Author: editor.udayarashmi@gmail.com

ಸಂತೋಷ್ ರಾವ್ ಪೆರ್ಮುಡ,ಪೆರ್ಮುಡ ಮನೆ, ಪಟ್ರಮೆ ಗ್ರಾಮ ಮತ್ತು ಅಂಚೆ, ಬೆಳ್ತಂಗಡಿ ತಾಲೂಕು, ದ.ಕ ಜಿಲ್ಲೆ ಒಮ್ಮೆ ಒಬ್ಬಳು ಗೃಹಿಣಿ ಎರಡು ಮಾವಿನ ಹಣ್ಣುಗಳನ್ನು ತಿಂದು ಅದರ ಗೊರಟುಗಳನ್ನು (ಓಟೆ) ತಿಪ್ಪೆ ಗುಂಡಿಗೆ ಬಿಸಾಡಿದಳು. ಆಗ ಒಂದನೆಯ ಗೊರಟು ಯೋಚನೆ ಮಾಡಿತು ನನ್ನ ಬೇರುಗಳು ಭೂಮಿಯೊಳಕ್ಕೆ ಹೋಗುತ್ತವೆ, ಅಂತರ್ಜಲವನ್ನು ಹೀರಿಕೊಳ್ಳುತ್ತವೆ, ತಿಪ್ಪೆಯು ಗೊಬ್ಬರ ಮತ್ತು ಪೌಷ್ಟಿಕಾಂಶ ಕೊಡುತ್ತದೆ, ಇದರಿಂದ ಸಸಿಯಾಗಿ ಸಣ್ಣ ಗಿಡವಾಗುತ್ತೇನೆ, ಕಾಲಂತರದಲ್ಲಿ ದೊಡ್ಡ ಮರವಾಗಿ ಬೆಳೆಯುತ್ತೇನೆ. ಮಾವಿನ ಸೊಪ್ಪು, ರುಚಿಕರವಾದ ಮಾವಿನ ಹಣ್ಣನ್ನು ಕೋಡುತ್ತೇನೆ. ನೂರಾರು ವರ್ಷಗಳು ಬದುಕುತ್ತೇನೆಂದು ಯೋಚಿಸಿ ಅದರಂತೆಯೇ ಬೆಳೆಯಿತು, ಮತ್ತು ಎಲ್ಲರಿಗೂ ಬೇಕಾದ ಮರ ಮತ್ತು ಹಣ್ಣಾಗಿ ಪರೋಪಕಾರಿಯಾಗಿ ಬಾಳಿ ಬದುಕಿತು.ಅದರ ಪಕ್ಕದಲ್ಲೇ ಇದ್ದ ಎರಡನೆಯ ಗೊರಟು ನನ್ನ ಬೇರುಗಳಿಗೆ ಅಂತರ್ಜಲ ಸಿಗದಿದ್ದರೆ? ಪೌಷ್ಟಿಕಾಂಶ ಸಿಗದಿದ್ದರೆ? ಗಿಡವಾದಾಗ ಹಸು, ಕುರಿ ಮೇಕೆಗಳು ಬಂದು ತಿಂದರೆ, ಮರವಾಗಿ ಹಣ್ಣು ಬಿಡುವಾಗ, ಜನ ಹಣ್ಣು ಉದುರಿಸಲು ನನಗೆ ಕಲ್ಲು ಹೊಡೆದರೆ ನನಗೆ ನೋವಾಗುದಿಲ್ಲವೇ? ಎಂದೆಲ್ಲ ಯೋಚಿಸಿ ಬೇರನ್ನು…

