ಎಸ್.ಬಿ ಕಲಾ ಮತ್ತು ಕೆ.ಸಿ.ಪಿ ವಿಜ್ಞಾನ ಮಹಾವಿದ್ಯಾಲಯದಲ್ಲಿ ನಡೆದ ವಿಶೇಷ ಉಪನ್ಯಾಸ
ವಿಜಯಪುರ: ವಿದ್ಯಾರ್ಥಿಗಳಿಗೆ ಕಾನೂನಿನ ಅರಿವು ಅವಶ್ಯಕವಾಗಿದೆ ಭಾರತೀಯ ನಾಗರಿಕ ಸುರಕ್ಷಾ ಸಂಹಿತ ಮತ್ತು ಭಾರತೀಯ ಸಾಕ್ಷಾ ಅಧೀನಿಯಮಗಳ ಬಗ್ಗೆ ಅರಿವು ಅವಶ್ಯಕವಾಗಿದೆ ಎಂದು ನಗರದ ಅಂಜುಮನ್ ಕಾನೂನು ವiಹಾವಿದ್ಯಾಲಯದ ಸಹಾಯಕ ಪ್ರಾದ್ಯಾಪಕರಾದ ಉಜ್ವಲ ಎ.ಸಿರಿನಾಡಗೌಡ ಪಾಟೀಲ ಹೇಳಿದರು.
ನಗರದ ಬಿ.ಎಲ್.ಡಿ.ಇ ಸಂಸ್ಥೆಯ ಎಸ್ ಬಿ ಕಲಾ ಹಾಗೂ ಕೆಸಿಪಿ ವಿಜ್ಞಾನ ಮಹಾವಿದ್ಯಾಲಯದಲ್ಲಿ ಐಕ್ಯೂಎಸಿ ಮತ್ತು ರಾಜ್ಯಶಾಸ್ತ್ರ ವಿಭಾಗ ಸಂಯೋಜನಡಿಯಲ್ಲಿ ದಿನಾಂಕ ೨೬-೦೭-೨೦೨೪ ರಂದು ಜರುಗಿದ ‘ಮಿಥ್ಸ್ ಆಂಡ್ ಟ್ರುಥ್ ಭಾರತೀಯ ನ್ಯಾಯ ಸನ್ಹಿತ’ ಕುರಿತು ವಿಶೇಷ ಉಪನ್ಯಾಸ ಕಾರ್ಯಕ್ರದಲ್ಲಿ ಮಾತನಾಡಿದ ಅವರು ಕಾನೂನಿನ ಮಹತ್ವ ಮತ್ತು ಅದರ ಅವಶ್ಯಕತ ಅದರಂತೆ ಭಾರತೀಯ ನಾಗರಿಕ ಸುರಕ್ಷಾ ಸಂಹಿತ ಮತ್ತು ಭಾರತೀಯ ಸಾಕ್ಷಾ ಅಧೀನಿಯಮಗಳ ಬಗ್ಗೆ ಕ್ರಮವಾಗಿ ತಿಳಿಸಿದರು. ಭಾರತೀಯ ನಾಗರಿಕ ಸುರಕ್ಷಾ ಸಂಹಿತ ಮತ್ತು ಭಾರತೀಯ ಸಾಕ್ಷಾ ಅಧೀನಿಯಮಗಳ ಐಪಿಸಿ ಇದು ಸಾರ್ವಜನಿಕರಿಗೆ ಹೇಗೆ ಸಹಾಯವಾಗಿದೆ, ಅದರಲ್ಲಿನ ಸಮಸ್ಯೆಗಳನ್ನು ನಿವಾರಿಸಿಕೊಳ್ಳುವುದು ಹೇಗೆ ಮತ್ತು ಅದನ್ನು ಸಂಪೂರ್ಣವಾಗಿ ಜಾರಿಗೆ ತರುವಲಿ ಇರುವ ಅಡೆತಡೆಗಳ ಬಗ್ಗೆ ತಿಳಿಸಿದರು. ಭಾರತೀಯ ಸಾಕ್ಷಾ ಕಾಯ್ದೆ ಬದಲಿಗೆ ಅಪರಾಧ ನ್ಯಾಯ ವ್ಯವಸ್ಥೆಯನ್ನು ಆಧುನಿಕರಿಸಲು ಮತ್ತು ಸುಗಮಗೊಳಿಸಲು ಯಾವ ಮಾರ್ಗಗಳನ್ನು ಅನುಸರಿಸಬೇಕು ಎಂಬುದರ ಬಗ್ಗೆ ವಿದ್ಯಾರ್ಥಿಗಳಿಗೆ ಹೇಳಿದರು.
ಈ ಸಂದರ್ಭದಲ್ಲಿ ರಾಜ್ಯಶಾಸ್ತ್ರ ವಿಭಾಗದ ಮುಖ್ಯಸ್ಥರಾದ ಡಾ.ತರನ್ನುಮ ಜಬೀನ್ ಖಾನ್ ಮಾತನಾಡಿ ಕಾನೂನು ಎಷ್ಟು ಮುಖ್ಯ ಅದು ವಿದ್ಯಾರ್ಥಿಗಳಿಗೆ ಹೇಗೆ ಸಹಾಯಕವಾಗುತ್ತದೆ ಮತ್ತು ಅದನ್ನು ವಿದ್ಯಾರ್ಥಿಗಳು ಹೇಗೆ ತಮ್ಮ ಜೀವನದಲ್ಲಿ ಅಳವಡಿಸಿಕೊಳ್ಳಬೇಕು ಮತ್ತು ಕಾನೂನಿನ ಬಗ್ಗೆ ಅರಿವು ಮೂಡಿಸಿದ ಡಾ.ಉಜ್ವಲ ಸಿರಿನಾಡಗೌಡ ಪಾಟೀಲ್ ಇವರಿಗೆ ಧನ್ಯವಾದಗಳು ಸಮರ್ಪಿಸಿದರು.
ಈ ಸಂದರ್ಭದಲ್ಲಿ ಮಹಾವಿದ್ಯಾಲದ ಬೋಧಕ ಮತ್ತು ಬೋಧಕೇತರ ಸಿಬ್ಬಂದಿ ಮತ್ತು ವಿದ್ಯಾರ್ಥಿಗಳು ಉಪಸ್ಥಿತರಿದ್ದರು.

