ವಿಜಯಪುರ: ಭಾರತೀಯರು ಶಾಂತಿ ಪ್ರಿಯರು. ಯಾವ ದೇಶದ ಮೇಲೂ ಯುದ್ಧವನ್ನು ಸಾರಿಲ್ಲ. ಯುದ್ಧಕ್ಕೆ ಬಂದ ದೇಶವನ್ನು ಸೋಲಿಸದೆ ಬಿಟ್ಟಿಲ್ಲ. ಇಂದು ಭಾರತ ವಿಶ್ವದಲ್ಲಿಯೇ ಶಕ್ತಿಯುತ ರಾಷ್ಟ್ರ ಎಂದು ಶರಣಯ್ಯ. ಎಸ್. ಭಂಡಾರಿಮಠ ಹೇಳಿದರು.
ನಗರದ ಪ್ರತಿಷ್ಠಿತ ಎಸ್. ಬಿ. ವಿಸ್ಢಮ್ ಕರಿಯರ್ ಅಕ್ಯಾಡೆಮಿಯಲ್ಲಿ ಜರುದಿದ ಕಾರ್ಗೀಲ್ ವಿಜಯ ದಿವಸ ಹಾಗೂ ಮಾಜಿ ಸೈನಿಕರಿಗೆ ಸನ್ಮಾನ ಸಮಾರಂಭದ ಅಧ್ಯಕ್ಷ ಸ್ಥಾನ ವಹಿಸಿಕೊಂಡು ಮಾತನಾಡಿದರು.
ಮುಖ್ಯ ಅತಿಥಿಯಾಗಿ ಮಾತನಾಡಿದ ನ್ಯಾಯವಾದಿ ಚಂದ್ರಕಾಂತ ಉಂಡೋಡಿ ಜುಲೈ ೨೬ ಪ್ರತಿ ಭಾರತೀಯರು ಸ್ಮರಿಸಬೇಕಾದ ದಿನ. ಶತ್ರುರಾಷ್ಟ್ರದ ದಾಳಿಯಿಂದ ಸಂಕಷ್ಟದಲ್ಲಿದ್ದ ಭಾರತಾಂಬೆಯನ್ನು ನಮ್ಮ ಸೈನಿಕರು ರಕ್ಷಿಸಿದ ರೀತಿ ರೋಮಾಂಚನವನ್ನು ಉಂಟುಮಾಡುತ್ತದೆ. ಯಾವ ಭಾರತೀಯರೂ ಕಾರ್ಗಿಲ್ ಯುದ್ಧವನ್ನು ಮರೆಯಲು ಸಾಧ್ಯವೇ ಇಲ್ಲ. ಈ ಯುದ್ಧದಲ್ಲಿ ಭಾರತೀಯ ಸೈನಿಕರು ಕೆಚ್ಚೆದೆಯಿಂದ ಹೋರಾಡಿ ತನ್ನ ದೇಶದ ಘನತೆ, ಸಾಹಸವನ್ನು ಎತ್ತಿ ಹಿಡಿದಿದ್ದರು. ಇವರ ತ್ಯಾಗ, ಬಲಿದಾನ, ದೇಶಪ್ರೇಮ ಖಂಡಿತಾ ಎಲ್ಲಾ ಭಾರತೀಯರಿಗೂ ಸ್ಫೂರ್ತಿ, ದಾರಿದೀಪ ಎಂದು ಹುತಾತ್ಮರಾದ ಯೋದರನ್ನು ಸ್ಮರಿಸಿಕೊಂಡರು.
ಇದೇ ಸಮಯದಲ್ಲಿ ಮಾಜಿ ಸೈನಿಕರಾದ ಸಂಗಮೇಶ ವಾಣಿ, ಗುರು ದೇಸಾಯಿ, ಪಿಂಟು ರಾಠೋಡ ಹಾಗೂ ಮಾಜಿ ಸೈನಿಕರು ಹೊಯ್ಸಳ ಕರಿಯರ್ ಅಕಾಡೆಮಿ ಸಂಸ್ಥಾಪಕರಾದ ಕಾಸಿನಾಥ ಗಾಗರೆ ಅವರನ್ನು ಸನ್ಮಾನಿಸಲಾಯಿತು.
ಸಂಸ್ಥೆಯ ಆಡಳೀತಾಧಿಕಾರಿ ಭಾಗೇಶ ಮುರಡಿ ಪ್ರಾಸ್ತಾವಿಕ ಮಾತುಗಳನ್ನಾಡಿ ಕಾರ್ಗಿಲ್ ಯುದ್ಧ ಭಾರತ ಹಾಗೂ ನಮ್ಮ ಸೈನ್ಯದ ಪಾಲಿಗೂ ಮಹತ್ವದಾಗಿದೆ. ಭಾರತವು ತನ್ನ ಪ್ರಾದೇಶಿಕ ಸಾರ್ವಭೌಮತ್ವವನ್ನು ಕಾಪಾಡುವಲ್ಲಿ ಬಲಿಷ್ಠವಾಗಿದೆ ಎಂಬುದನ್ನೂ ಈ ಯುದ್ಧ ಜಗತ್ತಿಗೆ ತೋರಿಸಿತ್ತು ಎಂದರು.
ಕಾರ್ಯಕ್ರಮದಲ್ಲಿ ಪ್ರಭುಗೌಡ ಚಿಕ್ಕನಳ್ಳಿ, ಗಾಯಕರಾದ ಭಾಗೇಶ ಹೂಗಾರ, ಜಕ್ಕರಾಯ ಪೂಜಾರಿ, ರಮಜಾನ ಭಾಗವಾನ, ರಾಜಕುಮಾರ ರಾಠೋಡ, ಅನೀಲ ಭಜಂತ್ರಿ ಉಪಸ್ಥಿತರಿದ್ದರು. ವಿದ್ಯಾಥಿಗಳಾದ ಮೌನೇಶ ಗೌಡ ಹಾಗೂ ಕುಮಾರಿ ಲಕ್ಷ್ಮೀ ಸಿರಗುಪ್ಪಿ ನಿರೂಪಿದರು. ಸೌಂದರ್ಯ ಎಂ. ವಂದಿಸಿದರು. ಜೈ ಜವಾನ, ಜೈ ಕೀಸಾನ ಘೋಷಣೆಯೊಂದಿಗೆ ಸಮಾರಂಭ ಮುಕ್ತಾಯವಾಯಿತು.
Subscribe to Updates
Get the latest creative news from FooBar about art, design and business.
Related Posts
Add A Comment