Read More

ವಿಜಯಪುರದಲ್ಲಿ ನಡೆದ ನಾರದ ಜಯಂತಿ ಕಾರ್ಯಕ್ರಮದಲ್ಲಿ ಕಾನಿಪ ಜಿಲ್ಲಾಧ್ಯಕ್ಷ ಸಂಗಮೇಶ ಚೂರಿ ಅಭಿಮತ ವಿಜಯಪುರ: ಧೃವ ಒಂದು ತಾರೆಯಾಗಲು, ಪ್ರಹ್ಲಾದ ಭಕ್ತ ಪ್ರಹ್ಲಾದನಾಗಲು ಪ್ರೇರಣೆಯಾಗಿದ್ದೇ ನಾರದ ಮುನಿ, ನಾರದ ಮುನಿಗಳು ಅನೇಕರ ಬದುಕನ್ನೇ ಉದ್ಧಾರಗೊಳಿಸಿದವರು ಎಂದು ಡಾ.ಸಂಜೀವ ಜೋಶಿ ಹೇಳಿದರು.ಮಂಥನ ವಿಜಯಪುರ ಘಟಕದ ಆಶ್ರಯದಲ್ಲಿ ವಿಜಯಪುರದ ಶುಭಶ್ರೀ ಸಭಾಂಗಣದಲ್ಲಿ ಹಮ್ಮಿಕೊಳ್ಳಲಾಗಿದ್ದ ನಾರದ ಜಯಂತಿ ಪ್ರಯುಕ್ತ ನಡೆದ ಉಪನ್ಯಾಸಗೋಷ್ಠಿಯಲ್ಲಿ ತಮ್ಮ ವಿಚಾರ ಪ್ರತಿಪಾದಿಸಿದ ಅವರು,ನಾರದ ಮುನಿ ಎಂದರೆ ಈ ವಿಷಯ ಅಲ್ಲಿಗೆ, ಅಲ್ಲಿನ ವಿಷಯ ಇಲ್ಲಿಗೆ ಹೇಳುತ್ತಾರೆ ಎಂಬುದು ಪ್ರಚಲಿತದಲ್ಲಿದೆ. ಆದರೆ ಅವರು ಬುದ್ದಿವಾದದ ಮೂಲಕ ಲೋಕೋದ್ದಾರ ಮಾಡಿದ ಶ್ರೇಯಸ್ಸು ನಾರದರಿಗೆ ಸಲ್ಲುತ್ತದೆ, ಧೃವ ಕಾಡಿನಲ್ಲಿ ಅಲೆದಾಡುತ್ತಿರುವಾಗ ಅವನಿಗೆ ಓಂ ನಮೋ ಭಗವತೇ ವಾಸುದೇವಾಯಃ ನಮಃ ಎಂಬ ಕಾರಣ ಆತ ಧೃವತಾರೆಯಾಗಲು ಕಾರಣವಾಯಿತು, ಅದೇ ತೆರನಾಗಿ ಪ್ರಹ್ಲಾದನಲ್ಲಿ ಅದಮ್ಯ ಭಕ್ತಿ ಪ್ರವಹಿಸುವಂತೆ ಮಾಡಿ ಅವನನ್ನು ಭಕ್ತ ಪ್ರಹ್ಲಾದವನ್ನಾಗಿ ಮಾಡಿದ್ದು ಸಹ ನಾರದರೇ ಎಂದರು.ಧರ್ಮದ ಪರವಾಗಿ ನಾರದರು ಸದಾ ಇದ್ದರು, ನದಿ, ಗಿಡಮರಗಳಂತೆ ನಾರದರು…

