳು. ಇಂದು ೨೧ ನೇ ಶತಮಾನದಲ್ಲಿಯೂ ಮುಂದುವರಿದಿದೆ. ಇಂದು ಮಹಿಳೆಯರು ತಮ್ಮನ್ನು ರಕ್ಷಿಸಿಕೊಳ್ಳಲು ಕರಾಟೆ ಕಲಿಯುವದು ತುಂಬಾ ಅಗತ್ಯವಿದೆ. ಈ ಶಿಬಿರದ ಏಳು ದಿನಗಳ ಕಾಲ ವಿದ್ಯಾರ್ಥಿನಿಯರಿಗೆ ತಮ್ಮ ಆತ್ಮರಕ್ಷಣೆಯಲ್ಲಿ ಪ್ರಮುಖ ಪಾತ್ರ ನಿರ್ವಹಿಸುವ ಕರಾಟೆ ಕಲೆಯನ್ನು ಕಲಿಸಿ ಅವರಲ್ಲಿ ಧೈರ್ಯ, ಸ್ವಾಭಿಮಾನದ ಬದುಕನ್ನು ಕಟ್ಟಿಕೊಳ್ಳುವ ತಂತ್ರಗಳನ್ನು ತಿಳಿಸಿಕೊಡಲಾಗುವುದು. ಪ್ರಜಾಪ್ರಭುತ್ವದಲ್ಲಿ ಸಂವಿಧಾನವು ನಮಗೆ ಎಲ್ಲ ಸ್ವಾತಂತ್ರ್ಯ ನೀಡಿದರೂ ನಾವು ಸ್ವಯಂ ಆತ್ಮರಕ್ಷಣೆ ಮಾಡಿಕೊಳ್ಳುವ ಕಲೆಯನ್ನು ಕರಗತಿ ಮಾಡಿಕೊಳ್ಳಬೇಕು. ನಾವು ಸದಾಕಾಲ ಪುರುಷರನ್ನೇ ಅವಲಂಬಿಸುವ ಹೊಣೆಗಾರಿಕೆಯಿಂದ ಹೊರಬಂದು ಸ್ವತಂತ್ರ, ಸ್ವಾವಲಂಬಿ ಬದುಕನ್ನು ಮಹಿಳೆಯರು ಕಟ್ಟಿಕೊಳ್ಳಬೇಕೆಂದು ಅಭಿಪ್ರಾಯ ವ್ಯಕ್ತಪಡಿಸಿದರು. ಈ ಸಂದರ್ಭದಲ್ಲಿ ಮಹಾವಿದ್ಯಾಲಯದ ಮಹಿಳಾ ವೇದಿಕೆಯ ಅಧ್ಯಕ್ಷೆ ಡಾ.ಎಸ್.ಬಿ.ಜನಗೊಂಡ, ಎನ್ಎಸ್ಎಸ್ ಘಟಕದ ಮುಖ್ಯಸ್ಥ ಡಾ.ವೈ.ಬಿ.ನಾಯಕ, ಪ್ರೊ.ವ್ಹಿ.ಎನ್.ರಜಪೂತ ಇದ್ದರು.
Subscribe to Updates
Get the latest creative news from FooBar about art, design and business.
Related Posts
Add A Comment