Read More

ವಿಜಯಪುರ: ಇಂದಿರಾ ಗಾಂಧಿ ರಾಷ್ಟ್ರೀಯ ಮುಕ್ತ ವಿಶ್ವವಿದ್ಯಾಲಯವು(ಇಗ್ನೊ) 2024 ಜೂನ್ ವರ್ಷದ ಪದವಿ ಮತ್ತು ಸ್ನಾತಕೋತ್ತರ ಪದವಿಗಳಿಗೆ ಪ್ರವೇಶ ಪ್ರಾರಂಭವಾಗಿದ್ದು, ಜೂನ್ 30, 2024 ಕೊನೆಯ ದಿನವಾಗಿದೆ.ಕೋರ್ಸುಗಳ ಪ್ರವೇಶ ಮತ್ತೀತರ ಮಾಹಿತಿಗಾಗಿ ಇಗ್ನೋ ಅಧ್ಯಯನ ಕೇಂದ್ರ- 1307 ಬಿ. ಎಲ್. ಡಿ. ಈ ಸಂಸ್ಥೆಯ ಜೆ. ಎಸ್. ಎಸ್ ಶಿಕ್ಷಣ ಮಹಾವಿದ್ಯಾಲಯ, ರಾಮ ಮಂದಿರ ರಸ್ತೆ, ಎಸ್. ಎಸ್. ಕ್ಯಾಂಪಸ್, ವಿಜಯಪುರ ಸಂಪರ್ಕಿಸಬಹುದಾಗಿದೆ. ಅಲ್ಲದೇ, ಪ್ರವೇಶ ಪಡೆಯಲು ಬಯಸುವರು www.ignou.ac.in ನಲ್ಲಿ ಲಾಗಿನ್ ಆಗಿ ಆನಲೈನ್ ಮೂಲಕ ನೋಂದಣಿ ಪಡೆಯಬಹುದಾಗಿದೆ. ಹೆಚ್ಚಿನ ಮಾಹಿತಿಗಾಗಿ 9980691291 ದೂರವಾಣಿಯ ಮೂಲಕವೂ ಸಂಪರ್ಕಿಸಬಹುದು ಎಂದು ಇಗ್ನೋ ಕೇಂದ್ರದ ಸಂಯೋಜಕ ಡಾ. ಮಂಜುನಾಥ ಬಿ. ಕೋರಿ ಮಾಧ್ಯಮ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Read More

ವಾರ್ತಾ ಇಲಾಖೆ ಆಯುಕ್ತ ಸೂರಳ್‌ಕರ್ ಜೊತೆ ಕಾನಿಪ ರಾಜ್ಯಾಧ್ಯಕ್ಷ ಶಿವಾನಂದ ತಗಡೂರು ನೇತೃತ್ವದ ನಿಯೋಗ ಚರ್ಚೆ ಬೆಂಗಳೂರು: ಕರ್ನಾಟಕ ರಾಜ್ಯ ಕಾರ್ಯನಿರತ ಪತ್ರಕರ್ತರ ಸಂಘದ(ಕೆಯೂಡಬ್ಲ್ಯೂಜೆ) ರಾಜ್ಯಾಧ್ಯಕ್ಷ ಶಿವಾನಂದ ತಗಡೂರು ಅವರ ನೇತೃತ್ವದ ನಿಯೋಗವು, ವಾರ್ತಾ ಇಲಾಖೆಯ ಆಯುಕ್ತ ಸೂರಳ್‌ಕರ್ ವಿಕಾಸ್ ಕಿಶೋರ್ ಅವರನ್ನು ಭೇಟಿ ಮಾಡಿ ಪತ್ರಕರ್ತರ ಸಮಸ್ಯೆ ಮತ್ತು ಬೇಡಿಕೆಗಳ ಬಗ್ಗೆ ಚರ್ಚೆ ನಡೆಸಿತು.ನಿವೃತ್ತರಾಗಿರುವ ಹಿರಿಯ ಪತ್ರಕರ್ತರುಗಳಿಗೆ ಸರ್ಕಾರದಿಂದ ಪ್ರತಿ ತಿಂಗಳು ಬರಬೇಕಾಗಿರುವ ಮಾಸಾಶನ ಹಣ 2-3 ತಿಂಗಳಾದರೂ ಬರುತ್ತಿಲ್ಲ. ಇದರಿಂದಾಗಿ ಅನೇಕರಿಗೆ ಜೀವನ ನಿರ್ವಹಣೆ ಮಾಡಲು ಔಷಧಿ ಖರೀದಿಸಲು ಹಣವಿಲ್ಲದೆ ಪರದಾಡುವ ಸ್ಥಿತಿ ಎದುರಾಗಿದೆ. ಆದ್ದರಿಂದ ಕೂಡಲೇ ಈ ಬಗ್ಗೆ ಆಗಿರುವ ಸಮಸ್ಯೆಯನ್ನು ಸರಿಪಡಿಸಿ ಪ್ರತಿ ತಿಂಗಳು ಸರಿಯಾಗಿ ಮಾಸಾಶನವನ್ನು ಅವರ ಅಕೌಂಟ್‌ಗೆ ಜಮೆ ಮಾಡಿಸಬೇಕು ಎಂದು ಆಯುಕ್ತರಿಗೆ ವಾಸ್ತವ ಸಮಸ್ಯೆ ಮನವರಿಕೆ ಮಾಡಿಕೊಡಲಾಯಿತು. ಈ ಬಗ್ಗೆ ತಕ್ಷಣವೇ ಕ್ರಮ ಕೈಗೊಂಡು, ಮಾಸಾಶನ ಪ್ರತೀ ತಿಂಗಳು ದೊರೆಯಲು ಸೂಕ್ತ ಕ್ರಮ ಕೈಗೊಳ್ಳುವುದಾಗಿ ಆಯುಕ್ತರು ಭರವಸೆ ನೀಡಿದರು.ಮಾಸಾಶನ ಸಮಿತಿಯಲ್ಲಿ ಅರ್ಹರನ್ನು…

Read More

ವಿಜಯಪುರ: ನಗರದ ಬಿ.ಎಲ್.ಡಿ.ಇ ಸಂಸ್ಥೆಯ ವಚನ ಪಿತಾಮಹ ಡಾ. ಫ. ಗು ಹಳಕಟ್ಟಿ ಎಂಜಿನಿಯರಿಂಗ್ ಕಾಲೇಜಿನಲ್ಲಿ ತಾಂತ್ರಿಕ ಸಪ್ತಾಹ ಕಾರ್ಯಕ್ರಮದ ಅಂಗವಾಗಿ ವತಿಯಿಂದ ಮೇ 22 ರಂದು ಬುಧವಾರ ಉದ್ಘಾಟನೆ ನಡೆಯಿತು.ಓಪನ್ ಡೇ ಇವೆಂಟ್ ಅಂಗವಾಗಿ ಕಾಲೇಜಿನ ಅಂತಿಮ ವರ್ಷದ ವಿದ್ಯಾರ್ಥಿಗಳು ತಯಾರಿಸಿದ ನಾನಾ ಮಾದರಿಗಳ ಪ್ರದರ್ಶನ ನಡೆಯಿತು. ಕಾಲೇಜಿನ ನಾನಾ ವಿಭಾಗಳ 800ಕ್ಕೂ ಹೆಚ್ಚು ವಿದ್ಯಾರ್ಥಿಗಳು ಒಟ್ಟು 201 ಮಾದರಿಗಳನ್ನು ತಯಾರಿಸಿದ್ದರು. 79 ನಾವೀನ್ಯತೆ, 54 ಸಾಮಾಜಿಕ ಪರಿಣಾಮ, 15 ಪರಿಸರ ಕೇಂದ್ರಿತ ಹಾಗೂ 53 ಅನ್ವಯಿಕೆ(ಅಪ್ಲಿಕೇಶನ್) ವಿಭಾಗಗಳಲ್ಲಿ ಮಾದರಿಗಳು ಪ್ರದರ್ಶನವಾದವು.ಮೆಕ್ಯಾನಿಕಲ್ ಎಂಜಿನಿಯರಿಂಗ್ ವಿಭಾಗದಿಂದ ಬೈಸಿಕಲ್ ಚಾಲಿತ ನೀರು ಶುದ್ಧೀಕರಣ ವ್ಯವಸ್ಥೆಯ ಅಭಿವೃದ್ಧಿ ಮತ್ತು ನಿರ್ಮಾಣ, ಮಾಸ್ಟರ್ ಆಫ್ ಕಂಪ್ಯೂಟರ್ ಅಪ್ಲಿಕೇಶನ್ಸ್ ವಿಭಾಗದಿಂದ ಐಒಟಿ ಆಧಾರಿತ ಹೊಗೆ ವಲಯ ಮೇಲ್ವಿಚಾರಣಾ ವ್ಯವಸ್ಥೆ, ಮಾಹಿತಿ ವಿಜ್ಞಾನ ಎಂಜಿನಿಯರಿಂಗ್ ವಿಭಾಗದಿಂದ ಅಂಧರಿಗೆ ಸ್ಮಾರ್ಟ್ ಧರಿಸಬಹುದಾದ ಸಾಧನಗಳು. ಎಲೆಕ್ಟ್ರಿಕಲ್ ಮತ್ತು ಎಲೆಕ್ಟ್ರಾನಿಕ್ಸ್ ಎಂಜಿನಿಯರಿಂಗ್ ವಿಭಾಗದಿಂದ ಎಲೆಕ್ಟ್ರಿಕ್ ವಾಹನಗಳಲ್ಲಿ ಬ್ಯಾಟರಿ ಮೇಲ್ವಿಚಾರಣಾ ವ್ಯವಸ್ಥೆಯ ವಿನ್ಯಾಸ ಮತ್ತು…

Read More

ವಿಜಯಪುರ: ಬೇಬಿ ಸೈನ್ಸ್ ಐವಿಎಫ್ ಕ್ಲೀನಿಕ್‌ದಿಂದ ಉಚಿತ ಸಮಾಲೋಚನೆ, ಸ್ಕ್ಯಾನಿಂಗ್ ಮತ್ತು ಕೌನ್ಸೆಲಿಂಗ್ ಮೇ ೨೬ ಹಾಗೂ ೨೭ ರಂದು ಇಬ್ರಾಹಿಂಪೂರ ರೇಲ್ವೆ ಗೇಟ್ ಹತ್ತಿರದ ವೈಷ್ಣವಿ ಹೈಟ್ಸ್ದ ಬೇಬಿ ಸೈನ್ಸ್ ಐವಿಎಫ್ ಕ್ಲೀನಿಕ್‌ದಲ್ಲಿ ಆಯೋಜಿಸಲಾಗಿದೆ ಎಂದು ಬೇಬಿ ಸೈನ್ಸ್ ಐವಿಎಫ್ ಕ್ಲೀನಿಕ್‌ ಪ್ರಕಟಣೆಯಲ್ಲಿ ತಿಳಿಸಿದೆ.ಬಂಜೆತನ ಎನ್ನುವುದು ಚಿಕಿತ್ಸೆ ನೀಡಬಹುದಾದ ಮತ್ತೋಂದು ವಿಧದ ವೈದ್ಯಕೀಯ ಸ್ಥಿತಿಯಾಗಿದೆ. ನಮ್ಮ ಬಂಜೆತನ ತಜ್ಞರೊಂದಿಗೆ ಉಚಿತ ಸಮಾಲೋಚನೆ ಬೇಬಿ ಸೈನ್ಸ್ ಐವಿಎಫ್ ಕ್ಲೀನಿಕ್‌ದ ನುರಿತ ತಜ್ಞರ ಸಲಹೆ ಪಡೆಯಲು ಈ ಬೇಬಿ ಸೈನ್ಸ್ ಐವಿಎಫ್ ಕ್ಲೀನಿಕ್‌ದಿಂದ ಉಚಿತ ಸಮಾಲೋಚನೆ, ಸ್ಕಾö್ಯನಿಂಗ್ ಮತ್ತು ಕೌನ್ಸೆಲಿಂಗ್ ಏರ್ಪಡಿಸಲಾಗಿದೆ.ಡಾ. ಸಿ.ಎಸ್.ಮಂಜುನಾಥ್ ಹಾಗೂ ಡಾ. ಶಿವಕುಮಾರ ಪೂಜೇರಿ ಅವರು ಉಚಿತ ಸಮಾಲೋಚನೆ, ಸ್ಕ್ಯಾನಿಂಗ್ ಮತ್ತು ಕೌನ್ಸೆಲಿಂಗ್ ನಡೆಸಿಕೊಡಲಿದ್ದಾರೆ.ಒಂದು ವರ್ಷಕ್ಕಿಂತ ಹೆಚ್ಚಿನ ಸಮಯದಿಂದ ಗರ್ಭ ಧರಿಸಲು ಪ್ರಯತ್ನಿಸುತ್ತಿದ್ದರೆ ಮತ್ತು ಎರಡನೇ ಮಗುವಿಗಾಗಿ ಪ್ರಯತ್ನಿಸುತ್ತಿದ್ದರೆ, ಅನೇಕ ಬಾರಿ ಗರ್ಭಪಾತವಾಗಿದ್ದರೆ, ಐಯುಐ ಅಥವಾ ಐವಿಎಫ್ ವೈಪಲ್ಯತೆ ಹೊಂದಿದ್ದರೆ, ಪಿಸಿಓಎಸ್ ಸಮಸ್ಯೆ, ಫೆಲೊಷಿಯನ್ ನಾಳದಲ್ಲಿ ಅಡಚಣೆ ಸೇರಿದಂತೆ…

Read More

ವಿಜಯಪುರ: ನಗರದ ಮನಗೂಳಿ ಅಗಸಿ ಹತ್ತಿರದ ಡಾ. ಬಿ.ಆರ್. ಅಂಬೇಡ್ಕರ ಸಮುದಾಯ ಭವನ ನಿರ್ಮಾಣಕ್ಕೆ ಸಂಬಂಧಿಸಿದಂತೆ ಜಿಲ್ಲಾಧಿಕಾರಿಗಳ ಕಚೇರಿ ಮುಂದೆ ಡಾ ಬಿ ಆರ್ ಅಂಬೇಡ್ಕರ್ ಯುವಕ ಸಂಘದಿಂದ ಹಮ್ಮಿಕೊಂಡಿರುವ ಅಹೋರಾತ್ರಿ ಧರಣಿ ಸತ್ಯಾಗ್ರಹ ನಾಲ್ಕನೇ ದಿನಕ್ಕೆ ಕಾಲಿಟ್ಟಿದೆ.ನಾಲ್ಕನೇ ದಿನದ ಸತ್ಯಾಗ್ರಹದಲ್ಲಿ ಸಂಘಟನೆ ಹೋರಾಟಗಾರ ಬಸವರಾಜ ಕಾಂಬಳೆ ಅವರು ಮಾತನಾಡಿ, ಸಂವಿಧಾನ ಶಿಲ್ಪಿ ಭಾರತರತ್ನ ಡಾ ಬಿ ಆರ್ ಅಂಬೇಡ್ಕರ್ ಅವರ ಹೆಸರಿನಲ್ಲಿ ಮಂಜೂರಾದ ಸಮುದಾಯ ಭವನ ನಿರ್ಮಾಣ ಮಾಡದಂತೆ ಅಡ್ಡಿಪಡಿಸುವಂತಹ ಘಟನೆ ವಿಜಯಪುರ ಜಿಲ್ಲೆಯಲ್ಲಿ ನಡೆದಿರುವುದು ದುರಂತ. ಭವನಕ್ಕೆ ಅಡ್ಡಿಪಡಿಸಿ ಅಲ್ಲಿರುವ ಅಂಬೇಡ್ಕರ್ ಧ್ವಜವನ್ನು ತೆರವುಗೊಳಿಸುವ ಮೂಲಕ ಸಂವಿಧಾನ ಶಿಲ್ಪಿಗೆ ಅನ್ಯ ಕೋಮಿನ ಕೆಲವು ಜನ ಸಮಾಜದಲ್ಲಿ ಶಾಂತಿ ಸುವ್ಯವಸ್ಥೆ ಕಡಡಲು ಹುನ್ನಾರ ನಡೆಸಿದ್ದಾರೆ ಎಂದು ಕಳವಳ ವ್ಯಕ್ತಪಡಿಸಿದ ಅವರು ಜಿಲ್ಲಾಡಳಿತ ಈ ಘಟನೆಯನ್ನು ಗಂಭೀರ ಪ್ರಕರಣ ಎಂದು ಪರಿಗಣಿಸಿ ಇದಕ್ಕೆ ಕಾರಣರದವರ ಮೇಲೆ ಕಾನೂನು ಕ್ರಮ ಕೈಗೊಂಡು ಭವನ ನಿರ್ಮಾಣಕ್ಕೆ ಪೂರಕ ವಾತಾವರಣ ನಿರ್ಮಾಣ ಮಾಡಬೇಕೆಂದು ಅಗ್ರಹಿಸಿದರು.ಈ ಸಂದರ್ಭದಲ್ಲಿ…

Read More

ರೇವತಗಾಂವದಲ್ಲಿ ಕುಂಭ-ಕಳಶಗಳೊಂದಿಗೆ ಕಾಶಿ ಜಗದ್ಗುರುಗಳ ಸಾರೋಟ ಉತ್ಸವ ಚಡಚಣ: ಮಾನಸಿಕ ನೆಮ್ಮದಿಯನ್ನು ನೀಡುವುದಕ್ಕಾಗಿಯೇ ಜಗತ್ತಿನಲ್ಲಿ ಧರ್ಮಗಳ ಆವಿಷ್ಕಾರವಾಗಿದೆ. ಆದರೆ ಧರ್ಮದ ಹೆಸರಿನಿಂದಲೇ ಜನಮನದ ಶಾಂತಿಯನ್ನು ಕದಡುವ ವ್ಯರ್ಥ ಪ್ರಯತ್ನಕ್ಕೆ ಯಾರೂ ಮುಂದಾಗಬಾರದು. ನೈತಿಕ ನೆಲೆ, ಸಾಂಸ್ಕೃತಿಕ ಭಾವನೆ, ಸಾಹಿತ್ಯಿಕ ಚಿಂತನೆ ಹಾಗೂ ಅಧ್ಯಾತ್ಮಿಕ ಸ್ಪರ್ಶದಿಂದ ಬದುಕಿಗೆ ನಿರಂತರ ಪ್ರಸನ್ನತೆ ಪ್ರಾಪ್ತವಾಗುತ್ತದೆ ಎಂದು ಕಾಶಿ ಜಗದ್ಗುರು ಡಾ.ಮಲ್ಲಿಕಾರ್ಜುನ ವಿಶ್ವರಾಧ್ಯ ಶಿವಾಚಾರ್ಯ ಭಗವತ್ಪಾದಕರು ಹೇಳಿದರು.ರೇವತಗಾಂವ ಗ್ರಾಮದ ಶ್ರೀ ರೇವಣಸಿದ್ದೇಶ್ವರ ಮಹಾದ್ವಾರದ ಕಳಸಾರೋಹಣ ಕಾರ್ಯಕ್ರಮವನ್ನು ನೆರವೇರಿಸಿ ಮಾತನಾಡಿದ ಅವರು. ಭಕ್ತಿ, ಭಾವದಿಂದ ಜಂಗಮರನ್ನು ಆರಾಧಿಸುವ ಮೂಲಕ ದೇವರ ಸ್ವರೂಪವನ್ನು ಕಾಣಬಹುದಾಗಿದೆ. ಪರಸ್ಪರ ವಿಶ್ವಾಸ ಇಲ್ಲದೆ ಮನುಷ್ಯ ಬದುಕು ಸಾಗಿಸಲು ಸಾಧ್ಯವಿಲ್ಲ. ಭೌತಿಕ ಬದುಕು ಸುಗಮವಾಗಿ ಸಾಗಲು ಮನುಷ್ಯ ಪರಸ್ಪರ ವಿಶ್ವಾಸ ಹೊಂದಬೇಕು. ಯಾವ ವ್ಯಕ್ತಿ ಸಮಾಜದ ಹಿತವನ್ನು ಬಯಸುತ್ತಾನೋ, ಅಂತಹ ವ್ಯಕ್ತಿ ಬದುಕು ಎಂದಿಗೂ ಸ್ಮರಣೀಯವಾಗಿರುತ್ತದೆ ಎಂದು ಹೇಳಿದರು.ಕೃಷಿಕರಿಗೆ ಕಿವಿಮಾತು: ರೈತನು ದೇಶದ ಬೆನ್ನೆಲುಬು. ರಾಸಾಯನಿಕ ಗೊಬ್ಬರ ಬಳಸಿ ಬೇಸಾಯ ಮಾಡುವಂತಹ ಪದ್ಧತಿಯನ್ನು ರೈತರು ತೋರೆಯಬೇಕು.…

Read More

ವಿಜಯಪುರ: ರಾಜ್ಯದಲ್ಲಿ ಜೂನ್ 17ರಂದು ನಿವೃತ್ತಿ ಹೊಂದಲಿರುವ 11 ಒಐಆ ಸ್ಥಾನಗಳಿಗೆ ಕಾಂಗ್ರೆಸ್ ಪಕ್ಷವು ಭರ್ತಿ ಮಾಡುತ್ತಿರುವ ಖಾಲಿ ಇರುವ ಸ್ಥಾನಕ್ಕೆ ನಾಡ ಕಂಡ ಅಪ್ರತಿಮ ನಾಯಕ ಶೋಷಿತರ ದಮನಿತರ ದಲಿತರ ಗಟ್ಟಿ- ಧ್ವನಿ ಎಚ್ ಆಂಜನೇಯ ಅವರಿಗೆ ವಿಧಾನ ಪರಿಷತ್ ಸ್ಥಾನ ನೀಡಬೇಕೆಂದು ಮಾದಿಗರ ಸಂಘ ಆಗ್ರಹಿಸಿತು.ನಗರದಲ್ಲಿ ಶುಕ್ರವಾರ ಸುದ್ದಿಗೋಷ್ಠಿ ನಡೆಸಿದ ಕರ್ನಾಟಕ ಮಾದಿಗರ ಸಂಘದ ಜಿಲ್ಲಾ ಅಧ್ಯಕ್ಷ ಶ್ರೀಶೈಲ ರತ್ನಾಕರ್ ಹಾಗೂ ಮುಖಂಡರು ಮಾತನಾಡಿ, ಎಚ್ ಆಂಜನೇಯ ಸರ್ವಜನಾಂಗದ ನಾಯಕರು, ತಮ್ಮ ತಮ್ಮಅಧಿಕಾರಾವಧಿಯಲ್ಲಿ, ದೇವದಾಸಿ ತಾಯಂದಿರಿಗೆ ತಿಂಗಳ ಮಾಶಾಸನ, ದೇವದಾಸಿ ತಾಯಂದಿರ ಮಕ್ಕಳಿಗೆ ಮದುವೆಗೆ ಪ್ರೋತ್ಸಾಹ ಧನ, ಹೆಚಿನ ವಿದ್ಯಾಭ್ಯಾಸ ಮಾಡಲು ವಿದೇಶಕ್ಕೆ ಹೋಗಲು ಪ್ರೋತ್ಸಾಹ ನೀಡಲು ಯೋಜನೆ ಜಾರಿಗೆ ತಂದವರು ಮತ್ತು ಮೊರಾರ್ಜಿ ದೇಸಾಯಿ ಶಾಲೆ, ಕಿತ್ತೂರು ರಾಣಿ ಚೆನ್ನಮ್ಮ ವಸತಿ ಶಾಲೆ, ಡಾ.ಬಿ.ಆರ್ ಅಂಬೇಡ್ಕರ್ ವಸತಿ ಶಾಲೆಗಳು, ಪ್ರತಿ ಗ್ರಾಮಗಳಲ್ಲಿ ಸಮುದಾಯ ಭವನಗಳು ನಿರ್ಮಾಣ, ಅಭಿವೃದ್ಧಿ ನಿಗಮಗಳಲ್ಲಿ ಸಾವಿರಾರು ಕೋಟಿ ಅನುದಾನ ನೀಡಿದ ಧೀಮಂತ ನಾಯಕರಾದ…

Read More